Dr Babu

ಕೊರಗ ಸಮುದಾಯಕ್ಕೆ ಮೊದಲ ಡಾಕ್ಟರೇಟ್ ಪದವಿ

First ever Ph.D degree for Koraga Community:

Dr Babu

Mr Babu,  a post graduate in Chemistry from Mangalore University was the first  person from Koraga Community, to achieve a doctoral Ph.D. degree. Hails from a Kalmanja village of Belthangady near Mangalore, Babu completed his Ph.D under well known Chemist Dr Balakrishna Kalluraya, Professor of Chemistry at Mangalore University. He received  doctoral Ph.D. degree for his thesis entitled “synthetic and biological studies on sulphur, nitrogen and oxygen containing heterocyclic componds”.

Koraga community is considered to be one amongst lowest commuity of social strata, still continuing their life with much socio-economical  difficulties, even to aquire primary education. So far, Babu is the only post-graduate from this Koaraga Community.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಾಠಿ ನಾಯ್ಕರು, ಮಲೆಕುಡಿಯರು ಮತ್ತು ಕೊರಗರು ಬುಡಕಟ್ಟು ಜನಾಂಗವೆಂದು ಗುರುತಿಸಲ್ಪಟ್ಟಿದ್ದಾರೆ. ಮರಾಠಿ ನಾಯ್ಕರ ಮತ್ತು ಮಲೆಕುಡಿಯರ ಸ್ಥಿತಿಗತಿ ಪರವಾಗಿಲ್ಲ. ಆದರೆ, ಕೊರಗ ಜನಾಂಗದ ದುಸ್ಥಿತಿ ಯಾರಿಗೂ ಬೇಡ. ಇಂದಿಗೂ ಕರ್ನಾಟಕ ರಾಜ್ಯದಲ್ಲಿ ಅತ್ಯಂತ ನಿಕೃಷ್ಟ ಸ್ಥಿತಿಯಲ್ಲಿ ಜೀವನ ಸಾಗಿಸುತ್ತಿರುವ ಜನಾಂಗ ಇದಾಗಿದೆ. ವಿದ್ಯೆ, ಆರೋಗ್ಯ, ಸೌಲಭ್ಯಗಳಿಂದ ಅದೆಷ್ಟೋ ದೂರದಲ್ಲಿರುವ ಈ ಸಮುದಾಯದಲ್ಲಿ ಛಲದಿಂದ ವಿದ್ಯೆ ಒಲಿಸಿಕೊಂಡ ಓರ್ವ ಯುವಕ ಎಲ್ಲರ ಗಮನ ಸೆಳೆದಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜದ ಬಾಬು ಎಂಬವರೇ ಆ ಯುವಕ. ಮಣಿಪಾಲ ಶಿಕ್ಷಣ ಅಕಾಡೆಮಿಯ ಆಡಳಿತ ಕ್ಕೊಳಪಟ್ಟ ಉಡುಪಿಯ ಮಹಾತ್ಮಗಾಂಧಿ ಸ್ಮಾರಕ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಿವರು. ಅತ್ಯಂತ ಕ್ಲಿಷ್ಟ ವಿಷಯಗಳಲ್ಲಿ ಒಂದಾದ ರಸಾಯನ ಶಾಸ್ತ್ರದಲ್ಲಿ ಬಾಬು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಕೊರಗ ಜನಾಂಗದಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಏಕೈಕ ವ್ಯಕ್ತಿ ಎಂಬ ಹೆಗ್ಗಳಿಕೆ ಇದೀಗ ಬಾಬು ಅವರದ್ದು. ಮೊದಲ ಡಾಕ್ಟರೇಟ್ ಪದವಿ ಪಡೆದ ಕೀರ್ತಿಯೂ ಇವರಿಗೇ ಸಲ್ಲುತ್ತದೆ.

