Bangalore Sept 18: RSS Karnataka unit today donated donate Rs 25 Lakhs to RSS Jammu & Kashmir Unit, Collected as Flood Relief Fund collected in first phase of ‘RSS Sanchalita Samtrasta Parihara Nidhi’ in Karnataka.

ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ

# 74, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – 560004

080-26610081 www.samvada.org

ಪ್ರಕಟಣೆ   

18-09-2014: ಜಮ್ಮು-ಕಾಶ್ಮೀರದಲ್ಲಿ ಉಂಟಾದ ಭೀಕರ ಪ್ರಳಯದ ತರುವಾಯ ಅಲ್ಲಿನ ಸಂತ್ರಸ್ತರಿಗೆ ನೆರವಾಗಲು ಆರೆಸ್ಸೆಸ್  ಸಾರ್ವಜನಿಕ ಮನವಿ ಮಾಡಿತ್ತು. ’ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ-ಕರ್ನಾಟಕ’ದ ಮೂಲಕ ಮೊದಲ ಹಂತದಲ್ಲಿ ಸಂಗ್ರಹಿಸಲಾದ 25 ಲಕ್ಷ ರೂ.ಗಳನ್ನು ಜಮ್ಮು-ಕಾಶ್ಮೀರ ಘಟಕಕ್ಕೆ ನೀಡಲಾಗಿದೆ. ಅಲ್ಲಿ ರಸ್ತೆ-ಶಾಲೆ, ಆಸ್ಪತ್ರೆ ನಿರ್ಮಾಣಕ್ಕೆ ಈ ನಿಧಿ ಸದ್ಬಳಕೆಯಾಗಲಿದೆ.

10175014_1552929398260809_6456300679710544522_n

ಆರೆಸ್ಸೆಸ್ ಸ್ವಯಂಸೇವಕರು ಈಗಾಗಲೇ ಪರಿಹಾರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಸೇವಾಭಾರತಿ ಅಲ್ಲಲ್ಲಿ ಸಹಾಯಕೇಂದ್ರಗಳನ್ನು ಆರಂಭಿಸಿದೆ. ಸರಕಾರ ಮತ್ತು ಸೇನೆಗೆ ಸಹಕರಿಸುತ್ತಾ ಸಾವಿರಾರು ನೊಂದ ಜೀವಗಳಿಗೆ ಆಸರೆಯಾಗಿದ್ದಾರೆ. ಈ ಮುಂಚೆಯೇ ಪ್ರತ್ಯೇಕವಾದಿಗಳು, ಭಯೋತ್ಪಾದಕರ ಅಟ್ಟಹಾಸಕ್ಕೆ ನಲುಗಿರುವ ಜಮ್ಮು ಮತ್ತು ಕಾಶ್ಮೀರದ ಬಂಧುಗಳ ಬದುಕು ಮತ್ತೊಮ್ಮೆ ದುಸ್ತರವಾಗಿದೆ. ಅಲ್ಲಿನ ಸಂತ್ರಸ್ತರಿಗೆ ಇದೀಗ ಮಾನವೀಯ ನೆರವು ಅವಶ್ಯವಿದ್ದು ಸಮಾಜ ಬಾಂಧವರೆಲ್ಲರೂ ಅಲ್ಲಿನ ಜನರ ಬದುಕನ್ನು ಮತ್ತೆ ಕಟ್ಟಿಕೊಡುವಲ್ಲಿ ಸಹಕರಿಸಬೇಕಿದೆ. ಆರ್ಥಿಕ ಧನಸಹಾಯವನ್ನು ದೇಣಿಗೆ ರೂಪದಲ್ಲಿ ನೀಡಿ ಸಹಕರಿಸಬೇಕು ಹಾಗೂ ಜಮ್ಮು ಮತ್ತು ಕಾಶ್ಮೀರದ ಜನತೆಗೆದುರಾಗಿರುವ ಈ ಹಠಾತ್ ಸಂಕಷ್ಟವನ್ನು ನಿವಾರಿಸಲು ನಮ್ಮೊಂದಿಗೆ ಕೈ ಜೋಡಿಸಬೇಕೆಂದು ಕಳಕಳಿಯ ವಿಜ್ಞಾಪನೆಗಳು.

ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರನಿಧಿ ’RSS Sanchalita Santrasta Parihara Nidhi’ ಹೆಸರಿನಲ್ಲಿ ಚೆಕ್/ಡಿ.ಡಿಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕೆಂದು ಕೋರುತ್ತೇವೆ.

  • ಕೇಶವ ಕೃಪಾ ಆರೆಸ್ಸೆಸ್ ಕಛೇರಿ, #74, ರಂಗರಾವ್ ರಸ್ತೆ , ಶಂಕರಪುರಂ, ಬೆಂಗಳೂರು-೫೬೦೦೦೪ ದೂರವಾಣಿ:080-26610081
  • ಕೇಶವ ಕುಂಜ ಆರೆಸ್ಸೆಸ್ ಕಛೇರಿ , ಲೋಕಮಾನ್ಯ ತಿಲಕ್ ರಸ್ತೆ, ಗೋಕುಲ ರಸ್ತೆ, ಹುಬ್ಬಳ್ಳಿ, ದೂರವಾಣಿ:0836-2232972
  • FOR ONLINE TRANSFER:   “RSS Sanchaalita Santrasta Parihaara Nidhi” SB Account Number: 0789101009327, IFSC Code: CNRB0000789 Canara Bank, Kempegouda Nagar Branch, (Near Chamarajapet Uma Theater) Bangalore-560018
  • ನೀವು ಇಂಟರ್‌ನೆಟ್ ಮೂಲಕ ಅಥವಾ ಅಂಚೆ ಮೂಲಕ ಚೆಕ್/ಡಿಡಿ ಕಳುಹಿಸಿದರೆ ಆ ಕುರಿತು 9448284625, 9448847866  ಅಥವಾ karnatakarss@gmail.com  ಗೆ ಇ-ಮೈಲ್ ಮೂಲಕ ದಯವಿಟ್ಟು ತಿಳಿಸಿ.

ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ

ಮ. ವೆಂಕಟರಾಮು

ಪ್ರಾಂತ ಸಂಘಚಾಲಕರು, ಕರ್ನಾಟಕ ದಕ್ಷಿಣ

Leave a Reply

Your email address will not be published.

This site uses Akismet to reduce spam. Learn how your comment data is processed.