ಬೆಂಗಳೂರು: ವ್ಯಕ್ತಿಗತ ಹಾಗೂ ಸಾಂಘಿಕ ಛಲದಿಂದ ಭಾರತವನ್ನು ಬಲಿಷ್ಠಗೊಳಿಸಿ, ಈ ಮೂಲಕ ವಿಶ್ವಮಾನ್ಯತೆ ಗಳಿಸಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಸಹ ಪ್ರಚಾರಕ್ ಸುಧೀರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಚನ್ನೆನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ವರ್ಷದ ಸಂಘ ಶಿಕ್ಷವರ್ಗದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವ್ಯಕ್ತಿಗತ ಛಲದಿಂದ ಏನು ಬೇಕಾದರೂ ಸಾಧನೆ ಮಾಡಬಹುದು. ಆರುಣಿಮಾ ಎಂಬ ಹೆಣ್ಣುಮಗಳು ತನ್ನ ಕಾಲಿಲ್ಲದೇ ಗೌರಿಶಂಕರವನ್ನು ಏರಿದಳು. ಹಾಗೆ ನಾವೆಲ್ಲರೂ ತೀರ್ಮಾನ ಮಾಡಿದರೆ ಭಾರತವನ್ನು ಮತ್ತೆ ಬಲಿಷ್ಠವಾಗಿ ಎದ್ದು ನಿಲ್ಲಿಸಬಹುದು. ಜಗತ್ತಿನಲ್ಲಿ ವಿಶ್ವವಂದ್ಯ ದೇಶವನ್ನಾಗಿ ಮಾಡಬಹುದು. ಸಂಘ ಇಂತಹ ಉದಾತ್ತ ಧ್ಯೇಯವನ್ನು ಇಟ್ಟು ಕೊಂಡು ಕೆಲಸ ಮಾಡುತ್ತಿದೆ. ಇದಕ್ಕೆ ನಾವೆಲ್ಲರೂ ಭುಜಕ್ಕೆ ಭುಜ ಕೊಟ್ಟು ಕೆಲಸ ಮಾಡೋಣ ಎಂದರು.

BKR_1755

BKR_1791

BKR_1862

BKR_1871

BKR_1933

ಸಹಜೀವನ, ವ್ಯವಸ್ಥೆ, ಅನುಶಾಸನ, ಬೌದ್ಧಿಕ ಶಿಕ್ಷಣ ಇತ್ಯಾದಿ. ಹೊರಗಡೆ ಅನೇಕ ವ್ಯಕ್ತಿತ್ವ ವಿಕಸನ ಶಿಬಿರಗಳು ನಡೆಯುತ್ತವೆ. ಇಲ್ಲಿ ವ್ಯಕ್ತಿತ್ತ್ವ ವಿಕಸನ ಅಷ್ಟೇ ಗುರಿ ಅಲ್ಲ. ವ್ಯಕ್ತಿಗೆ ತನ್ನ ವ್ಯಕ್ತ್ತಿತ್ವವನ್ನು ರಾಷ್ಟ್ರ ಕಾರ್ಯಕ್ಕೆ ಸಮರ್ಪಿಸಿ ಬದುಕುವ ಶಿಕ್ಷಣ ನಮ್ಮ ಗುರಿ. ಒಂದು ದೇಶದ ಆಸ್ತಿ ಅದರ ಆರ್ಥಿಕ ಶಕ್ತಿ ಅಲ್ಲ, ಎತ್ತರದ ಕಟ್ಟಡಗಳಲ್ಲ. ಆದರೆ ಆ ದೇಶಕ್ಕೆ ಸಮರ್ಪಿತ ಮಕ್ಕಳು ಎಷ್ಟು ಜನ ಇದ್ದಾರೆ ಎಂಬುದು ಆ ದೇಶದ ನಿಜವಾದ ಆಸ್ತಿ. ದಯವಿಟ್ಟು ಮಕ್ಕಳಿಗೆ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಿ. ಆರ್‌ಎಸ್‌ಎಸ್ ಮಾಡುತ್ತಿರುವುದು ಈ ಕಾರ್ಯವನ್ನೇ. ಈ ದೇಶದ ಮಕ್ಕಳನ್ನು ಈ ದೇಶದ ಆಸ್ತಿಯನ್ನಾಗಿ ಮಾಡುತ್ತಿದೆ. ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ. ರಾಷ್ತ್ರ ಬದಲಾಗಬೇಕಾದರೆ ವ್ಯಕ್ತಿಗಳು ಬದಲಾಗಬೇಕು ಎಂದು ನಮ್ಮ ಸಂಸ್ಥಾಪಕರು ಹೇಳುತ್ತಿದ್ದರು. ಸ್ವಾಮಿ ವಿವೇಕಾನಂದರು ಅದನ್ನೇ ಕನಸ್ಸು ಕಂಡಿದ್ದರು. ಎಂದರು.

