“ಭಾರತದಲ್ಲಿ ಸರ್ಕಾರಗಳು ತಮ್ಮ ಒಟ್ಟಾರೆ
ಬಜೆಟ್‌ನ ಶೇ.20ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಆ
ಹೊತ್ತಿನ ಸಮಯ ಸಂದರ್ಭಕ್ಕೆ ತಕ್ಕ ಹಾಗೇ
ವಿಚಾರಧಾರೆಗಳು ಬದಲಾದ ಹಾಗೇ ಪಠ್ಯಗಳನ್ನು
ಪರಿಷ್ಕರಿಸುತ್ತಾ ಬಂದಿದೆ” ಎಂದು ಸಮಾಜ ಕಲ್ಯಾಣ
ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಸುವರ್ಣ ಸಂಸ್ಕೃತಿ ಭವನದಲ್ಲಿ
ರಾಷ್ಟ್ರೋತ್ಥಾನ ಬಳಗ ಶಿವಮೊಗ್ಗ ಇವರ ವತಿಯಿಂದ
ಹಮ್ಮಿಕೊಂಡಿದ್ದ ಪಠ್ಯ-ಪುಸ್ತಕ ಪರಿಷ್ಕರಣೆ ಸತ್ಯ- ಮಿಥ್ಯ
ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ
ಭಾಗವಹಿಸಿ ಮಾತನಾಡಿದರು.

“ಅಂದೂ ಕೂಡ ಟೀಕೆ ಟಿಪ್ಪಣಿಗಳು ಬಂದಿದ್ದವು.
ಆದರೆ, ಅಂದಿನ ಸರ್ಕಾರಗಳು ಅದಕ್ಕೆ ಕಿವಿಗೊಡದೇ
ಅದೇ ಮೆಕಾಲೆ ಕಾಲದ ಶಿಕ್ಷಣ ನೀತಿಯನ್ನು
ಮುಂದುವರೆಸುತ್ತಾ ಬಂದವು. ಕರ್ನಾಟಕ ಸರ್ಕಾರ
ಮಕ್ಕಳಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ನಮ್ಮ
ದೇಶದ ಇತಿಹಾಸ ಪುರುಷರು, ರಾಷ್ಟ್ರ ಪ್ರೇಮಿಗಳ
ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಿ ರಾಷ್ಟ್ರಭಕ್ತಿ
ಜಾಗೃತಿಗೊಳಿಸಬೇಕು. ನಮ್ಮ ದೇಶದ ಸಂಸ್ಕಾರ
ಸಂಸ್ಕೃತಿಯನ್ನು ತಿಳಿಸಬೇಕೆಂಬ ಉದ್ದೇಶದಿಂದ
2020-21ನೇ ಸಾಲಿನಲ್ಲಿ ಪರಿಷ್ಕರಣೆಗೆ ಅವಕಾಶ
ಕಲ್ಪಿಸಿ ಸಮಿತಿ ರಚನೆ ಮಾಡಿ ಸಲಹೆ ಸೂಚನೆಗಳಿಗೆ
ಒಂದು ವರ್ಷ ಕಾಲಾವಕಾಶ ಕೂಡ ನೀಡಿತ್ತು ಆದರೆ,
ಇನ್ನೇನು ಪುಸ್ತಕ ಮುದ್ರಣ ಹಂತದಲ್ಲಿರುವಾಗ ಸುಳ್ಳಿನ
ಸರಮಾಲೆಗಳನ್ನೇ ಸೃಷ್ಟಿಸಿ ವಿರೋಧ ಪಕ್ಷಗಳು ಸುಳ್ಳನ್ನೇ
ಸತ್ಯವಾಗಿಸಿ ಬಹುತೇಕ ಚರ್ಚೆಗೆ ಗ್ರಾಸವಾಗಿ
ವಿವಾದಗಳನ್ನು ಹುಟ್ಟುಹಾಕುತ್ತಿವೆ” ಎಂದು
ಆರೋಪಿಸಿದರು.

