"ಹಿಂದು ಶಕ್ತಿ ಸಂಗಮ" ದ ಕಾರ್ಯಾಲಯ ಉದ್ಘಾಟನೆ

"ಹಿಂದು ಶಕ್ತಿ ಸಂಗಮ" ದ ಕಾರ್ಯಾಲಯ ಉದ್ಘಾಟನೆ

ಪ್ರಾಂತ ಶಿಬಿರದ ಸಿದ್ಧತೆಗಳು ತೀವ್ರಗತಿಯಲ್ಲಿ ನಡೆಯುತ್ತಿದ್ದು, ಈ ಎಲ್ಲ ಕಾರ್ಯಗಳಿಗೆ ದೇವತಾನುಗ್ರಹಕ್ಕಾಗಿ ಶ್ರೀ ಮಹಾಗಣಪತಿ ಪೂಜೆ ಹಾಗೂ ಕಾರ್ಯದ ವ್ಯವಸ್ಥಿತ ಸಂಚಲನಕ್ಕಾಗಿ ಕೇಂದ್ರೀಯ ಕಾರ್ಯಾಲಯದ ಉದ್ಘಾಟನಾ ಕಾರ್ಯವನ್ನು ಅನಂತ ಚತುರ್ದಶಿಯ ಪವಿತ್ರ ದಿನದಂದು ನೆರವೇರಿಸಲಾಯಿತು.

ಅಗ್ರ ಪೂಜಿತ ಶ್ರೀ ಮಹಾಗಣಪತಿಯ ಪೂಜೆಯ ಬಳಿಕ ಪ್ರಾಂತ ಕಾರ್ಯವಾಹ ಶ್ರೀ ಅರವಿಂದರಾವ್ ದೇಶಪಾಂಡೆಯವರು ಶಿಬಿರವನ್ನು ನಿರ್ವಿಘ್ನವಾಗಿ ನೆರವೇರಿಸುವಂತೆ ಭಗವಂತನಲ್ಲಿ ಪ್ರಾರ್ಥನೆಗೈದರು. ಅನಂತರ ಪ್ರಾಂತ ಕಾರ್ಯಾಲಯ ಕೇಶವ ಕುಂಜದಲ್ಲಿಯೇ ಹಿಂದು ಶಕ್ತಿ ಸಂಗಮದ ಕೇಂದ್ರೀಯ ಕಾರ್ಯಾಲಯಕ್ಕೆ ಚಾಲನೆ ನೀಡಲಾಯಿತು.

ಪ್ರಾಂತ ಪ್ರಚಾರಕ ಶ್ರೀ ಗೋಪಾಲಜಿ, ಸಹಪ್ರಾಂತ ಕಾರ್ಯವಾಹ ಶ್ರೀಧರ ನಾಡಗೀರ ಸೇರಿದಂತೆ ನೂರಾರು ಕಾರ್ಯಕರ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರೀಯ ಕಾರ್ಯಾಲಯದಲ್ಲಿ ಕಾರ್ಯ ನಿರ್ವಹಣೆಗೆ ಶ್ರೀ ಕರವೀರಪ್ಪ ಮಡಿವಾಳರ, ಶ್ರೀ ವೆಂಕಟೇಶ ಪೂಜಾರ ಹಾಗೂ ಶ್ರೀ ನಾರಾಯಣ ಬಳ್ಳಿ ಇವರು ಪ್ರತಿನಿತ್ಯ ಉಪಸ್ಥಿತರಿರುತ್ತಾರೆ

Leave a Reply

Your email address will not be published.

This site uses Akismet to reduce spam. Learn how your comment data is processed.