January 17, 2015 Shivamogga: Rashtreeya Swayamsevak Sangh, Shivamogga district unit to organise mega youth gathering ‘PARIVARTANA SAMAVESH’ on February 01, 2015 at Shivamogga. RSS Akhil Bharatiya Sah Vyavastha Pramukh Mangesh Bhende to address the gathering. Nearly 15,000 select youth swayamsevaks of Shivamogga district expected to participate in this youth gathering at N.E.S Grounds Shivamogga. During the event, from regions of the city, 4 simultaneous route-march to be held, in which swayamsevaks will parade in major streets of Shivamogga.
“Preparations for the conclave are underway”, said RSS Pranth Bouddhik Pramukh Pattabhiram addressed a press conference at ‘Madhukrupa’, local RSS headquarters here.
ರಾಷ್ಟ್ರೀಯ ಸ್ವಯಂಸೇವಕ ಸಂಘ, ಶಿವಮೊಗ್ಗ ಜಿಲ್ಲೆ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿವಮೊಗ್ಗ ಜಿಲ್ಲೆಯ ತರುಣರ ‘ಪರಿವರ್ತನ ಸಮಾವೇಶ’ದ ನಿಮಿತ್ತ ನಡೆಸಿದ ಪತ್ರಿಕಾ ಗೋಷ್ಠಿಯ ವಿವರಗಳು
ಒಂದು ಸಂತೋಷದ ಸಂದರ್ಭದಲ್ಲಿ ಈ ಗೋಷ್ಠಿ ನಡೆಸುತ್ತಿರುವೆವು. ರಾಷ್ಟ್ರೀಯ ಸ್ವಯಂಸೇವಕ ಸಂಘವು ೧೯೪೦ರ ದಶಕದಲ್ಲಿ ಶಿವಮೊಗ್ಗ ಜಿಲ್ಲೆಗೆ ಪಾದಾರ್ಪಣಗೊಂಡು, ಸಂಘ ಮತ್ತು ದೇಶಕ್ಕಾಗಿ ತಮ್ಮ ಜೀವನವನ್ನೇ ಸಂಪೂರ್ಣ ಸಮರ್ಪಿಸಿದ ನಮ್ಮ ಅನೇಕ ಹಿರಿಯರ, ಪ್ರಚಾರಕರ ಮತ್ತು ಹಲವಾರು ಸ್ಥಳೀಯ ಕಾರ್ಯಕರ್ತರ ನಿರಂತರ ಪರಿಶ್ರಮದಿಂದ ಜಿಲ್ಲೆಯಲ್ಲಿ ವಿಸ್ತರಿಸುತ್ತಲೇ ಇದೆ. ಕಾಲಕಾಲಕ್ಕೆ ಸಂಘಶಕ್ತಿಯ ದರ್ಶನದಿಂದ ಸ್ಫೂರ್ತಿ ಮತ್ತು ಕಾರ್ಯಕ್ಕೆ ವೇಗ ಪಡೆದುಕೊಳ್ಳುವಂತೆ, ಹಿಂದೆ ಸಹ ಹಲವು ವರ್ಷಗಳಿಗೊಮ್ಮೆ ವಿವಿಧ ಸಂದರ್ಭ ನಿಮಿತ್ತ, ಸಮಾವೇಶಗಳನ್ನು, ಸಂಚಲನಗಳನ್ನು ಮಾಡಿದ್ದೇವೆ.