ಇದೇ ಏ.29ರಂದು ನಡೆದ ಮಂಗಳೂರು ವಿಶ್ವವಿದ್ಯಾನಿಲಯದ ೨೯ನೇ ಘಟಿಕೋತ್ಸವದಲ್ಲಿ ಬಾಬು ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು. ಸಿಂಥೆಟಿಕ್ ಆಂಡ್ ಬಯೋಲಾಜಿಕಲ್ ಸ್ಟಡೀಸ್ ಆನ್ ನೈಟ್ರೋಜನ್, ಸಲ್ಫರ್ ಆಂಡ್ ಆಕ್ಸಿಜನ್ ಕಂಟೈನಿಂಗ್ ಹೆಟೆರೋ ಸೈಕಲ್ ಎಂಬ ಸಂಶೋಧನಾ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರ ಸಂಶೋಧನಾ ವಿಷಯವು ಸಾವಯವ ಆಧಾರಿತ ಔಷಧಿಗಳಿಗೆ ಸಂಬಂಧಿಸಿದ್ದು, ಭವಿಷ್ಯದಲ್ಲಿ ಫಾರ್ಮಾಸ್ಯೂಟಿಕಲ್ ಕ್ಷೇತ್ರದಲ್ಲಿ ಸಹಾಯಕ್ಕೆ ಬರಲಿದೆ ಎನ್ನಲಾಗಿದೆ. ಪ್ರೊ| ಬಾಲಕೃಷ್ಣ ಕಲ್ಲೂರಾಯರ ಮಾರ್ಗದರ್ಶನದಲ್ಲಿ ೨೦೦೩ರ ಅಕ್ಟೋಬರ್ ತಿಂಗಳಿನಲ್ಲಿ ಸಂಶೋಧನೆಗಾಗಿ ಹೆಸರು ನೋಂದಾಯಿಸಿದ ಬಾಬು, ಪರಿಶ್ರಮದಿಂದ ಸಕಾಲದಲ್ಲಿ ಪೂರ್ತಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಲ್ಮಂಜದ ಸಿದ್ದಬೈಲು, ಪಕ್ಕದ ಕೊಂಬಿನಡ್ಕಗಳಲ್ಲಿ ಪ್ರಾಥಮಿಕ ಶಿಕ್ಷಣ ಕಲಿತ ಬಾಬು, ಬಳಿಕ ಮುಂಡಾಜೆಯ ಸರಕಾರಿ ಹೈಸ್ಕೂಲ್‌ನಲ್ಲಿ ಪ್ರಥಮ ದರ್ಜೆಯೊಂದಿಗೆ

ಎಸ್‌ಎಸ್‌ಎಲ್‌ಸಿ ಶಿಕ್ಷಣ ಪೂರೈಸಿದರು. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪ್ರಥಮ ದರ್ಜೆಯೊಂದಿಗೆ ಮುಗಿಸಿದರು. ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಹೈ ಸೆಕೆಂಡ್ ಕ್ಲಾಸ್‌ನೊಂದಿಗೆ ಬಿಎಸ್‌ಸಿ ಪದವಿ ಪಡೆದ ಬಾಬು, ೧೯೯೯- ೨೦೦೦ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅನ್ವಯಿಕ ರಸಾಯನ ಶಾಸ್ತ್ರ ವಿಷಯದಲ್ಲಿ ಪ್ರಥಮ ದರ್ಜೆಯೊಂದಿಗೆ ಎಂಎಸ್‌ಸಿ ತೇರ್ಗಡೆಗೊಂಡರು. ಕಲ್ಮಂಜದ ಮತ್ತಡಿ ಮತ್ತು ಚೋಮು ದಂಪತಿಯ ೯ ಮಕ್ಕಳ ಪೈಕಿ ಏಳನೆಯವರಾಗಿ ಬಾಬು ಜನಿಸಿದರು. ಐದು ಗಂಡು, ನಾಲ್ಕು ಹೆಣ್ಣುಮಕ್ಕಳ ತುಂಬು ಸಂಸಾರ. ಅಸ್ಪೃಶ್ಯತೆ ಮತ್ತು ಬಡತನದ ಶಾಪವಾಗಿ ಕುಟುಂಬದ ಬೆನ್ನಿಗೆ ಅಂಟಿಕೊಂಡಿತ್ತು. ಹೆಣ್ಣು ಮಕ್ಕಳ್ಯಾರೂ ಅಕ್ಷರದ ಗೋಜಿಗೆ ಹೋಗಲಿಲ್ಲ. ಹುಡುಗರಾದರೋ ಇಬ್ಬರು ಪ್ರಾಥಮಿಕ ಶಾಲಾ ಹಂತದಲ್ಲಿಯೇ ಕೈ ಮೇಲೆತ್ತಿದರು. ಓರ್ವ ಸಹೋದರ ಪಿಯುಸಿ ಬಳಿಕ ಕಾನೂನು ಪದವಿ ಓದಲೆಂದು ಹೋದವರು ಅರ್ಧದಲ್ಲಿಯೇ ಕೈಬಿಟ್ಟರು. ಇನ್ನೋರ್ವ ಸಹೋದರ ಪಿಯುಸಿ ಓದಿಗೇ ತೃಪ್ತಿಪಟ್ಟರು. ಆದರೆ ಬಾಬು ಇವರೆಲ್ಲರಿಗಿಂತ ಮುಂದೆ ಸಾಗಿದರು. ಬಡತನದಿಂದಾಗಿ ತಂದೆ ತಾಯಿ ಶಾಲೆಗೆ ಸೇರಿಸಿದರೇ ಹೊರತು ಮುಂದೆ ಆಸಕ್ತಿ ವಹಿಸಲಿಲ್ಲ. ಛಲ ಇವರ ಕೈ ಹಿಡಿಯಿತು. ರಜಾ ದಿನಗಳಲ್ಲಿ ಅಲ್ಲಲ್ಲಿ ಕೂಲಿ ಕೆಲಸ ಮಾಡಿ ಬಾಬು ಓದು ಮುಂದುವರಿಸಿದರು.

