– ಶ್ರೀಮತಿ ಪರಿಮಳ ಶ್ರೀಧರ್

ಶ್ರೀ ಹರಿಭಾವು‌ಜೀ ಅವರು ‌ನಮಗೆ ‌ನಮ್ಮ ಶಾಲಾ ದಿನಗಳಿಂದಲೂ ‌ಚಿರಪರಿಚಿತ. ನಮ್ಮ ದೊಡ್ಡ ಣ್ಣ ಯಳಂದೂರು ‌‌ರಂಗನಾಥ ಚಿಕ್ಕಂದಿನಿಂದಲೇ ಸಂಘದ ಸ್ವಯಂಸೇವಕನಾಗಿದ್ದ ಕಾರಣ ನಮ್ಮ ಮನೆಗೆ ಸಂಘ‌ದ‌ ಸ್ವಯಂಸೇವಕರು,‌ ಪ್ರಚಾರಕರು ಆಗಾಗ ಬರುತ್ತಿದ್ದರು.‌ ಹರಿಭಾವು ಜೀ ಯವರು ಸಹ ಆಗಾಗ ನಮ್ಮ ಮನೆಗೆ ಭೇಟಿ ನೀಡಿ ನಮ್ಮ ‌ಮನೆ ಯಲ್ಲೇ ತಂಗಿರುತ್ತಿ ದ್ದರು. ಹೀಗಾಗಿ ಅವರು‌ ನಮಗೆ ನಮ್ಮ ಮನೆಯವರಲ್ಲಿ‌ ಒಬ್ಬರಂತಾಗಿದ್ದರು. ಅವರು ಬಂದರೆಂದರೆ ನಮಗೆಲ್ಲ‌ ಅದೇನೊ ಸಂಭ್ರಮ. ಅವರ ನಗುಮುಖ,‌ ನಿಧಾನ, ಶಾಂತ ಸ್ವಭಾವ, ಆತ್ಮೀಯ ನಡೆ‌ ಇವುಗಳಿಂದ ‌ಅವರು ನಮಗೆ‌‌ ಬಹಳ‌ ಹತ್ತಿರವಾಗಿ‌ ನಮ್ಮೆಲ್ಲರ ಹಿರಿಯಣ್ಣನಂತ್ತಿದ್ದರು. ಅವರೂ‌ ಸಹ‌ ನಮ್ಮ‌ತಂದೆ ತಾಯಿಯವರನ್ನು ನಮ್ಮಂತೆಯೇ ‌ಅಪ್ಪಯ್ಯ, ಚಿಕ್ಕಮ್ಮ‌ ಎಂದೇ‌‌‌‌ ಸಂಬೋಧಿಸುತ್ತಿದ್ದರು.

ಒಂದು ಸಲ ಹೀಗೆ ನಮ್ಮಲ್ಲಿಗೆ‌‌‌‌‌ ಬಂದಿದ್ದಾಗ‌‌‌‌‌‌ ನಾನು ನನ್ನ ಗೆಳತಿ‌‌ ಆಟ ವಾಡುತ್ತಿದ್ದೆವು. ಇದ್ದಕಿದ್ದಂತೆ ನಮ್ಮಿಬ್ಬರ ನಡುವೆ ‌ಜಗಳ ಶುರುವಾಯಿತು. ಹರಿಭಾವು‌‌ ಅಲ್ಲಿಯೆ ಸ್ವಲ್ಪ ದೂರದಲ್ಲಿ‌ ಕುಳಿ‌ತು ಏನನ್ನೊ ಓದುತ್ತಿದ್ದರೂ ನಮ್ಮನ್ನು‌ಆಗಾಗ‌‌ ಗಮನಿಸು‌ತಿದ್ದರು. ಆಗ‌ ಅವರು ನಮ್ಮಿಬ್ಬರನ್ನು ಬಳಿಗೆ ಕರೆದು‌ ಕೂಡಿಸಿಕೊಂಡು ನಿಧಾನವಾಗಿ ಒಳ್ಳೆಯ ಮಾತುಗಳಿಂದ‌‌‌ ನಮ್ಮಿಬ್ಬರ‌ ಜಗಳ ಬಗೆಹರಿಸಿ ನಾವಿಬ್ಬರು ಮತ್ತೆ‌‌‌ ಒಂದಾಗಿ‌ ಆಡುವಂತೆ ಮಾಡಿದರು.

