P Chidambaram

ಕಳೆದ ಮಾರ್ಚ್ ತಿಂಗಳಲ್ಲಿ ಕೇಂದ್ರದ ಯುಪಿಎ ಸರಕಾರವು ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ ಅಥವಾ ಎನ್.ಸಿ.ಟಿ.ಸಿ (National Counter Terrorism Center)ಜಾರಿಗೊಳಿಸುವ ಚಿಂತನೆ ನಡೆಸಿದೆ. ಅಮೆರಿಕದಲ್ಲಿ  9/11 ಘಟನೆ ನಡೆದ 36 ತಿಂಗಳೊಳಗೆ ಇದೇ ರೀತಿಯ ಕಾಯಿದೆಯನ್ನು ಜಾರಿಗೆ ತರಲಾಯಿತು. ಅಮೆರಿಕದಲ್ಲಿ ಇದು ಯಶಸ್ವಿಯಾಗಿರುವುದರಿಂದ ನಮಗೂ ಲಾಭವಾಗಬಹುದು, ಎಂಬುದಾಗಿ ಗೃಹಮಂತ್ರಿ ಪಿ.ಚಿದಂಬರಂ ತಿಳಿಸಿದ್ದಾರೆ. ಇದರ ಉದ್ದೇಶ ಭಯೋತ್ಪಾದನೆಗಳು ನಡೆಯದಂತೆ ನೋಡಿಕೊಳ್ಳುವುದು, ಭಯೋತ್ಪಾದನೆ ನಡೆದಲ್ಲಿ  ತ್ವರಿತವಾಗಿಪ್ರತಿಕ್ರಿಯಿಸುವುದು ಮತ್ತು ಭಯೋತ್ಪಾದನೆ ನಡೆಸಿದವರಿಗೆ ಅತ್ಯಧಿಕ ಹಾನಿಯಾಗುವಂತೆ ಮಾಡುವುದು. ಇಂದು ಭಯೋತ್ಪಾದನೆಗೆ ಸಂಬಂಧಿಸಿದಂತೆ ಅನೇಕ ಸಂಸ್ಥೆಗಳು ಕೆಲಸ ಮಾಡುತ್ತಿವೆ – ಈ ಎಲ್ಲಾ ಸಂಸ್ಥೆಗಳೂ ಎನ್.ಸಿ.ಟಿ.ಸಿ ಸಂಸ್ಥೆಯ ಅಡಿಯಲ್ಲಿ ಬರುವುದು. ಆದರೆ, ಈ ಪ್ರಯತ್ನವನ್ನು 9 ರಾಜ್ಯಗಳ ಮುಖ್ಯಮಂತ್ರಿಗಳು ವಿರೋಧಿಸಿರುವರು.

P Chidambaram

ಎನ್.ಸಿ.ಟಿ.ಸಿ ಸ್ಥಾಪಿಸುವ ಕೇಂದ್ರ ಸರಕಾರದ ಉದ್ದೇಶವೇನೋ ಒಳ್ಳೆಯದೇ. ಪಿ.ಚಿದಂಬರಂ ಅವರು ಎನ್.ಸಿ.ಟಿ.ಸಿ ಮೂಲಕ ಬಲವಾದ ಕಾನೂನಿನ  ಕುರಿತಾಗಿ ಮಾತುಗಳನ್ನಾಡಿದ್ದರು. ಆದರೆ, ಜಾರಿಗೆ ಬರುವುದು ದುರ್ಬಲವಾದ ಕಾನೂನೇ. ಈ ದುರ್ಬಲ ಕಾನೂನನ್ನು ಸಹ ಅನೇಕ ಮುಖ್ಯಮಂತ್ರಿಗಳು ವಿರೋಧಿಸಿರುವುದು ಗಮನಾರ್ಹ. ಮುಖ್ಯವಾಗಿ ಇದರಿಂದಾಗಿ ರಾಜ್ಯಗಳ ವ್ಯವಹಾರದಲ್ಲಿ ಕೇಂದ್ರವು ಮೂಗು ತೂರಿಸಿದಂತಾಗುತ್ತದೆ ಮತ್ತು ಇದು ಒಕ್ಕೂಟ ವ್ಯವಸ್ಥೆಗೇ ಮಾರಕ, ಎನ್ನುವುದು ಇವರ ಆರೋಪ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಅಲ್ಲದೆ, ಯುಪಿಎ ಅಂಗಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಕೂಡಾ ಇದನ್ನು ಕಟುವಾಗಿ ಟೀಕಿಸಿದ್ದಾರೆ. ಈ ಉಪಕ್ರಮದಡಿ ರಾಜ್ಯಗಳ ಮೇಲೆ ತನ್ನ ಸರ್ವಾಧಿಕಾರವನ್ನು ಹೇರುವ ಪ್ರಯತ್ನವನ್ನು ಕೇಂದ್ರ ನಡೆಸಿದೆಯೇನೋ ಎಂಬ ಭೀತಿ ರಾಜ್ಯಗಳದ್ದು. 9 ರಾಜ್ಯಗಳು ವಿರೋಧಿಸುತ್ತಿರುವಾಗ, ಈ ನಡೆಯ ಕುರಿತಾಗಿ ಕೇಂದ್ರ ಸರಕಾರವು ಯೋಚಿಸಬೇಕಿದೆ.

