ಒಗ್ಗಟ್ಟು ಇದು ಅತಿದೊಡ್ಡ ಶಕ್ತಿ, ಇದನ್ನು ಒಡೆದರೆ ಆಳುವುದು ಬಹಳ ಸುಲಭ, ಹೀಗೆಂದು ಯಾರು ಹೇಳಿದ್ದು? ಅಖಂಡ ಭಾರತವನ್ನು ಸಂಚರಿಸಿ ಭಾರತದ ಸಂಸ್ಕೃತಿಯನ್ನು, ಇಡೀ ಭಾರತದಲ್ಲಿ ಇರುವ ಒಗ್ಗಟ್ಟನ್ನು ನೋಡಿ ಬೆರಗಾಗಿ, ಭಾರತವನ್ನು ಆಳಬೇಕಾದರೆ ಭಾರತವನ್ನು ಒಡೆಯಬೇಕು ಎಂದು ಹೇಳಿದ್ದು ‘ಮೆಕಾಲೆ’ ಎಂಬ ಮಾತಿದೆ, ವಾಸ್ತವವಾಗಿ ಈ ಮಾತನ್ನು ಮೇಕಾಲೆ ಹೇಳಲಿಲ್ಲ ಇದೊಂದು ಸುಳ್ಳು ಸುದ್ದಿ ಎಂಬ ಮಾಹಿತಿಯೂ ಸಿಗುತ್ತದೆ, ಸುದ್ದಿ ಸುಳ್ಳೊ ಸತ್ಯವೋ ನಾವು ಈಗ ಮುಂದಕ್ಕೋಗೋಣ, 1947 ರಲ್ಲಿ ಮೌಂಟ್‌ ಬ್ಯಾಟನ್ ಮಾತ್ರ ಸರಿಯಾಗಿ ಬತ್ತಿ ಇಟ್ಟ, ಪಾಕಿಸ್ತಾನ ಮತ್ತು ಭಾರತವನ್ನು ತುಂಡು ಮಾಡಿದ ಪಾಪಿ ಈ ಮೌಂಟ್‌ ಬ್ಯಾಟನ್, ಅದನ್ನು ಒಪ್ಪಿದ್ದು ನಮ್ಮ ಆ ಮೂರು ಅತಿ ಬುದ್ಧಿವಂತರು, ಭಾರತ ಮತ್ತು ಪಾಕಿಸ್ತಾನ್ ಎಂದು ಭಾಗವಾದಾಗ ಮೌಂಟ್‌ ಬ್ಯಾಟನ್ ಎಲ್ಲ ಮುಸ್ಲೀಮರು ಪಾಕಿಸ್ತಾನಕ್ಕೆ ಹೋಗಬೇಕು ಎಂಬ ಒಂದು ಕಟ್ಟುನಿಟ್ಟಿನ ಅಂಶವನ್ನೂ ಸೇರಿಸಿದ್ದನಂತೆ ಎಂದು ಉಲ್ಲೇಖ ಸಿಗುತ್ತದೆ, ಸರಿ ಬಿಡಿ ಈ ಮೌಂಟ್‌ ಬ್ಯಾಟನ್ ಎನು ಹೇಳಿದ ಅದನ್ನು ನಮ್ಮ ಮೂರು ಮಹಾ ಬುದ್ಧಿವಂತರು ಏನು ಅರ್ಥಮಾಡಿಕೊಂಡರು, ನಂತರ ಏನು ಜನಸಾಮಾನ್ಯರಿಗೆ ಹೇಳಿದರು, ಅದನ್ನು ಮುಂದಿನವರು ಹೇಗೆಲ್ಲ ಬದಲಿಸಿದ್ರೂ, ಮುಂದೆ ಏನೆಲ್ಲ ಆಯಿತು, ಎಷ್ಟು ಹಿಂದುಗಳ ಹತ್ಯೆ ಆಯಿತು, ಇದೆಲ್ಲ ಯಾರಿಗೆ ಸದ್ಯ ಯಾರಿಗೆ ಬೇಕು?

