ತೀರ್ಥಹಳ್ಳಿ: ‘ಗ್ರಾಮಾಂತರ ಪ್ರದೇಶದಲ್ಲಿರುವ ಸಮುದಾಯಗಳ ಅಥವಾರೈತರಉಪಯೋಗಕ್ಕಾಗಿ ಮೀಸಲಾದ ಜಮೀನುಗಳ, ಸಂಪನ್ಮೂಲಗಳ ರಕ್ಷಣೆ ಸ್ಥಳೀಯ ರೈತರ, ಗ್ರಾಮವಾಸಿಗಳ ಹಕ್ಕು.ಈ ಜಮೀನುಗಳನ್ನು ಇತರಯಾವುದೇ ಸರಕಾರೀಯಾ ಖಾಸಗೀ ಉದ್ದೇಶಕ್ಕೆ ಬಳಸುವುದಿದ್ದಲ್ಲಿ ಸ್ಥಳೀಯರ ಒಪ್ಪಿಗೆ ಪಡೆಯಬೇಕಾಗಿದ್ದುಅವಶ್ಯ.ಈ ಹಿನ್ನೆಲೆಯಲ್ಲಿ ಗ್ರಾಮಗಳ ಗೋಮಾಳ, ಹಾಡ್ಯ, ಸೊಪ್ಪಿನ ಬೆಟ್ಟ, ಇತರೆ ಭೂಮಿಗಳನ್ನು ಇನ್ನಿತರಉಪಯೋಗಕ್ಕೆ ಬಳಸಿದಲ್ಲಿ ಅದನ್ನು ಪ್ರಶ್ನಿಸುವ ಹಕ್ಕು ಸ್ಥಳೀಯರಿಗೆ ಇದೆ’, ಎಂದುಕರ್ನಾಟಕ ಸರಕಾರದ ಲೋಕ ಅದಾಲತ್‌ನ ಸದಸ್ಯರಾದಡಾ|| ಯಲ್ಲಪ್ಪರೆಡ್ಡಿಯವರು ತಿಳಿಸಿದರು.’ಅರಣ್ಯ ಮತ್ತುಇತರ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯನ್ನುರೈತರುತಲೆತಲಾಂತರದಿಂದ ನಡೆಸಿಕೊಂಡು ಬಂದಿದ್ದಾರೆ.ಈ ಸಂಪನ್ಮೂಲಗಳನ್ನು ಉಳಿಸಿ, ಬೆಳೆಸುವುದು ನಮ್ಮ ಹಕ್ಕು ಮತ್ತುಜವಾಬ್ದಾರಿ.ಇತ್ತೀಚಿನ ವರುಷಗಳಲ್ಲಿ ಈ ಸಂಪನ್ಮೂಲಗಳ ಬಳಕೆಯಲ್ಲಿ ಸ್ಥಳೀಯರ ಅಭಿಪ್ರಾಯವನ್ನುಯಾರೂ ಕೇಳದಿರುವುದು ದುರದೃಷ್ಟಕರ.ಇಂತಹ ಸಂದರ್ಭದಲ್ಲಿ ಸಂಪನ್ಮೂಲಗಳ ದುರ್ಬಳಕೆ, ಶೋಷಣೆಯ ಬಗ್ಗೆ, ಸ್ಥಳೀಯ ರೈತರಿಗೆಆಗುತ್ತಿರುವಅನ್ಯಾಯದ ಬಗ್ಗೆ ಲೋಕ ಅದಾಲತ್‌ನಲ್ಲಿ ವಿವರಿಸಲು ಸಮಯಾವಕಾಶವನ್ನು ನೀಡುತ್ತೇವೆ’,ಎಂದು ತಿಳಿಸಿದರು.
