Belagavi/Hubballi June 5, 2016. RSS Prachar Vibhag organised Narada Jayanti at Belagavi and Hubballi and Belagavi in Karnataka on June 4 and 5 respectively.
In Hubballi, the event was organised by LokaHitha Trust. Trust president and Pranth Sah Sanghachalak Arvind Rao Deshpande, Trust Secretary and Pranth Sah-karyavah Shridhar Nadiger and as Chief Guest Dr Kuldeep Agnihotri were present. Senior Journalists Arunkumar Habbu and Newspaper Paper Agent Pandurang Divate were felicitated on the occasion.
In Belagavi, the event was organised by RSS prachar Vibhag along with Arjun Credit Cooperative ltd at IMA Hall in Belagavi. Senior Journalist P Vijayakumar, Arjun Rao Goudadakar, Newspaper distributor Ramachandra Birje were felicitated on the occasion. Chief Guest Dr Kuldeep Agnihotri addressed on the occasion.
ನಾರದ ಜಯಂತಿ ನಿಮಿತ್ತ ಪತ್ರಕರ್ತರಿಗೆ ಸನ್ಮಾನ
ಬೆಳಗಾವಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ವಿಭಾಗ ಮತ್ತು ದಿ.ಬೆಳಗಾಂವ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ. ಲಿ ನೇತೃತ್ವದಲ್ಲಿ ಶನಿವಾರ ಐ.ಎಂ.ಎ ಹಾಲ್ ನಲ್ಲಿ ಜರುಗಿದ ದೇವರ್ಷಿ ನಾರದ ಜಯಂತಿ ಸಮಾರಂಭದಲ್ಲಿ ಹಿರಿಯ ಪತ್ರಕರ್ತರಿಗೆ ಮತ್ತು ಪತ್ರಿಕಾ ವಿತರಕರಿಗೆ ಸನ್ಮಾನಿಸಲಾಯಿತು.
ತಾಯ್ನಾಡು ಸೇರಿದಂತೆ ವಿವಿಧ ಕನ್ನಡ ಪತ್ರಿಕೆಗಳಲ್ಲಿ 5 ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ ಹಳ್ಳಿಯ ಸಂದೇಶ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಪಿ. ವಿಜಯಕುಮಾರ ಮತ್ತು ತರುಣ ಭಾರತ ಮತ್ತು ಪುಡಾರಿ ಸೇರಿದಂತೆ ಮರಾಠಿ ಪತ್ರಿಕೋದ್ಯಮದಲ್ಲಿ 5 ದಶಕಗಳಿಗೂ ಹೆಚ್ಚು ಅವಧಿ ಸೇವೆ ಸಲ್ಲಿಸಿದ ಹಿರಿಯ ಉಪಸಂಪಾದಕ ಅರ್ಜುನರಾವ್ ಗೌಡಾಡಕರ್ ಹಾಗೂ ಕಳೆದ 50 ವರ್ಷಗಳಿಂದ ಪತ್ರಿಕೆ ವಿತರಿಸುತ್ತಿರುವ ರಾಮಚಂದ್ರ ಬಿರ್ಜೆ ಅವರಿಗೆ ಫಲ-ಪುಷ್ಪ ಮತ್ತು 10 ಸಾವಿರ ನಿಧಿ ನೀಡಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಹಿಮಾಚಲ ಪ್ರದೇಶದ ಕೇಂದ್ರಿಯ ವಿಶ್ವವಿದ್ಯಾಲಯದ ಕುಲಪತಿ ಡಾ.