Bangalore Feb-6: ಶ್ರೀರಂಗಪಟ್ಟಣದಲ್ಲಿ ಟಿಪ್ಪು ಹೆಸರಿನಲ್ಲಿ ಮುಸ್ಲಿಂ ವಿಶ್ವವಿದ್ಯಾಲಯವನ್ನು ಸ್ಥಾಪಿಸ ಹೊರಟಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ‘ಹಿಂದು ಜಾಗರಣ ವೇದಿಕೆ’ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿತು. ಓಟ್ ಬ್ಯಾಂಕ್ ರಾಜಕೀಯಕ್ಕಾಗಿ ಕರ್ನಾಟಕಕ್ಕೆ ಶಾಶ್ವತ ಸಾಮಾಜಿಕ ತಲೆನೋವು ತರುವಂತಹ ಟಿಪ್ಪು ಹೆಸರಿನ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆಗೆ ‘ಹಿಂದು ಜಾಗರಣ ವೇದಿಕೆ’ ಅವಕಾಶ ನೀಡುವುದಿಲ್ಲ ಅದಕ್ಕಾಗಿ ಹೋರಾಟವನ್ನು ಯಾವ ಹಂತಕ್ಕೆ ಕೊಂಡೊಯ್ಯಲು ‘ವೇದಿಕೆ’ ಸಜ್ಜಾಗಲಿದೆ.

hjv-protest

ಸೆಕ್ಯುಲರ್ ಭಾರತದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಎಂಬುದು ಹಾಸ್ಯಾಸ್ಪದ ಹಾಗೂ ವಿಪರ್ಯಾಸದ ಸಂಗತಿ. ಬಹು ಸಂಖ್ಯಾತರ ವಿಚಾರದಲ್ಲಿ ‘ಕೇಸರೀಕರಣ’ವೆಂದು ಬೊಬ್ಬೆ ಹೊಡೆದು ಅಡ್ಡಗಾಲು ಹಾಕುವವರು, ಮುಸ್ಲಿಂ ನೆಲೆಯಲ್ಲಿ ವಿಶ್ವ ವಿದ್ಯಾಲಯವನ್ನು ಸ್ಥಾಪಿಸ ಹೊರಟಿರುವುದನ್ನು ಬೆಂಬಲಿಸುವ, ಸಮರ್ಥಿಸುವ ಕೃತ್ಯದಲ್ಲಿ ತೊಡಗಿರುವುದನ್ನು ಸಹಿಸಲು ಸಾಧ್ಯವಿಲ್ಲ.
ಕರಾಳ ಇತಿಹಾಸವನ್ನು ಹೊಂದಿರುವ ಆಲಿಘಡ ವಿಶ್ವ ವಿದ್ಯಾನಿಲಯ, ಭಯೋತ್ಪಾದಕ ಕಾರ್ಖಾನೆಗಳೆಂದು ಕರೆಸಿಕೊಳ್ಳುತ್ತಿರುವ ‘ಮದರಸಾ’ಗಳ ಅನುಭವದ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಯ ಸಾಮಾಜಿಕ ನೆಮ್ಮದಿ, ಜನರ ಬದುಕನ್ನು ನಾಶಗೊಳಿಸುವ, ಶ್ರೀರಂಗಪಟ್ಟಣದ ಪಾವಿತ್ರ್ಯತೆಯನ್ನು ಹಾಳುಗೆಡುವ ಭಯಾನಕ ಭವಿಷ್ಯತ್ತಿಗೆ ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಬಲ ತೀರ್ಮಾನ ಕೈಗೊಂಡಿರುವ ‘ವೇದಿಕೆ’ಯು ಮೊದಲ ಹಂತವಾಗಿ ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.