ಸದ್ಯಕ್ಕೆ ನಾವು 2014 ಕ್ಕೆ ಬರೋಣ, ಭಾರತದಲ್ಲಿ ಬದಲಾವಣೆ ಪರ್ವ ಪ್ರಾರಂಭವಾದ ವರ್ಷ, 2014 ಅಭೂತ ಪೂರ್ವ ಯಶಸ್ಸಿನೊಂದಿಗೆ ಅಧಿಕಾರ ಹಿಡಿದ B J P ಯನ್ನು ವಿರೋಧ ಪಕ್ಷದವರು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ, ಈ ಹಿಂದೆಯೂ ವಾಜಪೇಯಿ ಬಂದು 5 ವರ್ಷ ಮಾತ್ರ ಅಧಿಕಾರ ಮಾಡಿದ್ದರಲ್ಲ, ಸರಿ ಈ ಬಾರಿಯೂ 2013 – 2019 ರ ವರೆಗೆ ಮಾಡಲಿ, ನಂತರ ಜನ ನಮಗೆ ಚುನಾಯಿಸುತ್ತಾರೆ, ಅಂತ ಭಾವಿಸಿ ಸ್ವಲ್ಪ ಸುಮ್ಮನಿದ್ರೂ, ಆದರೂ ಜನಗಳಲ್ಲಿ ತಾವು ಮುಂದೆ ಬರುತ್ತೇವೆ B J P ಮಾಡಿದ ಎಲ್ಲವನ್ನು ವಜಾ ಮಾಡುತ್ತೇವೆ ಎಂಬ ಅಶ್ವಾಸನೆಯನ್ನು ಕೊಡುತ್ತಾ ಇದ್ದರು, ಆದರೆ 2019 ರಲ್ಲಿಯೂ B J P ತನ್ನ ಗೆಲುವಿನ ನಾಗಲೋಟ ಮುಂದುವರೆಸಿದೆ, ಲೋಕ ಸಭೆಯಲ್ಲಿ ಮಾತ್ರವಲ್ಲದೆ ರಾಜ್ಯ ಸಭೆಯಲ್ಲಿಯೂ B J P ಗೆ ಬಹುಮತ ಬಂದಿದೆ, ಇದರ ಅರ್ಥ B J P ಸದ್ಯಕ್ಕೆ ದೇಶದ ತುಕ್ಕು ಹಿಡಿದ ಕಾನೂನುಗಳನ್ನು ಬದಲಾಯಿಸಲು ಶಕ್ತಿ ಬಂದಿದೆ ಎಂದಾಯಿತು, ಇದು ಕೇಂದ್ರದ ಕಥೆಯಾದರೆ ರಾಜ್ಯಗಳಲ್ಲಿಯೂ , ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಬಲವಾಗುತ್ತಿದೆ, ಸದ್ಯಕ್ಕೆ ವಿರೋಧ ಪಕ್ಷದವರು ಬಲವಾಗಿರುವುದು ಸರ್ಕಾರಿ ಕಚೇರಿಗಳ ಮಟ್ಟದಲ್ಲಿ ಮಾತ್ರ.

2024 ರಲ್ಲಿಯೂ B J P ಮತ್ತೊಮ್ಮೆ ಅಧಿಕಾರವನ್ನು ಪಡೆಯಲಿದೆ ಮತ್ತು 2045 ರ ವರೆಗೆ B J P ಅಧಿಕಾರದಲ್ಲಿ ಇರುತ್ತದೆ ಎಂದು ಎಲ್ಲ ಸಮೀಕ್ಷೆಗಳು ಹೇಳುತ್ತಿವೆ, ಇದು ನುಂಗಲಾರದ ತುತ್ತು ಆಗುತ್ತಿದೆ, ಅಧಿಕಾರದಲ್ಲಿ ಇದ್ದು ಅಭ್ಯಾಸವಾದವರಿಗೆ ಈಗ ಪರಿಸ್ಥಿತಿ ಹೇಗೆಂದರೆ ಬೋನಿನಲ್ಲಿ ಸದಾ ಮಲಗಿರುವ ಪ್ರಾಣಿಯಂತಾಗಿದೆ, ಇದೆಲ್ಲದರ ಹಿನ್ನೆಲೆಯಲ್ಲಿ ಈ ಕಾರ್ಯಕರ್ತರ ಹತ್ಯೆ ಇರಬಹುದು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯ ನಿಟ್ಟಾರುವಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಹತ್ಯೆಯಾಗಿದೆ. ಅತ್ಯಂತ ಬಡತನದ ಹಿನ್ನೆಲೆಯಿಂದ ಬಂದು ಸಾಮಾಜಿಕವಾಗಿ ಅತ್ಯಂತ ಸಕ್ರಿಯವಾಗಿದ್ದ ಅವರು ತಮ್ಮ ಊರಿನ ಧಾರ್ಮಿಕ, ರಾಜಕೀಯ ಕಾರ್ಯಗಳಲ್ಲಿ ತೊಡಗಿಕೊಂಡಿದ್ದವರು. ಬಿಜೆಪಿಯ ಯುವ ಮೋರ್ಚಾದ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ,ಅತ್ಯಂತ ಆಸ್ಥೆಯಿಂದ ಧರ್ಮ ಸಂಸ್ಕೃತಿಯ ರಕ್ಷಣೆಯಷ್ಟೇ ಅಲ್ಲದೆ ಪ್ರಾಣಿಪ್ರಿಯರಾಗಿದ್ದ ಉದಾತ್ತ ಚಿಂತನೆಯ ಮನುಷ್ಯರಾಗಿ ಹೆಸರು ಮಾಡಿದವರು ಪ್ರವೀಣ್. ಅಂದರೆ ಹಿಂದುತ್ವಕ್ಕಾಗಿ ದುಡಿದ ಕಾರ್ಯಕರ್ತ ಟಾರ್ಗೆಟ್ ಆಗಿದ್ದಾನೆ.

