ಪಾರ್ಲಿಮೆಂಟ್ ಮೇಲಿನ ದಾಳಿಗಾಯಿತು ಹತ್ತು ವರ್ಷ.
article by
Pradyumna KP,
Sanghachalak, Mysore City RSS
ಭಾರತದ ಪ್ರಜಾಪ್ರಭುತ್ವದ ದೇಗುಲ, ಸಾರ್ವಭೌಮತ್ಮದ ಪ್ರತೀಕವಾದ ಭಾರತದ ಸಂಸತ್ ಭವನದಮೆಲೆ ಪಾಕೀಸ್ಥಾನ ಪ್ರಚೊದಿತ ಭಯೋತ್ಪಾದಕರ ದಾಳಿ ನಡೆದು ೧೦ವರ್ಷಗಳೇ ಕಳೆದಿವೆ. ಆದರೆ ದೇಶದ ಸಾರ್ವಭೌಮತೆಯ ಮೇಲೆಯೇ ಯುದ್ಧಸಾರಿದ ಮತ್ತು ಇಡೀ ಭಾರತದ ರಾಜಕೀಯ ನೇತಾರರನ್ನು ಸರಕಾರದ ಗಣ್ಯರನ್ನು ಒಂದೇ ಏಟಿಗೆ ಮುಗಿಸಿಬಿಡುವ ಉದ್ದೇಶಿಟ್ಟುಕೊಂಡು ಈ ಕಾರ್ಯಾಚರಣೆ ನಡೆಸಿದ ಭಯೋತ್ಪಾದಕರಾರಿಗೆ ದೇಶದ ಅತ್ಯುಚ್ಛ ನ್ಯಾಯಾಂಗ ವ್ಯವಸ್ಥೆ ಶಿಕ್ಷೆ ವಿಧಿಸಿದರೂ ಆ ನ್ಯಾಯ ತೀರ್ಮಾನಕ್ಕೆ ಯಾವುದೇ ಕಿಮ್ಮತ್ತಿಲ್ಲದೆ ದೇಶವಾಳುತ್ತಿರುವ ಢೋಂಗೀ ಜಾತ್ಯಾತೀತವಾದಿಗಳಿಂದ ಆಭಯ ಪಡೆದು ಇಂದಿಗೂ ಘೊಷಿಸಿದ ಶಿಕ್ಷೆ ಇನ್ನೂ ಜಾರಿಯಾಗಿಲ್ಲದಿರುವುದು ದೇಶವನ್ನಾಳುತ್ತಿರುವ ಸರಕಾರದ ಇಚ್ಛಾಶಕ್ತಿಯನ್ನು ತೋರಿಸುತ್ತದೆ.
ಇಡೀ ಸರಕಾರದ ವ್ಯವಸ್ಥೆಯನ್ನು, ಮಹಾಮಾನವೀಯ ಉಪ ರಾಷ್ಟ್ರಪತಿಗಳನ್ನು, ಪ್ರಧಾನ ಮಂತ್ರಿ, ಉಪ ಪ್ರಧಾನಮಂತ್ರಿ ರಕ್ಷಣಾಮಂತ್ರಿ, ಆರ್ಥಮಂತ್ರಿ ಹೀಗೇ ಮಂತ್ರಿಮಂಡಲದ ಘಟಾನುಘಟಿಗಳನ್ನು, ೨೫೦ಕ್ಕೂ ಹೆಚ್ಚು ಸಂಸತ್ ಸದಸ್ಯರನ್ನು, ರಕ್ಷಿಸಲು ತಮ್ಮ ಪ್ರಾಣವನ್ನೇ ಸಮರ್ಪಿಸಿದ ೯ ಮಂದಿ ಸಿಆರ್ಪಿಎಪ್ ಸಿಬ್ಬಂದಿ, ದಿಲ್ಲಿ ಪೋಲೀಸ್ ಸಿಬ್ಬಂದಿ ಹಾಗೂ ಸಂಸತ್ ಭವನದ ಆವರಣದಲ್ಲಿರುವ ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಾಲಿ ಇವರ ತ್ಯಾಗಕ್ಕೆ ದೇಶದಲ್ಲಿ ಯಾವುದೇ ಬೆಲೆಇಲ್ಲದೆ ಅವರ ಪ್ರಾಣಾರ್ಪನೆಯೇ ವ್ಯರ್ಥ ವಾಗಿದೆಯೇನೋ ಅನ್ನಿಸುತ್ತಿದೆ. ಈ ಸಂದರ್ಭದಲ್ಲಿ ನಮ್ಮ ಯುವಕರಿಗೆ, ಸಹೃದಯ ನಾಗರೀಕರಿಗೆ ಈ ಘಟನೆಯ ಮನವರಿಕೆ ಮಾಡಿಕೊಟ್ಟು ಹೃದಯಾಳದಿಂದ ಈ ಹುತಾತ್ಮರಿಗೆ ಶ್ರದ್ದಾಂಜಲಿ ಅರ್ಪಿಸಿ ಅವರ ಬಲಿದಾನ ಈ ದೇಶಕ್ಕೆ ಏಂಥ ಅಮೋಘವಾದ ಕಾರ್ಯವೆಸಗಿದೆ ಅದು ಎಷ್ಟು ಮಹತ್ವದ್ದು ಎಂಬುದನ್ನು ಮನವರಿಕೆ ಮಾಡಿಕೊಡುವ ಉದ್ದೇಶವೇ ಈ ಲೇಖನ. ಆ ಒಂಭತ್ತೂ ಜನ ಹುತಾತ್ಮರ ಕುಟುಂಬಗಳಿಗೆ ನಿಮ್ಮ ಈ ಅಗಲಿಕೆಯ ನೋವಿನ ಜೊತೆ ನಾವೂ ಪಾಲುದಾರರಾಗಿದ್ದೇವೆ ಎಂಬ ಭರವಸೆಯನ್ನು ನೀಡುವ ಸಾಂತ್ವಾನ ನೀಡುವ ನಮ್ಮ ಕರ್ತವ್ಯವನ್ನು ಜ್ಞಾಪಿಸುವುದೇ ಈ ಲೇಖನದ ಗುರಿ.
ಇಂದಿಗೆ ದೆಹಲಿಯಲ್ಲಿ ಭಾರತದ ಸಂಸತ್ ಭವನದ ಮೇಲೆ ಭಯೋತ್ಪಾದಕರು ದಾಳಿನಡೆಸಿ (ಡಿಸೆಂಬರ್ 13, 2೦೦1 ನೇ ಗುರುವಾರ) ಹತ್ತು ವರ್ಷಗಳು ಸಂದಿವೆ. ದೇಶದ ರಾಜಧಾನಿಯಲ್ಲಿರುವ ಸಂಸತ್ ಭವನದಲ್ಲಿ ಪ್ರತಿವಷ ಈ ದಿನದಂದು ಹುತಾತ್ಮರ ಸ್ಮರಣೆಯ ನೆಪದಲ್ಲಿ ಪ್ರಧಾನ ಮಂತ್ರಿಗಳು, ವಿರೊಧ ಪಕ್ಷದ ಧುರೀಣರು ಮತ್ತು ಹಿಡಿಯಷ್ಟು ರಾಜಕಾರಣಿಗಳು ಅಂದು ಅಗಲಿದ ೯ ಹುತಾತ್ಮರ ಭಾವಚಿತ್ರಗಳಿಗೆ ಪುಷ್ಟಾರ್ಚನೆ ಮಾಡಿದರೆ ತಮ್ಮ ಮಾಮೂಲಿ ಕರ್ತವ್ಯ ಮುಗಿಯಿತೆಂದು