ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಪಾಟನಾದಲ್ಲಿ 24ರಂದು ಆಯೋಜನೆಗೊಂಡ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ,”ಸಮಾಜದಲ್ಲಿ ಸಂವೇದನಾಶೀಲತೆಯನ್ನು ಜಾಗೃತವಾಗಿಡಬೇಕಿದೆ,ಸಮಾಜದೊಳಗೆ ಮೌಲ್ಯಗಳೂ ಇಂತಹ ಸಂವೇದನಾಶೀಲತೆಯ ಕಾರಣದಿಂದಲೇ ಹುಟ್ಟಲು ಸಾಧ್ಯವಿದೆ ಎಂದರು.ರಾಜಾ ಹರೀಶ್ಚಂದ್ರ ಸತ್ಯದ ಮೇಲೆ ನಂಬಿಕೆಯಿಟ್ಟು ನುಡಿದ, ಸಮಾಜದಲ್ಲಿ ಸತ್ಯದ ಪ್ರತಿಷ್ಠಾಪನೆಯಾಯಿತು.

ಮರ್ಯಾದಾ ಪುರುಷೋತ್ತಮ ರಾಮ ತಂದೆಯ ಮಾತಿನ ಕಾರಣಕ್ಕಾಗಿ ಎಲ್ಲ ಕಷ್ಟಗಳನ್ನು ಸಹಿಸಿದ.ಲೋಕನಾಯಕ ಜಯಪ್ರಕಾಶ್ ನಾರಾಯಣ್ ‌ರವರು ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟುಕೊಂಡು ಜೈಲಿಗೆ ಹೋಗುವ ಕಷ್ಟವನ್ನು ಸಹಿಸಿಕೊಂಡರು.ಇವರ್ಯಾರಿಗೂ ಜೀವನ ಪರ್ಯಂತ ಲಾಭ ಸಿಗಲಿಲ್ಲ,ಆದರೆ ಇಂತಹ ಶ್ರೇಷ್ಠ ಜನರಿಂದಲೇ ಜೀವನದಲ್ಲಿ ಮೌಲ್ಯಗಳ ನಿರ್ಮಾಣವಾಗಿದೆ.”ಎಂದರು

ಪಾಟ್ನಾದ ಹಿಂದಿ ಸಾಹಿತ್ಯ ಸಮ್ಮೇಳನದ ಸಭಾಗಾರದಲ್ಲಿ ಪಂಡಿತ್ ರಾಮ್‌ನಾರಾಯಣ್ ಶಾಸ್ತ್ರಿಯವರಸ್ಮರತಿಯಲ್ಲಿ ಆಯೋಜಿತವಾದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

“ಪ್ರಕೃತಿದತ್ತವಾಗಿ ಒಳ್ಳೆಯ ಕಾರ್ಯಗಳು ಯಾವುದೋ ಲಾಭಕ್ಕೆ ಬದಲಾಗಿ ಮಾಡಲಾಗುವುದಿಲ್ಲ,ಸೂರ್ಯನ ಕಿರಣಗಳು ಯಾವ ಲಾಭಕ್ಕಾಗಿಯೂ ಭೂಮಿಯ ಮೇಲೆ ಬೆಳಕು ಬೀರುವುದಿಲ್ಲ,ನದಿಗಳು ಯಾವ ಲಾಭದಿಂದ ತನ್ನೆರೆಡೂ ದಡಗಳನ್ನು ಸಿಂಚಿತವಾಗಿಸುತ್ತವೆ,ಹೂವುಗಳ ಸುವಾಸನೆಯ ಅವುಗಳ ಪ್ರಕೃತಿಯ ಕಾರಣದಿಂದ ದೊರೆಯುತ್ತದೆ.ಇದೇ ರೀತಿ ಶ್ರೇಷ್ಠ ಜನರ ಕಾರ್ಯಗಳೂ ಸಹ ಯಾವುದೇ ಲಾಭಕ್ಕಾಗಿ ಮಾಡಿರುವುದಿಲ್ಲ.ಏನನ್ನೋ ಪಡೆದುಕೊಳ್ಳುವುದಕ್ಕಾಗಿ ಒಳ್ಳೆಯ ಕೆಲಸ ಮಾಡುವುದು ನಮ್ಮ ಸಂಸ್ಕೃತಿಯಲ್ಲ.ಒಳ್ಳೆಯ ಕೆಲಸ ಮಾಡುವುದು ನಮ್ಮ ಧರ್ಮ.

ಅವರು ಮಾತನಾಡುತ್ತಾ” ನಾನು ವಿಶ್ವಾಸದಿಂದ ಹೇಳಬಲ್ಲೆ ನಮ್ಮ ಸಮಾಜ ಒಳ್ಳೆಯ ಕೆಲಸಗಳಿಗೆ ಬೆನ್ನು ತಟ್ಟುತ್ತದೆ‌.ಸಮಾಜದೊಳಗೆ ಒಳ್ಳೆಯ ಕೆಲಸ ನಡೆಯುತ್ತದೆ ಮತ್ತು ಅದಕ್ಕೆ ಸಮಾಜದ ಆಶೀರ್ವಾದ ದೊರೆಯುತ್ತದೆ. ಈ ವಿಶ್ವಾಸವನ್ನು ಸಮಾಜದೊಳಗೆ ಶಾಶ್ವತವಾಗಿ ನೆಲೆಗೊಳ್ಳುವಂತೆ ಮಾಡಬೇಕಿದೆ.”

ಕಾರ್ಯಕ್ರಮದಲ್ಲಿ ಸಾಹಿತ್ಯದ ಸೇವೆಗಾಗಿ ಕವಿ ಸತ್ಯನಾರಾಯಣ ಅವರಿಗೆ ಹಾಗು ಸಮಾಜದ ಸೇವೆಗಾಗಿ ಸಿದ್ಧಿನಾಥ್‌ಸಿಂಹ‌ರವರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಪಂ.ರಾಮ್‌ನಾರಾಯಣ್ ಶಾಸ್ತ್ರಿಯವರ ನೆನಪಿನಲ್ಲಿ ನಡೆಸಿದ್ದು ಜನವರಿ 24ರಂದೇ ಅವರ ಜನ್ಮದಿನ ಹಾಗು ಮರಣದ ದಿನವಾದ್ದರಿಂದ ಪಂಡಿತ್ ರಾಮ್‌ನಾರಾಯಣ್ ಶಾಸ್ತ್ರಿಯವರ ಸ್ಮೃತಿನ್ಯಾಸ ಪ್ರತಿಷ್ಠಾನದ ವತಿಯಿಂದ ಕಳೆದ 43 ವರ್ಷಗಳಿಂದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.