ನಿನ್ನೆ ನಡೆದ ಬೆಳವಣಿಗೆಗಳು ಹಿಂದೂ ಪರ ರಾಜಕೀಯ ಕಾರ್ಯಕರ್ತರ ಒಳಗಿದ್ದ ಆಕ್ರೋಶಕ್ಕೆ ದನಿಯಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಬಿಜೆಪಿಯೂ ಎಚ್ಚೆತ್ತು ನಡೆಯುವ ಕಾಲ ಆರಂಭವಾಗಬೇಕಿದೆ.ಕಾರ್ಯಕರ್ತರ ಮೇಲಿನ ಲಾಠಿ ಏಟು, ಮಾತುಮಾತಿನ ಕಠಿಣ ಕ್ರಮ,ಹತ್ಯೆ ಮಾಡಿದವರ ವಿಲಾಸೀ ಜೀವನ, ನಾಯಕರ ಉಡಾಫೆ ಎಲ್ಲದರಿಂದ ಕಾರ್ಯಕರ್ತರು ರೋಸಿ ಹೋಗಿರುವುದಂತೂ ಸತ್ಯ. ಯಾವುದೇ ಫಲಾಪೇಕ್ಷೆ ಇಲ್ಲದೆ ದುಡಿದ ತರುವಾಯ ಪ್ರತಿಫಲವಾಗಿ ಹತ್ಯೆಯಾಗುತ್ತದೆ ಎಂದರೆ ಎಂಥವನ ಎದೆಯಲ್ಲೂ ರೋಷವುಕ್ಕದೆ ನೀರುಕ್ಕಲು ಸಾಧ್ಯವೆ? ಹಿಂದುತ್ವಕ್ಕಾಗಿ ಮಾಡಿದ ಕಾರ್ಯವನ್ನು ಯಾವ ಪಕ್ಷಕ್ಕೂ ನಾಯಕರಿಗೂ ಅಡ ಇಟ್ಟಿಲ್ಲ ಎಂಬ ವಿಚಾರವನ್ನು ನಿನ್ನೆ ನಡೆದ ಅನೇಕ ಘಟನೆಗಳಿಂದ ಕಾರ್ಯಕರ್ತ ಸಾಬೀತು ಮಾಡಿದ್ದಾನೆ.

ಜಾಗೃತವಾಗಿರುವ ಕಾರ್ಯಕರ್ತರ ಪಡೆ ಬಿಜೆಪಿಯ ದೊಡ್ಡ ಆಸ್ತಿ, ಅಷ್ಟಲ್ಲದೆ ಬಿಜೆಪಿಯ ಹಿಂದಿನ ಜನಸಂಘ ಆರಂಭವಾದದ್ದೇ ಹಿಂದೂಗಳ ಹಿತರಕ್ಷಣೆಯ ಕಾರಣಕ್ಕಾಗಿ, ಹೀಗಿರುವಾಗ ಆರಂಭದ ಮೂಲ ಪ್ರೇರಣೆಯ ಅಂಶವನ್ನೇ ಬಿಜೆಪಿಯ ನಾಯಕರು ಮರೆತರೆ? ಹೀಗನ್ನಿಸುವುದು ಅಧಿಕಾರದ ಮದದಲ್ಲಿ ಸಂವೇದನೆಯಿಲ್ಲದ ನಾಯಕರನ್ನು ನೋಡುವಾಗ, ಅಷ್ಟಕ್ಕೂ ಕಾರ್ಯಕರ್ತರ ಸಾವಿಗೆ ನ್ಯಾಯ ದೊರಕಿಸಿ ಕೊಡುವುದು ನಮ್ಮ ಜವಾಬ್ದಾರಿಯೆ? ಅವರಿಗೆ ಸೆಕ್ಯೂರಿಟಿ ಕೊಡುವುದು ನಮ್ಮ ಕೆಲಸವಲ್ಲ ಅಂತ ನುಣುಚಿಕೊಳ್ಳುವ ಮಾತುಗಳಾಡುವಾಗ!

