RSS Akhil Bharatiya sah Bouddhik Pramukh CR Mukunda, MP Nalin Kumar at 'Purushottam Rao Krishi Samman' at Mangaluru

ಮಂಗಳೂರು : ಸಾವಯವ ಮೂಲಕ ಜಗತ್ತಿನ ಬದಲಾವಣೆ. ಕೃಷಿ ಕುಟುಂಬ ಬದಲಾವಣೆಯೊಂದಿಗೆ ಸಮಾಜದ ತಳಸ್ಪರ್ಶಿ ಬದಲಾಗಬೇಕು. ಭಾರತಮಾತೆ, ಮಾತೃಭೂಮಿ ಎನ್ನು ವ ಭಾವನೆ ಇಲ್ಲದೇ ಹೋದರೆ ಸಾವಯವ ಕೃಷಿ ಚಿಂತನೆಯತ್ತ ಹೋಗಲು ಸಾಧ್ಯವಿಲ್ಲ  ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಬೌದ್ಧಿಕ ಪ್ರಮುಖ್ ಮುಕುಂದ ಅಭಿಪ್ರಾಯಪಟ್ಟರು.

RSS Akhil Bharatiya sah Bouddhik Pramukh CR Mukunda, MP Nalin Kumar at 'Purushottam Rao Krishi Samman' at Mangaluru
RSS Akhil Bharatiya sah Bouddhik Pramukh CR Mukunda, MP Nalin Kumar at ‘Purushottam Rao Krishi Samman’ at Mangaluru

ಮಂಗಳೂರಿನ ಸಂಘನಿಕೇತನದಲ್ಲಿ April 11 ಶನಿವಾರ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ವಿಠಲಾಪುರದ ಸಾವಯವ ಕೃಷಿ ಸಾಧಕರಾದ   ರುದ್ರಮ್ಮ ಮತ್ತು ರುದ್ರಪ್ಪ ಹಾಗೂ ಚಂದ್ರಮ್ಮ ಮತ್ತು ವೀರಣ್ಣ ಅವರ ಪರಿವಾರಕ್ಕೆ ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ನೀಡಿದ ‘ಪುರುಷೋತ್ತಮ ಸನ್ಮಾನ’ ಸಂಸ್ಮರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾವಯವ ವಿಧಾನ ಮೂಲಕ  ಜಗತ್ತಿನ ಜನರಿಗೆ ಅನ್ನ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಜಗತ್ತಿನ ಹಿತದೃಷ್ಟಿಯಲ್ಲಿ ಇಂದು ಸಾವಯವ ಕೃಷಿ ವಿಧಾನ ಅತ್ಯಂತ ಪ್ರಸ್ತುತವೆನಿಸಿಕೊಳ್ಳುತ್ತಿದೆ. ಜಾಗತಿಕ ತಾಪಮಾನ ಹಾಗೂ ಕೀಟನಾಶಕ ಮುಕ್ತ ಆಹಾರ ಬಳಕೆ ಮೂಲಕ ಜೀವಸಂಕುಲದ ಉಳಿವಿಗಾಗಿ ಜಗತ್ತು  ಸಾವಯವತೆಗೆ ಹೋಗಬೇಕೆಂಬ ಅಭಿಮತ ತಿಳುವಳಿಕೆಯುಳ್ಳವರದ್ದಾಗುತ್ತಿದೆ. ಅಲ್ಲದೇ ಇಂದು ಕೃಷಿ ಭೂಮಿ ಕ್ಷೀಣಿಸುವುದರೊಂದಿಗೆ ಲಭ್ಯತೆಯ ಭೂಮಿಯಲ್ಲಿ   ರಾಸಾಯನಿಕ ಬಳಕೆ ಮೂಲಕ ಹೆಚ್ಚು ಇಳುವರಿ ಪಡೆಯುವ ಮಾರ್ಗವೂ ಅಪ್ರಸ್ತುತವಾಗುತ್ತಿದೆ ಎಂಬುದನ್ನು  ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳು ಕಂಡುಕೊಂಡಿವೆ. ಈ ನಿಟ್ಟಿನಲ್ಲಿ ರಾಸಾಯನಿಕ ಬಳಕೆ ವಿರುದ್ಧ ಚಿಂತನೆ ಮೂಡಿದೆ ಎಂದು ತಿಳಿಸಿದರು.

೧೮೫೦ ರ ಬಳಿಕ ಬಂದ ಕೃಷಿ ವಿಧಾನಕ್ಕೆ ಈಗಿರುವ ಹೊಸತಂತ್ರಜ್ಞಾನ, ಪ್ರಯೋಗಗಳನ್ನು ಅಳವಡಿಸಿಕೊಡು ಭಾರತ ಜಗತ್ತಿಗೆ ಬೇಕಾಗಿರುವ ಆಹಾರವನ್ನು ಉತ್ಪಾದಿಸಬೇಕು ಎಂದು ಕರೆ ನೀಡಿದ ಅವರು, ಸಾವಯವ ವಿಧಾನ ಮೂಲಕ ಆಹಾರ ಉತ್ಪಾದನೆಯಲ್ಲಿನ  ಸಮಸ್ಯೆಗೆ ಸಾವಯವ ಕೃಷಿ ಮೂಲಕ ಉತ್ತರವನ್ನು ಕಂಡುಕೊಳ್ಳಬಹುದು ಎಂದು  ಅಭಿಪ್ರಾಯಪಟ್ಟರು.

