Dr. Mohan Bhagwat Addresses the nation during #Covid19 Lockdown

ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಇಂದು ರಾಷ್ಟ್ರವನ್ನುದ್ದೇಶಿಸಿ ಆನ್ಲೈನ್ ಮೂಲಕ ಭಾಷಣ ಮಾಡಿದರು ಮಹಾರಾಷ್ಟ್ರದ ನಾಗಪುರದಿಂದ ಮಾತನಾಡಿದ ಅವರು ಕೊರೋನಾದಿಂದಾಗಿ ದೇಶ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾಡುತ್ತಿರುವ ಸೇವಾ ಕಾರ್ಯದ ಬಗ್ಗೆ ಮಾತನಾಡಿದರು. ಯೂಟ್ಯೂಬ್, ಫೇಸ್ಬುಕ್ ಮತ್ತು ಟ್ವಿಟರ್ ಮಾಧ್ಯಮಗಳಲ್ಲಿ ನೇರಪ್ರಸಾರ ಆದ ಅವರ ಭಾಷಣದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ಭಾಷಣವನ್ನು ಪೂರ್ಣ ಕೇಳಲು ಯೂಟ್ಯೂಬ್ ಲಿಂಕ್ ನೋಡಿರಿ.

  • ಸಂಘ ಮಾಡುತ್ತಿರುವ ಸೇವೆ ಪ್ರಚಾರಕ್ಕೋಸ್ಕರ ಅಲ್ಲ. ನಮ್ಮ ಸಮಾಜ, ನಮ್ಮ ದೇಶಗಳ ಬಗ್ಗೆ ಸಂಘದ ಸ್ವಯಂಸೇವಕರಿಗೆ ಇರುವ ಪ್ರೇಮದಿಂದ ಈ ಸೇವಾ ಕಾರ್ಯವನ್ನು ಮಾಡುತ್ತಿದ್ದಾರೆ.
  • ಜೂನ್ ವರೆಗಿನ ತನ್ನ ಎಲ್ಲ ಕಾರ್ಯಕ್ರಮಗಳನ್ನು ಆರೆಸ್ಸೆಸ್ ನಿಲ್ಲಿಸಿದೆ ರದ್ದುಗೊಳಿಸಿದೆ.
  • ಸರ್ಕಾರ ವಿಧಿಸಿರುವ ನಿರ್ಬಂಧಗಳನ್ನು ನಾಗರಿಕರಾದ ನಾವೆಲ್ಲರೂ ಪಾಲಿಸಲೇಬೇಕು. ಹಾಗೆಯೇ, ಇದು ನಮ್ಮದೇ ಸಮಾಜ. ಸಂಕಷ್ಟದ ಸಂದರ್ಭದಲ್ಲಿ ನಾವು ಸಮಾಜದ ಜೊತೆ ನಿಲ್ಲಬೇಕು.
  • ನಿಜವಾದ ದೇಶಭಕ್ತಿ ಎಂದರೆ ಕಾನೂನನ್ನು ಪಾಲಿಸುವುದು ಎಂಬ ಭಗಿನಿ ನಿವೇದಿತಾರ ಮಾತನ್ನು ನಾವು ಸದಾ ಮನಸ್ಸಿನಲ್ಲಿಟ್ಟುಕೊಳ್ಳಬೇಕು.
  • ಭವಿಷ್ಯದ ಭಾರತವನ್ನು ಕಟ್ಟಬೇಕಾದರೆ, ಶಿಸ್ತುಬದ್ಧವಾದ ಸಮಾಜ ಬಹಳ ಮುಖ್ಯ
  • ಕರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಯಾರಿಗೆ ಆದರೂ ಸೇವೆ ಮಾಡುವುದು ನಮ್ಮ ಧರ್ಮ. ಸೇವೆ ಮಾಡುವಾಗ ನಾವು ವ್ಯಕ್ತಿಗಳ ನಡುವೆ ಭೇದವನ್ನು ಎಣಿಸುವವರಲ್ಲ.
  • ಸೇವಾಕಾರ್ಯದಲ್ಲಿ ನಾವು ಯಾರೊಂದಿಗೂ ಸ್ಪರ್ಧಿಸಬೇಕಾದರೆ ಅರ್ಥವಿಲ್ಲ ಒಬ್ಬರಿಗೊಬ್ಬರು ಸಹಕಾರ ನೀಡುತ್ತಾ ಕೋರೋನಾವನ್ನು ತೊಲಗಿಸುವುದೊಂದೇ ನಮ್ಮ ಗುರಿ.
  • ಭಯ, ಕೋಪ, ಆಲಸ್ಯ ಹಾಗೂ ಅನಗತ್ಯವಾದ ವಿಳಂಬ ಇವುಗಳನ್ನು ತೊರೆದರೆ ಮಾತ್ರ ವ್ಯಕ್ತಿ ಯಶಸ್ಸು ಗಳಿಸಲು ಸಾಧ್ಯ. ಇದು ನಮ್ಮ ಸಮಾಜಕ್ಕೂ ಅನ್ವಯವಾಗುತ್ತದೆ. ಜವಾಬ್ದಾರಿಯುತ ನಾಗರಿಕರೆಲ್ಲ ಈ ಸಂದರ್ಭದಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡಬೇಕಾದ್ದು ಅತ್ಯಂತ ಅಗತ್ಯ.
  • ಇಂತಹ ಸಂದರ್ಭವನ್ನು ರಾಜಕೀಯಕ್ಕೋಸ್ಕರ ಬಳಸುವುದು ಖಂಡಿತ ಸಲ್ಲ.
  • ಕರೋನಾದಿಂದಾಗಿ ಇಂದು ನಾವು ಸ್ವಾವಲಂಬಿಗಳಾಬೇಕಾದ ಅಗತ್ಯದ ಅರಿವು ನಮಗಾಗುತ್ತಿದೆ. ಸ್ವದೇಶಿ ವಸ್ತುಗಳ ಬಳಕೆ ನಮ್ಮೆಲ್ಲರ ಜೀವನಶೈಲಿ ಆಗಬೇಕಾಗಿದೆ. ನಮ್ಮ ದೇಶದ ವಸ್ತುಗಳನ್ನು ನಾವು ಖರೀದಿಸೋಣ. ನಮ್ಮ ದೇಶದ ಉತ್ಪಾದಕ ಕಂಪನಿ ಗಳನ್ನು ನಾವು ಪ್ರೋತ್ಸಾಹಿಸೋಣ.
  • ನಮ್ಮ ಆರ್ಥಿಕತೆಯನ್ನು ಸ್ವಾವಲಂಬಿಯಾಗಿ ಮಾಡುವುದು ಕೇವಲ ಸರ್ಕಾರದ ಕೆಲಸ ಅಲ್ಲ. ಒಂದು ಸಮಾಜವಾಗಿ ಇದನ್ನು ಸಾಧ್ಯವಾಗಿಸುವ ಲ್ಲಿ ನಮ್ಮೆಲ್ಲರ ಜವಾಬ್ದಾರಿ ಇದೆ. ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವಲ್ಲಿ ಕಂಪೆನಿಗಳು ಹಾಗೂ ಅಲ್ಲಿನ ಉದ್ಯೋಗಿಗಳ ಪಾತ್ರ ಪ್ರಮುಖವಾದದ್ದು.
  • ಮುಂದಿನ ದಿನಗಳಲ್ಲಿ ಸ್ವದೇಶಿ ಮಾತ್ರ ನಮ್ಮನ್ನು ಯಶಸ್ವಿಗೊಳಿಸಬಲ್ಲದು. ಇದರ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಯೋಚಿಸಬೇಕಾದ ಅಗತ್ಯವಿದೆ.
  • ಇಂದು ನಮಗೊದಗಿರುವ ಸಂಕಷ್ಟವನ್ನು ನಾವು ಒಂದು ಅವಕಾಶ ಎಂಬಂತೆ ನೋಡಬೇಕಾಗಿದೆ. ಪ್ರಪಂಚವನ್ನು ಈ ಸಂಕಷ್ಟದಿಂದ ಪಾರು ಮಾಡುವ ಕೆಲಸದಲ್ಲಿ ನಾವು ಮುಂಚೂಣಿಯಲ್ಲಿ ನಿಲ್ಲಬೇಕಾಗಿದೆ. ಸ್ವದೇಶಿ, ಶುದ್ಧ ಪರಿಸರ ಮತ್ತು ಸಾವಯವ ಕೃಷಿ ಇವುಗಳನ್ನು ಜಾರಿಗೆ ತರುವಲ್ಲಿ ಕೇವಲ ಸರ್ಕಾರ ಮಾತ್ರವಲ್ಲ, ಸಮಾಜ ಕೂಡ ಹೆಚ್ಚಿನ ಶ್ರಮವನ್ನು ಹಾಕಬೇಕಾಗಿದೆ.

