Dr Pravin Togadia addressing HINDU SAMAVESH at Chitradurga in Karnataka on Janauary 17, 2015 Saturday

ಚಿತ್ರದುರ್ಗ January 17 : ಬನ್ನಿ ಮುಸಲ್ಮಾನ ಬಂಧುಗಳೇ… ನಿಮ್ಮನ್ನು ನಾನು ಅಪ್ಪಿಕೊಳ್ಳಲು ಸಿದ್ಧನಿದ್ದೇನೆ… ಮರು ಮತಾಂತರಕ್ಕೆ ನಾವು ಸಿದ್ಧರಿದ್ದೇವೆ. ಯಾವುದೋ ಒತ್ತಾಯಕ್ಕೆ, ಬಲಾತ್ಕಾರಕ್ಕೆ ಮುಸಲ್ಮಾನರಾಗಿ ಮತಾಂತರಗೊಂಡ ಹಿಂದೂಗಳು ಮಾತೃಧರ್ಮಕ್ಕೆ ಹಿಂತಿರುಗಿ ಬನ್ನಿ…

–  ಹೀಗೆಂದು ಕರೆ ನೀಡಿದವರು ವಿಶ್ವ ಹಿಂದು ಪರಿಷತ್ತಿನ ಅಖಿಲ ಭಾರತೀಯ ಕಾರ್ಯಾಧ್ಯಕ್ಷ ಪ್ರವೀಣಭಾಯಿ ತೊಗಾಡಿಯ.

Dr Pravin Togadia addressing HINDU SAMAVESH at Chitradurga in Karnataka on Janauary 17, 2015 Saturday
Dr Pravin Togadia addressing HINDU SAMAVESH at Chitradurga in Karnataka on Janauary 17, 2015 Saturday

ವಿಶ್ವ ಹಿಂದೂ ಪರಿಷತ್ ಸ್ವರ್ಣ ಜಯಂತಿ ಮಹೋತ್ಸವದ ಅಂಗವಾಗಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಳೆದ 2 ಸಾವಿರ ವರ್ಷಗಳ ಕೆಳಗೆ ಭರತ ಖಂಡದಲ್ಲಿ ಹಿಂದೂಗಳೇ ಇದ್ದರು. ಬಾಂಗ್ಲಾದೇಶ, ಪಾಕಿಸ್ಥಾನ ಸೇರಿದಂತೆ ಎಲ್ಲೆಡೆ ಹಿಂದೂಗಳೇ ಇದ್ದರು. ಕೃಷಿ, ವ್ಯಾಪಾರ, ರಾಜಕೀಯ ಸೇರಿದಂತೆ ಎಲ್ಲವೂ ಹಿಂದೂಗಳ ಕೈಯಲ್ಲೇ ಇತ್ತು. ವಿದೇಶಗಳಿಂದ ಬಂದ ಅನ್ಯ ಧರ್ಮೀಯರು ಹಿಂದೂಗಳ ಮೇಳೆ ದಬ್ಬಾಳಿಕೆ ನಡೆಸಿ ಅವರನ್ನು ಮತಾಂತರ ಮಾಡಿದರು. ಹಾಗಾಗಿ ಈಗ ಎಲ್ಲ ಕಡೆ ಮುಸಲ್ಮಾನರು ಹರಡಿಕೊಂಡಿದ್ದಾರೆ ಎಂದರು.