“ನಾರಾಯಣ ಗುರುಗಳ ಪಠ್ಯ ತೆಗೆದಿಲ್ಲ. ಕುವೆಂಪು
ಪಠ್ಯಗಳನ್ನು ಪರಿಷ್ಕರಣೆ ಮಾಡಿಲ್ಲ ಎಲ್ಲೂ ಕೂಡ
ಕೆಂಪೇಗೌಡರ ನಿಂದನೆ ಮಾಡಿಲ್ಲ, ಬಸವಣ್ಣನವರ
ಪಾಠವನ್ನು ಕೂಡ ತೆಗೆದಿಲ್ಲ. ಬದಲಾಗಿ ಸ್ವಾತಂತ್ರ್ಯ
ಹೋರಾಟಗಾರರ, ದೇಶಪ್ರೇಮಿ, ಆರ್.ಎಸ್.ಎಸ್.
ಸ್ಥಾಪಕ ಹಡಗೇವಾರ್ ಅವರ ರಾಷ್ಟ್ರಭಕ್ತಿಯ
ಭಾಷಣದ ತುಣುಕನ್ನು ಸೇರಿಸಲಾಗಿದೆ ಎಂದರು.
ನಾರಾಯಣ ಗುರುಗಳ ಮೂಲ ಆಶ್ರಮವಿರುವ
ಕೇರಳದಲ್ಲಿ ಅಂದಿನ ಸರ್ಕಾರ ಆಕ್ರಮವನ್ನೇ
ನಾಶಪಡಿಸಿ ಅದರ ಜಾಗವನ್ನು ಪರಭಾರೆ ಮಾಡಲು
ಹೊರಟಿತ್ತು. ಆಗ ಅಲ್ಲಿನ 40 ಜನ ನಾರಾಯಣ
ಗುರುಗಳ ಅನುಯಾಯಿಗಳು ಅತ್ಯಂತ ಕಷ್ಟಕರ
ಸನ್ನಿವೇಶಗಳನ್ನು ಎದುರಿಸಿ ಸುಪ್ರೀಂ ಕೋರ್ಟ್‌ಗೆ
ಮೊರೆಯಿಟ್ಟರು. ಆಗ ಸುಪ್ರೀಂ ಕೋರ್ಟ್‌ ಸರ್ಕಾರಕ್ಕೆ
ಛೀಮಾರಿ ಹಾಕಿ ನಾರಾಯಣ ಗುರುಗಳ ಆ
ಜಾಗವನ್ನು ಅವರ ಅನುಯಾಯಿಗಳ ವಶಕ್ಕೆ ನೀಡಿತ್ತು.
ಈಗ ಪಠ್ಯ ತೆಗೆದಿದ್ದಾರೆ ಎಂದು ಸುಳ್ಳು ಹೇಳುವವರು
ಆಗ ಸುಮ್ಮನಿದ್ದರು. ಬಿಜೆಪಿ ಆಡಳಿತದ ಕೇಂದ್ರ
ಸರ್ಕಾರ ಅಧಿಕಾರಕ್ಕೆ ಬಂದಾಗ ಮೊಟ್ಟ ಮೊದಲ
ಬಾರಿಗೆ ನಾರಾಯಣ ಗುರುಗಳ ಆಶ್ರಮಕ್ಕೆ 70 ಕೋಟಿ
ರೂ. ಅನುದಾನ ನೀಡಿ ಅದರ ಅಭಿವೃದ್ಧಿಗೆ ಕ್ರಮ
ಕೈಗೊಂಡಿತ್ತು. ಅಂತಹ ಬಿಜೆಪಿ ಸರ್ಕಾರ ಅಸ್ಪೃಶ್ಯತೆ
ವಿರುದ್ಧ ಹೋರಾಡಿದ ನಾರಾಯಣ ಗುರುಗಳ
ಪಠ್ಯವನ್ನು ತೆಗೆಯುವುದುಂಟೇ ? ನಾನು ಕೂಡ
ಅದೇ ಜನಾಂಗದಿಂದ ಬಂದವನು” ಎಂದರು.

“ಉಕ್ರೇನ್‌ನಲ್ಲಿ 18 ಸಾವಿರ ಭಾರತೀಯ
ವಿದ್ಯಾರ್ಥಿಗಳು ಬಂಕರ್‌ನಲ್ಲಿ ಉಕ್ರೇನ್ ಸೈನಿಕರ
ವಕದಲ್ಲಿದ್ದಾಗ ಈ ಕಡೆ ರಷ್ಯಾ ಸೈನಿಕರು ಬಾಂಬ್
ದಾಳಿ, ಆ ಕಡೆ ಉಕ್ರೇನ್ ಸೈನಿಕರಿಂದ ದಬ್ಬಾಳಿಕೆ
ಛೀಮಾರಿ ಹಾಕಿ ನಾರಾಯಣ ಗುರುಗಳ ಆ
ಜಾಗವನ್ನು ಅವರ ಅನುಯಾಯಿಗಳ ವಶಕ್ಕೆ ನೀಡಿತ್ತು.
ಈಗ ಪಠ್ಯ ತೆಗೆದಿದ್ದಾರೆ ಎಂದು ಸುಳ್ಳು ಹೇಳುವವರು
ಆಗ ಸುಮ್ಮನಿದ್ದರು. ಬಿಜೆಪಿ ಆಡಳಿತದ ಕೇಂದ್ರ
ಸರ್ಕಾರ ಅಧಿಕಾರಕ್ಕೆ ಬಂದಾಗ ಮೊಟ್ಟ ಮೊದಲ
ಬಾರಿಗೆ ನಾರಾಯಣ ಗುರುಗಳ ಆಶ್ರಮಕ್ಕೆ 70 ಕೋಟಿ
ರೂ. ಅನುದಾನ ನೀಡಿ ಅದರ ಅಭಿವೃದ್ಧಿಗೆ ಕ್ರಮ
ಕೈಗೊಂಡಿತ್ತು. ಅಂತಹ ಬಿಜೆಪಿ ಸರ್ಕಾರ ಅಸ್ಪೃಶ್ಯತೆ
ವಿರುದ್ಧ ಹೋರಾಡಿದ ನಾರಾಯಣ ಗುರುಗಳ
ಪಠ್ಯವನ್ನು ತೆಗೆಯುವುದುಂಟೇ ? ನಾನು ಕೂಡ
ಅದೇ ಜನಾಂಗದಿಂದ ಬಂದವನು ಎಂದರು.
ಉಕ್ರೇನ್‌ನಲ್ಲಿ 18 ಸಾವಿರ ಭಾರತೀಯ
ವಿದ್ಯಾರ್ಥಿಗಳು ಬಂಕರ್‌ನಲ್ಲಿ ಉಕ್ರೇನ್ ಸೈನಿಕರ
ವಕದಲ್ಲಿದ್ದಾಗ ಈ ಕಡೆ ರಷ್ಯಾ ಸೈನಿಕರು ಬಾಂಬ್
ದಾಳಿ, ಆ ಕಡೆ ಉಕ್ರೇನ್ ಸೈನಿಕರಿಂದ ದಬ್ಬಾಳಿಕೆ ಈಗಿನ ಘನತೆ” ಎಂದರು.

