Dr ManMohan Vaidya addressing the Press

Dr Manmohan Vaidya, Akhil Bharatiya Prachar Pramukh today told to press persons that RSS will pass resolution about the nation-wide debated topic, Corruption.

Dr ManMohan Vaidya addressing the Press

Corruption is indeed a challenge that all country-men are facing, in this regard,Pratinidhi Sabha will.pass a resolution in tackling the roots of corruption.

He was addressing media persons Media centre at ABPS venue, Puttur.

Whoever it may be RSS will not tolerate corruption in any form. Irrespective of individuals or institutes, RSS will not target any individual or neither will it spare any one.” Dr Vaidya told.  He opinioned that it is sad to that corruption has hit all walks of life including judiciary. It symbolizes how corruption is spreading like a cancer. Sangh seeks cooperation of all citizens of the nation to fight against corruption. ABPS will think about this and will be discussed in the sessions of Pratinidhi Sabha.

For a question related the alleged involvement of Indresh kumar in terror related activities, Dr Vaidya said, “Sangh has already clarified that it neither believes in violence nor supports it. At stages of inquiry, Indresh kumar has cooperated to the investigative agencies. He never absconded!”

Pratinidhi Sabha also will take a decision on China’s interference in border issues, which is a concern of national security. Hence ABPS also will pass a resolution about it, Dr Vaidya concluded.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆಯ ಮೊದಲ ದಿನವಾದ ಇಂದು ಸಂಘದ ಅಖಿಲ ಭಾರತ ಪ್ರಚಾರ ಪ್ರಮುಖರಾದ ಡಾ.ಮನಮೋಹನ್ ವೈದ್ಯ ಅವರು ಸುದ್ದಿ ಗೋಷ್ಠಿ ನಡೆಸಿದರು.

ದೇಶವನ್ನು ಕಾಡುತ್ತಿರುವ ಭ್ರಷ್ಠಾಚಾರದ ಬಗ್ಗೆ ಮತ್ತು ಗಡಿ ತಂಟೆ ಮಾಡುತ್ತಿರುವ ಚೀನಾದ ಆಕ್ರಮಣಕಾರಿ ನೀತಿಯ ಬಗ್ಗೆ ಚರ್ಚಿಸಿ, ಈ ಪ್ರತಿನಿಧಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ ಎಂಬುದನ್ನು ಪತ್ರಕರ್ತರ ಗಮನಕ್ಕೆ ತಂದರು.

“ಯಾರೇ ಆಗಿರಲಿ ಭ್ರಷ್ಠ ವ್ಯಕ್ತಿಯ ಸಮರ್ಥನೆಯನ್ನು ಸಂಘವು ಮಾಡುವುದಿಲ್ಲ” ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ ಸ್ಪಷ್ಟನೆ ನೀಡಿದರು. ಯಾವುದೇ ನಿರ್ಧಿಷ್ಠವಾದ ಹಗರಣ ಅಥವಾ ವ್ಯಕ್ತಿಗಳನ್ನು ಕಟಕಟೆಯಲ್ಲಿ ನಿಲ್ಲಿಸುವ ಬದಲಿಗೆ ಸಮಸ್ಯೆಯ ಬಗ್ಗೆ ಸಭೆಯು ಸಮಗ್ರವಾಗಿ ಚರ್ಚಿಸಲಿದೆ. ನ್ಯಾಯಾಂಗವನ್ನೂ ಭ್ರಷ್ಷ್ಟಾಚಾರ ಬಾಧಿಸುತ್ತಿರುವುದು ಸಮಸ್ಯೆಯ ತೀವ್ರತೆಯನ್ನು ಸ್ಪಷ್ಟಪಡಿಸುತ್ತದೆ. ನಾವೆಲ್ಲರೂ ಸೇರಿ, ಈ ಪೆಡಂಭೂತವನ್ನು ಹೇಗೆ ತೊಲಗಿಸಬೇಕು ಮತ್ತು ದೀರ್ಘ ಕಾಲ ತೆಗೆದುಕೊಳ್ಳುವ ಈ ಹೋರಾಟದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನ ಪಾತ್ರದ ಬಗ್ಗೆ ಚರ್ಚಿಸಲಾಗುತ್ತದೆ.

