ಪತ್ರಿಕಾ ಪ್ರಕಟಣೆ

ಅಭಿಯಾನದ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಆ. ಶ್ರೀ. ಆನಂದ ಅವರು ಇಂದು ಪತ್ರಿಕಾಗೋಷ್ಠಿಯ ವಿವರ:.

‘ಭೂಮಿ ಸುಪೋಷಣ ಮತ್ತು ಸಂರಕ್ಷಣಾ ಅಭಿಯಾನ’

ಏಪ್ರಿಲ್ 13 ರ ಯುಗಾದಿಯಂದು ರಾಷ್ಟ್ರವ್ಯಾಪಿ ಜನಜಾಗೃತಿ ಅಭಿಯಾನ ಪ್ರಾರಂಭ

ಚೈತ್ರ ಶುಕ್ಲ ಪಾಡ್ಯದ ಯುಗಾದಿಯ ಶುಭದಿನದಂದು (೧೩ ಏಪ್ರಿಲ್ ೨೦೨೧) ಭೂ ಪೋಷಣೆ ಮತ್ತು ಸಂರಕ್ಷಣೆಗಾಗಿ ರಾಷ್ಟ್ರವ್ಯಾಪಿ ಜನಜಾಗೃತಿ ಅಭಿಯಾನ ಪ್ರಾರಂಭವಾಗಲಿದೆ. ಕೃಷಿ, ಪರಿಸರ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಹಲವು ಸಂಸ್ಥೆಗಳು ಕೈಜೋಡಿಸಿ, “ಭೂಮಿ ಸುಪೋಷಣೆ ಮತ್ತು ಸಂರಕ್ಷಣೆ ಅಭಿಯಾನ” ಎಂಬ ಹೆಸರಿನಲ್ಲಿ ಜನಜಾಗೃತಿ ಅಭಿಯಾನವನ್ನು ಕೈಗೊಳ್ಳುವ ಸಂಕಲ್ಪ ಮಾಡಿವೆ. ಈ ರಾಷ್ಟ್ರ ಮಟ್ಟದ ಜನಜಾಗೃತಿ ಅಭಿಯಾನದ ಮೊದಲ ಹಂತದ ಅವಧಿ ಮೂರು ತಿಂಗಳು, ಅಂದರೆ ಯುಗಾದಿಯಿಂದ ಆಷಾಢ ಶುಕ್ಲ ಪೂರ್ಣಿಮೆಯವರೆಗೆ (೨೪ ಜುಲೈ ೨೦೨೧) ಇರುತ್ತದೆ.

ಹಿನ್ನೆಲೆ:

