
ಪುಣೆ: ಇಲ್ಲಿನ ಕರ್ವೆ ಸ್ತ್ರೀ ಶಿಕ್ಷಣ ಸಂಸ್ಥಾನದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ರಾಷ್ಟ್ರೀಯ ಕಾರ್ಯಕಾರಿ ಪರಿಷದ್ ಬೈಠಕ್ ಮೇ 25ರಂದು ಪ್ರಾರಂಭವಾಯಿತು. ಎಬಿವಿಪಿಯ ರಾಷ್ಟ್ರೀಯ ಅಧ್ಯಕ್ಷ ಡಾ.ರಾಜ್ ಶರಣ್ ಶಾಹೀ, ರಾಷ್ಟ್ರೀಯ ಮಹಾಮಂತ್ರಿ ಯಾಜ್ಞವಲ್ಕ್ಯ ಶುಕ್ಲ, ರಾಷ್ಟ್ರೀಯ ಸಂಘಟನಾ ಮಂತ್ರಿ ಆಶೀಶ್ ಚೌಹಾಣ್ ಕಾರ್ಯಕ್ರಮದ ಶುಭಾರಂಭ ಮಾಡಿದರು. ರಾಷ್ಟ್ರದಾದ್ಯಂತದಿಂದ ಆಗಮಿಸಿದ ಪ್ರತಿನಿಧಿಗಳು ಭಾಗವಹಿಸಿದರು.