ನಂತರ‌ ನಾವೆಲ್ಲ ಕಾಲೇಜು ‌ಸೇರಿದ‌ ಮೇಲೆ ‌ಎಲ್ಲರೂ ಮೈಸೂರಿಗೆ ‌‌ಶಿಫ್ಟ್ ಆದೆವು. ಅಲ್ಲಿಯೂ‌ ಸಹ ಹರಿಭಾವು ಅವರು‌‌‌ ಮೈಸೂರಿಗೆ ಬಂದಾಗಲೆಲ್ಲ ನಮ್ಮ ಮನೆಗೆ‌‌‌ ಆಗಾಗ ‌ ಭೇಟಿ ನೀಡಿ ನಮೆಲ್ಲರ‌ ಜೊತೆಯಲ್ಲಿ ಊಟ‌ ಮಾಡಿ‌ ವಿಶ್ರಾಂತಿ ‌ಪಡೆದು ಹೋಗುತ್ತಿದ್ದರು. ಹಾಗೊಮ್ಮೆ ಒಂದು ಸಂಜೆ‌ ಮನೆಗೆ ಬಂದಾಗ ನಮ್ಮ ತಾಯಿಯವರು ಮನೆಯಲ್ಲಿ ‌ಇರಲಿಲಿಲ್ಲ. ನಮ್ಮ ತಾಯಿಯವರು ಊಟ‌ ತಿಂಡಿ‌ ಏನೂ ಮಾಡದೆ ಅವರನ್ನು ಎಂದೂ ಕಳು‌ಹಿಸುತ್ತಿರಲಿಲ್ಲ.
ನಾನು ಏನು‌ ಮಾಡಬೇಕೆಂದು ಯೋಚಿಸುತ್ತಿದ್ದಾಗ ಸ್ವಲ್ಪ ದೋಸೆ‌ ಹಿಟ್ಟಿ ಗೆ ‌ತುಂಬಾ‌‌ ಈರುಳ್ಳಿ ‌‌ ಕೊತ್ತಂಬರಿ ‌ಸೊಪ್ಪು‌ ಎಲ್ಲ‌ ಹಾಕಿ‌ ಊತಪ್ಪ‌‌ ಮಾಡಿಕೊಟ್ಟೆ.‌ ಅವರು ಹೊರಡುವಾಗ‌ ಊತಪ್ಪ ತುಂಬಾ ಚೆನ್ನಾಗಿತ್ತು. ನನಗೆ‌ ಹಸಿವಾಗಿತ್ತು. ನನಗೆ ತುಂಬಾ ತೃಪ್ತಿಯಾಯಿತು ಎಂದು‌‌ ನಗುತ್ತಾ ಹೇ‌ಳಿ‌‌ ತಮ್ಮ ಕೈ‌ಚೀಲದಿಂದ‌ ಒಂದು ದೊಡ್ಡ‌ ದಾಳಿಂಬರೆ ಹಣ್ಣನ್ನು‌‌ ತೆಗೆದು‌‌‌ ಇದು ನಿನಗೆ ಎಂದು ‌ನನ್ನ‌ ಕೈಗಿತ್ತರು. ದಾಳಿಂಬರೆ ಹಣ್ಣನ್ನು‌ ನೋಡಿದ‌ ಕೂಡಲೆ ಅರಳಿದ‌‌ ನನ್ನ ಮು‌ಖ‌ವನ್ನು‌ ನೋಡಿ ನಸು ನಗುತ್ತಾ ನಿನಗೆ‌ ಈ‌ ಹಣ್ಣು‌ತುಂಬಾ‌ ಇಷ್ಟ ‌ಕಾಣತ್ತೆ ಅಲ್ವ ಎಂದರು. ನಾನೂ‌‌ ನಗುತ್ತಾ‌‌ ತಲೆಯಾಡಿಸಿದೆ.