“ಮುಂದಿನ ಜನಾಂಗ ಸತ್ಯಾನ್ವೇಷಣೆ ಮಾಡಬೇಕು.
ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಇಂದಲ್ಲ
ನಾಳೆ ಫಲ ಕೊಡುತ್ತದೆ. ಸಾಹಿತಿಗಳಿಗೂ ಇದನ್ನು
ಅರ್ಥ ಮಾಡಿಸುವ ಕೆಲಸವನ್ನು ಖುದ್ದಾಗಿ
ಮುಖ್ಯಮಂತ್ರಿಗಳೇ ಮಾಡಿದ್ದಾರೆ. ವೈಚಾರಿಕ
ವಿಚಾರದ ಬಗ್ಗೆ ಚರ್ಚೆಗೆ ಸರ್ಕಾರ ಯಾವತ್ತೂ
ಸ್ವಾಗತ ಮಾಡುತ್ತದೆ. ಆದರೆ, ಸತ್ಯವನ್ನು ಮರೆ ಮಾಚಿ
ಸುಳ್ಳು ಇತಿಹಾಸ ತುರುಕುವುದು ಯಾವ ನ್ಯಾಯ?”
ಎಂದರು.

ನಮ್ಮವೀರರಿಗೆ ನಾವೇ ಅಪಚಾರವನ್ನು ಶಿಕ್ಷಣದ
ಮೂಲಕ ಮಾಡಿದಂತಾಗಿತ್ತು. ಈಗ ಅದನ್ನು
ಸರಿಪಡಿಸಲು ಸ್ಪಷ್ಟ ಕಲ್ಪನೆ ಇಟ್ಟುಕೊಂಡು ಸರ್ಕಾರ
ಮುಂದೆ ಬಂದಿದೆ. ಪಠ್ಯ ಸಮಿತಿಯ ಪರಿಷ್ಕರಣೆ
ವಿರುದ್ಧ ಮಾತನಾಡುವ ಮತ್ತು ಸುಳ್ಳನ್ನುಸೃಷ್ಟಿಸುವವರು ಪರಿಷ್ಕೃತ ಪಠ್ಯವನ್ನು ಒಮ್ಮೆ ಸರಿಯಾ
ನೋಡಲಿ, ಬರಗೂರು ರಾಮಚಂದ್ರಪ್ಪ ನೇತೃತ್ವದ
ಸಮಿತಿ ಯಾವುದನ್ನು ಮರೆ ಮಾಚಿತ್ತು ಮತ್ತು
ಯಾವುದನ್ನು ಕೈಬಿಟ್ಟಿತ್ತು? ಈಗ ಯಾವುದು
ಸೇರ್ಪಡೆಯಾಗಿದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ
ವಕೀಲ ವಿವೇಕ್ ಸುಬ್ಬಾರೆಡ್ಡಿ ವಿವರಿಸಿದರು.


ಈ ಸಂದರ್ಭದಲ್ಲಿ ಕುವೆಂಪು ವಿ.ವಿ. ವಿಶ್ರಾಂತ
ಕುಲಪತಿ ಪ್ರೊ. ಎಸ್.ಎ. ಬಾರಿ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯೋತ್ಥಾನ ಬಳಗದ ಶಿವಮೊಗ್ಗ ವಿಭಾಗದ ಅಧ್ಯ
ಡಾ. ಸುಧೀಂದ್ರ ಉಪಸ್ಥಿತರಿದ್ದರು.

Leave a Reply

Your email address will not be published.

This site uses Akismet to reduce spam. Learn how your comment data is processed.