೧೫ ಡಿಸೆಂಬರ್ ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ. ಲವ್ ಜಿಹಾದನ್ನು ತಡೆಯಬೇಕಿರುವವರು ನಾವೇ. ಜಾಗರೂಕರಾಗೋಣ, ಜಾಗರೂಕರಾಗಿಸೋಣ. ಹಿಂದೂ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳೋಣ

ಲವ್ ಜಿಹಾದ್ ವಿಷಯದಲ್ಲಿ ಕೇರಳ ಮತ್ತೆ ಸುದ್ದಿ ಮಾಡಿದೆ. ಹಾದಿಯಾ ಆಗಿ ಇಸ್ಲಾಮಿಗೆ ಮತಾಂತರಗೊಂಡ ಅಖಿಲಾ ಎಂಬ ಹಿಂದು ಹುಡುಗಿ ಸುದ್ದಿಯ ಕೇಂದ್ರ ಬಿಂದು. ಈ ಇಡೀ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗಮನಿಸಿದ ಕೆಲವು ಪ್ರಮುಖ ಅಂಶಗಳು ಇದೊಂದು ಸಂಚು ಎನ್ನುವುದನ್ನು ಸಾರಿ ಹೇಳುತ್ತಿವೆ. ಒಟ್ಟು ಪ್ರಕರಣದ ಪ್ರಮುಖ ಅಂಶಗಳು ಹೀಗಿವೆ.

  • ಕೇರಳದ ಕೊಟ್ಟಾಯಂನ ಮಾಜಿ ಯೋಧ ಅಖಿಲ್ ಅಶೋಕನ್ ಅವರ ಒಬ್ಬಳೇ ಮಗಳು ಅಖಿಲಾ 2015 ರಲ್ಲಿ ಬಿಹೆಚ್‍ಎಂಎಸ್ (ಹೋಮಿಯೋಪತಿ ವೈದ್ಯಕೀಯ ಶಿಕ್ಷಣ) ಮಾಡಲು ತಮಿಳುನಾಡಿನ ಸೇಲಂಗೆ ಹೋಗಿದ್ದಳು.
  • ಮೊದಲು ಕಾಲೇಜು ಹಾಸ್ಟೆಲ್‍ನಲ್ಲಿದ್ದರೂ ಸ್ವಲ್ಪ ಸಮಯದ ಬಳಿಕ ಆಕೆ, ಫಸೀನಾ ಮತ್ತು ಜಸೀನಾ (ಸಹೋದರಿಯರು) ಎಂಬ ಇಬ್ಬರು ಮುಸ್ಲಿಂ ಹುಡುಗಿಯರು ಮತ್ತು ಬೇರೆ ಇಬ್ಬರು ಹಿಂದು ಹುಡುಗಿಯರ ಜೊತೆ ಒಂದು ಬಾಡಿಗೆ ಮನೆಯಲ್ಲಿ ವಾಸ ಮಾಡಲು ಪ್ರಾರಂಭಿಸಿದಳು.
  • ಕ್ರಮೇಣ, ಜಸೀನಾ ಜೊತೆ ಹೆಚ್ಚು ಆತ್ಮೀಯತೆ ಬೆಳೆದು ಅವರ ಮನೆಗೆ ಅನೇಕ ಬಾರಿ ಹೋಗಿ ಅಲ್ಲಿ ಉಳಿದಿದ್ದಳು. ಜಸೀನಾ, ಫಸೀನಾ ಮತ್ತು ಅವರ ತಂದೆ ಅಬೂಬಕ್ಕರ್ ಇಸ್ಲಾಮಿಗೆ ಮತಾಂತರ ಆಗುವಂತೆ ಅಖಿಲಾಳ ಮನವೊಲಿಸುತ್ತಿದ್ದರು.