ಧನ್ಯತಾಭಾವವನ್ನು ಮೆರೆಸುತ್ತಾರೆ. ಆದರೆ ಈ ಎಲ್ಲಾ ಘಟನೆಗಳ ಹಿಂದಿನ ಕುತಂತ್ರಿ ಅಫಜಲ್ ಗುರು ಮಾತ್ರ ನಮ್ಮ ದೇಶದ ಕಾನೂನು ಗಲ್ಲು ಶಿಕ್ಷೆ ವಿಧಿಸಿದರೂ ಸರಕಾರದ ತುಷ್ಟೀಕರಣ ನೀತಿಯ ನೆರವಿನಿಂದ ತನ್ನ ಜೀವನದ ಮತ್ತೊಂದು ದಿನವನ್ನು ಸಾಧನೆಯ ದಿನವಾಗಿ ಆನಂದದಿಂದ ಕಳೆಯುತ್ತಾನೆ. ಈ ದೇಶದ ಕಾನೂನಿನ ಅಪಹಾಸ್ಯ ಮಾಡುತ್ತಾನೆ. ಈ ದೇಶದ ಮೇಲೆ ಯಾರು ಬೇಕಾದರೂ ಯಾವುದೇ ಕೃತ್ಯಮಾಡಿ ಬಚಾವಾಗಬಹುದೆಂಬುದನ್ನು ಜಗತ್ತಿಗೆ ಸಾರಿ ಸಾರಿ ತೋರಿಸುತ್ತಾನೆ.
ಅಂದು ಢಿಸೆಂಬರ್ ೧೩, ೨೦೦೧ ರಂದು ನಮ್ಮ ಸಂಸತ್ ಭವನದಲ್ಲಿ ನಡೆದಿದ್ದಾದರು ಏನು?
ಅಂದು ಗುರುವಾರ ಸಮಯ ೧೧ ಘಂಟೆ. ಲೋಕ ಸಭೆ ತನ್ನ ಕಲಾಪಗಳನ್ನು ಮುಂದೂಡಿ ಕೇವಲ ೪೦ ನಿಮಿಷಗಳು ಕಳೆದಿತ್ತು. ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯೀ, ಗೃಹ ಮಂತ್ರಿ ಲಾಲ್ ಕೃಷ್ಣ ಆದ್ವಾನಿ, ರಕ್ಷಣಾ ಮಂತ್ರಿ ಜಾರ್ಜ ಫರ್ನಾಂಡೀಸ್, ಉಪರಾಷ್ಟ್ರಪತಿ ಭೈರೋಂಸಿಂಗ್ ಜಿ ಷೇಕಾವತ್ ಮತ್ತು ಇತರೇ ಅನೇಕ ಮಂತ್ರಿಗಳು ಮತ್ತು ೨೫೦ಕ್ಕೂ ಹೆಚ್ಚು ಸಂಸತ್ ಸದಸ್ಯರು ಆಗ ತಾನೆ ಸಂಸತ್ ಭವನದಿಂದ ಹೊರಡಲು ಅನುವಾಗುತ್ತಿದ್ದರು. ಸಮಯ ೧೧.೪೫ ಆಗಿರುವ ಸಂದರ್ಭದಲ್ಲಿ ಸಂಸತ್ ಹೊರ ಆವರಣದಲ್ಲಿ ಗುಂಡಿನ ಸದ್ದು ಕಿವಿಗೆ ಬಂದು ಅಪ್ಪಳಿಸಿತು. ಇದೇನೆಂದು ತಿಳಿಯುವಷ್ಟರಲ್ಲಿ ಯುದ್ಧೋಪಾದಿಯಲ್ಲಿ ಕೋಲಾಹಳ ಮುಗಿಲು ಮುಟ್ಟಿತ್ತು.
