Anjala Beegum seures 100 out of 100 in Sanskrit

Anjala Beegum seures 100 out of 100 in Sanskrit

ತಮಿಳುನಾಡಿನ ಮೊಗಪೈರ್ ಪ್ರದೇಶದ ಡಿ.ಎ.ಪಿ. ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಅಂಜಲಾ ಬೀಗಂ ಸಂಸ್ಕೃತ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳಿಸುವುದರೊಂದಿಗೆ ರಾಜ್ಯಕ್ಕೇ ಪ್ರಥಮ ಸ್ಥಾನಿಯಾಗಿದ್ದಾಳೆ. ಸಂಸ್ಕೃತದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ಅಂಜಲಾ ಬೀಗಂ ತನ್ನದೇ ಸೋದರ ಗುಲ್ಸಾರ್ ಅಹಮ್ಮದ್ ಈ ಹಿಂದೆ 2008 ರಲ್ಲಿ ಸಂಸ್ಕೃತದಲ್ಲಿ ನೂರಕ್ಕೆ ನೂರು ಅಂಕಗಳಿಸಿದ ಸಾಧನೆಯನ್ನು ಸರಿಗಟ್ಟಿದ್ದಾಳೆ. ಸಂಸ್ಕೃತ, ಗಣಿತ ಹಾಗೂ ವಿಜ್ಞಾನದಲ್ಲಿ ನೂರಕ್ಕೆ ನೂರು ಅಂಕಗಳಿಸಿರುವ ಅಂಜಲಾ, ಸಮಾಜವಿಜ್ಞಾನದಲ್ಲಿ 99 ಹಾಗೂ ಆಂಗ್ಲಭಾಷೆಯಲ್ಲಿ 98  ಅಂಕಗಳಿಸಿದ್ದಾಳೆ. ಜೀವಶಾಸ್ತ್ರ ಅಧ್ಯಯನಗೈದು ವೈದ್ಯೆಯಾಗುವ ಹಂಬಲ ಹೊತ್ತಿರುವ ಅಂಜಲಾ ಬೀಗಂನ ಕುಟುಂಬ ಸಂಸ್ಕೃತದಲ್ಲಿ ಅಪಾರ ಆಸಕ್ತಿ-ಅಭಿಮಾನ ಹೊಂದಿದೆ. ಅಣ್ಣ ಗುಲ್ಸಾರ್ ಅಹಮ್ಮದ್, ತಂದೆ ಅಬ್ದುಲ್ ಹಮೀದ್, ತಾಯಿ ಸಾಯಿರಾ ಬಾನು ಹಾಗೂ ಶಿಕ್ಷಕಿ ಶ್ರೀಧರ್ ವೆಂಕಟ್ರಮಣಿ ಈ ನಾಲ್ಕು ಮಂದಿ ನನ್ನ ಯಶಸ್ಸಿಗೆ ಕಾರಣ ಎನ್ನುತ್ತಾಳೆ ಅಂಜಲಾ ಬೀಗಂ

Leave a Reply

Your email address will not be published.

This site uses Akismet to reduce spam. Learn how your comment data is processed.