ಕುಲದೀಪಚಂದ ಅಗ್ನಿಹೋತ್ರಿ ಮಾತನಾಡಿ, ದೇವರ್ಷಿ ನಾರದ ಇಬ್ಬರ ಮಧ್ಯ ಕಿತ್ತಾಟ ಹಚ್ಚುವ ಮಧ್ಯವರ್ತಿ ಎಂಬ ತಪ್ಪು ಕಲ್ಪನೆ ಜನಮಾನಸದಲ್ಲಿದೆ. ಆದರೆ ಲೋಕ ಹಿತ ಮತ್ತು ಲೋಕ ಕಲ್ಯಾಣವು ನಾರದ ಮುನಿಗಳ ಸಂವಹನದ ಪರಮ ಉದ್ದೇಶವಾಗಿತ್ತು. ಪತ್ರಕರ್ತರು ಬಹುಜನರ ಮತ್ತು ಸಮಾಜದ ಹಿತಕ್ಕಾಗಿ ಕಾರ್ಯನಿರ್ವಹಿಸುವುದನ್ನು ಮರೆತಿದ್ದು, ನೈಜ ಮತ್ತು ಸಾಮಾಜಿಕ ಕಳಕಳಿಯ ಸುದ್ದಿಗಳಿಗೆ ಮಹತ್ವ ನೀಡುತ್ತಿಲ್ಲ. ನಾರದ ಮುನಿ ತಮ್ಮ ಪರಿಣಾಮಕಾರಿ ಸಂವಹನದ ಮೂಲಕ ಕಾಡುಗಳ್ಳನನ್ನು ವಾಲ್ಮೀಕಿಯಾಗಿ ಪರಿವರ್ತಿಸಿದರು ಮತ್ತು ಅನೇಕ ಅಸುರ ಶಕ್ತಿಗಳ ನಾಶಕ್ಕೆ ಪರೋಕ್ಷ ಕಾರಣರಾಗಿದ್ದಾರೆ. ಆದ್ದರಿಂದ ದೇವರ್ಷಿ ನಾರದರನ್ನು ಆದ್ಯ ಪತ್ರಕರ್ತ ಮತ್ತು ಸಂವಹನಕಾರ ಎಂದು ಪರಿಗಣಿಸಲಾಗಿದೆ ಮತ್ತು ನಾರದರ ಆದರ್ಶವನ್ನು ಪತ್ರಕರ್ತರು ಪಾಲಿಸುವ ಅವಶ್ಯಕತೆಯಿದೆ ಎಂದು ಹೇಳಿದರು.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನೇಕ ಪ್ರಮುಖ ಮಾಧ್ಯಮ ಸಂಸ್ಥೆಗಳಲ್ಲಿ ವಿದೇಶಿ ಬಂಡಾವಳ ಹೂಡಿಕೆ ಹೆಚ್ಚಾಗಿದೆ. ಆದ್ದರಿಂದ ಆ ಸುದ್ದಿ ಸಂಸ್ಥೆಗಳು ವಿದೇಶಿಯರ ಕೈಗೊಂಬೆಯಾಗಿದ್ದು, ಭಾರತದ ಮಾಧ್ಯಮಗಳು ರಾಷ್ಟ್ರದ ಹಿತಾಸಕ್ತಿಗಿಂತ ಸುದ್ದಿ ಸಂಸ್ಥೆಯ ಮತ್ತು ವಿದೇಶದ ಹಿತಾಸಕ್ತಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಭಾರತದ ಮಾಧ್ಯಮ ಸಂಸ್ಥೆಗಳು ಸ್ವತಂತ್ರವಾದ ಸುದ್ದಿ ಮೂಲಗಳನ್ನು ಹೊಂದಿಲ್ಲ ಮತ್ತು ಈ ಕಾರಣಕ್ಕೆ ಭಾರತದ ಮಾಧ್ಯಮಗಳು ವಿದೇಶಿ ಸುದ್ದಿ ಸಂಸ್ಥೆಗಳ ಮೇಲೆ ಅವಲಂಬಿತವಾಗಿವೆ. ಅಮೆರಿಕಾ ಮತ್ತು ಬ್ರಿಟನ್ ದೇಶದ ಸುದ್ದಿ ಸಂಸ್ಥೆಗಳು ತಮ್ಮ ಸ್ವಾರ್ಥಕ್ಕಾಗಿ ತಿರುಚಿ ನೀಡಿದ ಸುದ್ದಿಯನ್ನೆ ಭಾರತೀಯ ಮಾಧ್ಯಮಗಳು ಬಿತ್ತರಿಸುವುದು ಮತ್ತು ಪ್ರಕಟಿಸುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಬೆಳಗಾವಿಯ ಉದ್ಯಮಿ ಗೋಪಾಲ ಜಿನಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದಿ.ಬೆಳಗಾಂವ ಅರ್ಬನ್ ಕ್ರೆಡಿಟ್ ಸೌಹಾರ್ದ ಸಹಕಾರಿ ಲಿಮಿಟೆಡ್‌ನ ಅಧ್ಯಕ್ಷ ಅರುಣ ಬೆಡೆಕರ್, ಉಪಾಧ್ಯಕ್ಷ ಮಹಾದೇವರಾವ್ ಕಾಳೆ, ಸಿಇಒ ದುರ್ಗಾಪ್ರಸಾದ ನಾಯಿಕ್, ಡಾ.ರಜನಿ ಅಗ್ನಿಹೋತ್ರಿ, ಉಪಾಧ್ಯಕ್ಷ, ಸಾಹಿತಿ ಸಿ.ಕೆ.ಜೋರಾಪುರ ಇದ್ದರು.
ವಿದ್ಯಾಭಾರತಿಯ ಪ್ರಾಂತ ಉಪಾಧ್ಯಕ್ಷ ಪರಮೇಶ್ವರ ಹೆಗಡೆ ಪರಿಚಯಿಸಿದರು. ಪ್ರಣವ ಪ್ರಹ್ಲಾದ ಪ್ರಾರ್ಥಿಸಿದರು. ಕುಮಾರಿ ಸ್ವಾತಿ ಘಾಟಗೆ ವಂದೇಮಾತರಂ ಹಾಡಿದರು. ಆರ್‌ಎಸ್‌ಎಸ್ ಜಿಲ್ಲಾ ಪ್ರಚಾರ ಪ್ರಮುಖ ರಾಮಚಂದ್ರ ಏಡಕೆ ನಿರೂಪಿಸಿದರು. ದೇವಿಪ್ರಸಾದ ಕುಲಕರ್ಣಿ ವಂದಿಸಿದರು.