ಒಂದಂತೂ ಸತ್ಯ, ಹಿಂದುಗಳು ಒಂದಾಗಿದ್ದಾರೆ, ಇನ್ನೊಂದು ಕಡೆ ಅನ್ಯ ಧರ್ಮದವರೂ ಒಟ್ಟಾಗುತ್ತಿದ್ದಾರೆ, ಅನ್ಯಧರ್ಮದವರಿಂದ ಭಾರತಕ್ಕೆ ಅದರಲ್ಲಿಯೂ ಹಿಂದೂ ಧರ್ಮಕ್ಕೆ ದೊಡ್ಡ ಹೊಡೆತ ಎಂಬುದು ಹಿಂದುಗಳಿಗೆ ನಿಧಾನಕ್ಕೆ ಅರ್ಥವಾಗುತ್ತಿದೆ. B J P ಯನ್ನು ವಿರೋಧಿಸುವ ಪಕ್ಷಗಳು, ಹಿಂದುಗಳಲ್ಲಿ ಸಹ ಭಯ ಮತ್ತು ಜಾಗರೂಕತೆ ಮನೆ ಮಾಡುತ್ತಿದೆ, ಹಿಂದುಗಳು ತನ್ನ ದಿನನಿತ್ಯದ ವ್ಯಾಪರ ವ್ಯವಹಾರದಲ್ಲಿ ಕನಿಷ್ಟ ಪ್ರಮಾಣದಲ್ಲಿಯಾದರೂ ಎಚ್ಚೆತ್ತುಕೊಂಡಿದ್ದಾನೆ, ಭಾರತ ಉಳಿಯಬೇಕಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮನದಟ್ಟಾಗಿದೆ, ಕಳೆದ 8 ವರ್ಷದಿಂದ ಕೇಂದ್ರದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿದೆ, ರಾಜ್ಯಗಳಲ್ಲಿ ಭಾರೀ ಭ್ರಷ್ಟಾಚಾರ ಎಂಬ ಸುದ್ದೀ ಇದೆ ಆದರೂ ಅದನ್ನು ಸಾಕ್ಷಿ ಸಹಿತ ಸಾಬೀತು ಮಾಡಲು ವಿರೋಧ ಪಕ್ಷದವರು ವಿಫಲರಾಗಿದ್ದಾರೆ, ಹಾಗಿದ್ದರೆ ಭವಿಷ್ಯದಲ್ಲಿ ಅಧಿಕಾರ ಬೇಕಾದರೆ ಹಿಂದುಗಳನ್ನು ಕೆಳಮಟ್ಟದಲ್ಲಿ ಒಡೆಯಬೇಕು, ಹಿಂದುಗಳಿಗೆ ಮತ್ತು ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂಬ ಭಯವನ್ನು ಜನರಲ್ಲಿ ಹುಟ್ಟಿಸಬೇಕು, ಇದರ ಹುನ್ನಾರ ಕಾರ್ಯಕರ್ತನ ಬರ್ಬರ ಹತ್ಯೆ ಹುನ್ನಾರ ಇರಬಹುದಾ? ನೆನಪಿರಲಿ B J P ಯ ಮತ್ತು ಹಿಂದೂ ಕಾರ್ಯಕರ್ತರ ಹತ್ಯೆ ಮಾತ್ರ ಆಗುವುದು, ಬೇರೆ ಯಾವ ಪಕ್ಷದಲ್ಲಿಯೂ ಕಾರ್ಯಕರ್ತರಿಲ್ಲವೇ? ಕಾರ್ಯಕರ್ತರು ಎಂದರೆ RSS , B J P ಮತ್ತು ಹಿಂದೂ ಸಂಘಟನೆಯವರು ಮಾತ್ರವೇ?

Kishore Patwardhan

Leave a Reply

Your email address will not be published.

This site uses Akismet to reduce spam. Learn how your comment data is processed.