ಇಂದು ಜಯಂತಿ

ಮನೋಹರ್‌ ಪರಿಕ್ಕರ್‌ ಅವರು ಒಬ್ಬ ದೇಶಭಕ್ತ, ನಿಷ್ಠಾವಂತ, ದಕ್ಷ ಆಡಳಿತಗಾರ ಹಾಗೂ ಮುತ್ಸದ್ಧಿಯಾಗಿ ರಾಜಕೀಯದಲ್ಲಿ ಸೇವೆ ಸಲ್ಲಿಸಿದ್ದರು. ರಾಜಕೀಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡಗೆ ಅಪಾರ. ರಾಜಕೀಯದಲ್ಲಿ ಮಾತ್ರವಲ್ಲದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲೂ ಸಹ ಅವರ ಪಾತ್ರ ಪ್ರಮುಖವಾಗಿತ್ತು. ಗೋವಾದಲ್ಲಿ ಕಮಲ ಅರಳಿಸಲು ಪ್ರಮುಖ ಪಾತ್ರವಹಿಸಿದ್ದ ಮನೋಹರ್ ಪರಿಕ್ಕರ್ ಅವರ ಜಯಂತಿ ಇಂದು.


ಪರಿಚಯ
ಮನೋಹರ್‌ ಪರಿಕ್ಕರ್‌ ಅವರು ಡಿಸೆಂಬರ್ 13,1955 ರಂದು ಗೋವಾದ ಮಾಪುಸಾ ಎಂಬಲ್ಲಿ ಜನಿಸಿದರು. ಇವರ ತಂದೆ ಗೋಪಾಲಕೃಷ್ಣ ಹಾಗೂ ತಾಯಿ ರಾಧಾಬಾಯಿ. ಮನೋಹರ್‌ ಪರಿಕ್ಕರ್‌ ಅವರು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಮರ‍್ಗೋವಾದ ಲಯೋಲಾ ಎಂಬಲ್ಲಿ ಮುಗಿಸಿದರು. ನಂತರ 1978ರಲ್ಲಿ ಅವರು ಐಐಟಿ ಬಾಂಬೆಯಲ್ಲಿ ಮೆಟಲರ್ಜಿಕಲ್ ಇಂಜಿನಿಯರಿAಗ್‌ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದರು. ಅವರು ಓದುತ್ತಿರುವಾಗಲೇ ಆರ್‌ ಎಸ್‌ ಎಸ್‌ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.


ರಾಜಕೀಯ ಜೀವನ
ಮನೋಹರ್‌ ಪರಿಕ್ಕರ್‌ ಅವರು ಆರ್‌ ಎಸ್‌ ಎಸ್‌ ಕೆಲಸ ಮಾಡುತ್ತಿದ್ದ ಕಾರಣ ರಾಜಕೀಯಕ್ಕೆ ಬರಲು ಕಾರಣವಾಯಿತು. ಹೀಗಾಗಿ ಅವರನ್ನು ಭಾರತೀಯ ಜನತಾ ಪಕ್ಷಕ್ಕೆ ಕಳುಹಿಸಲಾಯಿತು. 1991ರಲ್ಲಿ ಮೊದಲ ಬಾರಿಗೆ ಗೋವಾದ ಲೋಕಸಭೆ ಚುನಾವಣೆ ಅಖಾಡಕ್ಕಿಳಿದ್ದ, ಜಯ ಸಾಧಿಸಿದರು. ನಂತರ ಅವರು ಉತ್ತರ ಗೋವಾ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋಲನ್ನ ಅನುಭವಿಸಿದ್ದರು. ಆದರೆ ಅವರು ತಮ್ಮ ಹಠ ಬಿಡದೆ ಮತ್ತೆ 1994ರಲ್ಲಿ ಅವರು ಪಣಜಿ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಆಯ್ಕೆಯಾಗಿದ್ದರು. ಅಕ್ಟೋಬರ್ 24, 2000ರಂದು ಮೊದಲ ಬಾರಿಗೆ ಗೋವಾ ಸಿಎಂ ಆಗಿ ಮನೋಹರ್ ಪರಿಕ್ಕರ್‌ ಅವರು ಅಧಿಕಾರ ವಹಿಸಿಕೊಂಡಿದ್ದರು.