 ಒಂದು ಕಾಲದಲ್ಲಿ ಹಿಂದೂ ರಾಷ್ಟ್ರ ಸಂಪದ್ಬರಿತವಾದ ರಾಷ್ಟ್ರವಾಗಿತ್ತು. ಆದರೆ ಔರಂಗಜೇಬ್, ಮಲ್ಲಿಕಾಪೂರ್, ನಿಜಮರು ಸೇರಿದಂತೆ ಅನೇಕ ಅನ್ಯ ಧರ್ಮೀಯರು ಭಾರತದ ಮೇಲೆ ದಾಳಿ ನಡೆಸಿ ಇಲ್ಲಿನ ಸಂಪತ್ತನ್ನು ಕೊಳ್ಳೆ ಹೊಡೆದರು. ಬಲವಂತವಾಗಿ ಅನೇಕ ಹಿಂದೂಗಳನ್ನು ಮತಾಂತರ ಮಾಡಲಾಯಿತು. ಮರು ಮತಾಂತರಕ್ಕೆ ನಾವು ಸಿದ್ಧರಿದ್ದೇವೆ. ಬಲಾತ್ಕಾರದಿಂದ ಮುಸಲ್ಮಾನರಾಗಿ ಮತಾಂತರಗೊಂಡ ಹಿಂದೂಗಳು ಮಾತೃಧರ್ಮಕ್ಕೆ ಹಿಂತಿರುಗಿ ಬನ್ನಿ ಎಂದು ಆಹ್ವಾನವಿತ್ತರು.

ಹಿಂದೂ ಕುಟುಂಬಕ್ಕೆ ಸುರಕ್ಷತೆ ಬೇಕು

ದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಲವ್ ಜಿಹಾದ್ ಹೆಸರಿನಲ್ಲಿ ಹಿಂದೂ ಹೆಣ್ಣು ಮಕ್ಕಳನ್ನು ಅಪಹರಿಸಿ ಮತಾಂತರ ಮಾಡಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ಹಿಂದೂ ಪ್ರಜೆಗೂ ಆತನ ಕುಟುಂಬಕ್ಕೆ ಸುರಕ್ಷತೆ ಬೇಕು. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಮುಂದಾಗಿದೆ. ಎಲ್ಲ ಹಿಂದೂಗಳಿಗೆ ಸುರಕ್ಷತೆ ಹಾಗೂ ಸಮೃದ್ಧಿಯ ಜೀವನ ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಶ್ರಮ ವಹಿಸಲಾಗುತ್ತಿದೆ ಎಂದರು.

ಕರ್ನಾಟಕದ ಮುಖ್ಯಮಂತ್ರಿ ಔರಂಗಜೇಬ್, ಹೈದರಾಲಿಯಂತೆ !!

ಚಿತ್ರದುರ್ಗ : ಕರ್ನಾಟಕದ ಮುಖ್ಯಮಂತ್ರಿ ಅಲ್ಪಸಂಖ್ಯಾತರನ್ನು ಓಲೈಸುವ ಉದ್ದೇಶದಿಂದ ಔರಂಗಜೇಬ್, ಹೈದರಾಲಿಯಂತೆ ಆಡಳಿತ ನಡೆಸಲು ಮುಂದಾಗಿದ್ದಾರೆ ಎಂದು ವಿಶ್ವ ಹಿಂದು ಪರಿಷತ್ತಿನ ಅಖಿಲ ಭಾರತೀಯ ಕಾರ್ಯಾಧ್ಯಕ್ಷ ಪ್ರವೀಣ ಭಾಯಿ ತೊಗಾಡಿಯ ಗಂಭೀರ ಆರೋಪ ಮಾಡಿದರು. ಜಾತಿ ಆಧಾರಿತ ಜನಗಣತಿ ಮಾಡುವ ಮೂಲಕ ರಾಜ್ಯ ಸರ್ಕಾರ ಜಾತೀಯ ವಿಷ ಬೀಜ ಬಿತ್ತಲು ಮುಂದಾಗಿದೆ. ಮತಾಂತರ ಹೊಂದಿದ ಜನರನ್ನು ಓಲೈಸುವ ದೃಷ್ಠಿಯಿಂದ ಬ್ರಾಹ್ಮಣ ಕ್ರಿಶ್ಚಿಯನ್, ಕುರುಬ ಕ್ರಿಶ್ಚಿಯನ್ ಎಂಬಿತ್ಯಾದಿ ಜಾತಿ ಕಾಲಂಗಳನ್ನು ಸೃಷ್ಠಿಸಲಾಗಿದೆ. ಕ್ರೈಸ್ತರಲ್ಲೂ ಬ್ರಾಹ್ಮಣ, ಕುರುಬರು ಇದ್ದಲ್ಲಿ ಅದನ್ನು ಚರ್ಚ್‌ಗಳು ಬಹಿರಂಗವಾಗಿ ಒಪ್ಪಿಕೊಳ್ಳಲಿ ಎಂದು ಒತ್ತಾಯಿಸಿದರು.

ಪಾಕಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ಅಲ್ಲಿನ ಅಧ್ಯಕ್ಷರು ಮುಸಲ್ಮಾನರ ಪರವಾಗಿ ಕೆಲಸ ಮಾಡುತ್ತಾರೆ. ಆದರೆ ಕರ್ನಾಟಕದ ಮುಖ್ಯಮಂತ್ರಿ ಮಾತ್ರ ಹಿಂದೂಗಳ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಮಠಮಾನ್ಯಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳಲು ನೋಡುತ್ತಿದ್ದಾರೆ. ನಿಮಗೆ ತಾಕತ್ತಿದ್ದಲ್ಲಿ ಮುಸ್ಲಿಂ ಸಮುದಾಯದ ಮಸೀದಿಗಳು, ಕ್ರೈಸ್ತ ಸಮುದಾಯದ ಚರ್ಚ್‌ಗಳನ್ನು ವಶಪಡಿಸಿಕೊಳ್ಳಿ. ತಪ್ಪಿದಲ್ಲಿ ದೇಶದಲ್ಲಿ ಎಲ್ಲ ಸಾಧು ಸಂತರನ್ನು ಕರ್ನಾಟಕಕ್ಕೆ ಕರೆತಂದು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸವಾಲು ಹಾಕಿದರು.

HINDHU (3)

ಪಟ್ಟಭದ್ರ ಹಿತಾಸಕ್ತಿಗಳಿಂದ ಸಾಮರಸ್ಯ ಪದದ ದುರ್ಬಳಕೆ: ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ

ಚಿತ್ರದುರ್ಗ: ಸಾಮರಸ್ಯ ಎಂಬ ಪದವನ್ನು ಕೆಲವರು ಗುತ್ತಿಗೆ ಹಿಡಿದುಕೊಂಡವರಂತೆ ಮಾತನಾಡುತ್ತಿದ್ದು, ಇದಕ್ಕೆ ತಿಲಾಂಜಲಿ ಇಡುವ ಕೆಲಸವಾಗಬೇಕೆಂದು ಮಾದಾರ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕರೆ ನೀಡಿದರು.

 ವಿಶ್ವ ಹಿಂದೂ ಪರಿಷತ್ ಸ್ವರ್ಣ ಜಯಂತಿ ಮಹೋತ್ಸವದ ಅಂಗವಾಗಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಭಾಗವಹಿಸಿ ಸಾಮರಸ್ಯ ಮತ್ತು ಗೋರಕ್ಷಣೆ ವಿಷಯ ಕುರಿತು ಮಾತನಾಡಿದ ಅವರು, ಇಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಎಲ್ಲ ವರ್ಗದವರು ಭಾಗವಹಿಸಿದ್ದೀರಿ. ಇಲ್ಲಿ ಯಾವುದೇ ಜತಿ ಬೇಧವಿಲ್ಲ. ನಾವೆಲ್ಲಾ ಹಿಂದೂ ನಾವೆಲ್ಲಾ ಒಂದು ಎಂಬ ಮನೋಭಾವದಿಂದ ಕುಳಿತಿದ್ದೀರಿ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಸಾಮರಸ್ಯದ ಬಗ್ಗೆ ಮಾತನಾಡುತ್ತಾ  ಜನರಲ್ಲಿ ಗೊಂದಲ ಮೂಡಿಸುತ್ತಿವೆ ಎಂದು ಮಾರ್ಮಿಕವಾಗಿ ನುಡಿದರು.

