ಮಂಜೇಶ್ವರ ತಾಲೂಕಿನ ಮೀಂಜ ,ವರ್ಕಾಡಿ ಹಾಗೂ ಪೈವಳಿಕೆ ಪಂಚಾಯತಿಗೆ ಒಳಪಟ್ಟ ಬಾಲಗೋಕುಲಗಳ “ಗೋಕುಲೋತ್ಸವ ” 30/3/2014 ಭಾನುವಾರದಂದು ಬಾಯಿಕಟ್ಟೆ “ಶ್ರೀ ಅಯ್ಯಪ್ಪ ಮಂದಿರದಲ್ಲಿ ನಡೆಯಿತು. ಆರಂಭದಲ್ಲಿ ತಾಲೂಕಿನ ವಿವಿಧ ಬಾಲಗೋಕುಲದ ಸುಮಾರು 150 ಕ್ಕೂ ಮೇಲ್ಪಟ್ಟ ಮಕ್ಕಳು ಆಕರ್ಷಕ ಶೋಭಾಯಾತ್ರೆಯ ಮೂಲಕ ಅಟ್ಟೆಗೋಳಿ “ವಿಷ್ಣುನಗರ” ದಿಂದ ಶ್ರೀ ಅಯ್ಯಪ್ಪ ಮಂದಿರ ತಲುಪಿದರು.
ನಂತರ “ಗೋಕುಲೋತ್ಸವ ” ದ ಉದ್ಘಾಟನೆಯನ್ನು ದೀಪ ಬೆಳಗುವುದರೊಂದಿಗೆ ಶ್ರೀ ಟಿ ಎನ್ ಮೂಡಿತ್ತಾಯ, ನಿವೃತ್ತ ಪ್ರಾಂಶುಪಾಲರು ಮಾಡಿದರು .ನಂತರ ಪ್ರಾಸ್ತಾವಿಕ ಭಾಷಣವನ್ನು ಶ್ರೀ ಸುಬ್ರಾಯ ನಂದೋಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗ ಸೇವಾಪ್ರಮುಖ್ ಇವರು ನಡೆಸಿದರು.
ನಂತರ ಬಾಲಗೋಕುಲದ ಮಕ್ಕಳಿಂದ ಸಾಮೂಹಿಕವಾಗಿ ವಂದೇ ಮಾತರಂ , ರಾಮರಕ್ಷಾ ಸ್ತೋತ್ರ, ದೇಶಭಕ್ತಿ ಗೀತೆಗಳ ಗಾಯನ ನಡೆಯಿತು. ತದನಂತರ ಎಲ್ಲರೂ ಬೌಧ್ಧಿಕ ಹಾಗೂ ವ್ಯಾಯಾಮಯೋಗ, ಯೋಗಾಸನ, ಆಟಗಳ ಪ್ರದರ್ಶನ ನೀಡಿದರು..ಅಪರಾಹ್ನ ಭೋಜನದ ನಂತರ ಪ್ರತ್ಯೇಕ ಬಾಲಗೋಕುಲದ ಮಕ್ಕಳಿಂದ ಪ್ರತಿಭಾ ಪ್ರದರ್ಶನ ನಡೆಯಿತು.ಇದರಲ್ಲಿ ಭಜನೆ, ಕುಣಿತ ಭಜನೆ, ಜಾನಪದ ನೃತ್ಯ, ಕೋಲಾಟ ಮೊದಲಾದ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಪುಂಡರೀಕಾಕ್ಷ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗ ಕುಟುಂಬ ಪ್ರಭೋಧಿನಿ ಪ್ರಮುಖ್ ಅವರು ಸಮಾರೋಪ ಭಾಷಣದಲ್ಲಿ ಮಕ್ಕಳಿಗೆ ಮಾರ್ಗದರ್ಶನ ಮಾಡಿದರು.ಶ್ರೀ ಶ್ರೀರಾಮ ಮೂಡಿತ್ತಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೊನೆಯಲ್ಲಿ “ಗೋಕುಲೋತ್ಸವ ” ದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶ್ರೀ ವೆಂಕಟ್ರಮಣ ಮೂಡಿತ್ತಾಯ ಅವರು ಪ್ರಶಸ್ತಿ ಪತ್ರ ವಿತರಿಸಿದರು.