ಅಖಿಲ ಭಾರತ ಕಾರ್ಯಕಾರಣಿ ಸದಸ್ಯ ಇಂದ್ರೇಶ್ ಕುಮಾರ್ ಅವರನ್ನು ಸಿ.ಬಿ.ಐ.ವಿಚಾರಣೆಗೆ ಒಳಪಡಿಸಿರುವ ಬಗ್ಗೆ ಪತ್ರಕರ್ತರು ಪ್ರಸ್ತಾಪಿಸಿದಾಗ, “ಈಗಾಗಲೇ ಸಂಘ ಈ ಬಗ್ಗೆ ಸ್ಪಷ್ಟನೆ ನೀಡಿದೆ. ವಿಚಾರಣೆಯ ಎಲ್ಲ ಹಂತಗಳಲ್ಲಿ ಇಂದ್ರೇಶ್ ಜಿ ಪೂರ್ತಿ ಸಹಕಾರವನ್ನು ನೀಡಿದ್ದಾರೆ. ಅವರೇನು ತಲೆ ಮರೆಸಿಕೊಂಡಿಲ್ಲ ಎಂಬುದೇ ಸಂಘದ ನಿಲುಮೆಯನ್ನು ಸ್ಪಷ್ಟಗೊಳಿಸುತ್ತದೆ” ಎಂದರು.

ನಿರಂತರವಾಗಿ ಗಡಿ ಕ್ಯಾತೆ ತೆಗೆದು, ಕಿರಿಕಿರಿ ಉಂಟು ಮಾಡುತ್ತಿರುವ ಚೈನಾದ ಬಗ್ಗೆಯೂ ಸಹ ಪ್ರತಿನಿಧಿ ಸಭೆಯು ನಿರ್ಣಯ ತೆಗೆದುಕೊಳ್ಳಲಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಉದ್ಘಾಟನೆಯ ನಂತರ, ಅ.ಭಾ.ಪ್ರ. ಸಭೆಯಲ್ಲಿ ಸಂಘದ ಸರಕಾರ್ಯವಾಹ ಸುರೇಶ್ ಜೋಶಿಯವರು ವಾರ್ಷಿಕ ವರದಿಯ ಮುಖ್ಯಾಂಶಗಳನ್ನು ವಿವರಿಸಿದರು.

 