ಭೂಮಿಯ ಇಂದಿನ ದುಸ್ಥಿತಿಗೆ ಬದಲಾದ ನಮ್ಮ ದೃಷ್ಟಿಕೋನ ಕಾರಣ. ಭಾರತೀಯ ಪರಂಪರೆಯಲ್ಲಿ ಭೂಮಿಯನ್ನು ತಾಯಿ ಎಂದು ಗೌರವಿಸಿದರು ನಾವು. ಈ ಹಿನ್ನೆಲೆಯಲ್ಲಿಯೇ ನಮ್ಮ ಕೃಷಿ ಪರಂಪರೆ ಬೆಳೆದು ಬಂತು. ನಾವು ಭೂಮಿಯನ್ನು ಕಳೆದ ಸಾವಿರಾರು ವರುಷಗಳಿಂದ ಪೋಷಿಸುತ್ತಾ ಬಂದಿದ್ದೇವೆ. ಆದರೆ ಇಂದು ಭೂಮಿ ಒಂದು ವಸ್ತು, ಸಂಪನ್ಮೂಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಬಳಸಬಹುದು ಎಂದೆಣಿಸಿ ಕೃಷಿಯಲ್ಲಿ ರಾಸಾಯನಿಕಗಳನ್ನು ವಿವೇಚನಾ ರಹಿತವಾಗಿ ಬಳಸುತ್ತಿದ್ದೇವೆ. ಪ್ಲಾಸ್ಟಿಕ್ ಅನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದೇವೆ. ಕಾರ್ಖಾನೆಗಳ ತ್ಯಾಜ್ಯಗಳು ಸೂಕ್ತ ವಿಲೇವಾರಿ ಇಲ್ಲದೆ ಭೂಮಿ ಸೇರುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿರಂತರವಾಗಿ ಭೂಮಿಯ ಶೋಷಣೆ ನಡೆದಿದೆ. ಆದರೆ, ನಾವು ಮಣ್ಣಿನಿಂದ ಹೊರತೆಗೆದ ಪೋಷಕಾಂಶಗಳನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಪುನಃ ತುಂಬಿಸಿದ್ದೇವೆ. ಇದರ ಪರಿಣಾಮವಾಗಿ ಪ್ರಸ್ತುತ, ನಮ್ಮ ದೇಶದಲ್ಲಿ ೯೬.೪೦ ದಶಲಕ್ಷ ಹೆಕ್ಟೇರ್ ಭೂಮಿ ನಿರುಪಯೋಗಿಯಾಗಿದೆ. ಇದು ನಮ್ಮ ಒಟ್ಟು ಭೌಗೋಳಿಕ ಪ್ರದೇಶದ ೩೦% ಆಗಿದೆ.

ಭಾರತದ ಹೆಚ್ಚಿನ ರೈತರ ಅನುಭವದಂತೆ ಹೇಳುವುದಾದರೆ, ಕೃಷಿಯಲ್ಲಿನ ಖರ್ಚು ನಿರಂತರವಾಗಿ ಹೆಚ್ಚುತ್ತಿದೆ ಹಾಗೂ ಭೂಮಿಯ ಫಲವತ್ತತೆ ಕಡಿಮೆಯಾಗುತ್ತಿದೆ. ಸಾವಯವ ಇಂಗಾಲದ ಪ್ರಮಾಣವೂ ನಿರಂತರವಾಗಿ ಕಡಿಮೆಯಾಗುತ್ತಿದೆ. ಇದರಿಂದಾಗಿ ಉತ್ಪಾದನೆಯೂ ಕಡಿಮೆಯಾಗುತ್ತಿದೆ. ಹೆಚ್ಚಿನ ಪ್ರದೇಶಗಳಲ್ಲಿ ನೀರನ್ನು ಹಿಡಿದಿಡುವ  ಭೂಮಿಯ ಸಾಮರ್ಥ್ಯ ಕಡಿಮೆಯಾಗುತ್ತಿದೆ. ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಅಪೌಷ್ಟಿಕತೆಯಿಂದ ಕೂಡಿದ ಭೂಮಿಯಿಂದಾಗಿ ಮಾನವರು ಸಹ ವಿವಿಧ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ಆಧುನಿಕ ಕೃಷಿಯ ಹೆಸರಿನಲ್ಲಿ ಇತ್ತೀಚಿನ ದಿನಗಳಲ್ಲಿ ನಾವು ಭೂಮಿಯನ್ನು ಪೋಷಿಸುವ ವಿಚಾರವನ್ನೇ ಮರೆತುಬಿಟ್ಟಿದ್ದೇವೆ.