  • ಒಂದು ದಿನ ಆಕೆ ಕಾಲೇಜಿಗೆ ಹಿಜಾಬ್ ಧರಿಸಿ ಬಂದಿದ್ದು ಆಕೆಯ ಸ್ನೇಹಿತೆಯರ ಮೂಲಕ ತಂದೆ ಅಶೋಕನ್ ಅವರಿಗೆ ಗೊತ್ತಾಗುತ್ತದೆ. ಜನವರಿ 2016ರಲ್ಲಿ ಅಖಿಲಾ ಸೇಲಂನಿಂದ ಕಾಣೆಯಾಗುತ್ತಾಳೆ. ಮಗಳು ಕಾಣೆಯಾದ ಬಗ್ಗೆ ತಂದೆ ಅಶೋಕನ್ ಅವರು ಅಬೂಬಕರ್, ಜಸೀನಾ ಮತ್ತು ಫಸೀನಾ ಸೇರಿ ತನ್ನ ಮಗಳನ್ನು ಅಪಹರಿಸಿದ್ದಾರೆಂದು ದೂರು ಸಲ್ಲಿಸುತ್ತಾರೆ.
  • ಜನವರಿ 19 ರಂದು ಅಖಿಲಾ ಕೋರ್ಟಿನ ವಿಚಾರಣೆಗೆ ಹಾಜರಾಗಿ, ಅಫಿಡವಿಟ್ ಸಲ್ಲಿಸುತ್ತಾಳೆ. ಜಸೀನಾ ಮತ್ತು ಫಸೀನಾರ `ಒಳ್ಳೆಯ ನಡತೆ ಮತ್ತು ಸಮಯಕ್ಕೆ ಸರಿಯಾಗಿ ಪ್ರಾರ್ಥನೆ ಮಾಡುವ’ ಶಿಸ್ತನ್ನು ನೋಡಿ ತನಗೆ ಇಸ್ಲಾಂ ಮೆಚ್ಚುಗೆಯಾದದ್ದು, ಹಿಂದುಗಳ ಹಲವು ದೇವರ ಬದಲು ಒಬ್ಬ ದೇವರ ಕಲ್ಪನೆ ಇಷ್ಟವಾದದ್ದು, ಇಂಟರ್‍ನೆಟ್‍ನಲ್ಲಿ ವಿಡಿಯೋ ನೋಡಿ ಮತ್ತು ಪುಸ್ತಕಗಳನ್ನು ಓದಿ ಇಸ್ಲಾಮಿನ ಬಗ್ಗೆ ಹೆಚ್ಚು ತಿಳಿದುಕೊಂಡಿದ್ದು, ಮನೆಯಲ್ಲಿರುವಾಗ ಒಮ್ಮೆ ತಾನು ಮುಸ್ಲಿಮರಂತೆ ಪ್ರಾರ್ಥನೆ ಮಾಡುವುದನ್ನು ನೋಡಿದ ತಂದೆ ಆಕ್ಷೇಪಿಸಿದ್ದು, ತನ್ನ ಅಜ್ಜ ತೀರಿದಾಗ ಹಿಂದು ಪದ್ಧತಿಯ ಪ್ರಕಾರ ಕೆಲವು ಅಚರಣೆಗಳನ್ನು ಮಾಡುವಂತೆ ತನಗೆ ಮನೆಯವರು ಒತ್ತಾಯಿಸಿದ್ದು ತನಗೆ ಇಷ್ಟವಾಗದಿದ್ದುದು ಎಲ್ಲವನ್ನೂ ಅಫಿಡವಿಟ್‍ನಲ್ಲಿ ವಿವರಿಸಿದ್ದಳು.
  • ಇದರಿಂದ ಬೇಸರವಾಗಿ ತಾನೇ ಸ್ವತಃ ಮನೆಯಿಂದ ಹೊರಬಂದು ಸೇಲಂನ ಕಾಲೇಜಿಗೆ ಹೋಗದೇ, ಅಬೂಬಕರ್ ಮನೆಗೆ ಹೋಗಿದ್ದಾಗಿಯೂ ಬಳಿಕ ಸತ್ಯಸಾರಿಣಿ ಎಂಬ ಸಂಸ್ಥೆಯಲ್ಲಿ ಇಸ್ಲಾಂ ಅಧ್ಯಯನಕ್ಕೆ ತನಗೆ ವ್ಯವಸ್ಥೆ ಮಾಡಿದ್ದಾಗಿಯೂ, ಯಾರ ಒತ್ತಾಯ ಆಮಿಷಗಳಿಲ್ಲದೇ ತಾನೇ ಇಸ್ಲಾಮಿಗೆ ಮತಾಂತರ ಆಗಿದ್ದಾಗಿಯೂ ಅಫಿಡವಿಟ್‍ನಲ್ಲಿ ಆಕೆ ತಿಳಿಸುತ್ತಾಳೆ.
