Bangalore: A national seminar on’ Dr.S.R. Rao and His Contributions to Indian Archaeology’ was held at The Mythic Society Bangalore. Dr D Dayalan of Archaeology dept inaugurated the seminar, attended by senior intellectuals, students and like minded participants.

Seminar Photo-1 (1)

ಖ್ಯಾತ ಪುರಾತತ್ವಜ್ಞ ಡಾ| ಎಸ್.ಆರ್. ರಾವ್ ಮತ್ತು ಅವರು ಭಾರತೀಯ ಪುರಾತತ್ವಕ್ಕೆ ನೀಡಿದ ಕಾಣಿಕೆಗಳು:

ದಿ ಮಿಥಿಕ್ ಸೊಸೈಟಿಯು ಭಾರತೀಯ ಪುರಾತತ್ವ ಇಲಾಖೆ, ಬೆಂಗಳೂರು ವೃತ್ತ, ಇವರ ಸಹಯೋಗದೊಂದಿಗೆ ದಿನಾಂಕ ೨೦-೪-೨೦೧೩ರಂದು  ಡಾ| ಎಸ್.ಆರ್. ರಾವ್ (ಭಾರತದ ಗಣ್ಯ ಪುರಾತತ್ವಜ್ಞರಲ್ಲಿ ಒಬ್ಬರು) ಮತ್ತು ಭಾರತೀಯ ಪುರಾತತ್ವಕ್ಕೆ ಅವರು ನೀಡಿದ ಅಮೂಲ್ಯ ಕಾಣಿಕೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿತ್ತು

ಡಾ| ಡಿ. ದಯಾಲನ್, ಭಾರತೀಯ ಪುರಾತತ್ವ ಇಲಾಖೆಯ ದಕ್ಷಿಣ ವಲಯದ ಪ್ರಾಂತೀಯ ಮುಖ್ಯಸ್ಥರು ವಿಚಾರ ಸಂಕಿರಣವನ್ನು ಉದ್ಘಾಟಿಸಿದರು. ಅಧ್ಯಕ್ಷತೆ ಪ್ರೊ. ಎಸ್.ಎಚ್. ರಿತ್ತಿ, ವಿಶ್ರಾಂತ ಪ್ರೊಫೆಸರ್, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು. ಮುಖ್ಯ ಅತಿಥಿಗಳಾಗಿ ದಿ ಮಿಥಿಕ್ ಸೊಸೈಟಿಯ ಅಧ್ಯಕ್ಷರಾದ ಡಾ| ಎಂ.ಕೆ.ಎಲ್.ಎನ್. ಶಾಸ್ತ್ರಿ

ಸಂಜೆ ಸಮಾರೋಪ ಸಮಾರಂಭದಲ್ಲಿ ಡಾ| ಅ. ಸುಂದರ, ವಿಶ್ರಾಂತ ಪ್ರೊಫೆಸರ್ ಮತ್ತು ಇಲಾಖಾ ಮುಖ್ಯಸ್ಥರು, ಪುರಾತತ್ವ ಮತ್ತು ಶಾಸನ ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಸಭೆಯನ್ನು ಉದ್ದೇಶಿಸಿ ಕಿರಿಯ ಉತ್ಸಾಹಿ ವಿದ್ವಾಂಸರು ಡಾ| ಎಸ್.ಆರ್. ರಾವ್ ಅವರು ಪ್ರಾರಂಭಿಸಿದ ಕಾರ್ಯವನ್ನು ಮುಂದುವರಿಸಬೇಕು ಎಂದು ಹೇಳಿದರು.

ಈ ವಿಚಾರ ಸಂಕಿರಣದಲ್ಲಿ ಇಲಾಖೆಯ ಡಾ| ವಿ. ಶಿವಾನಂದರವರು ಡಾ| ಎಸ್.ಆರ್. ರಾವ್ ರವರು ಕೈಗೊಂಡ ಭೂಶೋಧನೆ, ಶ್ರೀ ಸಿ.ಬಿ. ಪಾಟೀಲ್‌ರವರು ಡಾ| ಎಸ್.ಆರ್. ರಾವ್ ರವರು ಕೈಗೊಂಡ  ಉತ್ಖನನಗಳು, ಡಾ| ಕೆ.ಪಿ. ಪೂಣಚ್ಚರವರು ಡಾ| ಎಸ್.ಆರ್. ರಾವ್ ರವರು ಕೈಗೊಂಡ  ರಾಷ್ಟ್ರೀಯ ಸ್ಮಾರಕಗಳ ಸಂರಕ್ಷಣೆ, ಡಾ| ಎ.ಎಸ್. ಗೌರ್‌ರವರು ಡಾ| ಎಸ್.ಆರ್. ರಾವ್ ರವರು ಕೈಗೊಂಡ ಸಾಗರೋತ್ತರ ಪುರಾತತ್ವ ಅನ್ವೇಶಣೇ, ಡಾ| ಎಂ. ನಂಬಿರಾಜನ್‌ರವರು ಡಾ| ಎಸ್.ಆರ್. ರಾವ್ ರವರು ಕೈಗೊಂಡ ವಸ್ತುಸಂಗ್ರಹಾಲಯಗಳ ಪರಿಕಲ್ಪನೇ ಪ್ರದರ್ಶನ ಮತ್ತು ಶ್ರೀ ಎಂ.ವಿ. ವಿಶ್ವೇಶ್ವರ ಅವರು

ಡಾ| ಎಸ್.ಆರ್. ರಾವ್ ರವರು ಕೈಗೊಂಡ ಸಿಂಧೂ ಲಿಪಿಯ ಕುರಿತಾದ ಸಂಶೋದನೆಗಳ ಬಗ್ಗೆ  ತಮ್ಮ ವಿಚಾರಗಳನ್ನು ಮಂಡಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.