ನಾನು‌ ಮದುವೆಯಾಗಿ‌ ಮದರಾಸಿ‌ನಲ್ಲಿ‌ ನೆಲೆಸಿದ‌ ಮೇಲೆ‌ ಅವರ‌ ಭೇಟಿ ಅಪರೂಪ‌ ವಾಯಿತು. ಒಂದು‌ ದಿನ ಇದ್ದಕ್ಕಿದ್ದಂತೆ ಕರೆ ಮಾಡಿ ಮದರಾಸಿಗೆ ಬಂದಿದ್ದೇನೆ ಮನೆಗೆ‌‌‌‌‌ ಊಟಕ್ಕೆ ಬರುತ್ತೇನೆ ಎಂದು ಹೇಳಿದರು. ನನಗೆ‌ ತುಂಬಾ ಖುಷಿಯಾಯ್ತು. ಸಂಭ್ರಮದಿಂದ‌ ಅಡಿಗೆ‌ಮಾಡಿ ಕಾದೆ. ಮನೆಗೆ‌ ಬಂದ‌ ತಕ್ಷಣ ನಾನು ‌ಅವರ‌‌‌ ಕಾಲಿಗೆ‌‌ ನಮಸ್ಕರಿಸಿದಾಗ‌‌‌‌‌‌ ತಲೆ‌ಯ ಮೇ‌ಲೆ ಕೈ‌ಯಿಟ್ಟು ಆಶೀರ್ವದಿಸಿದರು. ಊಟ ಮುಗಿಸಿ ಸ್ವಲ್ಪ‌ ವಿಶ್ರಮಿಸಿ‌‌ ಹೊರಟು ನಿಂತಾಗ ತಮ್ಮ ಕೈಚೀಲದಿಂದ‌ ಎರಡು ದೊಡ್ಡ ದಾಳಿಂಬರೆ ಹಣ್ಣುಗಳನ್ನು ‌ತೆಗೆದು ನನ್ನ ಕೈಯಲ್ಲಿಟ್ಟರು. ನಿನಗೆ ಇಷ್ಟವಾದ ಹಣ್ಣು ಎಂದು ನೆನಪಾಯಿತು ಎಂದರು. ನನಗೆ ತುಂಬಾ ಆಶ್ಚರ್ಯವಾಯಿತು. ಎಷ್ಟೋ ವರ್ಷ‌ಗಳ‌‌ ನಂತರ ನನಗೆ‌ ಆ ಹಣ್ಣು‌ಇಷ್ಟ‌ ಎಂದು‌ ಜ್ಞಾಪಕದಲ್ಲಿಟ್ಟು‌‌ಕೊಂಡು ತಂದು‌ಕೊಟ್ಟ ಅವರ‌ ಪ್ರೀತಿ‌ವಾತ್ಸಲ್ಯ ಕಂಡು ನನ್ನ ಹೃದಯ ತುಂಬಿ ಬಂತು. ನನಗೆ‌ ಮಾತೇ ಹೊರಡಲಿಲ್ಲ. ಕಣ್ಣೀರು ತುಂಬಿ ನಮಸ್ಕರಿಸಿದೆ. ಎಂದಿನಂತೆಯೇ ತಲೆಯ ಮೇಲೆ‌ ಕೈಯಿಟ್ಟು ಆಶೀರ್ವದಿಸಿದರು. ಆ ಘಟನೆ‌ ನಾನೆಂದಿಗೂ ಮರೆಯಲಾರೆ.