ಈ ಬಾರಿ, ಕರ್ನಾಟಕಕ್ಕೆ ಸಂಘದ ಗಂಗೆಯನ್ನು ಹರಿಸಿದ, ಸ್ವ|| ಯಾದವರಾವ್ ಜೋಷಿಯವರ ಜನ್ಮ ಶತಾಬ್ದಿಯ ನಿಮಿತ್ತವಾಗಿ ಮತ್ತು ಕಾರ್ಯಕ್ಕೆ ರಭಸವನ್ನು ತಂದು ಎಲ್ಲ ಕಡೆಗಳಲ್ಲಿ ಸಂಘದ ಕಾರ್ಯದ ವಿಸ್ತಾರ ಮಾಡಬೇಕೆಂದು ಉದ್ದೇಶಿಸಿ, ಜಿಲ್ಲೆಯ ಕಾರ್ಯಕರ್ತರು – ’ಪರಿವರ್ತನ’ ಜಿಲ್ಲಾ ತರುಣ ಸಮಾವೇಶವನ್ನು ಮಾಡಬೇಕೆಂದು ಹಿರಿಯರ ಅಪೇಕ್ಷೆಯಂತೆ ತೀರ್ಮಾನಿಸಿದ್ದಾರೆ. ಈ ತರುಣ ಸಮಾವೇಶವು, ೨೦೧೫ರ ಫೆಬ್ರುವರಿ ೧ ರಂದು, ಶಿವಮೊಗ್ಗದಲ್ಲಿ ನಡೆಯಲಿದೆ. ಅಂದು ಶಿವಮೊಗ್ಗ, ತೀರ್ಥಹಳ್ಳಿ ಮತ್ತು ಭದ್ರಾವತಿ ತಾಲೂಕಿನ ಎಲ್ಲ ಕಡೆಗಳಿಂದ ತರುಣ ಸ್ವಯಂಸೇವಕರು ಶಿವಮೊಗ್ಗಕ್ಕೆ ಬಂದು ಸಂಘದ ಗಣವೇಷದಲ್ಲಿ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಪಥ ಸಂಚಲನ ಮಾಡಲಿದ್ದಾರೆ. ಶಿವಮೊಗ್ಗದ ೪ ಕಡೆಗಳಿಂದ ಗಣವೇಷಧಾರಿ ಸ್ವಯಂಸೇವಕರ ಆಕರ್ಷಕ ಪಥ ಸಂಚಲನ ಘೋಷ್ ವಾದ್ಯಗಳೊಂದಿಗೆ ಹೊರಡಲಿದೆ. ಶಿವಮೊಗ್ಗದ ಬಸ್ ನಿಲ್ದಾಣದ ಎದುರಿನಿಂದ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಎದುರಿನಿಂದ, ವಿನೋಬನಗರದ ವಿಕಾಸ ಶಾಲೆಯ ಬಳಿಯಿಂದ ಮತ್ತು ರವೀಂದ್ರನಗರದ ಗಣಪತಿ ದೇವಸ್ಥಾನದ ಬಳಿಯಿಂದ ಈ ಸಂಚಲನಗಳು ಹೊರಟು ಗೋಪಿ ವೃತ್ತದ ಬಳಿ ಸಂಗಮವಾಗಿ ಬಾಲರಾಜ ಅರಸ್ ರಸ್ತೆ, ಮಹಾವೀರ ವೃತ್ತದ ಮೂಲಕ ಸಾಗಿ ಕುವೆಂಪು ರಂಗಮಂದಿರದ ಹಿಂಭಾಗದ ಎನ್.ಇ.ಎಸ್ ಮೈದಾನದಲ್ಲಿ ಮುಕ್ತಾಯಗೊಳ್ಳುತ್ತದೆ. ಅಲ್ಲಿ ಸ್ವಯಂಸೇವಕರನ್ನುದ್ದೇಶಿಸಿ ಸಂಘದ ಹಿರಿಯ ಪ್ರಚಾರಕರು ನಮ್ಮ ಅಖಿಲ ಭಾರತೀಯ ಸಹ ವ್ಯವಸ್ಥಾ ಪ್ರಮುಖ್ ಮತ್ತು ದಕ್ಷಿಣ ಮಧ್ಯ ಕ್ಷೇತ್ರೀಯ ಪ್ರಚಾರಕರಾದಂತಹ ಮಾನನೀಯ ಶ್ರೀ ಮಂಗೇಶ ಭೇಂಡೆಯವರು ಭಾಷಣ ಮಾಡಲಿದ್ದಾರೆ. ನಮ್ಮ ಸಂಘದ ಅಖಿಲ ಭಾರತ, ಕ್ಷೇತ್ರ, ಪ್ರಾಂತ ಮಟ್ಟದ ಅನೇಕ ಹಿರಿಯ ಕಾರ್ಯಕರ್ತರು, ಸಮಾಜದ ಬೇರೆ ಬೇರೆ ಕ್ಷೇತ್ರದ ಅನೇಕ ಗಣ್ಯರು, ಸ್ಥಳೀಯ ಹಿರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವ ನಮ್ಮ ಸಂಕಲ್ಪಕ್ಕೆ ಈ ಕಾರ್ಯಕ್ರಮ ಇನ್ನಷ್ಟು ಶಕ್ತಿ ನೀಡಲಿದೆ ಎಂಬುದು ನಮ್ಮ ವಿಶ್ವಾಸ.
ಇಂತಿ, ಸದಾ ನಿಮ್ಮವನೇ,
ಬೆನಕಭಟ್ಟ
ಜಿಲ್ಲಾ ಸಂಘಚಾಲಕ
ಶಿವಮೊಗ್ಗ ಜಿಲ್ಲೆ
ದೂರವಾಣಿ:- ೦೮೧೮೨-೨೭೧೨೦೦