ಭಾರತೀಯ ಕೃಷಿ ಪರಿಕಲ್ಪನೆ ಮತ್ತು ಅದರಲ್ಲಿನ ಭೂ ಪೋಷಣೆಯ ಪದ್ಧತಿಯನ್ನು ಪುನಃ ಸ್ಥಾಪಿಸುವ ಸಮಯ ಈಗ ಬಂದಿದೆ. ಭೂ ಪೋಷಣೆ ಮತ್ತು ಸಂರಕ್ಷಣೆಗಾಗಿ ರಾಷ್ಟ್ರೀಯ ಮಟ್ಟದ ಅಭಿಯಾನವು ಈ ದಿಕ್ಕಿನಲ್ಲಿ ತೆಗೆದುಕೊಂಡ ಮೊದಲ ಕ್ರಮವಾಗಿದೆ. ಭಾರತೀಯ ಕೃಷಿ ಪರಿಕಲ್ಪನೆಯಲ್ಲಿ, ಭೂಮಿಯನ್ನು ಮಾತೃಭೂಮಿಯೆಂದು ಸಂಬೋಧಿಸಲಾಗುತ್ತದೆ. ಇಂತಹ ಉದಾಹರಣೆಗಳು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಎಲ್ಲೆಡೆ ಕಂಡುಬರುತ್ತವೆ. ಅಥರ್ವ ವೇದದ ಭೂಮಿಸೂಕ್ತದಲ್ಲಿ ‘ಮಾತಾ ಭೂಮಿಃ ಪುತ್ರೋಹಂ ಪೃಥಿವ್ಯಾಃ’ ಎಂದು ಹೇಳಲಾಗಿದೆ. ‘ಭೂಮಿ ನಮ್ಮ ತಾಯಿ ಮತ್ತು ನಾವು ಅವಳ ಮಕ್ಕಳು’ ಎಂಬುದು ಇದರ ಅರ್ಥ. ಅಂದರೆ, ಭೂಮಿಯ ಪೋಷಣೆಗೆ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ ಎನ್ನುವುದು ನಮ್ಮ ಹಿರಿಯರ ವಿಚಾರವಾಗಿತ್ತು ಎನ್ನುವುದು ಸ್ಪಷ್ಟವಾಗುತ್ತದೆ.  

ಆಭಿಯಾನದ ವಿವರ:

ಕಳೆದ ನಾಲ್ಕು ವರ್ಷಗಳಿಂದ ಸತತ ಮತ್ತು ಸಮಗ್ರ ಸಮಾಲೋಚನಾ ಪ್ರಕ್ರಿಯೆಯ ಫಲಿತಾಂಶವಾಗಿ ಈ ಅಭಿಯಾನ ಈಗ ಪ್ರಾರಂಭವಾಗಲಿದೆ. ರೈತರು, ಕೃಷಿ ವಿಜ್ಞಾನಿಗಳು, ರೈತರ ಅನುಭವಗಳನ್ನು ದಾಖಲಿಸುವ ಕಾರ್ಯಾಗಾರಗಳು, ರೈತರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿರುವ ಸಂಸ್ಥೆಗಳ ಜತೆ ಸಮಾಲೋಚನೆಯಲ್ಲಿ ಕಂಡುಕೊಂಡ ಅಂಶಗಳ ಆಧಾರದಲ್ಲಿ ಈ ಅಭಿಯಾನದ ನಿರ್ಣಯ ಕೈಗೊಳ್ಳಲಾಗಿದೆ. ಪ್ರಸ್ತುತ, ೩೩ ಸಂಸ್ಥೆಗಳು ಒಟ್ಟಾಗಿ ಈ ಅಭಿಯಾನ ನಡೆಸುವ ಜವಾಬ್ದಾರಿಯನ್ನು ವಹಿಸಿಕೊಂಡಿವೆ. ರಾಷ್ಟ್ರದಾದ್ಯಂತ ಎಲ್ಲ ರಾಜ್ಯಗಳು, ಜಿಲ್ಲೆಗಳು, ಗ್ರಾಮಗಳು ಮತ್ತು ನಗರಗಳಲ್ಲಿ ಯುಗಾದಿಯಂದು ಭೂಮಿ ಪೂಜೆಯೊಂದಿಗೆ ಅಭಿಯಾನ ಪ್ರಾರಂಭವಾಗುವುದು. ಗ್ರಾಮ ಗ್ರಾಮಗಳಲ್ಲಿ ರೈತರು ಸಾಮೂಹಿಕವಾಗಿ ಒಂದೆಡೆ ಸೇರಿ ಭೂಮಿ ಪೂಜೆ ಮಾಡಿ ಭೂಮಿಯನ್ನು ಸಂರಕ್ಷಿಸುವ, ಪೋಷಿಸುವ ಸಂಕಲ್ಪವನ್ನು ಮಾಡಲಿದ್ದಾರೆ. ಜೊತೆಗೆ ತಮ್ಮ ಅಕ್ಕ ಪಕ್ಕದ ಗ್ರಾಮಗಳ ರೈತರಿಗೆ ಭೂಮಿ ಸುಪೋಷಣೆ ಮತ್ತು ಸಂರಕ್ಷಣೆಯ ಸಂದೇಶವನ್ನು ತಲುಪಿಸಲಿದ್ದಾರೆ.