ಗೋ ರಕ್ಷಣೆಗೆ ಮುಂದಾಗಿ

 ಆಳುವ ಸರ್ಕಾರಗಳು ಜತಿ ಆಧಾರಿತ ಜನಗಣತಿ ಮಾಡುವ ಮೂಲಕ ಮತ್ತಷ್ಟು ಜಾತಿ, ಬೇಧ ಬಿತ್ತಲು ಮುಂದಾಗಿವೆ. ಏಕತೆ, ಭಾವೈಕ್ಯತೆ, ಭಾತೃತ್ವದಿಂದ ಬದುಕುತ್ತಿರುವ ನಮ್ಮ ದೇಶವನ್ನು ಯಾವ ಶಕ್ತಿಯೂ ಏನೂ ಮಾಡಲಾರವು ಎಂದ ಅವರು, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದ ತಾಪಮಾನ ಹೆಚ್ಚಾಗುತ್ತಿದೆ. ಇದಕ್ಕೆ ಕಾರಣ ನಮ್ಮಲ್ಲಿನ ದನಕರುಗಳ ಸಂಖ್ಯೆ ಕಡಿಮೆಯಾಗುತ್ತಿರುವುದು. ಈ ಹಿನ್ನೆಲೆಯಲ್ಲಿ ಗೋ ಸಂಪತ್ತನ್ನು ರಕ್ಷಿಸಲು ಪ್ರತಿಯೊಬ್ಬರೂ ಮುಂದಾಗಬೇಕೆಂದರು.

ಮತಾಂತರ ಗಂಡಾಂತರವಾಗಿ ಪರಿಣಮಿಸಿದೆ

 ಬಂಜರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮತಾಂತರ ವಿಷಯ ಕುರಿತು ಮಾತನಾಡಿ, ಇಂದಿನ ದಿನಗಳಲ್ಲಿ ಮತಾಂತರ ಗಂಡಾಂತರವಾಗಿ ಪರಿಣಮಿಸಿದ್ದು, ಇದರಿಂದ ರಾಷ್ಟ್ರಾಂತರವಾಗುವ ಆತಂಕ ಕಾಡುತ್ತಿದೆ. ಜಗತ್ತಿಗೆ ಧಾರ್ಮಿಕತೆ ಸಾರಿದ ದೇಶ ನಮ್ಮದು. ಶಾಂತಿ ಸೌಹಾರ್ದತೆಗೆ ಹೆಸರಾಗಿರುವ ಭಾರತೀಯರ ಸ್ವಾಭಿಮಾನಕ್ಕೆ ಧಕ್ಕೆ ಬಂದಲ್ಲಿ ಕ್ರಾಂತಿ ಮಂತ್ರ ಹಾಡುವುದು ತಿಳಿದಿದೆ. ಭಯೋತ್ಪಾದನೆ ಮೂಲಕ ಭಾರತೀಯರನ್ನು ಕೆಣಕುವುದು ಸರಿಯಲ್ಲ. ಇದಕ್ಕೆ ತಕ್ಕ ಪ್ರತಿಫಲ ಪಡೆಯಬೇಕಾದೀತು ಎಂದು ಎಚ್ಚರಿಸಿದರು.

 ಮಹಂತೇಶ ಬಸವಲಿಂಗ ಸ್ವಾಮೀಜಿ ಅಸ್ಪಶ್ಯತೆ ಕುರಿತು ಮಾತನಾಡಿದರು. ವಿಶ್ವ ಹಿಂದು ಪರಿಷತ್ತಿನ ಅಖಿಲ ಭಾರತೀಯ ಕಾರ್ಯಾಧ್ಯಕ್ಷ ಪ್ರವೀಣಭಾಯಿ ತೊಗಾಡಿಯ, ವಿಶ್ವ ಹಿಂದೂ ಪರಿಷತ್ ಪ್ರಾಂತ ಸಮಿತಿ ಸದಸ್ಯ ಜ.ರಾ.ರಾಮಮೂರ್ತಿ, ಬಿ.ಎನ್. ಮೂರ್ತಿ, ಆಚರಣೆ ಸಮಿತಿ ಅಧ್ಯಕ್ಷ ದ್ಯಾಮಣ್ಣ, ಉದ್ಯಮಿ ಸುರೇಶ್‌ಬಾಬು ಮತ್ತಿತರರು ಉಪಸ್ಥಿತರಿದ್ದರು.  