ಅವರು ತೀರ್ಥಹಳ್ಳಿಯ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದಲ್ಲಿಸೆಪ್ಟೆಂಬರ್ ೧೩, ೨೦೧೪ರ ಶನಿವಾರದಂದುನಡೆದ ’ಅರಣ್ಯಕಾಯಿದೆ ಮತ್ತು ಕೃಷಿಕ’ ಮಾಹಿತಿಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಬೆಂಗಳೂರಿನ ರಾಷ್ಟ್ರೀಯ ಕಾನೂನು ಕಾಲೇಜಿನ ಪ್ರಾಧ್ಯಾಪಕರಾಗಿರುವಡಾ|| ಎಂ.ಕೆ.ರಮೇಶ್‌ಅವರುಮಾತನಾಡುತ್ತಾ ’ನಮ್ಮದೇಶದಅರಣ್ಯಕಾಯಿದೆಕೃಷಿಕರ ಪಾಲುದಾರಿಕೆ ಬಗ್ಗೆ ಏನೂ ಹೇಳದಿರುವುದು ದುರದೃಷ್ಟ.ಅರಣ್ಯರಕ್ಷಣೆಯಲ್ಲಿ ಪಾರಂಪರಿಕವಾಗಿರೈತರು ತೊಡಗಿಸಿಕೊಂಡಿದ್ದನ್ನು ಗಮನಿಸದೆಜಂಟಿಅರಣ್ಯ ಸಮಿತಿ, ಸಾಮಾಜಿಕಅರಣ್ಯಎಂದು ವಿವಿಧ ಹೆಸರಿನಲ್ಲಿ ಬೇರೆ ಬೇರೆ ಯೋಜನೆಗಳನ್ನು ತೆಗೆದುಕೊಂಡು ಸಾವಿರಾರುರೂಪಾಯಿ ಹಣವನ್ನು ಕಳೆದುಕೊಡಿದ್ದೇವೆ. ಅರಣ್ಯ ಸಾರ್ವಜನಿಕ ಆಸ್ತಿಯಾಗಿ ಉಳಿಯದೆ ಸರಕಾರದ ಆಸ್ತಿಯಾಗಿದೆ. ಇದರಿಂದಾಗಿಅರಣ್ಯರಕ್ಷಣೆ ಸರಕಾರದ ಕೆಲಸವೆಂದಾಗಿದೆ’, ಎಂದು ತಿಳಿಸಿದರು.
ಪರಿಸರದಕಾರ್ಯಕರ್ತರಾದ ಶ್ರೀ ಗಜೇಂದ್ರಗೊರಸುಕೊಡಿಗೆ, ಶ್ರೀ ಗರ್ತಿಕೆರೆರಾಘವೇಂದ್ರ, ಶ್ರೀ ಬೆಳ್ಳೂರು ತಿಮ್ಮಪ್ಪ, ಶ್ರೀ ಶಿವಕುಮಾರ್ ವಾಲೆಮನೆ, ತೀರ್ಥಹಳ್ಳಿಯ ವಕೀಲರಾದ ಶ್ರೀ ನಾಗೇಶ್ ಸಂವಾದದಲ್ಲಿಪಾಲ್ಗೊಂಡುತಮ್ಮ ಅನುಭವಗಳನ್ನು ಹಂಚಿಕೊಂಡರು.
ಕೃಷಿ ಪ್ರಯೋಗ ಪರಿವಾರ ಮತ್ತು ಪುರುಷೋತ್ತಮ ಸಾವಯವ ಕೃಷಿ ಪರಿವಾರ ಸಂಸ್ಥೆಗಳುಜಂಟಿಯಾಗಿ ಆಯೋಜಿಸಿದ ಈ ಕಾರ್ಯಕ್ರಮದಅಧ್ಯಕ್ಷತೆಯನ್ನು ಪುರುಷೋತ್ತಮ ಸಾವಯವ ಕೃಷಿ ಪರಿವಾರದಅಧ್ಯಕ್ಷರಾದ ಶ್ರೀ ಮರಗಳಲೆ ನರಸಿಂಹಮೂರ್ತಿವಹಿಸಿದ್ದರು.ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಪ್ರೊ. ಪಿ.ವಿ.ಕೃಷ್ಣ ಭಟ್, ಕೃಷಿ ಪ್ರಯೋಗ ಪರಿವಾರದ ನಿರ್ವಾಹಕ ವಿಶ್ವಸ್ತರಾದ ಶ್ರೀ ನಾಗೇಂದ್ರರಾವ್, ಪುರುಷೋತ್ತಮ ಪ್ರತಿಷ್ಠಾನದಅಧ್ಯಕ್ಷರಾದ ಶ್ರೀ ಸುಬ್ಬರಾವ್ ಉಪಸ್ಥಿತರಿದ್ದರು.
ಕೃಷಿ ಪ್ರಯೋಗ ಪರಿವಾರದ ನಿರ್ದೇಶಕರಾದ ಶ್ರೀ ಅರುಣಕುಮಾರ ಪ್ರಾಸ್ತಾವಿಕ ಮಾತುಗಳನ್ನಾಡಿದರು.ಪುರುಷೋತ್ತಮ ಪರಿವಾರದ ಕಾರ್ಯದರ್ಶಿ ಶ್ರೀ ಶ್ರೀದತ್ತ ಸ್ವಾಗತಿಸಿದರು.ಸಾವಯವ ಕೃಷಿ ಪರಿವಾರದ ಶ್ರೀ ಶ್ರೀವತ್ಸ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.