Dr. Mohan Bhagwat, Sarsanghachalak, RSS

ಚುನಾವಣೆಯಲ್ಲಿ ನೊಟಾ ಇದ್ದಾಗ್ಯೂ, ಅದನ್ನು ಬಳಸದೇ ಲಭ್ಯವಿರುವ ಉತ್ತಮರಾದವರನ್ನು  ಬೆಂಬಲಿಸಿ ಆಯ್ಕೆಮಾಡಬೇಕು : ಸರಸಂಘಚಾಲಕ ಡಾ. ಮೋಹನ್ ಭಾಗವತ್

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಐದು ಅಭ್ಯರ್ಥಿಗಳಲ್ಲಿ ನಮಗೆ ಇಷ್ಟವಾಗುವ ಯಾರೊಬ್ಬನೂ ಇಲ್ಲದಿರಬಹುದು. ಪ್ರಜಾಪ್ರಭುತ್ವದ ರಾಜಕೀಯದಲ್ಲಿ ಲಭ್ಯವಿರುವ ಸರ್ವಶ್ರೇಷ್ಠರನ್ನು ಆಯ್ಕೆ ಮಾಡಬೇಕಾಗುತ್ತದೆ. ಅಲ್ಲದೇ ಎಲ್ಲರಿಗೂ ಇಷ್ಟವಾಗುವ, ನೂರಕ್ಕೆ ನೂರು ಪ್ರತಿಶತ ಎಲ್ಲರೂ ಒಪ್ಪಿಕೊಳ್ಳುವಂತಹ ಅಭ್ಯರ್ಥಿ ಸಿಗುವುದು ಗಗನಕುಸುಮವೇ! ಇದು ಇಂದಿನ ಸಮಯದಲ್ಲಷ್ಟೇ ಅಲ್ಲದೇ, ಮಹಾಭಾರತ ಸಮಯದಿಂದಲೂ ಇದ್ದೇ ಇದೆ ಎಂದು ನಾವು ತಿಳಿದುಕೊಳ್ಳಬೇಕು. ಮಹಾಭಾರತದಲ್ಲಿ ಕೌರವ ಪಾಂಡವರ ನಡುವೆ ಯುದ್ಧ ಸನ್ನಿಹಿತವಾದಾಗ, ಯಾದವರ ಸಭೆಯಲ್ಲಿ ಯಾರ ಬೆಂಬಲಕ್ಕೆ ನಿಲ್ಲಬೇಕೆಂದು ಅವರಲ್ಲಿ ಚರ್ಚೆ ಆರಂಭವಾಯ್ತು. ಕೆಲವರು ಕೌರವರ ಪರವಾಗಿದ್ದರು. ಮತ್ತೆ ಕೆಲವರು ಪಾಂಡವರ ಪರವಾಗಿದ್ದರು ಹಾಗೂ ಕೌರವರು ಎಸಗಿದ ತಪ್ಪಿಗೆ ಸಂಬಂಧಿಸಿದ ಚರ್ಚೆ ನಡೆಸಿದ್ದರು. ಆದರೆ ಪಾಂಡವವರೂ ಹಾಲಿನಿಂದ ತೊಳೆದವರಾಗಿದ್ದರೇ? ಯಾರಾದರೂ ತಮ್ಮ ಹೆಂಡತಿಯನ್ನು ಪಣಕ್ಕಿಡುತ್ತಾರೆಯೇ? ಅವರೂ ಅನೇಕ ತಪ್ಪುಗಳನ್ನು ಮಾಡಿದ್ದಾರೆ. ಅವರನ್ನು ಹೇಗೆ ಧರ್ಮದ ಹಾದಿಯಲ್ಲಿರುವವರು ಎಂದು ಕರೆಯುತ್ತಾರೆ? ಎಂಬಂತಹ ಚರ್ಚೆಗಳು ನಡೆಯುತ್ತಿರುವಾಗ, ಬಲರಾಮರು ನಾವು ಬಹಳಷ್ಟು ಚರ್ಚಿಸಿದ್ದೇವೆ. ನಾವು ಹೇಗಿದ್ದರೂ ಶ್ರೀಕೃಷ್ಣನು ಬೋಧಿಸುವ ಹಾಗೆ ನಡೆದುಕೊಳ್ಳುವವರಾಗಿರುವುದರಿಂದ ಅವನನ್ನೇ ಕೇಳೋಣವೆಂದು ಬಲರಾಮರು ಸೂಚಿಸಿದರು. ಅಂತೆಯೇ ಯಾದವರು ಶ್ರೀ ಕೃಷ್ಣನನ್ನು ಸಂದರ್ಶಿಸಿದಾಗ, ಶ್ರೀ ಕೃಷ್ಣ ಹೇಳಿದ್ದು ಎಲ್ಲರಿಗೂ ಒಪ್ಪಿತವಾಗುವ ವ್ಯಕ್ತಿ ಸಿಗುವುದು ಕಠಿಣವಾದ ಕೆಲಸ. ಆದ್ದರಿಂದ ಲಭ್ಯ ಆಯ್ಕೆಗಳಲ್ಲಿ ಸರ್ವಶ್ರ‍ೇಷ್ಠರನ್ನು ಬೆಂಬಲಿಸಬೇಕು ಎಂದು ಹೇಳಿದರು. ನಂತರದಲ್ಲಿ ಯಾದವರು ಪಾಂಡವರನ್ನು ಯುದ್ಧದಲ್ಲಿ ಬೆಂಬಲಿಸಿದರು.

ಅಂತೆಯೇ ನೊಟಾ ಬಳಸಿ ಮತದಾನ ಮಾಡಿದಾಗ ಲಭ್ಯ ಆಯ್ಕೆಗಳಲ್ಲಿ ಉತ್ತಮರಾದವರು ಸೋತು ಅಧಮರು ಆಯ್ಕೆಯಾಗಿ ಗೆದ್ದುಬಿಡುವ ಸಾಧ್ಯತೆಯೇ ಹೆಚ್ಚು. ಆದುದರಿಂದಲೇ ಚುನಾವಣೆಯಲ್ಲಿ ನೊಟಾ ಇದ್ದಾಗ್ಯೂ, ಅದನ್ನು ಬಳಸದೇ ಲಭ್ಯವಿರುವ ಉತ್ತಮರಾದವರನ್ನು ಬೆಂಬಲಿಸಿ ಆಯ್ಕೆ ಮಾಸಬೇಕು.

Leave a Reply

Your email address will not be published.

This site uses Akismet to reduce spam. Learn how your comment data is processed.