ಭೂಮಿಯ ಪೋಷಣೆ ಮತ್ತು ಸಂರಕ್ಷಣೆ ಕೇವಲ ರೈತರ ಜವಾಬ್ದಾರಿ ಮಾತ್ರ ಅಲ್ಲ. ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಈ ನಿಟ್ಟಿನಲ್ಲಿ ನಗರಗಳಲ್ಲೂ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುವುದು. ಪ್ಲಾಸ್ಟಿಕ್, ಕಾಗದಗಳ ಬಳಕೆ ಹಾಗೂ ವಿಲೇವಾರಿಯಲ್ಲಿ ಸಂಯಮ, ಕಾಳಜಿ, ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಕೆ ಮೊದಲಾದ ಸೂಕ್ತ ನಿರ್ವಹಣಾ ಪದ್ಧತಿಗಳನ್ನು ಅಳವಡಿಸುವಂತೆ ಪ್ರೇರೇಪಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ಅಭಿಯಾನದ ಸಂದರ್ಭದಲ್ಲಿ ರೈತರಿಗೆ ರಾಸಾಯನಿಕ ಕೃಷಿಯ ದುಷ್ಪರಿಣಾಮಗಳನ್ನು ತಿಳಿಸುವುದು,  ಸಾವಯವ ಹಾಗೂ ಇತರ ಪರಿಸರ ಪೂರಕ ಕೃಷಿ ಪದ್ಧತಿಗಳ ಬಗ್ಗೆ ತಿಳಿಸಲಾಗುವುದು. ಭೂಮಿಯನ್ನು ಶೋಷಿಸದೆ ಪೋಷಿಸುವ ವಿಧಾನ, ಪದ್ಧತಿಗಳ ಬಗ್ಗೆ ಅರಿವು ಮೂಡಿಸಲಾಗುವುದು. ಸಾಧಕ ಸಾವಯವ ಕೃಷಿಕರ ಅನುಭವಗಳನ್ನು ಕೇಳುವುದು, ಉಳಿದ ಕೃಷಿಕರಿಗೆ ಅವರ ಅನುಭವಗಳನ್ನು ಹಂಚುವುದು – ಇದಕ್ಕಾಗಿ ತರಬೇತಿ, ಪ್ರಶಿಕ್ಷಣ ಗಳನ್ನು ಏರ್ಪಡಿಸಲಾಗುವುದು. ದೇಶೀ ಬೀಜಗಳ ವೈವಿಧ್ಯ ಪ್ರದರ್ಶನ, ದೇಶೀ ಜಾನುವಾರುಗಳ ಬಗ್ಗೆ ಮಾಹಿತಿ, ಹಸ್ತ ಚಾಲಿತ, ಪಶು ಚಾಲಿತ ಸಾಧನ ಯಂತ್ರಗಳ ಪ್ರದರ್ಶನ ಇತ್ಯಾದಿಗಳನ್ನು ಏರ್ಪಡಿಸಲಾಗುವುದು. ಕೃಷಿ ವಿಶ್ವವಿದ್ಯಾಲಯಗಳು, ಕೃಷಿ ವಿಜ್ಞಾನ ಕೇಂದ್ರಗಳ ಸಹಕಾರದೊಂದಿಗೆ ರೈತರಿಗೆ ಮಣ್ಣಿನ ಫಲವತ್ತತೆ, ಸುಪೋಷಣೆ ಮತ್ತು ಸಂರಕ್ಷಣೆ ಕುರಿತು ಮಾಹಿತಿ ನೀಡಲಾಗುವುದು.