  • ಯುಪಿಎ ಸರಕಾರ ಅಧಿಕಾರಕ್ಕೆ ಬರುತ್ತಲೇ ಭಯೋತ್ಪಾದನೆ ಚಟುವಟಿಕೆಗಳ ತಡೆ ಅಧ್ಯಾದೇಶ (ಪೋಟಾ)ವನ್ನು ರದ್ದು ಪಡಿಸಿತು – ಈ ಕಾಯಿದೆಯಿಂದ ಭಯೋತ್ಪಾದಕರನ್ನು ಸ್ವಲ್ಪ ಮಟ್ಟಿಗಾದರೂ ಶಿಕ್ಷಿಸಲು ಸಾಧ್ಯವಿತ್ತು. ಆದರೆ, ಈ ಕಾಯಿದೆಯನ್ನು ಅಲ್ಪಸಂಖ್ಯಾತರ ವಿರುದ್ಧ ಬಳಸಲಾಗುತ್ತಿದೆ ಎಂದು ಸಬೂಬು ನೀಡಿ ವಜಾ ಮಾಡಲಾಗಿತ್ತು. ಇದರಿಂದಲೇ ಈ ಸರಕಾರಕ್ಕೆ ಭಯೋತ್ಪಾದನೆ ನಿಗ್ರಹಿಸುವ ಕುರಿತಾಗಿ ಎ?ಂಂಔ ಕಾಳಜಿಯಿದೆ ಎನ್ನುವುದು ತಿಳಿಯುತ್ತದೆ.
  • ಅಮೆರಿಕದಲ್ಲಿ ಈ ರೀತಿಯ ಸಂಸ್ಥೆಯು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರುವುದಕ್ಕೆ ಕಾರಣ, ಆ ಸಂಸ್ಥೆಯು ಸ್ವತಂತ್ರವಾಗಿ ಕೆಲಸ ಮಾಡುತ್ತದೆ. ಆದರೆ ಭಾರತದಲ್ಲಿ ಅದು ಗೃಹ ಮಂತ್ರಾಲಯದ ಅಡಿಯಲ್ಲಿಯೇ ಕೆಲಸ ಮಾಡಬೇಕಾಗಿದೆ.
  • ಎನ್.ಸಿ.ಟಿ.ಸಿಯ ಮುಖ್ಯ ಸಮಸ್ಯೆಯೆಂದರೆ ಅದಕ್ಕೆ ಅನುಮಾನಾಸ್ಪದ ವ್ಯಕ್ತಿಗಳನ್ನು ಬಂಧಿಸುವ ಮತ್ತು ಕಾನೂನು ಕ್ರಮ ಜರುಗಿಸುವ ಅಧಿಕಾರ ನೀಡಿರುವುದು. ಗುಪ್ತಚರ ಮಾಹಿತಿ ಸಂಗ್ರಹಿಸುವ ಸಂಸ್ಥೆಯೊಂದು ತಾನೇ ಶಂಕಿತರನ್ನು ಬಂಧಿಸುವ, ಕಾನೂನುಕ್ರಮಕ್ಕೊಳಪಡಿಸುವ ಅಧಿಕಾರ ಹೊಂದಿರುವುದು ತರವಲ್ಲ.