ಜಗತ್ತಿನ ತಂತ್ರಜ್ಞಾನ, ವಿಜ್ಞಾನಗಳು ದುರುಪಯೋಗವಾಗುತ್ತಿದೆ. ಕೃಷಿ ಕ್ಷೇತ್ರವೂ ಯಾಂತ್ರೀಕರಣ ಕಡೆಗೆ ಹೆಚ್ಚುತ್ತಾ ಹೋದರೆ ಕೈಗೆ ಕೆಲಸ ಕಡಿಮೆಯಾದೀತು. ಏಕ ರೀತಿಯ ವಿಧಾನ ಬಳಕೆಯೂ ಉಚಿತವಲ್ಲ. ಎಲ್ಲರೂ ಮತ್ತೆ ಕೃಷಿಯತ್ತ ಮರಳಬೇಕು. ಎಲ್ಲರ ಕೈಗೂ ಕೆಲಸ ದೊರೆಯಬೇಕು. ಸಾವಯವ ವಿಧಾನ ಉಳಿಯಬೇಕು ಎಂದ ಅವರು, ಭೂಮಿಯೊಳಗಿಂದ ಸೃಷ್ಟಿಮಾಡುವ ಸಂಪತ್ತು . ನಾನ್‌ಟ್ರೇಡೆಬಲ್. ಇದರಲ್ಲಿ ಶ್ರದ್ಧೆ ಇದೆ. ಜೀವನಪ್ರೀತಿಯ ವಸ್ತುವೂ ಹೌದು. ಇದರಿಂದಲೇ ಜಗತ್ತಿಗೆ ಶಾಂತಿಯ ಸಾಧ್ಯವಿದೆ ಎಂದರು.

ವೇದಿಕೆಯಲ್ಲಿ ಪುರುಷೋತ್ತಮರಾವ್ ಕೃಷಿ ಸಂಶೋಧಾನ ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಸುಬ್ಬರಾಯ್ ಹಾಗೂ ಆರೆಸ್ಸೆಸ್‌ನ ಪ್ರಾಂತ ಸಂಘಚಾಲಕ್ ಡಾ. ವಾಮನ ಶೆಣೈ ಹಾಗೂ ಸನ್ಮಾನಿತ ಕುಟುಂಬವರ್ಗದ ಸದಸ್ಯರು ಉಪಸ್ಥಿತರಿದ್ದರು.

 

ಪುರುಷೋತ್ತಮರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನದ ವಿಶ್ವಸ್ಥ ದಿನೇಶ್ ಸರು ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ್ ಶೇಟ್ ಪ್ರಾರ್ಥಿಸಿದರು. ಶಿವಸುಬ್ರಹ್ಮಣ್ಯ ಸ್ವಾಗತಿಸಿದರು. ಪರೀಕ್ಷಿತ ತೋಳ್ಪಾಡಿ ನಿರೂಪಿಸಿದರು. ಅರುಣ್‌ಕುಮಾರ್ ವಿ.ಕೆ. ವಂದಿಸಿದರು.

ವಂದೇ ಮಾತರಂನೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸಭಾ ಕಾರ್ಯಕ್ರಮಕ್ಕೆ ಮುನ್ನ ಸನ್ಮಾನಿತ ಕುಟುಂಬದವರನ್ನು ಉರ್ವ ಮಾರಿಗುಡಿ ಬಳಿಯಿಂದ ಶೋಭಾಯಾತ್ರೆಯೊಂದಿಗೆ ಕರೆತರಲಾಯಿತು. ಸಂಸ್ಕಾರ ಭಾರತಿ ತಂಡದಿಂದ ಮೆರವಣಿಗೆ ಮೊದಲು ರೈತಗೀತೆ ಹಾಡಿದರು.

ಕಾರ್ಯಕ್ರಮದಲ್ಲಿ ಪುರುಷೋತ್ತಮರಾಯರು ಮತ್ತು ಪ್ರತಿಷ್ಠಾನ ಹಾಗೂ  ಸನ್ಮಾನಿತರ ಬಗ್ಗೆ ಸಾಕ್ಷಚಿತ್ರ ಪ್ರದರ್ಶಿಸಲಾಯಿತು. ಅಲ್ಲದೇ ‘ಸಾಧಕರ ಸಾಧನೆ’ ಕಿರುಹೊತ್ತಿಗೆಯನ್ನು ಮುಕುಂದ ಅವರು ಬಿಡುಗಡೆಗೊಳಿಸಿದರು. ಮಂಜೂಷ ಮಹಿಳಾತಂಡದಿಂದ ಆಕರ್ಷಕ ಚಂಡೆ ವಾದನ ನಡೆಯಿತು.

Leave a Reply

Your email address will not be published.

This site uses Akismet to reduce spam. Learn how your comment data is processed.