ಅವರು ಛತ್ತೀಸ್ಗಡದ ರಾಯ್ಪುರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಮನ್ವಯ ಬೈಠಕ್ 2022ನ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ,”ಜನರನ್ನು ದ್ವೇಷದ ಮೂಲಕ ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಅದಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮಧ್ಯೆ ಎಳೆದು ತರುವ ಪ್ರಯತ್ನವನ್ನು ಬಹಳ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದಾರೆ. ಅವರ ತಂದೆಮತ್ತು ತಾತಂದಿರು ಸಂಘವನ್ನು ತಡೆಯಲು ಪ್ರಯತ್ನ ಮಾಡಿದರು, ಆದರೆ ಸಂಘ ನಿಲ್ಲಲಿಲ್ಲ, ಅದು ಬೆಳೆಯುತ್ತಲೇ ಬಂದಿತು,ಜನರೂ ಸಂಘಕ್ಕೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡಿದರು.
ಹಿಂದಿನ ದಿನ ಕಾಂಗ್ರೆಸ್ ನಾಚಿಕೆಗೇಡಿತನದ ಪರಮಾವಧಿಯೆಂಬಂತೆ ಅದರ ಟ್ವಿಟರ್ ಹ್ಯಾಂಡಲ್ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಂದಿನ ಸಮವಸ್ತ್ರ ಖಾಕಿ ಚೆಡ್ಡಿಗೆ ಬೆಂಕಿ ಹೊತ್ತಿಕೊಂಡಿರುವ ಫೋಟೋ ಹಂಚಿಕೊಂಡಿದೆ. ಈ ಫೋಟೋದ ಜೊತೆಗೆ ಕಾಂಗ್ರೆಸ್ ತಾನು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಲೋಗೋದ ಜೊತೆಗೆ ಮೇಲೆ ” ದೇಶವನ್ನು ದ್ವೇಷ ಮುಕ್ತವನ್ನಾಗಿಸುವ,ಮತ್ತು ಬಿಜೆಪಿ ಆರ್ಎಸ್ಎಸ್ ದೇಶದಲ್ಲಿ ಮಾಡಿರುವ ಎಲ್ಲ ಹಾನಿಯನ್ನು ಹಂತ ಹಂತವಾಗಿ ಸರಿಮಾಡಿ ನಾವು ನಮ್ಮ ಗುರಿಯನ್ನು ಸಾಧಿಸುತ್ತೇವೆ” ಎಂದು ಬರೆದುಕೊಂಡಿದೆ.
ಈ ಟ್ವೀಟ್ನ ಮೂಲಕವಂತೂ ಕಾಂಗ್ರೆಸ್ ಆರ್ಎಸ್ಎಸ್ ಮತ್ತು ಬಿಜೆಪಿಯ ವಿರುದ್ಧ ಯಾವ ರೀತಿ ವಿಷ ಕಾರುತ್ತಿದೆ ಎಂಬುದು ಅರಿವಾಗುತ್ತದೆ. ಈ ಹಿಂದೆ ರಾಹುಲ್ ಗಾಂಧಿ ಕೂಡ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ಉದ್ದೇಶವೇ ಆರ್ಎಸ್ಎಸ್ ಮತ್ತು ಬಿಜೆಪಿ ಮಾಡಿರುವ ಹಾನಿ ಸರಿ ಮಾಡಲು ಎಂದು ಹೇಳಿದ್ದರು. ಅದಲ್ಲದೆ ಕಾಂಗ್ರೆಸ್ ನಾಯಕರು ಪಕ್ಷವನ್ನು ತೊರೆಯುತ್ಯಿರುವುದು ಮತ್ತು ಆಂತರಿಕ ಭಿನ್ನಾಭಿಪ್ರಾಯಗಳೆಲ್ಲವೂ ವ್ಯಕ್ತಿಗಳು ವೈಯಕ್ತಿಕವಾಗಿ ಬಿಜೆಪಿಯು ನಡೆಸುತ್ತಿರುವ “ಏಜೆನ್ಸಿಗಳ ದುರುಪಯೋಗ”ಕ್ಕೆ ಕೈಗೊಂಬೆಯಾಗಿ ಮಾಡುತ್ತಿದ್ದಾರೆಯೇ ಹೊರತು ನನ್ನ ವ್ಯಕ್ತಿತ್ವದ ಸಲುವಾಗಿ ಅಲ್ಲ ಎಂದಿದ್ದರು.