  • ಈಗಾಗಲೇ ಎನ್.ಐ.ಎ ಸಂಸ್ಥೆಯು ಭಯೋತ್ಪಾದನೆ ನಿಗ್ರಹಿಸುವ ಹೆಸರಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಕೇಂದ್ರ ಸರಕಾರದ ಅಂಕಿತದಲ್ಲಿರುವ ಆ ಸಂಸ್ಥೆ ರಾಷ್ಟ್ರೀಯವಾದಿ ಸಂಸ್ಥೆಗಳಿಗೆ ಸೇರಿದವರನ್ನು ಭಯೋತ್ಪಾದನೆಯ ನೆಪದಲ್ಲಿ ಸೆರೆಮನೆಗೆ ತಳ್ಳುವುದರಲ್ಲಿ ಆಸಕ್ತಿ ತೋರಿಸಿರುವುದು ಎಲ್ಲರಿಗೂ ತಿಳಿದಿರುವ  subject. ಆದರೆ,  ಯುಪಿಎ ಸರಕಾರಕ್ಕೆ ಸಮಾಧಾನವಾದಂತಿಲ್ಲ. ಎನ್.ಸಿ.ಟಿ.ಸಿ ಮೂಲಕ ಅದೇ ಕೆಲಸವನ್ನು ಮುಂದುವರೆಸಿ, ಎನ್.ಐ.ಎ ಗೆ ಶಿಕ್ಷಿಸಲು ಸಾಧ್ಯವಾಗದಿರುವ ಹಿಂದು ನಾಯಕರನ್ನು ಶಿಕ್ಷಿಸಲು ಮನಸ್ಸು ಮಾಡಿದಂತಿದೆ.
  • ಎನ್.ಸಿ.ಟಿ.ಸಿ ಸಂಸ್ಥೆಯು ರಾಜ್ಯ ಸರಕಾರದ ಅನುಮತಿ ಇಲ್ಲದೆ, ರಾಜ್ಯ ಸರಕಾರಕ್ಕೆ ಯಾವ ಸುಳಿವೂ ನೀಡದೆ ಕಾರ್ಯಾಚರಣೆ ನಡೆಸಬಹುದು. ಮತ್ತು ಯಾರನ್ನು ಬೇಕಾದರೂ ಬಂಧಿಸುವ ಅಧಿಕಾರ ಅದಕ್ಕಿರುವುದು.
  • ಎನ್.ಸಿ.ಟಿ.ಸಿ ಸಂಸ್ಥೆಯು ಏಕವ್ಯಕ್ತಿಯಿಂದ ನಿರ್ದೇಶಿಸಲ್ಪಡುವ ಸಂಸ್ಥೆ – ಈ ವ್ಯಕ್ತಿಯು ಕೇಂದ್ರದ ಗೃಹಮಂತ್ರಿಯ ಕೈಕೆಳಗಿರುವವರು. ಪಿ.ಚಿದಂಬರಂ ಅವರಂತಹ ಹಿಂದು ವಿರೋಧಿ ಗೃಹಮಂತ್ರಿಯನ್ನು ಮೆಚ್ಚಿಸಲು ಎನ್.ಸಿ.ಟಿ.ಸಿ ನಿರ್ದೇಶಕರಿಂದ ಹಿಂದು ನಾಯಕರನ್ನು ಸೆರೆಮನೆಗೆ ತಳ್ಳುವುದನ್ನು ಬಿಟ್ಟು ಬೇರೇನನ್ನು ತಾನೆ ನಿರೀಕ್ಷಿಸಲು ಸಾಧ್ಯ?
  • ಕೇಂದ್ರ ಸರಕಾರಕ್ಕೆ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡುವ ಮನಸ್ಸಿದ್ದರೆ, ಪೋಟಾದಂತಹ ಬಲವಾದ ಕಾನೂನು ತಂದು, ರಾಜಕೀಯ ಲಾಭಗಳನ್ನು ಪಕ್ಕಕ್ಕಿಟ್ಟು, ಭಯೋತ್ಪಾದನೆಯನ್ನು ಸದೆಬಡಿಯಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.