ಅದಾದನಂತರ ಅವರನ್ನು ಮತ್ತೆ ಭೇಟಿ‌ಯಾದುದು ನಮ್ಮ ಎರಡನೆಯ‌ ಅಣ್ಣ‌ ರಮೇಶನ ಮನೆಯಲ್ಲಿ. ಅಲ್ಲಿ ನಮ್ಮ ಮನೆಯವರೆಲ್ಲಾ ಸೇರಿದ್ದೆವು. ಆಗ‌ ನಮ್ಮ ಅಕ್ಕನಿಗೆ ಅಷ್ಟು ಮೈ ಚೆನ್ನಾಗಿರಲಿಲ್ಲ. ಚಿಕ್ಕವರಿದ್ದಾಗ ನಾವಿಬ್ಬರು ಮನೆಯ ಕೆಲಸ ಹಂಚಿಕೆ‌ಯ‌ ವಿಷಯವಾಗಿ ಜಗಳ‌ವಾಡಿದರೆ ನಮ್ಮಿಬ್ಬರನ್ನು ಹರಿಭಾವು ಅವರು ಸಮಾಧಾನಿಸು‌ತ್ತಿದ್ದರು. ಅವಳ ಅಸೌಖ್ಯದಿಂದ ಅವರಿಗೆ‌ ತುಂಬಾ‌‌ ವಿಷಾದವಾಗಿತ್ತು. ನಾಗಪುರಕ್ಕೆ ಹೋದಾಗಲೆಲ್ಲ ಅವಳ ಮನೆಗೆ‌‌‌ ತಪ್ಪದೆ‌ ಭೇಟಿ‌ ನೀಡು ತ್ತಿದ್ದರು. ಬಹಳ ವರ್ಷಗಳ ನಂತರ ನಮ್ಮೆಲ್ಲರನ್ನು ಒಟ್ಟಿಗೆ ನೋಡಿ ಅವರಿಗೆ ಬಹಳ ಸಂತಸ‌ವಾಗಿತ್ತು. ನನ್ನ ಮಗಳನ್ನು‌ ಹತ್ತಿರ ಕೂಡಿಸಿಕೊಂಡು ತಲೆ ಸವರಿ ಅವಳ ಓದು, ಇತರ‌ ಚಟುವಟಿಕೆಗಳ ಬಗ್ಗೆ‌ ವಿಚಾರಿಸಿದರು. ಕೊನಗೆ‌ ಹೊರಟು‌ನಿಂತಾಗ ನಾವೆಲ್ಲ ನಮಸ್ಕರಿಸಿದಾಗ ನಮ್ಮನ್ನೆಲ್ಲ ಆಶೀರ್ವ‌ದಿಸಿದರು. ನಮ್ಮಕ್ಕನನ್ನು ಆಶೀರ್ವದಿಸು‌ವಾಗ ಅವರ‌ ಕಣ್ಣಲ್ಲಿ‌‌ ತೆಳು‌ವಾದ ನೀರಿತ್ತು. ಅದಾದ‌ ಒಂದೆರಡು ವರ್ಷಗಳಲ್ಲೆ ನಮ್ಮಕ್ಕ ತೀರಿಕೊಂಡಳು. ನಂತರ‌‌‌ ಎಷ್ಟೋ‌ ವರ್ಷ‌ಗಳು‌‌ ಅವರ ಭೇಟಿ‌ಯಾಗಲಿಲ್ಲ. ನಡುವೆ‌‌‌ ಮನೆಯಲ್ಲಿ‌ ಯಾವುದಾದರೂ ಮದುವೆ‌ಯಲ್ಲಿ ಒಂದೆರಡು‌ಬಾರಿ‌ ‌ಭೇಟಿ‌ಯಾಗಿದ್ದುಂಟು.