ಮನೋಹರ್‌ ಪರಿಕ್ಕರ್ ಅವರು ತಮ್ಮ ಆಡಳಿತಾವಧಿಯಲ್ಲಿ ಸೈಬರೇಜ್ ವಿದ್ಯಾರ್ಥಿ ಯೋಜನೆಯನ್ನು ಘೋಷಿಸಿದ್ದರು. ಈ ಮೂಲಕ ದೇಶದಲ್ಲಿ ಮೊದಲ ಬಾರಿಗೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಗಳನ್ನು ನೀಡಿದ್ದರು.


2014ರಲ್ಲಿ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ನಂತರ ಅವರು ಉತ್ತರ ಪ್ರದೇಶದಿಂದ ರಾಜ್ಯಸಭೆಗೆ ನೇಮಕಗೊಂಡಿದ್ದರು. 2017ರಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು,ನಾಲ್ಕನೇ ಗೋವಾ ಸಿಎಂ ಆಗಿ ಮರು ಆಯ್ಕೆಯಾದರು

.
ಪರಿಕ್ಕರ್ ಗೆ ಆರ್‌ಎಸ್ ಎಸ್ ಜೊತೆ ನಂಟು
ಮನೋಹರ್‌ ಪರಿಕ್ಕರ್ ಅವರು ಬಾಲ್ಯದಿಂದಲೂ ಆರ್‌ಎಸ್‌ಎಸ್‌ನಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಪರಿಕ್ಕರ್‌ ಅವರಿಗೆ ಆರ್‌ಎಸ್‌ಎಸ್ ಪ್ರಾಂತ ಪ್ರಚಾರಕರಾಗಿದ್ದ ಡಿ.ನಾಡಕರ್ಣಿ ಅವರ ಪ್ರಭಾವ ಬೀರಿತು. 1973ರಲ್ಲಿ ಸಂಘದ ಪೊವಾಯ್ ಹಾಸ್ಟೆಲ್ ವಿಭಾಗದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದರು. ನಂತರ 1988ರಲ್ಲಿ ಮಾಪುಸಾದ ಆರ್‌ಎಸ್‌ಎಸ್ ವಿಭಾಗದ ಸಂಘಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರು ಸಂಘದ ಶಿಸ್ತು, ಪ್ರಗತಿಶೀಲತೆ, ರಾಷ್ಟ್ರೀಯತೆ ಮತ್ತು ಸಾಮಾಜಿಕ ಜವಾಬ್ದಾರಿಗಳನ್ನು ಕಲಿತುಕೊಂಡಿದ್ದರು.


ಪ್ರಶಸ್ತಿ
ಮನೋಹರ್‌ ಪರಿಕ್ಕರ್‌ ಅವರ ಸಾಧನೆಗೆ ಅನೇಕ ಪ್ರಶಸ್ತಿಗಳು ಬಂದಿವೆ. 2018ರಲ್ಲಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗೋವಾದಿಂದ ಗೌರವ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದರು. 2020ರಲ್ಲಿ ಭಾರತ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.
ಮನೋಹರ್‌ ಪರಿಕ್ಕರ್‌ ಅವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದರೂ ಕೂಡ ಸಾಯುವರೆಗೂ ಕೆಲಸದಲ್ಲಿ ತೊಡಗಿಕೊಂಡಿದ್ದರು. ಮನೋಹರ್ ಪರಿಕ್ಕರ್ ಅವರು ಮಾರ್ಚ್‌ 17, 2019ರಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು.


ಜೀವನದಲ್ಲಿ ಶಿಸ್ತುನನ್ನು ಒಳಗೊಂಡಿದ್ದ ಮನೋಹರ್ ಪರಿಕ್ಕರ್ ಅವರ ಆದರ್ಶ ಇಂದಿನ ಪೀಳಿಗೆಯ ಯುವಕರಲ್ಲಿ ಮಾದರಿಯಾಗಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.