ಕೊಪ್ಪ: ಕೇಂದ್ರ ಸರ್ಕಾರದ ರಾಷ್ಟ್ರೀಯ ಮುಕ್ತ ವಿದ್ಯಾಲಯ(NIOS) ಬೆಂಗಳೂರು ಕೇಂದ್ರದ ನಿರ್ದೇಶಕ ಡಾ| ಸತೀಶ್ ಹಾಗೂ ಕಾರ್ಯಾಲಯ ಕಾರ್ಯದರ್ಶಿ ಶಂಕರ್ ಅವರು ಮಂಗಳವಾರ ಹರಿಹರ ಪುರದ ಪ್ರಬೋದಿನೀ ಗುರುಕುಲಕ್ಕೆ ಭೇಟಿ ನೀಡಿ ಸಮಾಲೋಚನಾ ಸಭೆ ನಡೆಸಿದರು.
ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈತ್ರೇಯೀ ಗುರುಕುಲ, ಹರಿಹರಪುರ ಶಾರದಾ ಲಕ್ಷ್ಮೀ ನೃಸಿಂಹಪೀಠದ ವೇದಪಾಠಶಾಲೆ ಹಾಗೂ ಬಾಳೆಹೊನ್ನೂರಿನಶ್ರೀ ರಂಭಾಪುರಿಸಂಸ್ಥಾನದ ಪಾಠಶಾಲೆ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಯೋಜನೆ ವತಿಯಿಂದ ನಡೆಸಲಾಗುವ ಭಾರತೀಯ ಜ್ಞಾನ ಪರಂಪರಾ’ ವಿಭಾಗದ ಶೈಕ್ಷಣಿಕ ವಿಷಯಗಳ ಬಗ್ಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಪಾಲ್ಗೊಂಡ ಸಂಸ್ಥೆಗಳ ಪ್ರತಿನಿಧಿಗಳು ರಾಷ್ಟ್ರೀಯ ಮುಕ್ತ ವಿದ್ಯಾಲಯದ (N.I.0.S) ಭಾರತೀಯ ಜ್ಞಾನಪರಂಪರಾ ವಿಭಾಗದಲ್ಲಿ ಮುಂಬರುವ ಶೈಕ್ಷಣಿಕ ವರ್ಷದಿಂದ ನೋಂದಾಯಿಸಿಕೊಳ್ಳುವ ಬಗ್ಗೆ ಸಹಮತ ವ್ಯಕ್ತಪಡಿಸಿದರು.
ಸಭೆ ಬಳಿಕ ಹರಿಹರಪುರ ಶ್ರೀ ಶಾರದಾ ಲಕ್ಷ್ಮೀ ನೃಸಿಂಹ ಪೀಠದ ಪೀಠಾಧಿಪತಿ ಶ್ರೀಮದ್ಜಗದ್ಗುರು ಶ್ರೀಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದಮಹಾಸ್ವಾಮಿಗಳ ಆಶೀರ್ವಾದ ಪಡೆದು ಶೃಂಗೇರಿಗೆ ತೆರಳಿದ ಅಧಿಕಾರಿಗಳು, ಶೃಂಗೇರಿ ಶ್ರೀ ಶಾರದಾ ದಕ್ಷಿಣಾಮ್ನಾಯ ಪೀಠದ ವೇದ ಪಾಠಶಾಲೆ ಅಧ್ಯಕ್ಷರಾದ ವಿನಾಯಕ ಉಡುಪ ಹಾಗೂ ಹಿರಿಯ ಅಧ್ಯಾಪಕರೊಂದಿಗೆ ಸಮಾಲೋಚನೆ ನಡೆಸಿದರು.
ಶ್ರೀಮದ್ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ದರ್ಶನ ಮಾಡಿ ಶೃಂಗೇರಿ ಪೀಠ ವತಿಯಿಂದ ನಡೆಸಲಾಗುತ್ತಿರುವ ವೇದಪಾಠಶಾಲೆಯನ್ನು ರಾಷ್ಟ್ರೀಯ ಮುಕ್ತ ವಿದ್ಯಾಲಯದ (N.I.0.S) ಭಾರತೀಯ ಜ್ಞಾನ ಪರಂಪರಾ ವಿಭಾಗದಡಿಯಲ್ಲಿ ನೋಂದಾಯಿಸಿ ಕೊಳ್ಳುವ ಬಗ್ಗೆ ಮಾಹಿತಿ ನೀಡಿದರು.
ಶೃಂಗೇರಿಭೇಟಿಯನಂತರಹೊರನಾಡಿನ ಶ್ರೀ ಆದಿಶಕ್ಷಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅಲ್ಲಿಂದ ಬೆಂಗಳೂರಿಗೆ ತೆರಳಿದರು, ಹರಿಹರಪುರದ ಪ್ರಬೋದಿನೀ ಗುರುಕುಲದ ವ್ಯವಸ್ಥಾಪಕ ಕೆ.ಉಮೇಶ್ ರಾವ್ ಹಾಗೂ ಹಿರಿಯರಾದ ನಾರಾಯಣ ಶೇವಿರೆ ಅವರು ಅಧಿಕಾರಿಗಳೊಂದಿಗೆ ಉಪಸ್ಥಿತರಿದ್ದರು.