ನಾವು ಈ ದೇಶದ ಮಕ್ಕಳು ಹಾಗಾಗಿ ನಾವು ಈ ದೇಶಕ್ಕಾಗಿ ಬದುಕಬೇಕು ಎಂಬುದನ್ನು ನಾವ ಕಲಿಯುತ್ತಿದ್ದೇವೆ. ಸ್ವಾಮಿ ವಿವೇಕಾನಂಡರು ಮೈಸೂರು ಮಹಾರಜರಿಗೆ ಒಂದು ಪತ್ರವನ್ನು ಬರೆದರು. ಬೇರೆಯವರಿಗಾಗಿ ಬದುಕುವ ಬದುಕು ನಿಜವಾದ ಬದುಕು. ಉಳಿದವರು ಬದುಕ್ಕಿದ್ದರೂ ಸತ್ತಂತೆ. ಸಂಘದ ಸ್ವಯಂಸೇವಕರಿಗೆ ಕೊಡುತ್ತಿರುವ ಶಿಕ್ಷಣ. ತನ್ನೆಲ್ಲಾ ಶಕ್ತಿ ಸಾಮರ್ಥ್ಯ ಪ್ರತಿಭೆ ಎಲ್ಲವನ್ನೂ ತಾಯಿ ಭಾರತಿಗೆ ಸಮರ್ಪಿಸುವುದು ನಮ್ಮ ಧ್ಯೇಯ ಎಂದರು.

ನಮ್ಮ ರಾಷ್ಟ್ರದ ಜೀವನ ಹಿಂದುತ್ವದ ತಳಹದಿಯ ಮೇಲೆ ವಿಕಾಸವಾದದ್ದು. ಇದರಲ್ಲಿ ಗೊಂದಲವಿಲ್ಲ. ನಾವು ಹಿಂದುಗಳು ಎಂದು ಹೇಳಿಕೊಳ್ಳುವುದರಲ್ಲಿ ನಮಗೆ ಸಂಕೋಚವಿಲ್ಲ. ಹಿಂದುಗಳು ಎಷ್ಟು ಶ್ರೇಷ್ಠಜೀವನವನ್ನು ನಡೆಸಿದವರು, ಎಲ್ಲ ಮತದ ಜನರಿಗೂ ಆಶ್ರಯವನ್ನು ಕೊಟ್ಟಿದ್ದರು. ಅಷ್ಟೇ ಅಲ್ಲ ಅವರನ್ನು ಸ್ವೀಕರಿಸಿದ್ದಾರೆ. ಅವರನ್ನು ಪೋಷಿಸಿ ಪಾಲಿಸಿದ್ದಾರೆ. ನಮಗೆ ರಾಷ್ಟ್ರೀಯತೆಯ ಅತ್ಯಂತ ಸ್ಪಷ್ಟ ಕಲ್ಪನೆಯಿದೆ. ಇದರಲ್ಲಿ ಎಳ್ಳಷ್ಟೂ ಗೊಂದಲವಿಲ್ಲ. ನಮಗೆ ಅದರ ಬಗ್ಗೆ ಸ್ಪಷ್ಟವಾದ ನಿಲುವಿದೆ. ಇವತ್ತಿನ ರಾಜಕೀಯ ನಾಯಕರಿಗೆ ಅದರ ಬಗ್ಗೆ ಸ್ಪಷ್ಟವಾದ ನಿಲುವಿಲ್ಲ. ಅವರಿಗೆ ಹಿಂದು ರಾಷ್ಟ್ರ ಎಂದರೆ ಅದು ಕೋಮುವಾದ. ಅವರಿ ಅದು ಅಪಥ್ಯವಾಗುತ್ತದೆ. ಏಕೆಂದರೆ ಅವರಿಗೆ ರಾಷ್ತ್ರೀಯತೆ ಸ್ಪಷ್ತ ಕಲ್ಪನೆಯಿಲ್ಲ, ಅರ್ಥ ತಿಳಿದಿಲ್ಲ. ಹಿಂದು ಧರ್ಮ ಸಂಕುಚಿತವಾಗಲು ಸಾಧ್ಯವೇ ಇಲ್ಲ. ಎಲ್ಲ ದೇವರನ್ನೂ ಪೂಜಿಸಲು ಇದರಲ್ಲಿ ಸ್ವಾತಂತ್ರವಿದೆ ಎಂದರು.