“ಎಲ್ಲರಿಗೂ ಒಂದು ಅಭಿಪ್ರಾಯವಿದೆ, ಬಿಜೆಪಿಗೂ ಇದೆ, ಆರ್ಎಸ್ಎಸ್ಗೂ ಇದೆ. ಆ ರೀತಿಯಾಗಿ ತಮ್ಮ ಸ್ವಂತ ಅಭಿಪ್ರಾಯ ಹೊಂದಲು ಅವರಿಗೂ ಸ್ವಾತಂತ್ರ್ಯವಿದೆ. ಆದರೆ ನಮಗೆ ಕಾಂಗ್ರೆಸ್ಸಿಗರಿಗೆ ಈ ಯಾತ್ರೆ ಭಾರತದಲ್ಲಿ ನಡೆಯುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ನಡೆಸುವುದು ಮತ್ತು ಬಿಜೆಪಿ ಆರ್ಎಸ್ಎಸ್ ಮಾಡಿರುವುದನ್ನು ಸರಿ ಪಡಿಸಲು ಪ್ರಯತ್ನಿಸುವುದಾಗಿದೆ” ಎಂದು ಈ ಹಿಂದೆ ಹೇಳಿಕೆ ನೀಡಿದ್ದರು.
“ಅವರು ಅವರ ವಿರುದ್ಧ ಮಾತನಾಡಿದವರ ಮೇಲೆ ಒತ್ತಡ ಹಾಕುತ್ತಾರೆ. ನಮಗೆ ರಾಜಕೀಯ ಪಕ್ಷಗಳ ವಿರುದ್ಧ ಸೆಣೆಸಲು ಗೊತ್ತಿದೆ, ಆದರೆ ಈಗ ಯುದ್ಧ ನಡೆಯುತ್ತಿರುವುದು ಪಕ್ಷಗಳ ನಡುವೆ ಅಲ್ಲ.ಬದಲಾಗಿ ಈಗ ವಿರೋಧ ಪಕ್ಷ ಮತ್ತು ಇಂಡಿಯನ್ ಸ್ಟೇಟ್ನ ವ್ಯವಸ್ಥೆಯ ನಡುವೆ ನಡೆಯುತ್ತಿರುವ ಯುದ್ಧವಾಗಿದೆ.ಇದು ಸುಲಭದ ಯುದ್ಧವಲ್ಲ, ಇಲ್ಲಿ ಅನೇಕ ಮಂದಿಗೆ ಯುದ್ಧ ಮಾಡಲು ಇಷ್ಟವಿಲ್ಲ” ಎಂದು ಪತ್ರಕರ್ತರ ಎದುರು ರಾಹುಲ್ ಮಾತನಾಡಿದ್ದರು.
ಸತತವಾಗಿ ಚುನಾವಣೆಯಲ್ಲಿ ಸೋಲುಗಳನ್ನು ಅನುಭವಿಸಿದ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಸಲುವಾಗಿ ಮತ್ತು ಜನರ ಜೊತೆಗೆ ಸಂಪರ್ಕ ಬೆಳೆಸುವ ಸಲುವಾಗಿ ದೇಶದಾದ್ಯಂತ 3,570 ಕಿ.ಮಿಗಳ ಯಾತ್ರೆಯನ್ನು ಕೈಗೊಂಡಿದ್ದಾರೆ.
ಈ ಯಾತ್ರೆ ಬಿಜೆಪಿ ಮತ್ತು ಕಾಂಗ್ರೆಸ್ನ ನಡುವೆ ಮತ್ತೆ ದೊಡ್ಡದಾದ ಮಸುಕಿನ ಗುದ್ದಾಟವನ್ನು ಆರಂಭಿಸಿದೆ.ಬಿಜೆಪಿಯ ಯುವಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮಾತನಾಡುತ್ತಾ” ಕಾಂಗ್ರೆಸ್ 1984ರಲ್ಲಿ ಹಚ್ಚಿದ ಬೆಂಕಿ ಇಡಿಯ ದೆಹಲಿಯನ್ನ ಸುಟ್ಟಿದೆ. ಅದರ ಇಕೋ ಸಿಸ್ಟಮ್ 2002ರಲ್ಲಿ 59ಕರ ಸೇವಕರನ್ನು ಗೋಧ್ರಾದಲ್ಲಿ ಸಜೀವ ದಹನ ಮಾಡಿದೆ. ಈಗ ಮತ್ತೆ ಅವರ ಇಕೋ ಸಿಸ್ಟಮ್ಗೆ ಮತ್ತೊಂದು ಸುತ್ತಿನ ಹಿಂಸಾಚಾರಕ್ಕೆ ಕರೆ ನೀಡಿದೆ. ರಾಹುಲ್ ಗಾಂಧಿ ‘ಇಂಡಿಯನ್ ಸ್ಟೇಟ್’ ವಿರುದ್ಧ ನಮ್ಮ ಹೋರಾಟ ಎಂದಿದ್ದಾರೆ, ಮತ್ತೆ ಕಾಂಗ್ರೆಸ್ ಸಾಂವಿಧಾನಿಕವಾಗಿ ಒಂದು ರಾಜಕೀಯ ಪಕ್ಷವಾಗಿ ಸೋತಿದೆ ಎಂಬುದು ಸಾಬೀತಾಗಿದೆ” ಎಂದಿದ್ದಾರೆ.