  • ಸತ್ಯಸಾರಿಣಿ ಸಂಸ್ಥೆಯು ಪಿಎಫ್‍ಐ ಕಾರ್ಯಕರ್ತೆಯಾದ ಸಾಯಿನಾಬ ಎಂಬಾಕೆಯ ಜೊತೆ ಇರಲು ವ್ಯವಸ್ಥೆ ಮಾಡಿ, ಇಸ್ಲಾಂ ಅಧ್ಯಯನಕ್ಕೆ ವ್ಯವಸ್ಥೆ ಮಾಡುತ್ತದೆ.
  • ಸ್ವತಃ ತಾನೇ ಬಯಸಿ ಇಸ್ಲಾಂ ಅಧ್ಯಯನ ಮಾಡುತ್ತಿರುವುದರಿಂದ ಮತ್ತು ಆಕೆ 18 ವರ್ಷ ಪ್ರಾಯ ದಾಟಿರುವುದರಿಂದ ಹೆಬಿಯಸ್ ಕಾರ್ಪಸ್ ಅರ್ಜಿಯನ್ನು ಕೋರ್ಟು ವಜಾ ಮಾಡಿ ಆಕೆಯ ಇಚ್ಛೆಯಂತೆ ಇಸ್ಲಾಂ ಕಲಿಯಲು ಅವಕಾಶ ನೀಡುತ್ತದೆ.
  • ಆಕೆಯನ್ನು ವಿದೇಶಕ್ಕೆ ಕರೆದುಕೊಂಡು ಹೋಗುವ ಸಾಧ್ಯತೆಯಿರುವುದರಿಂದ ಅದನ್ನು ತಡೆಯುವಂತೆ ಕೋರಿ ತಂದೆ ಅಶೋಕನ್ ಅವರು ಆರು ತಿಂಗಳ ಬಳಿಕ ಕೋರ್ಟಿಗೆ ಅರ್ಜಿ ಸಲ್ಲಿಸುತ್ತಾರೆ. ಈ ಮಧ್ಯೆ ಆಕೆಯನ್ನು ಸಾಯಿನಾಬಳ ಮನೆಯಿಂದ ಗೊತ್ತಿಲ್ಲದ ಇನ್ನೊಂದು ಸ್ಥಳದಲ್ಲಿಡಲಾಗುತ್ತದೆ.
  • ಸತ್ಯಸಾರಿಣಿ ಮತ್ತು ಸಾಯಿನಾಬ ಅವರು ಅಕ್ರಮವಾಗಿ ಮತಾಂತರ ಮಾಡುತ್ತಿರುವ ಬಗ್ಗೆ ತನಿಖೆ ನಡೆಸುವಂತೆ ಕೋರ್ಟು ಪೊಲೀಸರಿಗೆ ಆದೇಶ ನೀಡುತ್ತದೆ.
  • ಡಿಸೆಂಬರ್ 2016ರಲ್ಲಿ ಷಫಿನ್ ಜಹಾನ್ ಎಂಬ ವ್ಯಕ್ತಿಯೊಂದಿಗೆ ಕೋರ್ಟಿಗೆ ಬಂದ ಅಖಿಲಾ ಈತ ತನ್ನ ಗಂಡ ಎಂದು ಪರಿಚಯಿಸಿ, ವಿವಾಹ ಪ್ರಮಾಣ ಪತ್ರವನ್ನು ಕೋರ್ಟಿಗೆ ಸಲ್ಲಿಸುತ್ತಾಳೆ. ಆದರೆ, ಮದುವೆಯ ಪ್ರಮಾಣಪತ್ರ ನೀಡಿದ್ದ ತನ್ವೀರುಲ್ ಇಸ್ಲಾಂ ಸಂಘಂ ಎಂಬ ಸಂಸ್ಥೆ ಮದುವೆ ಪ್ರಮಾಣ ಪತ್ರ ಕೊಡುವ ಸಂಸ್ಥೆಯಾಗಿ ನೋಂದಣಿ ಆಗಿಲ್ಲವಾದ್ದರಿಂದ ಆ ಪ್ರಮಾಣ ಪತ್ರ ನಂಬಲರ್ಹವಲ್ಲ ಎಂಬುದನ್ನು ಕೋರ್ಟು ಗಮನಿಸುತ್ತದೆ.