ಅದಾದ ಕೆಲವು ವರ್ಷಗಳ ನಂತರ ತಿಳಿಯಿತು ಹರಿಭಾವು ಜೀ ಗೆ‌ ಅಸೌಖ್ಯವಾಗಿ ಬೆಳಗಾವಿಯಲ್ಲಿ ವೈದ್ಯೋಪಚಾರದಲ್ಲಿದ್ದಾರೆಂದು. ನಮ್ಮಣ್ಣ ರಂಗನಾಥ‌ನಿಂದ‌‌ ‌ಅವರ ನಂಬರ್ ಪಡೆದು ಕರೆ ಮಾತನಾಡಿದೆ. ಎರಡು‌ ಸಲ‌ ಪ್ರಯತ್ನಿಸಿದೆ. ಸಿಗಲಿಲ್ಲ. ಮೂರನೆಯ ಸಲ ‌ಅವರ‌ ಸಹಾಯಕರು‌‌‌ ಅವರಿಗೆ phone ಕೊಟ್ಟರು. ನನ್ನ ದನಿ ಕೇಳಿದೊಡನೆ. ಅವರೇ‌‌‌‌‌ ಹೇಗಿದ್ದೀಯಮ್ಮ ಪರಿಮಳ‌ ಎಂದು ಕೇಳಿದರು. ಮನೆಯಲ್ಲಿ‌‌‌‌ ಎಲ್ಲರ ಬಗ್ಗೆ ವಿಚಾರಿಸಿದರು‌‌ ಅವರ ದನಿ‌ಯಲ್ಲಿ‌ ಬಳಲಿಕೆ‌ ಇತ್ರು.ಅವರ ಆರೋಗ್ಯದ ಬಗ್ಗೆ ವಿಚಾರಿಸಿದಾಗ . ನನ್ನ‌ ಧ್ವನಿಯಲ್ಲಿದ್ದ‌ ಆತಂಕ‌ವನ್ನು ಗಮನಸಿ‌ ಹೇಳಿದರು ನಾನು‌ ಚೆನ್ನಾಗಿದ್ದೇನೆ. ಇಲ್ಲಿ ನನ್ನನ್ನು ಚೆನ್ನಾಗಿ‌ ನೋಡಿ ಕೊಳ್ಳಲು ನನ್ಮ ಜನರಿದ್ದಾರೆ. ನಾನು ಹುಬ್ಬಳ್ಳಿಗೆ ಹೋಗು‌ತ್ತಿದ್ದೇನೆ. ಬೆಂಗಳೂರಿಗೆ‌‌‌ ಬರ್ತೇನೆ. ಅಲ್ಲಿ ಎಲ್ಲರೂ ಭೆಟ್ಟಿಯಾಗೋಣ ಎಂದು‌ ಹೇಳಿ ಫೋನ್ ಇಟ್ಟರು.

ಆ ದಿನ ಬರಲೇ‌ ಇಲ್ಲ. ಅದಾದ ಕೆಲವು ತಿಂಗಳ ಬಳಕ ನಮ್ಮಣ್ಣ ರಂಗನಾಥ‌ ಹುಬ್ಬಳ್ಳಿಗೆ ಹೋಗಿ ಆವರನ್ನು ನೋಡಿ ಬಂದ. ಎಲ್ಲರನ್ನು ವಿಚಾರಿಸಿದರು .ಸ್ವಲ್ಪ ಸಣ್ಣ ಆಗಿದ್ದಾರೆ ಎಂದು ಹೇಳಿದ. ನಮಗೆಲ್ಲ ತುಂಬಾ ದುಃಖವಾಯ್ತು.
ಅದಾದ ಸ್ವಲ್ಪ ದಿನಗಳಲ್ಲೇ‌ ಬಂದ ಹರಿಭಾವು ಜೀ‌ ಇನ್ನಿಲ್ಲ‌‌‌‌ವೆಂಬ ಅತ್ಯಂತ ದುಃಖದ ಸು ದ್ದಿ ನಮ್ಮನ್ನೆಲ್ಲ‌ ಘಾಸಿಗೊಳಿಸಿತು. ನಾನು ತಕ್ಷಣವೇ ದೇವರ ‌ಮನೆಗೆ‌ ಹೋಗಿ ಅವರ ಪವಿತ್ರ‌ ಆತ್ಮಕ್ಕೆ‌ ಶಾಂತಿ ಸಿಗಲೆಂದು‌ ಪ್ರಾರ್ಥಿಸಿದೆ.
ಶ್ರೀ ಹರಿಭಾವು ಜೀ‌‌ ನಮ್ಮ ಪ್ರೀತಿಯ ಹಿರಿಯಣ್ಣ ಇನ್ನಿಲ್ಲ.‌ ಅವರ ‌ಪ್ರೀತಿ, ವಾತ್ಸಲ್ಯ, ಅವರ ಆತ್ಮೀಯ ನೆನಪು‌ ನಮ್ಮೆಲ್ಲರ ಮನದಲ್ಲಿ ‌ಯಾವಾಗಲು ಹಸಿರಾಗಿರುತ್ತದೆ

Leave a Reply

Your email address will not be published.

This site uses Akismet to reduce spam. Learn how your comment data is processed.