ಆ ಗುಂಡಿನ ಸದ್ದು ಭಯೋತ್ಪಾದಕರು ದೇಶದ ಅತುಚ್ಚ ಪ್ರಜಾಪ್ರಭುತ್ವ ಸಂಸ್ಥೆ ಸಂಸತ್ ಭವನದ ಮೇಲೆ ನಡೆಸಿದ ಧೂರ್ತತನದ ದಾಳಿ ದೇಶದ ಆತ್ಮದ ಮೇಲೆ ನಡೆದ ದಾಳಿಯಾಗಿತ್ತು. ಗೇಠ್ ನಂ ೧೨ರಿಂದ ಬಿಳಿಯ ಅಂಬಾಸೆಡರ್ ಕಾರು ಆಐ೩ಅಎ ೧೫೨೭ ರಿನಲ್ಲಿ ಪೋಲೀಸ್ ವೇಶದಲ್ಲಿ ಕಾರು ಗೇಟನ್ನು ಪ್ರವೇಶಿಸಿದ ಸಂದರ್ಭದಲ್ಲಿ ಅಲ್ಲಿದ್ದ ರಕ್ಷಣಾ ಆವರಣವನ್ನು ಭೇದಿಸಿ ಈ ಕಾರು ಮುಂದುವರೆದಂತೆ ಆತಂಕವಾದಿ ಆತಂಕವಾದಿ ಎಂಬ ಕೂಗು ಮುಗಿಲು ಮುಟ್ಟಿತು. ಶ್ರೀಮತಿ ಕಮಲೆಶ ಕುಮಾರಿ ಸಿ.ಆರ್. ಪಿ.ಎಪ್ ಕಾನಸ್ಟೇಬಲ್ ಕಾರನ್ನು ನಿಲ್ಲಿಸುವಂತೆ ಕೂಗಿ ಅಡ್ಡಬಂದಾಗ ಕಾರಿನಲ್ಲಿದ್ದ ಭಯೋತ್ಪಾದಕರು ಆಕೆಯ ಮೆಲೆ ಗುಂಡಿನ ಮಳೆಗರೆದರು. ಗುಂಡೆಟಿನಿಂದ ಆಕೆ ಅಲ್ಲೇ ಕುಸಿದಳು ಕೇವಲ ೧ರಿಂದ ೨ನಿಮಿಷದ ಈ ತಡೆ ಆತಂಕವಾದಿಗಳಿಗೆ ಬಹಳ ದೊಡ್ಡ ತಡೆಯಾಯಿತಲ್ಲದೆ ಇಡೀ ಪೋಲೀಸ್ ಸಿಬ್ಬಂದಿ ಎಚ್ಚೆತ್ತುಕೊಳ್ಳುವಂತೆ ಮಾಡಿತ್ತು. ಕಾರು ಮುಂದುವರೆದಂತೆ ರಕ್ಷಣಾ ಸಿಬ್ಬಂದಿಗಳಲ್ಲಿ ಒಬ್ಬರಾದ ಜೆ. ಪಿ ಯಾದವ್ ರಾಜ್ಯಸಭಾಸದಸ್ಯರು ಉಪಯೋಗಿಸುತ್ತಿದ್ದ ಬಾಗಿಲಬಳಿ ರಕ್ಷಣಾ ಮೇಲ್ವಿಚಾರಣೆ ನಡೆಸುತ್ತಿದ್ದಾಗ ಕಾರನ್ನು ಕಂಡು ತಡೆಯಲು ಪ್ರಯತ್ನಿಸಿದರು. ಇಷ್ಟರಲ್ಲಿ ಅವರು ತಮ್ಮ ವೈರ್ಲೆಸ್ ಉಪಕರಣದಿಂದ ಸಂಸತ್ ಭವನದಮೇಲೆ ಆತಂಕವಾದಿಗಳ ದಾಳಿ ಕುರಿತು ಎಲ್ಲಾ ಬಾಗಿಲುಗಳನ್ನು ಮುಚ್ಚುವಂತೆ ಮತ್ತು ಹೋರಾಟಕ್ಕೆ ಸಿದ್ದರಾಗುವಂತೆ ಸೂಚಿಸಿದ್ದರು ತಕ್ಷಣವೇ ಅವರಮೇಲೂ ಗುಂಡಿನ ಮಳೆಗರೆದ ಭಯೋತ್ಪಾದಕರು ಅವರನ್ನೂ ಬಲಿ ತೆಗೆದು ಕೊಂಡಿದ್ದರು.