ಭಾರತ ಜಗತ್ತಿನಲ್ಲಿ ತಲೆಯೆತ್ತಿನಿಲ್ಲಬೇಕು. ಹಿಂದುಗಳು ಜಾಗೃತವಾಗಬೇಕು. ಬಲಿಷ್ಠವಾಗಬೇಕು. ಅದರ ಆಧಾರದ ಮೇಲೆ ರಾಷ್ತ್ರದ ಪರಮವೈಭವ ಸಾಧಿಸಬೇಕು. ಜಗತ್ತಿನ ಕಲ್ಯಾಣವನ್ನೇ ಸಾಧುಸಬೇಕು. ಆದರೆ ಹಿಂದು ಸಮಾಜದ ಈಗಿನ ಸ್ಥಿತಿ ಹೇಗಿದೆ. ಇಲ್ಲಿ ಜಾತಿ ಬೇಧ, ಅಸ್ಪೃಷ್ಯತೆಯಿದೆ. ಸಂಘದಲ್ಲಿ ಇದಿಲ್ಲ,. ನಾವು ಇದನ್ನು ಹೊರಗೆ ಸೃಷ್ಟಿಸಬೇಕು. ಇರುವೆಗಳಿಗೆ ಸಕ್ಕರೆ ಹಾಕಿದ , ಪಕ್ಷಿಗಳಿಗೆ ಆಹಾರ ಕೊಟ್ಟ, ಪಶುಗಳಿಗೆ ಅನ್ನ ಹಾಕಿದ ಹಿಂದುಗಳು ತಮ್ಮ ಅಣ್ಣಾ ತಮ್ಮ ಹಿಂದುಗಳಾನ್ನೆ ಮನೆಯೊಳಗೆ ಸೇರಿಸಿವುದಿಲ್ಲ. ಈ ಸ್ಥಿತಿ ಬದಲಾಹಬೇಕು. ಆಗ ಮಾತ್ರ ಸಶಕ್ತ ಬಲಿಷ್ಠ ಹಿಂದು ಸಮಾಜ ಎದ್ದು ನಿಲ್ಲಬಲ್ಲದು. ಅದಕ್ಕೆ ಅಸ್ಪೃಷ್ಯತೆಗೆ ಇತಿಶ್ರೀ ಹಾಕಲೇ ಬೇಕು. ಸಂಘ ಅದನ್ನು ಹೊರಗೆ ಮಾಡುತ್ತಲೇ ಇದೆ.