ಭೂ ಪೋಷಣೆ ಮತ್ತು ಸಂರಕ್ಷಣೆಗಾಗಿ ಕೈಗೊಂಡಿರುವ ರಾಷ್ಟ್ರಮಟ್ಟದ ಈ ಬೃಹತ್ ಅಭಿಯಾನದ ಅನುಷ್ಠಾನಕ್ಕಾಗಿ ನವದೆಹಲಿಯಲ್ಲಿ ಕಾರ್ಯಾಲಯವನ್ನು ಸ್ಥಾಪಿಸಲಾಗಿದೆ. ಅಭಿಯಾನಕ್ಕೆ ಮಾರ್ಗದರ್ಶನ ಮಾಡಲು ರಾಷ್ಟ್ರೀಯ ಮಾರ್ಗದರ್ಶಕ ಮಂಡಳಿಯನ್ನೂ ರಚಿಸಲಾಗಿದೆ. ಈ ಅಭಿಯಾನದ ರಾಷ್ಟ್ರೀಯ ಸಂಚಾಲನಾ ಸಮಿತಿಯು ಭಾರತೀಯ ಕೃಷಿ ಚಿಂತನೆ ಮತ್ತು ಭೂ ಪೋಷಣೆಯ ಪರಿಕಲ್ಪನೆಯನ್ನು ಪ್ರತ್ಯಕ್ಷ ತಳಮಟ್ಟದಲ್ಲಿ ಅನುಷ್ಠಾನಗೊಳಿಸಲಿದೆ. ಎಲ್ಲಾ ರಾಜ್ಯಗಳಲ್ಲಿಯೂ ಪ್ರತ್ಯೇಕ ಸಂಚಾಲನಾ ಸಮಿತಿಗಳನ್ನು ರಚಿಸಲಾಗುವುದು.

ರಾಷ್ಟ್ರೀಯ ಮಾರ್ಗದರ್ಶಕ ಮಂಡಳಿ:

  • ಪರಮಪೂಜ್ಯ ಆಚಾರ್ಯ ಬಾಲಕೃಷ್ಣ ಜೀ
  • ಪರಮಪೂಜ್ಯ ಜಗ್ಗಿ ವಾಸುದೇವ್ ಜೀ
  • ಪರಮಪೂಜ್ಯ ಕಮಲೇಶ್ ಪಟೇಲ್ ’ದಾ’ ಜೀ
  • ಪರಮಪೂಜ್ಯ ಸ್ವಾಮಿ ಅದೃಶ್ಯ ಕಾಡಸಿದ್ಧೇಶ್ವರ ಜೀ
  • ಪರಮಪೂಜ್ಯ ಡಾ. ಚಿನ್ಮಯ ಪಾಂಡ್ಯಾ ಜೀ
  • ಪರಮಪೂಜ್ಯ ಸ್ವಾಮಿ ಭಾವೇಶಾನಂದ ಜೀ
  • ಪರಮಪೂಜ್ಯ ಗೋಪಾಲ ಕೃಷ್ಣ ಜೀ
  • ಪರಮಪೂಜ್ಯ ಸ್ವಾಮಿ ಚಿನ್ನಾ ಜೀಯರ್‌ ಜೀ
  • ಪರಮಪೂಜ್ಯ ಮುಕ್ತಾನಂದ ‘ಬಾಪು’ ಜೀ
  • ಪರಮಪೂಜ್ಯ ಪ್ರಜ್ಞಾನಾನಂದ ಜೀ
  • ಪರಮಪೂಜ್ಯ ಸ್ವಾಮಿ ವಿವೇಕಾನಂದ ಜೀ
  • ಪದ್ಮಶ್ರೀ ಹುಕುಂ ಚಂದ್‌ ಪಾಟೀದಾರ್‌ ಜೀ
  • ಶ್ರೀ ಡಾ. ಸುರೇಂದ್ರ ಬೇನಿವಾಲ್‌ ಜೀ
  • ಶ್ರೀ ಡಾ. ಭಗವತಿ ಪ್ರಕಾಶ್ ಜೀ
  • ಶ್ರೀ ಶಂಕರ್‌ಲಾಲ್ ಜೀ
  • ಶ್ರೀ ಸುಂದರಂ ಜೀ
  • ಶ್ರೀ ಮನೋಜ್‌ ಭಾಯಿ ಸೋಲಂಕಿ ಜೀ

ರಾಷ್ಟ್ರೀಯ ಸಂಚಾಲನಾ ಸಮಿತಿ:

  1. ಶ್ರೀ ಜಯರಾಮ್ ಸಿಂಗ್ ಪಾಟೀದಾರ್, ರಾಷ್ಟ್ರೀಯ ಸಂಚಾಲಕರು
  2. ಶ್ರೀ ಸುಭಾಷ್ ಶರ್ಮಾ, ಸಹ ಸಂಚಾಲಕರು
  3. ಶ್ರೀ ರಾಮಕೃಷ್ಣ ರಾಜು, ಸಹ ಸಂಚಾಲಕರು
  4. ಶ್ರೀ ವಿಶ್ವಜಿತ್ ಜ್ಯಾನಿ, ಸಹ ಸಂಚಾಲಕರು
  5. ಶ್ರೀ ಸಂಜೀವ್ ಕುಮಾರ್, ಸಹ ಸಂಚಾಲಕರು
  6. ಶ್ರೀ ಧರ್ಮಪಾಲ್ ಸಿಂಗ್, ಸದಸ್ಯರು
  7. ಶ್ರೀ ಸತೀಶ್, ಸದಸ್ಯರು
  8. ಶ್ರೀ ಗೋಪಾಲ್ ಆರ್ಯ, ಸದಸ್ಯರು
  9. ಶ್ರೀ ಅಜಿತ್ ಪ್ರಸಾದ್, ಸದಸ್ಯರು
  10. ಶ್ರೀ ಡಾ. ಗಜಾನನ್ ಡಾಂಗೆ, ಸದಸ್ಯರು
  11. ಶ್ರೀ ಸ್ಥಾಣುಮಾಲಯನ್‌, ಸದಸ್ಯರು
  12. ಶ್ರೀ ಕುಮಾರಸ್ವಾಮಿ, ಸದಸ್ಯರು
  13. ಶ್ರೀ ಆ. ಶ್ರೀ. ಆನಂದ,  ಸದಸ್ಯರು
  14. ಶ್ರೀ ಎಥಿರಾಜುಲು, ಸದಸ್ಯರು
  15. ಶ್ರೀ ಜಯಂತ್ ಮಲ್ಲ, ಸದಸ್ಯರು
  16. ಶ್ರೀ ಭಗವಾನ್ ದಾಸ್, ಸದಸ್ಯರು
  17. ಶ್ರೀ ಗೋಪಾಲ್ ಉಪಾಧ್ಯಾಯ, ಸದಸ್ಯರು
  18. ಶ್ರೀ ಡಾ. ಪ್ರಕಾಶ್ ಶಾಸ್ತ್ರಿ, ವಿಶ್ವವಿದ್ಯಾಲಯ ಸಂಪರ್ಕ
  19. ಶ್ರೀ ಅಜಿತ್ ಕೇಲ್ಕರ್, ಕೃಷಿ ವಿಜ್ಞಾನ ಕೇಂದ್ರ ಸಂಪರ್ಕ
  20. ಶ್ರೀ ಡಾ. ಗುಣಕರ್, ರಾಷ್ಟ್ರೀಯ ಕಾರ್ಯದರ್ಶಿ