ಇನ್ನೊಂದೆಡೆ ಬಿಜೆಪಿಯ ಸಂಬಿತ್ ಪಾತ್ರ ಮಾತನಾಡಿ, “ಇದು ಭಾರತ್ ಜೋಡೋ ಯಾತ್ರಾ ಅಲ್ಲ ಬದಲಾಗಿ ಭಾರತ್ ತೋಡೋ ಮತ್ತು ಬೆಂಕಿ ಹಚ್ಚುವ ಯಾತ್ರೆ. ಕಾಂಗ್ರೆಸ್ ಪಾರ್ಟಿ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ನಾನು ರಾಹುಲ್ ಗಾಂಧಿಯವರಿಗೆ ಕೇಳುತ್ತಿದ್ದೇನೆ,ನಿಮಗೆ ದೇಶದಲ್ಲಿ ಹಿಂಸಾಚಾರ ಮಾಡುವ ಅಗತ್ಯವಿದೆಯೇ? ಕಾಂಗ್ರೆಸ್ ತಕ್ಷಣಕ್ಕೆ ಈ ಚಿತ್ರವನ್ನು ತೆಗೆಯಬೇಕು” ಎಂದಿದ್ದಾರೆ.
ಹಾಗಿದ್ದಾಗಿಯೂ ಕಾಂಗ್ರೆಸ್ನ ಮುಖಂಡ ಜೈರಾಂ ರಮೇಶ್ ರಾಹುಲ್ಗಾಂಧಿಯವರ ನಡೆಯನ್ನು ಬೆಂಬಲಿಸುತ್ತಾ ಬಿಜೆಪಿಯನ್ನು ಸುಳ್ಳಿನ ಕಾರ್ಖಾನೆ ಎಂದು ಕರೆದಿದ್ದಾರೆ.ಅವರು ಮಾತನಾಡಿ “ನಾನು ಈ ಟೀಶರ್ಟು ಅಂಡರ್ವೇರ್ ಬಗೆಗೆ ಮಾತನಾಡುವುದಿಲ್ಲ.ಅವರೇನಾದರೂ(ಬಿಜೆಪಿಯವರು)ಕಂಟೈನರ್,ಶೂ, ಟೀಶರ್ಟ್ಗಳ ಬಗೆಗೆ ಮಾತನಾಡಬೇಕು ಎಂದರೆ ಅವರು ಅದೆಷ್ಟು ಭಯಗೊಂಡಿದ್ದಾರೆ, ಹಾಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎನ್ನುವುದು ತಿಳಿಯುತ್ತದೆ.ಬಿಜೆಪಿಯ ಸುಳ್ಳಿನ ಕಾರ್ಖಾನೆ ಸೋಷಿಯಲ್ ಮೀಡೀಯಾದಲ್ಲಿ ಓವರ್ ಟೈಮ್ ಕೆಲಸ ಮಾಡುತ್ತಿದೆ” ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾ್ಇತ ಕ್ಯಾಥೋಲಿಕ್ ಪ್ರೀಸ್ಟ್ ಜಾರ್ಜ್ ಪೊನ್ನಯ್ಯ ಅವರನ್ನು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಭೇಟಿ ಮಾಡಿದ್ದರು.ಆ ಪ್ಯಾಸ್ಟರ್ ಹಿಂದೂಗಳ ವಿರುದ್ಧ ಅಸಹನೀಯವಾದ ಹೇಳಿಕೆಗಳನ್ನು ನೀಡಿಯೇ ಪ್ರಸಿದ್ಧಿ ಪಡೆದಿದ್ದು ರಾಹುಲ್ ಗಾಂಧಿಯವರಿಗೆ “ಜೀಸಸ್ ಒಬ್ಬನೇ ನಿಜವಾದ ದೇವರು” ಎನ್ನುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೂಲ : ಪ್ರಸಾರ ಭಾರತಿ