  • ಮೊದಲಿಗೆ ತನ್ನ ಹೊಸ ಹೆಸರು ಆಸಿಯಾ ಎಂದು ಹೇಳಿದ್ದ ಅಖಿಲಾ, ಬಳಿಕ ಸಲ್ಲಿಸಿದ ಅಫಿಡವಿಟ್‍ಗಳಲ್ಲಿ ಅಖಿಲಾ ಆಶೋಕನ್ ಅಲಿಯಾಸ್ ಆಧಿಯಾ ಎಂದು ನಮೂದಿಸಿದ್ದಳು. ಆದರೆ, ಕೋರ್ಟಿಗೆ ಸಲ್ಲಿಸಿದ ಅನುಮಾನಾಸ್ಪದ ವಿವಾಹ ಪ್ರಮಾಣಪತ್ರದಲ್ಲಿ ಹಾದಿಯಾ ಎಂದು ಆಕೆಯ ಹೆಸರು ನಮೂದಾಗಿತ್ತು.
  • ಇವೆಲ್ಲವನ್ನು ಪರಿಗಣಿಸಿ, ಆಕೆಯನ್ನು ದೇಶದಿಂದ ಹೊರಗೆ ಸಾಗಿಸಲು ಮದುವೆ ಎಂಬುದು ಒಂದು ನಾಟಕ ಎಂದು ಅಭಿಪ್ರಾಯಪಟ್ಟ ಕೋರ್ಟು ಮದುವೆಯನ್ನು ರದ್ದುಗೊಳಿಸಿತು. ಆಕೆ ಓದನ್ನು ಮುಂದುವರಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರಿಂದ ಆಕೆಗೆ ಓದು ಮುಂದುವರಿಸಲು ಅನುಮತಿ ನೀಡಿ ಕಾಲೇಜಿನ ಮುಖ್ಯಸ್ಥರನ್ನೇ ಆಕೆಯ ಪಾಲಕರನ್ನಾಗಿ ನೇಮಿಸಿ ಆದೇಶ ಹೊರಡಿಸಿತು. ತನ್ನ ಗಂಡನನ್ನೇ ತನ್ನ ಪಾಲಕನನ್ನಾಗಿ ಪರಿಗಣಿಸುವಂತೆ ಅಖಿಲಾ ವಿನಂತಿಸಿದ್ದರೂ ಸುಪ್ರೀಂ ಕೋರ್ಟು ಅದನ್ನು ಪರಿಗಣಿಸದಿರುವುದು ಒಂದು ಒಳ್ಳೆಯ ಬೆಳವಣಿಗೆ.

 

ಷಫಿನ್ ಜಹಾನ್ ಮತ್ತು ಸಾಯಿನಾಬ ಇವರುಗಳಿಬ್ಬರೂ ಪಿಎಫ್‍ಐ ಕಾರ್ಯಕರ್ತರಾಗಿರುವುದು ಮತ್ತು ಷಫಿನ್ ಮೇಲೆ ಹಲವು ಕ್ರಿಮಿನಲ್ ಮೊಕದ್ದಮೆಗಳಿರುವುದು ಈ ಘಟನೆಯ ಹಿಂದೆ ಒಂದು ದೊಡ್ಡ ಹುನ್ನಾರ ಇರುವುದನ್ನು ಸ್ಪಷ್ಟಪಡಿಸುತ್ತವೆ. ಅಲ್ಲದೇ, ಷಫಿನ್ ಐಎಸ್‍ಐಎಸ್ ಜೊತೆಗೆ ಸಂಪರ್ಕ ಹೊಂದಿರುವ ವರದಿಗಳೂ ಬರುತ್ತಿವೆ. ಎನ್‍ಐಎ ನಡೆಸುತ್ತಿರುವ ತನಿಖೆಯಲ್ಲಿ ಇನ್ನಷ್ಟು ಅಂಶಗಳು ಹೊರಬರುವ ಸಾಧ್ಯತೆಗಳಿವೆ.