ಎಲ್ಲಾ ಎಚ್ಚರಗಳಿಂದ ಹೋರಾಟಕ್ಕೆ ಮತ್ತು ಭಯೋತ್ಪಾದಕರ ನಾಶಕ್ಕೆ ಸಿದ್ಧರಾದ ಪೋಲೀಸ್ ಪಡೆ ಮತ್ತಿತರ ರಕ್ಷಣಾಪಡೆ ಪ್ರತಿ ಹೊರಾಟ ವನ್ನು ಪ್ರಾರಂಭಿಸಿತು. ಕಾರಿನಲ್ಲಿದ್ದ ೫ ವ್ಯಕ್ತಿಗಳ ಪೈಕಿ ಒಬ್ಬ ಮಾನವ ಬಾಂಬಾಗಿದ್ದ. ಇವುಗಳನ್ನು ಅರಿತ ಸಿಬ್ಬಂದಿ ಕೇವಲ ೪೫ ನಿಮಿಷಗಳ ಹೋರಾಟದಲ್ಲಿ ಈ ಭಯೋತ್ಪಾದಕರು ಪಾರ್ಲಿಮೆಂಟ್ ಒಳಗೆ ನುಸುಳುವುದನ್ನು ಅಪಾರ ಹಾನಿ ಯಾಗುವುದನ್ನು ತಮ್ಮ ಕೆಚ್ಚೆದೆಯ ಹೋರಾಟ ದಿಂದ ತಡೆದಿದ್ದರು. ಗ್ರೆನೇಡ್ ಗಳಿಗೆ ಹೆದರದೆ ಅವುಗಳನ್ನು ವಿಫಲ ಗೊಳಿಸಿ ಮಾನವ ಬಾಂಬಹೊಂದಿದ್ದ ವ್ಯಕ್ತಿಯನ್ನೂ ಹೊಡೆದುರುಳಿಸಿದಾಗ ಎತ್ತರದ ಬೆಂಕಿ ತನ್ನ ಕೆನ್ನಾಲUಯನ್ನು ಮುಗಿಲೆತ್ತರಕ್ಕೆ ಚಾಚಿತ್ತು.
ಒಟ್ಟು ಸಿಆರ್ ಪಿ ಎಪ್ ನ ೪ ಪೋಲೀಸ್ ನ ೪ ಮತ್ತು ತೋಟದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ತೋಟಗಾರಿಕಾ ಸಿಬ್ಬಂದಿ ಒಟ್ಟು ೯ ಮಂದಿ ಹುತಾತ್ಮತರಾಗುವುದರೊಂದಿಗೆ ಗುಂಡಿನ ಸದ್ದು ನಿಂತಿತ್ತು. ಈ ಮಧ್ಯೆ ಐದೂ ಜನ ಭಯೋತ್ಪಾದಕರನ್ನೂ ರಕ್ಷಣಾ ಸಿಬ್ಬಂದಿ ನೆಲಕಚ್ಚಿಸಿದ್ದರು. ನಮ್ಮ ದೇಶದ ಪೋಲೀಸ್ ಸಿಬ್ಬಂದಿ ತಾವು ತೋರಿದ ವಿರೋಧದಿಂದ ಆಗಬಹುದಾಗಿದ್ದ ದೊಡ್ಡ ಗಂಡಾಂತರದಿಂದ ದೇಶವನ್ನು ರಕ್ಷಿಸಿ ತಮ್ಮ ದೇಶಭಕ್ತಿಯನ್ನು ಮೆರೆದರು. ತಮ್ಮ