ಸುಮಾರು ಒಂದೂವರೆ ವರ್ಷ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ಮೌಲ್ಯಮಾಪನ ವಿಭಾಗದ ಬೋಧಕೇತರ ಸಿಬಂದಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಎಂಜಿಎಂಗೆ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಸೇರ್ಪಡೆಗೊಂಡರು. ಮಾರ್ಗದರ್ಶಕರು ಪೂರ್ಣ ಪ್ರಮಾಣದ ಸಹಕಾರ ನೀಡಿದ ಪರಿಣಾಮವಾಗಿ ಆರು ವರ್ಷಗಳಲ್ಲಿ ಶೀಘ್ರ ಸಂಶೋಧನೆಯನ್ನು ಮುಗಿಸಲು ಸಾಧ್ಯವಾಯಿತು. ಅವರು ವಹಿಸಿದ ಆಸಕ್ತಿ, ಕಾಲೇಜಿನ ಆಡಳಿತ ಮಂಡಳಿಯ ಪ್ರೋತ್ಸಾಹ ನನ್ನ ಈ ಸಾಧನೆಗೆ ಸಹಕಾರಿಯಾಗಿದೆ. ಓದಿನ ದಿನಗಳಲ್ಲಿ ಕೆಲವು ಶಿಕ್ಷಣಪ್ರೇಮಿಗಳು ಸಹಾಯ ಮಾಡಿರುವುದು ಚಿಂತೆ ಬಿಟ್ಟು ಅಧ್ಯಯನದಲ್ಲಿ ತೊಡಗುವಂತೆ ಪ್ರೇರೇಪಿಸಿತು ಎಂದು ವಿನಯಪೂರ್ವಕವಾಗಿ ತಮಗೆ ಸಹಕರಿಸಿದವರನ್ನು ಸ್ಮರಿಸುತ್ತಾರೆ ಈ ಸಂಶೋಧಕ.