  • ಲಾಕ್ಡೌನ್ ನಿಂದಾಗಿ ಕುಟುಂಬದ ನಡುವೆ ಒಳ್ಳೆಯ ಸಂವಾದ, ಬಾಂಧವ್ಯ ಬೆಳೆಯುತ್ತಿದೆ. ಸಂಬಂಧಗಳು ಗಟ್ಟಿಯಾಗುತ್ತಿವೆ. ಒಂದು ಕುಟುಂಬಕ್ಕೆ ಇದು ಒಂದು ಬಹಳ ಒಳ್ಳೆಯ ವಿಷಯ.
  • ಹಾಗೆಯೇ ಪರಿಸರ ಮಾಲಿನ್ಯ ಕೂಡ ಬಹಳ ಕಡಿಮೆಯಾಗಿದೆ. ಮುಂದೆಯೂ ಕೂಡ ಪರಿಸರದ ಬಗ್ಗೆ ನಾವು ಯಾವಾಗಲೂ ಯೋಚಿಸಬೇಕಾದ ಅಗತ್ಯವಿದೆ. ನಮ್ಮ ಅಗತ್ಯಗಳು ಕಟಿಮೆಯಾದಾಗ ಪರಿಸರದ ಮಾಲಿನ್ಯ ಕಡಿಮೆಯಾಗುತ್ತದೆ. ಮಾಲಿನ್ಯವನ್ನು ಕಡಿಮೆಗೊಳಿಸುವ ಬಗ್ಗೆಯೂ ಸಂಶೋಧನೆಗಳು ನಡೆಯಬೇಕಾದ್ದು ಅತ್ಯಂತ ಅಗತ್ಯ,
  • ನಮ್ಮ ಜೀವನ ಮೌಲ್ಯಗಳ ಆಧಾರದ ಮೇಲೆ, ರಾಷ್ಟ್ರದ ಪುನರ್ ನಿರ್ಮಾಣ ಆಗಬೇಕಾದ್ದು ಇಂದಿನ ಅಗತ್ಯ. ಸಮಾಜದಲ್ಲಿ ಸಾಮರಸ್ಯ, ಸೌಹಾರ್ದತೆಗಳನ್ನು ತರುವ ಜವಾಬ್ದಾರಿಯೂ ಕೂಡ ನಮ್ಮ ಮೇಲಿದೆ

Leave a Reply

Your email address will not be published.

This site uses Akismet to reduce spam. Learn how your comment data is processed.