ಧೇಶದ ಮೇಲೆ ನಡೆದ ನಮ್ಮ ಪಕ್ಕದ ದೇಶದ ಪ್ರಾಯೋಜಿತ ಕಾರ್ಯಕ್ರಮ ಇದೆಂದು ಭಾರತದ ರಕ್ಷಣಾ ಸಚಿವರು ಉದ್ಗರಿಸಿದ್ದರು. ರಕ್ತ ಕೊಟ್ಟಾದರೂ ದೇಶವನ್ನು ಉಳಿಸಿಕೊಳ್ಳುತ್ತೇವೆ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದರು. ದೇಶ ವಿದೇಶಗಳಿಂದ ಈ ಕೃತ್ಯಕ್ಕೆ ಖಂಡೆನೆ ಸೂಚಿತವಾಗುತ್ತಿತ್ತು. ರಕ್ಷಣಾಸಿಬ್ಬಂದಿಗಳ ಸಾಮಯಿಕ ಸಾಹಸದಿಂದ ದೇಶ ಉಳಿಯಿತೆಂದು ಗೃಹಮಂತ್ರಿ ತಮ್ಮ ಸಂತಾಪ ಸಂದೇಶದಲ್ಲಿ ಉಚ್ಚರಿಸಿದ್ದರು.
ನಮ್ಮ ದೇಶದ ಮೇಲೆ ಭಯೋತ್ಪಾದಕರು ನಡೆಸುತ್ತಿರುವ ದಾಳಿ ಇದೇ ಮೊದಲಲ್ಲ ಅತವಾ ಕೊನೆಯದೂ ಅಲ್ಲ. ಕೇವಲ ಈ ದಶಕವೊಂದರಲ್ಲೇ (೨೦೦೧ರಿಂದ) ಈವರೆಗೂ ಸರಿಸುಮಾರು ೪೭ ಭಯೋತ್ಪಾದಕ ದಾಳಿಗಳು ನಡೆದಿದ್ದು, ೨೦೦೨ ರಫಿಗಂಜ್ ರೈಲು ಧಾಳಿ, ೨೦೦೩ರ ಮುಂಬೈ ದಾಳಿ, ೨೦೦೫ರಲ್ಲಿ ದೆಹಲಿಯಲ್ಲಿ, ೨೦೦೬ರಲ್ಲಿ ಮತ್ತೆ ಮುಂಬೈಯಲ್ಲಿ, ೨೦೦೭ರಲ್ಲಿ ಸಂಝೋತಾ ಎಕ್ಸಪ್ರೆಸ್ ರೈಲಿನಮೇಲೆ, ೨೦೦೮ರ ಜೈಪುರ ಮತ್ತು ಅಹಮದಾಬಾದ್ ಅಸ್ಸೋಂ ಮತ್ತು ಮತ್ತೊಮ್ಮೆ ಮುಂಬೈಯಲ್ಲಿ ನಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳು, ೨೦೧೦ರ ದಾಂತೇವಾಡ, ಜ್ಞಾನೇಶ್ವರಿ ಎಕ್ಸಪ್ರೆಸ್ ರೈಲಿನ ದಾಳಿ ಈ ಎಲ್ಲಾ ದಾಳಿಗಳಲ್ಲಿ ಪ್ರತೀ ಘಟನೆಯಲ್ಲೂ ೫೦ಕ್ಕು ಹೆಚ್ಚು ಅಮಾಯಕ ಜನರ ಬಲಿ ತೆಗೆದುಕೊಂಡಿರುವುದು ಓದುಗರಾದ ನಮ್ಮೆಲ್ಲರ ಗಮನಕ್ಕೆ ಬಂದಿರಬಹುದು. ಲಭವಿರುವ ಮಾಹಿತಿಯ ಪ್ರಕಾರ ಮುಂಬೈ ನಗರ ಒಂದರಲ್ಲೇ ೧೯೯೩ರಿಂದ ಈ ವರೆಗೆ ಒಂಭತ್ತಕ್ಕೂ ಹೆಚ್ಚು ದಾಳಿಗಳು ನಡೆದಿದ್ದು ೭೦೫ಕ್ಕಿಂತ ಹೆಚ್ಚು ಮಂದಿಯನ್ನು ಈ ದಾಳಿಗಳು ಬಲಿತೆಗೆದು ಕೊಂಡಿವೆ. ಇಡೀ ದೇಶದಲ್ಲಿ ೧೯೮೪ ರಿಂದ ನಡೆದ ಈ ವರೆಗಿನ ದಾಳಿಗಳಲ್ಲಿ ಸುಮಾರು ೧೭೨೯ ಕ್ಕಿಂತ ಆಧಿಕ ಮಂದಿ ಬಲಿಯಾಗಿರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. ಗಾಯಗೊಂಡವರು ಮತ್ತು ತದನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟವರ ಸಂಖ್ಯೆ ದಾಖಲೆಗೆ ಸಿಗದಷ್ಟು ಹೆಚ್ಚಿದೆ. ಈ ಅಂಶಗಳು ನಾಡಿನ ಪ್ರಜ್ಞ ನಾಗರಿಕರ ಗಮನಕ್ಕೆ ಬಂದಿದೆಯೇ?
ಈ ದೇಶದಲ್ಲೇ ವಾಸವಾಗಿದ್ದು ಈ ದೇಶದ ವಿರುದ್ಧವೇ ಷಡ್ಯಂತ್ರ ರೂಪಿಸುವವರ ಸಂಖ್ಯೆಗೇನೂ ಈ ದೇಶದಲ್ಲಿ ಬರವಿಲ್ಲ. ರಾಜಕೀಯದ ಆಕಾಂಕ್ಷೆಗಳಿಂದ ಅನೇಕ ತನಿಖೆಗಳು ದಾರಿತಪ್ಪಿರುವುದು ನಿರ್ವಿವಾದ. ರಸ್ತೆಗಳಲ್ಲಿ ನಡೆಯುವ ಅಮಾಯಕ ಪಾದಚಾರಿಗಳು, ಮಕ್ಕಳು, ಹೆಂಗಸರು ಪ್ರಯಾಣಿಕರು ಈ ದುರ್ಘಟನೆಗಳಲ್ಲಿ ಅಸುನೀಗುತ್ತಿದ್ದು ಯುದ್ಧಗಳಲ್ಲಿ ಪ್ರಾಣಾರ್ಪಣೆಗೈದ ಸೈನಿಕರ ಸಂಖ್ಯೆಗಿಂತ ಈ ಭಯೋತ್ಪಾದಕರನ್ನು ಸದೆಬಡಿಯುವ ಹೋರಾಟದಲ್ಲಿ ಅಸುನೀಗಿದ ಸೈನಿಕರ ಸಂಖ್ಯೆಯೇ ಅಧಿಕವಾಗಿರುವುದು ಎತಹಾ ವಿಪರ್ಯಸ? ಇದೇನೂ ಗಮನಕ್ಕೆ ಬಾರದ ವಿಷಯವಲ್ಲ.
