ಕಾಶ್ಮೀರಿ ಪಂಡಿತರ ಹತ್ಯಾಕಾಂಡದ ಕುರಿತಾದ ಸಿನೆಮಾ ‘ದಿ ಕಾಶ್ಮೀರ್ ಫೈಲ್ಸ್’ ಮಾರ್ಚ್ 11ರಂದು ಬಿಡುಗಡೆಯಾಗಲಿದೆ.ಮಿಥುನ್ ಚಕ್ರೊಬೊರ್ತಿ, ಅನುಪಮ್ ಖೇರ್,ಪಲ್ಲವಿ ಜೋಶಿ,ಪ್ರಕಾಶ ಬೆಳವಾಡಿ ಮುಂತಾದವರ ತಾರಾಗಣವಿದ್ದು ವಿವೇಕ್ ಅಗ್ನಿಹೋತ್ರಿ ಇದನ್ನು ನಿರ್ದೇಶಿಸಿದ್ದು ಅಭಿಷೇಕ್ ಅಗರ್ವಾಲ್ ನಿರ್ಮಿಸಿದ್ದಾರೆ‌.ಸುಮಾರು 20ಕೋಟಿಯಷ್ಟು ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಸಿನೆಮಾವು ಮೊದಲ ಬಾರಿಗೆ ಕಾಶ್ಮೀರಿ ಪಂಡಿತರ ನೋವು,ಮಾನವ ಹಕ್ಕುಗಳ ಕುರಿತು ದನಿಯೆತ್ತಿದೆ.

ಸಿನೇಮಾ ಬಿಡುಗಡೆಗೆ ಮುನ್ನವೇ ಯುಪಿಯ ಹುಸೇದ್ ಸೈದ್ “ಇದೊಂದು ಪ್ರಾಪಗಾಂಡದ ಸಿನೆಮಾವಾಗಿದ್ದು ಇದು ಕೇವಲ ಒಂದು ದೃಷ್ಟಿಕೋನದಿಂದ ಮಾತ್ರವೇ ಮಾಡಲಾಗಿದೆ,ಈ ಸಿನೆಮಾದಿಂದ ಮುಸ್ಲಿಂ ಸಮುದಾಯದ ಭಾವನೆಗಳಗೆ ನೋವಾಗಲಿದೆ” ಎಂದು ಕೋರ್ಟಿನ ಮೊರೆ ಹೋಗಿದ್ದಾರೆ‌.

ಈ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯವು ಸಿನೇಮಾವು ಈ ಹಿಂದಿನಂತೆಯೇ ತೆರೆಯ ಮೇಲೆ ತರಲು ಒಪ್ಪಿಗೆ ಸೂಚಿಸಿದೆ.

ಬಾಲಿವುಡ್ಡಿನ ಅನೇಕ ಸೆಲೆಬ್ರಿಟಿಗಳು ಈ ಸಿನೇಮಾದ ಪ್ರಚಾರದಿಂದ ಹಿಂದೆ ಸರಿಯುತ್ತಿದ್ದು ಪ್ರಸಿದ್ಧ ಕಾಮಿಡಿ ನೈಟ್ಸ್ ವಿದ್ ಕಪಿಲ್ ಶೋನ ಕಪಿಲ್ ಶರ್ಮಾ ಈ ಚಿತ್ರದ ಪ್ರಚಾರ ಮಾಡಲು ನಿರಾಕರಿಸಿದ್ದು ಅನೇಕ ರಾಷ್ಟ್ರ ಪ್ರಶಸ್ತಿ ವಿಜೇತ ನಟರಿದ್ದರೂ ಸಹ ಸ್ಟಾರ್ ನಟರಿಲ್ಲದ ನೆಪ ಹೇಳಿ ಪ್ರಚಾರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾಶ್ಮೀರಿ ಪಂಡಿತರನ್ನು ಅಲ್ಲಿನ ಕಣಿವೆಗಳಿಂದ 1990ರಲ್ಲಿ ಅವರನ್ನು ಮತಾಂತರ ಮಾಡುವ ಮತಾಂತರಕ್ಕೆ ಒಪ್ಪದಿದ್ದವರನ್ನು ಕಣಿವೆಯಿಂದ ಓಡಿಸಿ,ತಡೆಯೊಡ್ಡಿದವರನ್ನು ಹತ್ಯೆ ಮಾಡಿ ಜಿಹಾದ್ ಮಾಡಲಾಗಿತ್ತು. ಈ ದಾರುಣ ಕಥನವನ್ನು ಐತಿಹಾಸಿಕ ಸಾಕ್ಷ್ಯಾಧಾರಗಳನ್ನಿಟ್ಟುಕೊಂಡು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಸಿನೆಮಾ ಮಾಡಿದ್ದಾರೆ.
#TheKashmirFiles

Leave a Reply

Your email address will not be published.

This site uses Akismet to reduce spam. Learn how your comment data is processed.