ಮುಂದೆ ಯುಜಿಸಿ ಶ್ರೇಣಿಯ ಉಪನ್ಯಾಸಕನಾಗುವುದು ನನ್ನ ಗುರಿ. ನನ್ನ ಸಾಧನೆಗೆ ಈತನಕ ಜಾತಿ ಅಡ್ಡಿಯಾಗಿಲ್ಲ. ಮುಂದೆಯೂ ಅಡ್ಡಿಯಾಗುವುದಿಲ್ಲ ಎಂಬ ಆಶಾಭಾವನೆ ನನ್ನದಾಗಿದೆ ಎನ್ನುತ್ತಾರೆ ಇವರು. ರಸಾಯನ ಶಾಸ್ತ್ರದಲ್ಲಿ ಸಂಶೋಧನೆ ನಡೆಸುವುದು ಸುಲಭದ ಕೆಲಸವಲ್ಲ. ತುಂಬಾ ತಾಳ್ಮೆ ಬೇಕು. ತನ್ನ ಕರ್ತವ್ಯದ ಮಧ್ಯೆಯೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಂಶೋಧನೆಯನ್ನು ಯಶಸ್ವಿಯಾಗಿ ಪೂರೈಸಿದ ಹೆಗ್ಗಳಿಕೆ ಬಾಬು ಅವರದ್ದು. ಈ ಮಟ್ಟಿನ ಸಾಧನೆ ಮಾಡಿದವರು ವಿರಳ. ಅವರೊಬ್ಬ ಉತ್ತಮ ಉಪನ್ಯಾಸಕರು, ವಿದ್ಯಾರ್ಥಿಗಳ ಬಗ್ಗೆ ಬದಟಛಿತೆ ಇರುವವರು. ಜಾತಿಯನ್ನು ಮೀರಿ ಸಮುದಾಯದ ಅಭಿವೃದಿಟಛಿಗಾಗಿ ಯೋಚನೆ ಮಾಡುವ ಅಪರೂಪದ ವ್ಯಕ್ತಿ ಎಂದು ಬಾಬು ಅವರನ್ನು ಬಣ್ಣಿಸುತ್ತಾರೆ ಎಂಜಿಎಂ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದು ಪ್ರಸ್ತುತ ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ಅರುಣ್‌ಕುಮಾರ್ ಎಸ್.ಆರ್.

ಕೊರಗ ಸಮುದಾಯದಿಂದ ಬೆಳಕಿಗೆ ಬಂದ ಅತ್ಯಂತ ವಿನಯವಂತ ಹಾಗೂ ಬುದಿಟಛಿವಂತ ಯುವಕ ಬಾಬು. ಆ ಸಮುದಾಯದ ಮೊದಲ ಡಾಕ್ಟರೇಟ್ ಪಡೆದ ಹೆಗ್ಗಳಿಕೆಯೂ ಅವರದ್ದು ಎನ್ನುತ್ತಾರೆ ಬಾಬುರವರ ಸಂಶೋಧನಾ  ಮಾರ್ಗದರ್ಶಕರಾದ ಮಂಗಳೂರು ವಿವಿಯ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ| ಬಾಲಕೃಷ್ಣ ಕಲ್ಲೂರಾಯರು. ಪರಿಶಿಷ್ಟ ವರ್ಗಗಳಲ್ಲಿ ಇಂಥ ಅಭ್ಯರ್ಥಿಗಳು ಬಹಳ ವಿರಳ. ಆದುದರಿಂದ ಬಾಬುರವರಿಗೆ ಉಜ್ವಲ ಭವಿಷ್ಯವಿದೆ. ಉನ್ನತ ಸ್ಥಾನಕ್ಕೇರಲು ಅವಕಾಶಗಳಿವೆ. ಅವರು ನನ್ನ ವಿದ್ಯಾರ್ಥಿ ಎಂಬುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಕಲ್ಲೂರಾಯರು ಹೊಸ ದಿಗಂತಕ್ಕೆ ಪ್ರತಿಕ್ರಿಯಿಸಿದರು. ಈ ಅಪರೂಪದ ಸಾಧಕನನ್ನು ಅಭಿನಂದಿಸುವ ಇಚ್ಛೆ ಇದೆಯೇ? ಹಾಗಿದ್ದಲ್ಲಿ ಈ ಮೊಬೈಲ್ ಸಂಖ್ಯೆಗೆ ಕರೆ ಮಾಡಿ-೯೮೪೪೯ ೯೫೧೫೩. ಹ್ಯಾಟ್ಸ್ ಅಪ್ ಬಾಬು..!

by Balepuni, Hosadigantha Mangalore

 

1 thought on “First ever Ph.D degree for Koraga Community ಕೊರಗ ಸಮುದಾಯಕ್ಕೆ ಮೊದಲ ಡಾಕ್ಟರೇಟ್ ಪದವಿ

  1. Congrats…………. you really did a great achievement. Being a Koraga community person, I would like to appreciate you for your wonderful performance. Really you brought a good name for our community. I am really proud of you………. Have a BRIGHT future.

Leave a Reply

Your email address will not be published.

This site uses Akismet to reduce spam. Learn how your comment data is processed.