Akhila converted to Hadiya
PC Internet

ಲವ್ ಜಿಹಾದ್ ತಡೆಯಲು ನಾವೇನು ಮಾಡಬಹುದು?
ಕೇರಳದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಇಂತಹ ಒಂದು ದೊಡ್ಡ ಜಾಲವೇ ಕಾರ್ಯಾಚರಿಸುತ್ತಿದ್ದು ಪ್ರೀತಿಯ ನಾಟಕವಾಡಿ ಹಿಂದು ಹೆಣ್ಣು ಮಕ್ಕಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳು ಪ್ರಯತ್ನಗಳು ಮುಸ್ಲಿಂ ಹುಡುಗರಿಂದ ನಡೆಯುತ್ತಲೇ ಇವೆ. ಹಿಂದು ಪೋಷಕರು ಎಚ್ಚರಗೊಳ್ಳದ ಹೊರತು ಇದಕ್ಕೆ ತಡೆ ಹಾಕುವುದು ಕಷ್ಟ ಸಾಧ್ಯ. ನಮ್ಮ ನಮ್ಮ ಮನೆಯ ಮಕ್ಕಳು ಲವ್ ಜಿಹಾದ್‍ಗೆ ಬಲಿಯಾಗದಂತೆ ತಡೆಯಲು ನಾವೇನು ಮಾಡಬಹುದೆಂಬ ಬಗ್ಗೆ ಕೆಲವು ಅಂಶಗಳು ಇಲ್ಲಿವೆ.

  • ನಮ್ಮ ಮಕ್ಕಳ ಸ್ನೇಹಿತರು ಯಾರು ಎಂಬ ಬಗ್ಗೆ ನಮಗೂ ತಿಳಿದಿರಲಿ. ಅವರ ಹಿನ್ನೆಲೆ, ಅವರ ಮತ ಯಾವುದೆಂಬ ಬಗ್ಗೆ ತಿಳಿಯುವುದೂ ಮುಖ್ಯ.
  • ನಮ್ಮ ಮಕ್ಕಳು ಓದುವ ಕಾಲೇಜಿಗೆ ಅಥವಾ ಶಾಲೆಗೆ ಪಾಲಕರು ಆಗಾಗ ಹೋಗಿ ತಮ್ಮ ಮಕ್ಕಳ ಬಗ್ಗೆ ವಿಚಾರಿಸುವುದು, ಮಕ್ಕಳ ಸ್ನೇಹಿತರನ್ನೂ ಭೇಟಿ ಮಾಡುವುದೂ ಕೂಡ ಅಗತ್ಯ. ಏನಾದರೂ ಅನಪೇಕ್ಷಿತ ಬೆಳವಣಿಗೆಗಳು ನಡೆಯುತ್ತಿದ್ದರೆ, ಅವರ ಮೂಲಕ ನಮ್ಮ ಗಮನಕ್ಕೆ ಬರುವ ಸಾಧ್ಯತೆಗಳು ಜಾಸ್ತಿ.
  • ಓದಿಗಿಂತ ವಾಟ್ಸಾಪ್, ಫೇಸ್‍ಬುಕ್‍ಗಳಿಗೇ ನಮ್ಮ ಮಕ್ಕಳು ಹೆಚ್ಚು ಸಮಯ ಕೊಡುತ್ತಿದ್ದಲ್ಲಿ ಸ್ವಲ್ಪ ಗಮನ ಕೊಡಬೇಕಾದ್ದು ಅಗತ್ಯ.