ಅಮಾಯಕರ ಪ್ರಾಣ ಹಾನಿ ನಿಲ್ಲಬೇಕು. ಅಕ್ರಮ ನುಸುಳುಕೋರರಿಗೆ, ಈ ದೇಶದ ಅನ್ನ ತಿಂದು ಈ ದೇಶದ ವಿರುದ್ಧವೇ ದಾಳಿಮಾಡುವ ಭಟ್ಕಳ ಸಹೋದರರಂತಹವರಿಗೆ, ನೆರೆಯ ದೇಶದ ಪ್ರಾಯೋಜಿತ ಭಯೋತ್ಪಾದನಾ ಚಟುವಟಿಕೆಗಲಲ್ಲಿ ಭಾಗಿಯಾದವರಿಗೆ ತಕ್ಕ ಶಾಸ್ತಿಯಾಗಬೇಕು. ಆನ ನೆಮ್ಮದಿಯ ನಿಟ್ಟುಸಿರು ಬಿಡಬೇಕು. ಭಯೋತ್ಪಾದನಾ ನಿಗ್ರಹಕ್ಕೆ ಬಳಸುವ ಕೋಟಿ ಕೋಟಿರೂಪಾಯಿಗಳು ಅಗತ್ಯ ಸೇವೆಗಳಿಗೆ ಬಳಸುವಂತಾಗಬೇಕು. ಪ್ರತಿ ವ್ಯಕ್ತಿಯಲ್ಲಿ ಜಾಗೃತಿ ಮೂಡಬೇಕು. ಆತ ಆಕೆ ದೇಶ ಸಂರಕ್ಷಣೆಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಿಬೇಕು. ಸರಕಾರ ರಾಜಕೀಯ ಲಾಭಕ್ಕೆ ಹೊರತಾಗಿ ತುಷ್ಟೀಕರಣ ನೀತಿಯನ್ನು ಬಿಟ್ಟು ಪೋಟಾ ಅಂತಹ ಕಠಿಣ ಕಾನೂನು ರಚಿಸಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಭಯೋತ್ಪಾದಕರನ್ನು ನಿಗ್ರಹಿಸಬೇಕು. ದೇಶದ ವಿರುದ್ಧ ಸೊಲ್ಲೆತ್ತದಂತಹ ಸ್ಥಿತಿ ನಿರ್ಮಾಣವಾಗಬೇಕು. ಇವು ನಮ್ಮ ಹಕ್ಕೋತ್ತಾಯ. ಈ ಜಾಗೃತಿ ಕಾರ್ಯಕ್ರಮದ ಮೂಲಕ ನಾವು ಈ ನಮ್ಮ ಬದುಕುವ ಹಕ್ಕಿಗಾಗಿ ಸರಕಾರವನ್ನು ಒತ್ತಾಯಿಸುತ್ತೇವೆ. ಸಂಸತ್ ಭವನದ ಮೇಲೆ ನಡೆದ ದಾಳಿಯ ಸಂದರ್ಭ ಪ್ರಾಣತೆತ್ತ ನಮ್ಮ ರಕ್ಷಕರ ಆತ್ಮಗಳಿಗೆ ಶಾಂತಿ ಸಿಗಬೇಕಾದರೆ ಈ ದಾಳಿಯ ಯೋಜಕನಾಗಿ ಮರಣದಂಡನೆಗೆ ಗುರಿಯಾಗಿ ಸರಕಾರದಿಂದಲೇ ರಕ್ಷಿಸಲ್ಪಡುತ್ತಿರುವ ಭಯೋತ್ಪಾದಕ ಅಫ್ಜಲ್ ಗುರುವಿಗೆ ನಿರ್ವಿವಾದವಾಗಿ ಗಲ್ಲು ಶಿಕ್ಷೆ ತಕ್ಷಣ ಜಾರಿಯಾಗಬೇಕು. ಈ ನೆಲದಲ್ಲಿ ಯಾರೇ ಭಯೋದ್ಪಾದನಾಕೃತ್ಯವನ್ನು ಆಯೋಜಿಸಿದರೆ, ನಡೆಸಿದರೆ ಅಂಥವರಿಗೆ ಕಟ್ಟುನಿಟ್ಟಾಗಿ ಶಿಕ್ಷೆ ಜಾರಿಯಾದಾಗ ಮಾತ್ರ ಈ ದೇಶದಲ್ಲಿ ನಿರ್ಭೀತಿ ವಾತಾವರಣ ನಾವು ಅಪೇಕ್ಷಿಸಬಹುದು.
ಪ್ರದ್ಯುಮ್ನ ಕೆ.ಪಿ. Mysore