ಪಶ್ಚಿಮ ಬಂಗಾಳದಲ್ಲಿ ಸಂಘಕಾರ್ಯಕ್ಕೆ ಆಧಾರಸ್ತಂಭದಂತಿದ್ದ ಅಲ್ಲಿನ ಹೆಸರಾಂತ ನ್ಯಾಯವಾದಿ ಕಾಳಿದಾಸ ಬಸು, ಕೊಲ್ಹಾಪುರದ ಕರವೀರ ಪೀಠದ ಪೂಜ್ಯ ಶಂಕರಾಚಾರ್ಯರಾದ ಶ್ರೀ ವಿದ್ಯಾಶಂಕರ ಭಾರತಿ, ಮಹಾರಾಷ್ಟ್ರದ ದಲಿತ ಸಾಹಿತ್ಯದ ಮುಂಚೂಣಿಯಲ್ಲಿದ್ದು ಸಾಮಾಜಿಕ ಸಾಮರಸ್ಯದ ವಿಚಾರ ಪ್ರತಿಪಾದಕರಾಗಿದ್ದ ಉತ್ತಮ್ ಮುಳೆ, ಸಂಗೀತರಂಗದ ಅಭಿಜಾತ ಪ್ರತಿಭೆ ಭೀಮ್‌ಸೇನ್ ಜೋಷಿ, ಸ್ವದೇಶಿ ಆಂದೋಲನದ ಹರಿಕಾರರಾಗಿದ್ದ ರಾಜೀವ್ ದೀಕ್ಷಿತ್, ನಿವೃತ್ತ ರಾಜ್ಯಪಾಲರಾಗಿದ್ದ ಮಹಾವೀರ ಪ್ರಸಾದ್, ಹಿರಿಯ ಕಾಂಗ್ರೆಸ್ ನೇತಾರ ಕರುಣಾಕರನ್, ಖ್ಯಾತ ಗಾಂಧೀವಾದಿ ಈಶ್ವರಭಾಯಿ ಪಟೇಲ್ ಸೇರಿದಂತೆ ಅಗಲಿದ ಅನೇಕ ಚೇತನಗಳನ್ನು ಸ್ಮರಿಸಿ ಪ್ರತಿನಿಧಿ ಸಭೆ ಶ್ರದ್ಧಾಂಜಲಿ ಸಲ್ಲಿಸಿದೆ. ಶಬರಿಮಲೆ ಯಾತ್ರೆ ಸೇರಿದಂತೆ ಅನೇಕ ದುರಂತಗಳಲ್ಲಿ ಮಡಿದವರು, ಭಯೋತ್ಪಾದಕರ, ನಕ್ಸಲೀಯರ ಆಕ್ರಮಣದಲ್ಲಿ ಪ್ರಾಣ ತೆತ್ತ ದೇಶವಾಸಿಗಳನ್ನು ಸಭೆ ಗೌರವದಿಂದ ಸ್ಮರಿಸಿದೆ.
ಪ್ರಾಥಮಿಕ ಶಿಕ್ಷಾ ವರ್ಗ ಎಂದು ಕರೆಯುವ ೭ ದಿನಗಳ ಸಂಘದ ತರಬೇತಿ ಪಡೆದವರ ಸಂಖ್ಯೆ ಕಳೆದ ವರ್ಷ ೬೩,೦೦೦ ದಾಟಿದೆ. ಸಂಘ ಕಾರ್ಯದ ಹೊಣೆಗಾರಿಕೆಗೆ ನಿರಂತರವಾಗಿ ಹೊಸ ಪೀಳಿಗೆಯವರು ದೊಡ್ಡ ಸಂಖ್ಯೆಯಲ್ಲಿ ಹೆಗಲು ಕೊಡುತ್ತಿರುವುದನ್ನು ಈ ಸಂಖ್ಯೆಯು ಬಿಂಬಿಸುತ್ತದೆ. ವಿವಿಧ ಹಂತಗಳಲ್ಲಿ ನಡೆಯುವ ಸಂಘದ ಹೆಚ್ಚಿನ ತರಬೇತಿಯನ್ನು ಪಡೆದವರ ಸಂಖ್ಯೆ ೧೫,೦೦೦ ದಾಟಿದೆ.
ದೇಶದ ೨೭,೦೭೮ ಗ್ರಾಮ – ನಗರಗಳಲ್ಲಿ ಪ್ರಸ್ತುತ ಸಂಘದ ೩೯,೯೦೮ ಶಾಖೆಗಳು ನಡೆಯುತ್ತಿದ್ದು, ವಾರಕ್ಕೊಮ್ಮೆ ನಡೆಯುವ ೭,೯೯೦ ಮಿಲನ್‌ಗಳು, ತಿಂಗಳಿಗೆ ಒಮ್ಮೆ ನಡೆಯುವ ೬,೪೩೧ ಸಂಘ ಮಂಡಳಿಗಳು ಇವೆ.
ಕಳೆದ ವರ್ಷ ಸರಸಂಘಚಾಲಕರೂ ತಮ್ಮ ರಾಷ್ಟ್ರೀಯ ಪ್ರವಾಸದಲ್ಲಿ ಕಾರ್ಯಕರ್ತರ ಗುಣವಿಕಾಸದ ಕಡೆ ವಿಶೇಷ ಗಮನಕೊಟ್ಟು ಮಾರ್ಗದರ್ಶನ ಮಾಡಿದ್ದಾರೆ.
ಉತ್ತರ ಪ್ರದೇಶದ ಮೀರತ್ ಪ್ರಾಂತದಲ್ಲಿ ನಡೆದ ಕಾಲೇಜು ವಿದ್ಯಾರ್ಥಿಗಳ ’ಚೈತನ್ಯ ಶಿಬಿರ’ ಸಂಘ ಯುವ ಜನತೆಯನ್ನು ಸಮಾಜಮುಖಿಯಾಗಿಸುವತ್ತ ಮಾಡಿದ ವಿಶಿಷ್ಟ ಪ್ರಯತ್ನ. ೨,೨೦೦ಕ್ಕೂ ಮಿಕ್ಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದ ಈ ಶಿಬಿರದಲ್ಲಿ ಜಲ ನಿರ್ವಹಣೆ, ಪರಿಸರ, ರಕ್ತದಾನ, ನೇತ್ರದಾನದ ಬಗ್ಗೆ ಮಾನಸಿಕತೆ ರೂಪಿಸಲಾಯಿತು.
ಮಧ್ಯಪ್ರದೇಶದ ಮಾಂಡ್ಲಾದಲ್ಲಿ ಕಳೆದ ತಿಂಗಳಷ್ಟೆ ನಡೆದ ನರ್ಮದಾ ಸಾಮಾಜಿಕ ಕುಂಭಮೇಳದಲ್ಲಿ ೩೦ ಲಕ್ಷಕ್ಕೂ ಹೆಚ್ಚು ಹಿಂದುಗಳು ಪಾಲ್ಗೊಂಡಿದ್ದಾರೆ. ಮಧ್ಯ ಭಾರತದ ೩೦೦ಕ್ಕೂ ಹೆಚ್ಚು ಜಿಲ್ಲೆಗಳಿಂದ ೮೦೦ಕ್ಕೂ ಹೆಚ್ಚು ಜನ ಜಾತಿಗಳಿಗೆ ಸೇರಿದ ಜನ ಎಲ್ಲ ಭೇದ-ಭಾವಗಳನ್ನು ಮರೆತು ಸಮ್ಮಿಳಿತರಾದದ್ದು ಹಿಂದು ಸಮಾಜದ ಸಂಘಟಿತ ಶಕ್ತಿಯ ದ್ಯೋತಕವಾಗಿದೆ.
ಕುಂಭಮೇಳಕ್ಕೆ ಪೂರ್ವಭಾವಿಯಾಗಿ ಮಧ್ಯಪ್ರದೇಶದ ಮಹಾಕೋಶಲ ಪ್ರಾಂತದ ಸ್ವಯಂಸೇವಕರು ಜನ ಸಂಪರ್ಕ ಅಭಿಯಾನದ ಮೂಲಕ ೫ ಲಕ್ಷಕ್ಕೂ ಮನೆಗಳನ್ನು ಸಂಪರ್ಕಿಸಿದ್ದಾರೆ. ಪ್ರತಿ ಮನೆಯಿಂದ ೧ ಕೆಜಿ ಅಕ್ಕಿ, ೧/೨ ಕೆಜಿ ಧಾನ್ಯ, ೧ ರೂಪಾಯಿ ದೇಣಿಗೆ ಸಂಗ್ರಹಿಸಿ ಕುಂಭಮೇಳದ ವ್ಯವಸ್ಥೆಗೆ ನೀಡಿದ್ದಾರೆ.