ಉದಾ: ಜಪಾನ್ ಮೇಲೆ ಅಣುಬಾಂಬ್ ದಾಳಿಯಾದ ನಂತರ ಒಂದು ಸಂಸ್ಥೆಯ ೩೦ಜನ ಕುಳಿತು ಯೋಚಿಸಿದರು, ನಮ್ಮ ದೇಶವನ್ನು ಮತ್ತೆ ಜಗತ್ತಿನಲ್ಲಿ ಎಲ್ಲರ ಮುಂದೆ ನಿಲ್ಲಿಸಬೇಕು ಎಂದ್ ತೀರ್ಮಾನಿಸಿದರು. ಅದ್ಭುತ ವ್ಯಕ್ತಿಗಳಿದ್ದರು. ಅವರು ಅದನ್ನು ಸಾಧಿಸಿದರು ಇಂದು ಜಗತ್ತಿನ ಪ್ರಖ್ಯಾತ ಕಪೆನಿಯಾಗಿ ಅದು ಹೊರಹೊಮ್ಮಿದೆ. ಅದೇ ಸೋನಿ ಕಾರ್ಪೋರೇಷನ್. ಹೀಗೆ ಜಪಾನಿನ ಎಲ್ಲರೂ ಯೋಚಿಸಿದರು. ಜಪಾನೆ ಜಗತ್ತಿನಲ್ಲಿ ವಿಶ್ವವಂದ್ಯವಾಗಬೇಕು. ಎಂದು. ಜಪಾನೆ ಇಂದು ಒಂದು ಮುಂದುವರಿದ ದೇಶ. ಭಾರತವು ಮತ್ತೇ ಜಗದ್ಗುರುವಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಿವೃತ್ತ ಏರ್‌ಮಾರ್ಷಲ್ ಬಿ.ಕೆ. ಮುರಳಿ ಅವರು ಮಾತನಾಡಿ, ಜೀವನದಲ್ಲಿ ಶಿಸ್ತಿಲ್ಲದೇ ಏನೂ ಇಲ್ಲ. ಜೀವನದಲ್ಲಿ ಶಿಸ್ತಿನಿಂದ ನೀವೂ ಮುಂದುವರಿಯಬಹುದು, ದೇಶವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬೇಕು. ನೀವು ದೇಶಕ್ಕಾಗಿಯೇ ಕೆಲಸ ಮಾದಬೇಕು. ದೇಶ ನನಗೆ ಏನು ಕೊಟ್ಟಿದೆ ಎಂದು ಕೇಳಬೇಡಿ. ನಾನು ದೇಶಕ್ಕೆ ಎನು ಕೊಡಬಲ್ಲೆ ಎಂದನ್ನು ಯೋಚಿಸಬೇಕು.