  • ತಡವಾಗಿ ಬರುವುದು, ಸ್ನೇಹಿತರ ಮನೆಗೆ ಹೋಗುವುದು, ಕಂಬೈನ್ಡ್ ಸ್ಟಡಿ ಮಾಡುವುದು ಇವೆಲ್ಲದರ ಬಗ್ಗೆ ನಮಗೆ ಸರಿಯಾದ ಮಾಹಿತಿ ಇದೆಯೇ ಎಂಬುದನ್ನು ಪಾಲಕರು ಆಗಾಗ ಖಾತ್ರಿಪಡಿಸಿಕೊಳ್ಳುತ್ತಿರುವುದು ಒಳ್ಳೆಯದು.
  • ಕೋಣೆಯಲ್ಲಿ ಒಬ್ಬರೇ ಕುಳಿತು ಓದುವ ನೆಪದಲ್ಲಿ ಫೋನಿನಲ್ಲಿ ಚಾಟ್ ಮಾಡುವ ಹದಿಹರೆಯದ ಮಕ್ಕಳು ಹಲವರು. ಲವ್ ಜಿಹಾದಿನ ಪ್ರೀತಿಯ ಬಲೆಗೆ ಬೀಳಿಸುವಲ್ಲಿ ಫೋನ್ ಬಹಳ ಪ್ರಮುಖ ಸಾಧನ ಎಂಬುದು ನಮಗೆ ನೆನಪಿರಲಿ.
  • ನಮ್ಮ ಮನೆಯ ಹೆಣ್ಣು ಮಕ್ಕಳಿಗೆ ಯಾರಾದರೂ ಅನ್ಯಮತೀಯರು ವಿಶೇಷ ಸಹಾಯ ಮಾಡುತ್ತಿದ್ದರೆ, ಕಾಲೇಜಿನಲ್ಲೋ ಕಚೇರಿಯಲ್ಲೋ ಬಹಳ ಕಾಳಜಿ ತೋರಿಸುತ್ತಿದ್ದರೆ, ಅದರ ಬಗ್ಗೆ ಜಾಗೃತರಾಗಿರಬೇಕು ಅಥವಾ ಅಂತಹದ್ದನ್ನು ನಿರಾಕರಿಸುವುದೇ ಒಳ್ಳೆಯದು.
  • ತಮ್ಮ ಮಕ್ಕಳ ಕೈಯಲ್ಲಿ ಹೊಸ ಹೊಸ ಗಿಫ಼್ಟ್ ಗಳು ಬರುತ್ತಿವೆಯೆಂದರೆ, ಅದನ್ನು ನಿಜವಾಗಿ ಕೊಡುತ್ತಿರುವವರು ಯಾರು ಎನ್ನುವುದರ ಬಗ್ಗೆ ನಿಮಗೆ ಸರಿಯಾದ ತಿಳುವಳಿಕೆಯಿರಲಿ.
  • ನಮ್ಮ ಕಾರಿನ ಡ್ರೈವರ್‍ನಿಂದ ಹಿಡಿದು, ಸಾಮಾನು ಕೊಳ್ಳುವ ಅಂಗಡಿಯವರು, ಮೊಬೈಲ್ ರಿಚಾರ್ಜ್ ಮಾಡಿಸುವ, ಸ್ಕೂಟರ್ ರಿಪೇರಿ ಮಾಡುವ, ತರಕಾರಿ, ಚಪ್ಪಲಿ, ಬ್ಯಾಗು, ಬಟ್ಟೆ, ಪರಫ್ಯೂಮ್ ಕೊಳ್ಳುವ ಅಂಗಡಿಯವರೆಗೆ ಎಲ್ಲರ ಬಗ್ಗೆಯೂ ನಮಗೆ ಸ್ವಲ್ಪ ತಿಳುವಳಿಕೆಯಿರಬೇಕಾದ್ದು ಬಹಳ ಮುಖ್ಯ.
