ಪಾವಗಡ 11 ಜುಲೈ 2015: ಗ್ರಾಮೀಣ ಪ್ರದೇಶದ ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತವಾಗಿ ಉತ್ತಮ ಶಿಕ್ಷಣವನ್ನು ನೀಡುವ ವಿದ್ಯಾವಿಕಾಸ ದತ್ತು ಯೋಜನೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಇಂದು ಶುಭಾರಂಭಗೊಂಡಿತು. ಈ ಯೋಜನೆಯ ಅಡಿಯಲ್ಲಿ ಪಾವಗಡ ತಾಲೂಕಿನ ಹದಿನೈದು ಪ್ರೌಢಶಾಲೆಗಳಿಂದ ಆಯ್ಕೆಮಾಡಿದ ಮೂವತ್ತು ಪ್ರತಿಭಾವಂತ ಆದರೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳನ್ನು ದತ್ತು ಪಡೆದು  ಅವರ ಸಂಪೂರ್ಣ ಖರ್ಚುವೆಚ್ಚಗಳನ್ನು ಭರಿಸಿ ಉನ್ನತ ಶಿಕ್ಷಣದವರೆಗೆ ತಯಾರಿಗೊಳಿಸಲಾಗುತ್ತದೆ. ದತ್ತು ಪಡೆದ ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರದೊಂದಿಗೆ ಸಾಮಾಜಿಕ ಕಳಕಳಿಯ ಮನೋಭಾವವನ್ನು ಬಿತ್ತಿ, ಉತ್ತಮ ಪಠ್ಯಶಿಕ್ಷಣದ ಜೊತೆಗೆ ದೇಶದ ಉನ್ನತ ಸ್ಫರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಲುವಾಗಿ ಆತ್ಮಸ್ಥೈರ್ಯವನ್ನು ಮೈಗೂಡಿಸುವ ತರಬೇತಿಯನ್ನು ನೀಡಲಾಗುತ್ತದೆ.

0

ಲೋಕಸೇವಾ ಪ್ರತಿಷ್ಠಾನ ಬೆಂಗಳೂರು, ಪಾವಗಡ ಸೌಹಾರ್ದ ಬ್ಯಾಂಕ್ ಹಾಗೂ ಎಸ್.ಎಸ್.ಕೆ ಸಂಘ. ಪಾವಗಡ ಇವರ ಸಹಯೋಗದಲ್ಲಿ ಪಾವಗಡ ನಗರದಲ್ಲಿ ಇಂದು ವಿದ್ಯಾವಿಕಾಸ ದತ್ತು ಯೋಜನೆಯ ಪ್ರಾರಂಭೋತ್ಸವ ನಡೆಯಿತು. ಸಮಾರಂಭದಲ್ಲಿ ರಾ ಸ್ವ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸೇವಾ ಪ್ರಮುಖ ಶ್ರೀ ಗಣಪತಿ ಹೆಗಡೆಯವರು ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಶ್ರೀ ಸಿ.ನಾಗೇಶ್ ಹಾಗೂ ಶ್ರೀ ಆನಂದರಾವ್, ಶಿಕ್ಷಕರಾದ ಜಯಪ್ರಕಾಶ್ ,ಗೋವಿಂದ ರಾಜ ಶೆಟ್ಟಿ, ಹನುಮಂತರಾಯ, ಶ್ರೀ ರಾಮ ಉಪಸ್ಥಿತರಿದ್ದರು.  ಈ ಸಂದರ್ಭದಲ್ಲಿ ಹಾಜರಿದ್ದ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸುತ್ತಿರುವ ವಿದ್ಯಾ ವಿಕಾಸ ಯೋಜನೆಯ ಕಾರ್ಯವನ್ನು ಶ್ಲಾಘಿಸಿದರು.

ಆರ್ಥಿಕ ಕಾರಣಗಳಿಂದಾಗಿ ಗ್ರಾಮಿಣ ಪ್ರದೇಶದ ವಿದ್ಯಾರ್ಥಿಗಳು ಉತ್ತಮ  ಶಿಕ್ಷಣದಿಂದ ವಂಚಿತರಾಗಬಾರದೆನ್ನುವ ಸದುದ್ಧೇಶದೊಂದಿಗೆ ವಿದ್ಯಾ ವಿಕಾಸ ದತ್ತು ಯೋಜನೆ ಕಾರ್ಯನಿರ್ವಹಿಸಲಿದೆ.

1 2 3 4 IMG-20150711-WA0005

 

 

 

 

Leave a Reply

Your email address will not be published.

This site uses Akismet to reduce spam. Learn how your comment data is processed.