ಹಿಂದು ಎಂದು ಹೇಳಿಕೊಳ್ಳಲು ಹಿಂಜರಿಕೆಯೇಕೆ ?

ಅವಿಭಕ್ತ ಕುಟುಂಬ ವಿಷಯ ಕುರಿತು ಮಾತನಾಡಿ, ಹಿಂದೂ ದೇಶದಲ್ಲಿ ಕುಳಿತುಕೊಂಡು ಹಿಂದೂಗಳೇ ಒಂದಾಗಿ ಎಂದು ಹೇಳುವುದು ವಿಷಾದದ ಸಂಗತಿ. ಇಂದು ವಿದ್ಯಾವಂತರೇ ಲವ್ ಜಿಹಾದ್, ಕಿಸ್ ಡೇಯಂಥ ಅನಿಷ್ಟ  ಪದ್ಧತಿಗಳಿಗೆ ಬಲಿಯಾಗುತ್ತಿದ್ದು, ವ್ಯವಸ್ಥೆ ಹಾಳಾಗಿದೆ. ಓದಿ ನೌಕರಿ ಪಡೆದವರೇ ಮನೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಅವಿಭಕ್ತ ಕುಟುಂಬಗಳು ಕಾಣೆಯಾಗಿವೆ. ಇನ್ನು ಕೆಲವು ಕಿಡಿಗೇಡಿಗಳು ಹಿಂದೂ ಧರ್ಮದಲ್ಲಿ ಹುಟ್ಟಿ ಹಿಂದೂಗಳೆಂದು ಹೇಳಿಕೊಳ್ಳಲು ಹಿಂಜರಿಯುತ್ತಿವೆ.- ಶ್ರೀ ಶಾಂತವೀರ ಸ್ವಾಮೀಜಿ, ಕುಂಚಿಟಿಗರ ಪೀಠ.

HINDHU (2)

ಚಿತ್ರದುರ್ಗ ನಗರದಲ್ಲೆಲ್ಲಾ ಜಯಘೋಷ…

ಚಿತ್ರದುರ್ಗ : ಜೈರಾಮ್ ಶ್ರೀರಾಮ್… ಅಯೋಧ್ಯಾಪತಿ ಶ್ರೀರಾಮಚಂದ್ರ ಮಹಾರಾಜ್ ಕೀ ಜೈ… ಪಣವಿದು ರಾಮನ ಮೇಲಾಣೆ ಮಂದಿರ ಕಟ್ಟೇ ಕಟ್ಟುವೆವು… ನಾವೆಲ್ಲ ಹಿಂದೂ ನಾವೆಲ್ಲ ಒಂದು… ರಕ್ತದ ಕಣ ಕಣ ಕೂಗುತಿದೆ, ಹಿಂದೂ ಹಿಂದೂ ಎನುತ್ತಿದೆ… ಬೋಲೋ ಭಾರತ್ ಮಾತಾಕಿ ಜೈ… ಏನೇ ಬರಲಿ ಒಗ್ಗಟ್ಟಿರಲಿ… ವಂದೇ ಮಾತರಂ…

-ಇಂತಹ ದೇಶಾಭಿಮಾನದ ಘೋಷಣೆಗಳು ಚಿತ್ರದುರ್ಗ ನಗರದೆಲ್ಲೆಡೆ ಮಾರ್ಧನಿಸಿದವು. ಎಲ್ಲಿ ನೋಡಿದರಲ್ಲಿ ಓಂ ಚಿಹ್ನೆಯುಳ್ಳು ಬಾವುಟಗಳು ರಾರಾಜಿಸುವ ಮೂಲಕ ಹಿಂದುತ್ವವನ್ನು ಸಾರಿ ಸಾರಿ ಹೇಳಿದವು.

