1998ರಲ್ಲಿ ರಾಜಸ್ಥಾನದ ಪೋಖ್ರಾನಲ್ಲಿ ಪರಮಾಣು ಪರೀಕ್ಷೆ ಯಶಸ್ಸಿನ ನೆನಪಿಗಾಗಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಗಮನಾರ್ಹ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸುವ ಸಲುವಾಗಿ ಪ್ರತಿವರ್ಷ ಮೇ 11 ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ಭಾರತದ ತಾಂತ್ರಿಕ ಸಾಧನೆಗಳನ್ನು ಮತ್ತೊಮ್ಮೆ ನೆನಪಿಸಿಕೊಳ್ಳುವಂಥ ದಿನ ಇದಾಗಿದೆ. ಈ ವರ್ಷದ ರಾಷ್ಟ್ರೀಯ ತಂತ್ರಜ್ಞಾನದ ದಿನದ ಥೀಮ್‌ ʼFrom Schools to Startups: Igniting Young Minds to Innovate.ʼ


ಇತಿಹಾಸ
1998, ಮೇ 11 ರಂದು ಭಾರತವು ಪೋಖ್ರಾನ್‌ ಸೇರಿದಂತೆ ಮೂರು ಯಶಸ್ವಿ ಪರಮಾಣು ಪರೀಕ್ಷೆಗಳನ್ನು ನಡೆಸಿತ್ತು.ಅದೇ ದಿನ ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ ಡಿಓ) ತನ್ನ ಮೊದಲ ದೇಶೀಯ ವಿಮಾನವಾದ ಹನ್ಸಾ -3 ಮತ್ತು ತ್ರಿಶೂಲ್‌ ಕ್ಷಿಪಣಿಯನ್ನು ಪರೀಕ್ಷಿಸಿತು. ಈ ಕಾರಣಕ್ಕಾಗಿ ಭಾರತವು ತಂತ್ರಜ್ಞಾನ  ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೇ 11 ಅನ್ನು ಭಾರತದ ಮಹತ್ತರದ ಸಾಧನೆಯ ದಿನ ಎಂದು ಘೋಷಿಸಿದರು. ಇದನ್ನು 1999ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಹಾಗೂ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು (ಟಿಡಿಬಿ) ರಾಷ್ಟ್ರೀಯ ತಂತ್ರಜ್ಞಾನ ದಿನವನ್ನಾಗಿ ಮೊದಲ ಬಾರಿಗೆ ಆಚರಿಸಿತು .


ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು ವಿಜ್ಞಾನಿಗಳು ಮತ್ತು ಎಂಜಿನಿಯರ್‌ ಗಳ ಕೊಡುಗೆಯನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಯು ಮೂರು ವಿಭಾಗಗಳಲ್ಲಿ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡುತ್ತಿದೆ. ಹೊಸ ಸ್ವದೇಶಿ ತಂತ್ರಜ್ಞಾನದ ಮೂಲಕ ವಾಣಿಜ್ಯೀಕರಣ ಮತ್ತು ಕೈಗಾರಿಕೆಗಳಲ್ಲಿ ಯಶಸ್ವಿಯಾದವರಿಗೆ ಈ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.


ಮಹತ್ವ
1. ತಂತ್ರಜ್ಞಾನದಲ್ಲಿ ಹೆಚ್ಚಿನ ನಾವೀನ್ಯತೆಯನ್ನು ತೋರಿಸಲು ಈ ದಿನ ಪ್ರೇರೇಪಿಸುತ್ತದೆ.
2. ಈ ದಿನವು ಭಾರತದ ಇತಿಹಾಸದ ಒಂದು ಪ್ರಮುಖ ಭಾಗವಾಗಿದೆ. 3. ತಂತ್ರಜ್ಞಾನದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ ನೀಡಲು ಈ ದಿನ ಸಹಾಯಕವಾಗಿದೆ.
4. ಈ ರೀತಿಯ ಯಶೋಗಾಥೆಗಳು ವಿಜ್ಞಾನ, ಸಂಶೋಧನೆ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದಲ್ಲಿ ಹೆಚ್ಚಿನ ಬೆಳವಣಿಗೆಗೆ ಪ್ರೋತ್ಸಾಹಿಸಲು ಈ ದಿನ ಸೂಕ್ತವಾಗಿದೆ.
5. ತಂತ್ರಜ್ಞಾನ ಕ್ಷೇತ್ರದಲ್ಲಿನ ಆವಿಷ್ಕಾರಗಳನ್ನು ಗುರುತಿಸುವುದಕ್ಕಾಗಿ ಈ ದಿನ ಸಹಾಯಕವಾಗಿದೆ.
6. ತಂತ್ರಜ್ಞಾನದ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಈ ದಿನ ಸಹಾಯಕವಾಗುತ್ತದೆ.

Leave a Reply

Your email address will not be published.

This site uses Akismet to reduce spam. Learn how your comment data is processed.