ಕಳೆದ ವರ್ಷ ಉತ್ತರ ಕರ್ನಾಟಕದ ಜನತೆ ಉಕ್ಕಿ ಹರಿದ ನದಿಗಳ ಪ್ರವಾಹದಲ್ಲಿ ಸಿಲುಕಿದಾಗ ತಕ್ಷಣ ೨,೪೦೦ ಸ್ವಯಂಸೇವಕರು ಧಾವಿಸಿ ಪರಿಹಾರ ಕಾರ್ಯದಲ್ಲಿ ಧುಮುಕಿದರು. ಸಮಾಜ ಬಂಧುಗಳ ನೆರವಿನಿಂದ ಸೇವಾಭಾರತಿ ೯ ಗ್ರಾಮಗಳ ಪುನರ್ನಿರ್ಮಾಣದಲ್ಲಿ  ತೊಡಗಿದ್ದು ಈಗಾಗಲೇ ೨ ಗ್ರಾಮಗಳ ೧೩೦ ಹೊಸದಾಗಿ ನಿರ್ಮಿಸಿದ ಮನೆಗಳನ್ನು ಹಸ್ತಾಂತರಿಸಲಾಗಿದೆ.
ಕರವೀರಪೀಠದ ಶಂಕರಾಚಾರ್ಯರು ಗುಜರಾತಿನ ನವಾಪುರ ತಾಲೂಕಿನಲ್ಲಿ ೫ ದಿನಗಳ ಕಾಲ ನಿರಂತರ ಪಾದಯಾತ್ರೆ ನಡೆಸಿ ೨೦ಕ್ಕೂ ಹೆಚ್ಚು ಗ್ರಾಮಗಳ ೪ ಸಾವಿರದಷ್ಟು ವನವಾಸಿ ಬಂಧುಗಳ ಮನೆಗಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ್ದಾರೆ.
ಕಳೆದ ಅಕ್ಟೋಬರ್ ೨೬ರಂದು ’ಕಾಶ್ಮೀರ ವಿಲೀನ ದಿನ’ವನ್ನಾಗಿ ಆಚರಿಸಲು ಸಂಘ ಕರೆ ಕೊಟ್ಟಾಗ ದೇಶದಾದ್ಯಂತ ೨,೪೯೧ ಕಾರ್ಯಕ್ರಮಗಳು ನಡೆದಿವೆ.
’ಹಿಂದು ಭಯೋತ್ಪಾದನೆ’ ಆರೋಪದ ದುಷ್ಟ ರಾಜನೀತಿಯ ವಿರುದ್ಧ ದೇಶದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ನಡೆದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡವರ ಸಂಖ್ಯೆ ೧೦ ಲಕ್ಷ ದಾಟಿದೆ. ಮಧ್ಯಪ್ರದೇಶದ  ಜಬ್ಬಲ್ಪುರದಲ್ಲಿನ ಧರಣಿಯಲ್ಲಿ ೨೫ ಸಾವಿರ ಜನತೆ ಪಾಲ್ಗೊಂಡಿದ್ದರು.

