ಬೆಂಗಳೂರಿನ ಟೌನ್ಹಾಲ್ನಲ್ಲಿ ದಕ್ಷಿಣ ಕನ್ನಡದ ಬಿಜೆಪಿಯ ಹಿಂದೂ ಯುವ ಕಾರ್ಯಕರ್ತ ಬೆಳ್ಳಾರೆಯ ಶ್ರೀ ಪ್ರವೀಣ್ ಅವರ ಹತ್ಯೆಯನ್ನು ಖಂಡಿಸಿ ಹಿಂದು ಹಿತರಕ್ಷಣಾ ಸಮಿತಿ,ಕರ್ನಾಟಕದ ವತಿಯಿಂದ ಬೃಹತ್ ಪ್ರತಿಭಟನೆಯನ್ನು ಬೆಂಗಳೂರಿನ ಟೌನ್ಹಾಲ್ನಲ್ಲಿ ಹಮ್ಮಿಕೊಂಡಿತ್ತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಾಮಾಜಿಕ ಕಾರ್ಯಕರ್ತರಾದ ಪಟಾಪಟ್ ಶ್ರೀನಿವಾಸ್ ಅವರು ಮಾತನಾಡಿ, “ಜಾತಿ ಮತ ಪಂಥ ಭಾಷೆಗಳನ್ನು ಬಿಟ್ಟು ಒಂದಾಗಬೇಕು. ಇಲ್ಲಿರುವ ಪಿಎಫ್ಐನ ಮತಾಂಧರು 2047ರಲ್ಲಿ ಇಸ್ಲಾಮಿಕ್ ದೇಶವನ್ನಾಗಿಸುವ ಸಂಕಲ್ಪ ಮಾಡಿದ್ದಾರೆ.ಇವತ್ತು ನಾವು ನಮ್ಮ ರಕ್ಷಣೆಗಾಗಿ ಸರಕಾರದ ಕಡೆಗೆ ನೋಡ್ತಿದ್ದೇವೆ,ನಾವು ಸದ್ಯ ನಮ್ಮ ರಕ್ಷಣೆ ಮಾಡಿಕೊಳ್ಳಬೇಕು. ನಾವೆಲ್ಲ ಒಗ್ಗಟ್ಟಾಗಬೇಕು,ಮತಾಂಧ ಶಕ್ತಿಗಳನ್ನು ಸೋಲಿಸಬೇಕು.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಇಸ್ಲಾಮ್ ಕುರಿತಂತೆ ಹೇಳಿದ ಎಚ್ಚರಿಕೆಯನ್ನು ನಾವು ಗಂಭೀರವಾಗಿ ಪರಿಗಣಿಸಬೇಕಿದೆ. ಹಿಂದೂ ಕಾರ್ಯಕರ್ತರ ಮೇಲೆ ದಾಳಿ ಮಾಡಿದವರ ಬೇಲ್ಗಳನ್ನು ವಾಪಾಸ್ ಪಡೆಯಬೇಕು,ನ್ಯಾಯ ದೊರಯಬೇಕು ಎನ್ನುವುದು ನಮ್ಮ ಆಗ್ರಹ” ಎಂದರು.
ಸಾಮಾಜಿಕ ಕಾರ್ಯಕರ್ತರು ಯುವಾ ಬ್ರಿಗೆಡಿನ ನೇತಾರರಾದ ಚಕ್ರವರ್ತಿ ಸೂಲಿಬೆಲೆಯವರು ಮಾತನಾಡಿ “ಹೇಳಬೇಕಾದ್ದನ್ನ ಹೇಳುವುದಕ್ಕೆ ನಾಚಿಕೆ ಯಾಕೆ? ನಿರ್ವೀರ್ಯ ಸರಕಾರ ಮತ್ತು ಪೋಲೀಸರು ಕಾರ್ಯಕರ್ತರ ಮೇಲೆ ಹಿಂದಿನಿಂದ ದಾಳಿ ನಡೆಸಿದ್ದಾರೆ ಅದು ಅತ್ಯಂತ ಶೋಚನೀಯ ಸಂಗತಿ. ಇಸ್ಲಾಮಿನ ಗಲಾಟೆ ಇವತ್ತಿನದಲ್ಲ,ಒಬ್ಬ ಬಿಜೆಪಿಯ ಕಾರ್ಯಕರ್ತರ ಹತ್ಯೆಯೊಂದಕ್ಕೇ ಅದು ನಿಲ್ಲೋದಿಲ್ಲ. ಕಮಲೇಶ್ ತಿವಾರಿಯನ್ನು 2015ರಲ್ಲಿ ಮಾಡಿದ ಕಮೆಂಟಿಗೆ 2019ರಲ್ಲಿ ಕೊಲೆ ಮಾಡಿದರು. ಪ್ರವೀಣನ ಹತ್ಯೆಗೆ ಕಾರಣ ಏನು? ಸರ್ ತನ್ ಸೆ ಜುದಾ ಅಂತ ತಲೆ ಕತ್ತರಿಸುವವನನ್ನು ಮಧ್ಯ ರಸ್ತೆಯಲ್ಲಿ ಗಲ್ಲಿಗೆರಿಸಬೇಕು. ಸರಕಾರ ಹರ್ಷನ ಕೊಲೆ ಮಾಡಿದವರ ವಿರುದ್ಧ ನಿಂತಿದ್ದರೆ ಇವತ್ತು ಕಾರ್ಯಕರ್ತರನ್ನು ಕಳೆದುಕೊಳ್ಳುವ ಈ ಪರಿಸ್ಥಿತಿ ಬರುತ್ತಿರಲಿಲ್ಲ. ಒಟ್ಟಾರೆ ಹಿಂದೂಗಳ ಮನೋಭಾವದಲ್ಲಿ ಬದಲಾವಣೆ ಬರಬೇಕಾದ ಅಗತ್ಯವಿದೆ.ಹಿಂದೂಗಳು ಸರಕಾರಗಳಿಗೆ ಎಚ್ಚರಿಕೆ ನೀಡಬೇಕು, ಈ ಎಲ್ಲದಕ್ಕೂ ಹಿಂದೂ ಸಮಾಜ ಸರಿಯಾದ ಉತ್ತರ ಕೊಡಲಿದೆ. ಹಿಂದೂ ಸಮಾಜಕ್ಕೆ ಶಿವಾಜಿ ಮಹಾರಾಜರನ್ನು ತಯಾರು ಮಾಡುತ್ತದೆ, ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದ ಮೇಲೆ ನಂಬಿಕೆ ಇದೆ. ನಾವು ಈ ಹತ್ಯೆಯ ಹೆದರಿಕೆಯಿಂದ ಕುಗ್ಗಬಾರದು.ಹಿಂದೂ ತರುಣರು ಬಲವಾನರಾಗಬೇಕು, ಶಕ್ತಿಶಾಲಿಗಳಾಗಬೇಕು” ಎಂದು ಕರೆ ನೀಡಿದರು
ವಕೀಲರ ಸಂಘದ ವಿವೇಕ್ ರೆಡ್ಡಿ,ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಸಂಬರ್ಗಿ,ಮನೋಹರ ಅಯ್ಯರ್, ಪುನೀತ್ ಕೆರೆಹಳ್ಳಿ, ಕಾ.ಶಂ.ಶ್ರೀಧರ್, ಕರುಣಾಕರ್ ರೈ, ಅನಿಲ್ ಚಳಗೇರಿ ಮುಂತಾದವರು ಉಪಸ್ಥಿತರಿದ್ದರು.