 ವಿಶ್ವ ಹಿಂದೂ ಪರಿಷತ್ ಸ್ವರ್ಣ ಜಯಂತಿ ಮಹೋತ್ಸವದ ಅಂಗವಾಗಿ ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಅಖಿಲ ಭಾರತೀಯ ಕಾರ್ಯಾಧ್ಯಕ್ಷ ಪ್ರವೀಣಭಾಯಿ ತೊಗಾಡಿಯ ಮುಖ್ಯ ಭಾಷಣ ಮಾಡುವ ಸಂದರ್ಭದಲ್ಲಿ ಇಂತಹ ಜಯಘೋಷಗಳು ಒಂದಾದ ಮೇಲೊಂದರಂತೆ ಕೇಳಿಬಂದು ಮೈನವಿರೇಳಿಸಿದವು. ಕೇಳುಗರ ನರನಾಡಿಗಳಲ್ಲಿ ದೇಶಾಭಿಮಾನ ಹುಕ್ಕುವಂತೆ ಮಾಡಿದವು.

 ನಗರದಲ್ಲಿ ನಡೆಯುವ ವಿರಾಟ್ ಹಿಂದೂ ಸಮ್ಮೇಳನದ ಹಿನ್ನೆಲೆಯಲ್ಲಿ ಆಟೋ, ಕಾರು, ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವಾಹನಗಳಲ್ಲಿ ಕೇಸರಿ ಬಾವುಟಗಳು ಹಾರಾಡುತ್ತಿದ್ದವು. ಯುವಕರ ದಂಡು ದೇಶಾಭಿಮಾನದ ಜಯ ಘೋಷಗಳನ್ನು ಕೂಗುತ್ತಾ ನಗರದ ವಿವಿಧೆಡೆಗಳಲ್ಲಿ ಇತ್ತಿಂದತ್ತ, ಅತ್ತಿಂದಿತ್ತ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದರು. ಕಾರ್ಯಕ್ರಮದ ಅಂಗವಾಗಿ ಬೈಕ್ ರ‍್ಯಾಲಿ ನಡೆಸುವ ಮೂಲಕ ಕಾರ್ಯಕ್ರಮದ ಸಂದೇಶ ರವಾನಿಸಿದರು.

 ಕಾರ್ಯಕ್ರಮದ ಮುಖ್ಯ ಭಾಷಣಕಾರರಾದ ಪ್ರವೀಣಭಾಯಿ ತೊಗಾಡಿಯ ಅವರು ಮಧ್ಯಾಹ್ನ ೧೨.೩೦ ರ ಸುಮಾರಿನಲ್ಲಿ ನಗರಕ್ಕೆ ಆಗಮಿಸಿದಾಗ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಸೇರಿದಂತೆ ನೂರಾರು ಸಂಖ್ಯೆಯ ಯುವಕರು ದ್ವಿಚಕ್ರವಾಹನ ಮತ್ತಿತರ ವಾಹನಗಳಲ್ಲಿ ನಗರದ ಬೆಂಗಳೂರು ರಸ್ತೆಗೆ ತೆರಳಿ ಅವರನ್ನು ಗೌರವಾದರಗಳಿಂದ ಬರಮಾಡಿಕೊಂಡರು. ಅಲ್ಲಿಂದ ಹೊರಟ ವಿವಿಧ ವಾನಹಗಳಲ್ಲಿ ಸಾಗಿದ ಯುವಕರು ರ‍್ಯಾಲಿ ತೆರದಿ ಸಂಚರಿಸಿ ಜಯಘೋಷಗಳನ್ನು ಕೂಗಿದರು.

 ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಡೀ ನಗರ ಹಿಂದುತ್ವದಿಂದ ಕಂಗೊಳಿಸಿತು. ಕಿಡಿಗೇಡಿಗಳು ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗವಹಿಸದಂತೆ ಎಲ್ಲೆಡೆ ಪೊಲೀಸ್ ಸಿಬ್ಬಂದಿ ಸರ್ಪಗಾವಲು ಹಾಕಲಾಗಿತ್ತು.

 

 

 

 

 

 

 

 

 

Leave a Reply

Your email address will not be published.

This site uses Akismet to reduce spam. Learn how your comment data is processed.