ಅಭಿಯಾನದಲ್ಲಿ ಭಾಗವಹಿಸಲಿರುವ ಸಂಸ್ಥೆಗಳು:

  1. ಗಾಯತ್ರಿ ಪರಿವಾರ
  2. ಪತಂಜಲಿ ಯೋಗಪೀಠ
  3. ರಾಮಕೃಷ್ಣ ಮಿಷನ್
  4. ಇಸ್ಕಾನ್
  5. ಶ್ರೀ ಸಿದ್ಧಗಿರಿ ಮಠ
  6. ಶ್ರೀ ರಾಮಚಂದ್ರ ಮಿಷನ್
  7. ಈಶ ಫೌಂಡೇಶನ್
  8. ಜೀಯರ್‌ ಟ್ರಸ್ಟ್
  9. ಗೋ ಆಧಾರಿತ ಪ್ರಕೃತಿ ವ್ಯವಸಾಯ ದಾರುಲ್ ಸಂಗಮ್
  10. ಬನ್ಸಿ ಗಿರ್ ಗೋಶಾಲಾ
  11. ಗೋಸೇವಾ ಗತಿವಿಧಿ
  12. ಭಾರತೀಯ ಕಿಸಾನ್ ಸಂಘ
  13. ಸ್ವದೇಶಿ ಜಾಗರಣ ಮಂಚ್
  14. ಸಹಕಾರ ಭಾರತಿ
  15. ವನವಾಸಿ ಕಲ್ಯಾಣ ಆಶ್ರಮ
  16. ದೀನದಯಾಳ್‌ ಶೋಧ ಸಂಸ್ಥಾನ
  17. ಅಕ್ಷಯ ಕೃಷಿ ಪರಿವಾರ
  18. ಏಕಲ್ ವಿದ್ಯಾಲಯ
  19. ಲೋಕ ಭಾರತಿ
  20. ವಿದ್ಯಾಭಾರತಿ
  21. ವಿಶ್ವ ಹಿಂದೂ ಪರಿಷದ್‌
  22. ಗ್ರಾಮ ವಿಕಾಸ
  23. ರಾಷ್ಟ್ರೀಯ ಸೇವಾ ಭಾರತಿ
  24. ಗೋ ವಿಜ್ಞಾನ ಅನುಸಂಧಾನ ಕೇಂದ್ರ
  25. ಕೃಷಿ ಪ್ರಯೋಗ ಪರಿವಾರ
  26. ಏಕಲವ್ಯ ಫೌಂಡೇಶನ್‌
  27. ಗಂಗಾ ಸೇವಾ ಸಮಿತಿ
  28. ಗ್ರಾಮ ಭಾರತಿ
  29. ಯೂಥ್‌ ಫಾರ್‌ ನೇಷನ್‌
  30. ಪರ್ಯಾವರಣ ಸಂರಕ್ಷಣ ಗತಿವಿಧಿ
  31. ಬ್ರಹ್ಮಾನಂದ ಧಾಮ್‌
  32. ಪ್ರಜ್ಞಾನ್ ಮಿಷನ್
  33. ಭಾರತ್ ಸೇವಾಶ್ರಮ ಸಂಘ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ದೂರವಾಣಿ: 94496 23275, 98452 15474, 94485 63586, 98803 94135

ವಿಳಾಸ: 74, ರಂಗರಾವ್‌ ರಸ್ತೆ, ಶಂಕರಪುರಂ, ಬೆಂಗಳೂರು ೫೬೦೦೦೪

ವೆಬ್‌ಸೈಟ್‌: www.bhumisuposhan.org

Leave a Reply

Your email address will not be published.

This site uses Akismet to reduce spam. Learn how your comment data is processed.