೧೯೯೯ರ ಜುಲೈ ತಿಂಗಳು. ಹಿಮಾಲಯದ ಪರ್ವತದಲ್ಲಿ ನಮ್ಮ ೬ ಜನ ಸೈನಿಕರ ಮರಣವಾಗಿದೆ ಎಂದು ನಮಗೆ ಮಾಹಿತಿ ಬಂತು. ಅವರ ಮೃತ ಶರೀರವನ್ನು ವಾಪಸ್ ತರಬೇಕು. ಹೆಲಿಕಾಪ್ಟರ್‌ನಲ್ಲಿ ಅವುಗಳನ್ನು ತಲುಪಬೇಕು. ಅದು ತುಂಬಾ ಕಷ್ಟದ ಕೆಲಸ. ಅಲ್ಲಿಗೆ ಹೋದಾಗ ಅಲ್ಲೊಬ್ಬರು ಸುಬೇದಾರ್ ಬದುಕ್ಕಿದ್ದರು.
೫೩ ವರ್ಷವಯಸ್ಸಿನವರು. ಅವರು ಅಲ್ಲಿನ ಶವಗಳನ್ನು ತಂದರು. ಅವರು ನಂತರ ಮತ್ತೆ ಓಡಿದರು. ಎಲ್ಲಿಗೆ ಓಡಿದರೆಂದು ನಮಗೆ ಗೊತ್ತಾಗಲಿಲ್ಲ. ಅವರು ವಾಪಸ್ ಹೋದದ್ದೆಲ್ಲಿಗೆ ಎಂದು ಯೋಚಿಸಿತ್ತಿರುವಾಗಲೇ ಅವರು ತ್ರಿವರ್ಣಧ್ವಜವನ್ನು ಹಿಡಿದು ಓಡಿ ಬಂದರು. ನಾನು ತ್ರಿವರ್ಣ ಧ್ವಜವನ್ನು ಬಿಟ್ಟು ಬರಲಾಗುವುದಿಲ್ಲ. ಆದರೆ ಅವರು ವಾಪಸ್ ಬರುವಷ್ಟರಲ್ಲಿ ಅವರಿಗೆ ಗುಂಡು ತಗುಲಿ ಅವರು ಪ್ರಾಣವನ್ನು ಅರ್ಪಿಸಿದರು. ಈ ಕಥೆಯನ್ನು ನೆನಪಿಸಿಕೊಂಡರೆ ಸಾಕು, ಅವರು ನಮಗೆ ಮಾರ್ಗದರ್ಶನ ಮಾಡುತ್ತಾರೆ. ನೀವು ಇಲ್ಲಿ ಒಟ್ಟಿಗೆ ಶಿಕ್ಷಣವನ್ನು ಪಡೆದಿದ್ದೀರ. ಇದನ್ನೇ ನಾವು ಭ್ರಾತೃತ್ವ ಎಂದು ಕರೆದಿರುವುದು. ಇದು ಸೈನ್ಯದಲ್ಲೂ ಇದೆ. ಇದನ್ನು ನೀವು ಕಲಿಯಿರಿ. ಯಾವುದೇ ಕಾರಣಕ್ಕೂ ಇನ್ನೊಬ್ಬರಲ್ಲಿ ಭೇದವನ್ನು ಕಾಣಬೇಡಿ.

 

ರಾಷ್ತ್ರೀಯ ಸ್ವಯಂಸೇವಕ ಸಂಘದ ಶಿಸ್ತು ಮತ್ತು ಅನುಶಾಸನ ನನಗೆ ತುಂಬ ಅಚ್ಚುಮೆಚ್ಚಾಗಿದೆ. ನಾನು ಸಂಘದ ಕಾರ್ಯಕ್ರಮವನ್ನು ಇಷ್ಟು ಹತ್ತಿರದಿಂದ ನೋಡಲು ಭಗವಂತ ನನಗೆ ಕರುಣೆ ತೋರಿಸಿದ್ದು ನನಗೆ ಮಾಡಿರುವ ಅತ್ಯಂತ ದೊಡ್ಡ ಉಪಕಾರ. ನೀವೆಲ್ಲಿಂದಲೇ ಬಂದಿರಬಹುದು, ನೀವೆಲ್ಲಾ ಈ ರಾಷ್ಟ್ರದ, ಈ ಮಣ್ಣಿನ ಮಕ್ಕಳು. ನೀವೆಲ್ಲ ಹಿಂದುಗಳು. ಇದನ್ನು ನೆನಪಿನಲ್ಲಿಟುಕೊಳ್ಳಿ. ಹಿಂದು ರಾಷ್ತ್ರದ ಪುನರ್ನಿಮಾಣಕ್ಕೆ ನೀವು ಸಂಕಲ್ಪ ಮಾಡಿದ್ದೀರಿ.
ಅದನ್ನು ಸಾಧಿಸಲು ನೀವು ಸರ್ವಪ್ರಯತ್ನವನ್ನು ಮಾಡಿ ಎಂದರು.

 

 

 

Leave a Reply

Your email address will not be published.

This site uses Akismet to reduce spam. Learn how your comment data is processed.