ದೇಶ ಎದುರಿಸುತ್ತಿರುವ ರಾಷ್ಟ್ರೀಯ ಸನ್ನಿವೇಶವು ಗಂಭೀರತೆಯಿಂದ ಕೂಡಿದೆ. ರಾಮಜನ್ಮಭೂಮಿ ಕುರಿತಾದ ಅಲಹಾಬಾದ್ ಹೈಕೋರ್ಟಿನ ತೀರ್ಪು ಜನಮಾನಸವನ್ನು ಬಿಂಬಿಸಿದೆ. ಜೊತೆಗೆ ಸಂಸತ್ತು ಜನಾಭಿಪ್ರಾಯಕ್ಕೆ ಕಾಯಿದೆಯ ರೂಪ ಕೊಟ್ಟು ಮಂದಿರ ನಿರ್ಮಾಣಕ್ಕೆ ದಾರಿ ಸುಗಮಗೊಳಿಸಬೇಕಾಗಿದೆ.
ಹೆಚ್ಚುತ್ತಿರುವ  ಜಿಹಾದಿ ಭಯೋತ್ಪಾದನೆ, ದೇಶದ ಅಖಂಡತೆ ಸವಾಲಿನೆದುರು ಆಡಳಿತಯಂತ್ರ ದುರ್ಬಲಗೊಳ್ಳುತ್ತಿರುವುದು ಒಂದೆಡೆಯಾದರೆ, ಇನ್ನೊಂದೆಡೆ ಸರ್ಕಾರ ತನ್ನ ಸ್ವಾರ್ಥ ಸಾಧನೆಗಾಗಿ ಹಿಂದು ನಾಯಕರ ಮೇಲೆ ಭಯೋತ್ಪಾದನೆಯ ಗೂಬೆ ಕೂರಿಸಲು ವ್ಯರ್ಥ ಸಾಹಸ ಪಡುತ್ತಿದೆಜಮ್ಮು-ಕಾಶ್ಮೀರದ ೨೨ ಜಿಲ್ಲೆಗಳ ಪೈಕಿ ಕೇವಲ ೫ ಜಿಲ್ಲೆಗಳಲ್ಲಿ ಭಾರತ ವಿರೋಧಿ ಶಕ್ತಿಗಳ ಪ್ರಾಬಲ್ಯವಿದೆ. ಆದರೆ ಇಡೀ ಜಮ್ಮು ಕಾಶ್ಮೀರವೇ ಭಾರತ ಬಿಟ್ಟುಹೋಗಲು ತಯಾರಿರುವಂತೆ ಬಿಂಬಿಸಲಾಗುತ್ತಿದೆ. ಕೇಂದ್ರ ಸರಕಾರದ ದುರ್ಬಲ ರಾಜನೀತಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗದ ಹೊಣೆಗೇಡಿತನ ಸಮಸ್ಯೆಯ ಉಲ್ಬಣಕ್ಕೆ ಕಾರಣವಾಗಿದೆ ಎಂದು ಡಾ.ಮನಮೋಹನ ವೈದ್ಯ ಅವರು ಸರಕಾರ್ಯವಾಹರ ವಾರ್ಷಿಕ ವರದಿಯನ್ನು ಉಲ್ಲೇಖಿಸಿ, ಪತ್ರಿಕಾ ವಿವರಣೆಯನ್ನು ಮುಗಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.