  • ಅನ್ಯಮತೀಯರನ್ನು ಮದುವೆಯಾದ ಬಳಿಕ ಸಂಕಟಕ್ಕೊಳಗಾದ ಅನೇಕರ ಕರುಣಾಜನಕ ಕತೆಗಳು ಇಂಟರ್‍ನೆಟ್‍ನಲ್ಲಿ ಧಾರಾಳವಾಗಿ ಸಿಗುತ್ತವೆ. ಅಗ್ನಿವೀರ್.ಕಾಮ್ ನಂತಹ ವೆಬ್‍ಸೈಟ್‍ಗಳಲ್ಲಿ ಹೆಚ್ಚಿನ ಮಾಹಿತಿ ಸಿಗುತ್ತದೆ. ಅವೆಲ್ಲ ನಮ್ಮ ಮನೆಯ ಮಕ್ಕಳಿಗೆ ತಿಳಿದಿರಬೇಕಾದ್ದು ಮುಖ್ಯ.
  • ಕೊನೆಯದಾಗಿ ಮತ್ತು ಎಲ್ಲ್ಕಕಿಂತ ಮುಖ್ಯವಾಗಿ, ನಮ್ಮ ಧರ್ಮದ ಬಗ್ಗೆ, ಅದರ ವಿಶೇಷತೆಗಳ ಬಗ್ಗೆ, ನಮ್ಮಲ್ಲಿನ ಬಹುದೇವತಾರಾಧನೆಯ ಮಹತ್ತ್ವದ ಬಗ್ಗೆ, ನಮ್ಮ ದೇವರ ಕಲ್ಪನೆಯ ಬಗ್ಗೆ, ನಮ್ಮ ಹೆಮ್ಮೆಯ ಪರಂಪರೆ-ಇತಿಹಾಸಗಳ ಬಗ್ಗೆ ನಮ್ಮ ಮಕ್ಕಳಿಗೆ ನಾವೇ ಕಲಿಸಬೇಕು. ಶಾಲೆಯಲ್ಲಿ ಇಂತಹ ಶಿಕ್ಷಣ ಎಷ್ಟರ ಮಟ್ಟಿಗೆ ಸಿಗುತ್ತಿದೆ ಎನ್ನುವುದು ನಮಗೆ ತಿಳಿದೇ ಇದೆ. ಹಾಗಾಗಿ, ಈ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸಿದರೆ, ಮಕ್ಕಳಿಗೆ ಧರ್ಮ-ಆಧ್ಯಾತ್ಮದ ಬಗ್ಗೆ ಒಳ್ಳೆಯ ತಿಳುವಳಿಕೆ ನೀಡುವ ಪುಸ್ತಕಗಳನ್ನು ಓದಲು ಪ್ರೇರಣೆ ಕೊಟ್ಟರೆ, ನಮ್ಮ ಬುಡ ಗಟ್ಟಿಯಾದಂತೆ. ಆಗ ಅವರನ್ನು ಬ್ರೈನ್‍ವಾಶ್ ಮಾಡಲು ಯಾರಿಗೂ ಸಾಧ್ಯವಾಗುವುದಿಲ್ಲ.

ಹೀಗೆ, ನಾವೇ ಯೋಚಿಸಲು ಪ್ರಾರಂಭಿಸಿದರೆ, ನಮಗೇ ಅನೇಕ ಸಂಗತಿಗಳು ಹೊಳೆಯುತ್ತವೆ. ನಮ್ಮ ಮನೆ ಮಾತ್ರವಲ್ಲ, ನಮ್ಮ ಸ್ನೇಹಿತರ, ಬಂಧುಗಳ ಮನೆಯಲ್ಲೂ ಇಂತಹ ಮುಂಜಾಗ್ರತೆಗಳ ಬಗ್ಗೆ ಚರ್ಚೆ ನಡೆಯಬೇಕಾದ್ದು ಅಗತ್ಯ. ಹಾಗೆಯೇ, ಮನೆಯಲ್ಲಿ ಮಕ್ಕಳು ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡಬಹುದಾದ, ತಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದಾದ ವಾತಾವರಣವೂ ಅಗತ್ಯ. ಆಗ, ಲವ್ ಜಿಹಾದನ್ನು ಎದುರಿಸುವುದು ಕಷ್ಟವಲ್ಲ.

Leave a Reply

Your email address will not be published.

This site uses Akismet to reduce spam. Learn how your comment data is processed.