ಕಾಸರಗೋಡು: ದೇಶದಲ್ಲಿ ಜನಸಂಖ್ಯೆಯ ಅಸಮಾನತೆಯಿಂದ ಹಿಂದೂಗಳು ಅಲ್ಪಸಂಖ್ಯಾತರಾಗುವ ಭೀತಿ ಎದುರಾಗಿದೆ. ಮತ-ಪಂಥಗಳ ನಡುವಿನ ಅಸಮತೋಲನ ಇದೇ ರೀತಿ ಮುಂದುವರಿದರೆ 2061 ರಲ್ಲಿ ಹಿಂದೂಗಳು ಭಾರತದಲ್ಲಿ ಅಲ್ಪಸಂಖ್ಯಾತರಾಗುವ ಸಾಧ್ಯತೆಗಳಿವೆ ಎಂದು ಫ಼ೋರಮ್ ಫ಼ಾರ್ ಇಂಟಿಗ್ರೇಟೆಡ್ ನ್ಯಾಷನಲ್ ಸೆಕ್ಯುರಿಟಿ (FINS) ಇದರ ರಾಷ್ಟ್ರೀಯ ಕಾರ್ಯದರ್ಶಿಗಳು ಹಾಗೂ ಬೆಂಗಳೂರು ಉಚ್ಛ ನ್ಯಾಯಾಲಯದ ವಕೀಲರೂ ಆದ ಶ್ರೀ ವಿ.ಎಸ್ ಹೆಗಡೆ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

DSC_0285

ಕಾಸರಗೋಡಿನಲ್ಲಿ ರಾಷ್ಟ್ರೀಯ ಚಿಂತಕರ ವೇದಿಕೆ “ಪುನರ್ನವ” ಇದರ ವತಿಯಿಂದ ಕಾಸರಗೋಡು ಕೋ-ಆಪರೇಟಿವ್ ಟೌನ್ ಬ್ಯಾಂಕ್ ಹಾಲ್ ನಲ್ಲಿ  ನಡೆದ ಸಾಮರಸ್ಯ ಸದ್ಭಾವನ ಗೋಷ್ಠಿಯಲ್ಲಿ “ಜನಗಣತಿ -2011 ಮತ್ತು ಸಾಮಾಜಿಕ ಪರಿಣಾಮಗಳು “ ಎಂಬ ವಿಷಯದ ಕುರಿತಾಗಿ ಮಾತನಾಡಿದ  ಅವರು  50 ವರ್ಷಗಳಲ್ಲಿ ಜನಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಜನಸಂಖ್ಯೆ ಏರಿಕೆಗನುಗುಣವಾಗಿ ಮತ-ಪಂಥಗಳ ಸಂಖ್ಯೆಯಲ್ಲಿಯೂ ಅಪಾರ ಪ್ರಮಾಣದ ಬದಲಾವಣೆಯಾಗಿದೆ. ಭಾರತೀಯ ಮೂಲದವರ ಮತ-ಪಂಥ ಅನುಯಾಯಿಗಳ ಪ್ರಮಾಣ ಮೊದಲು ಶೇ. 88 ರಷ್ಟಿತ್ತು. ಇದು ಶೇ. 83.8 ಕ್ಕೆ ಇಳಿಕೆಯಾಗಿದೆ. ಆದರೆ ಶೇ.9.8 ರಷ್ಟಿದ್ದ ಮುಸಲ್ಮಾನರ ಜನಸಂಖ್ಯೆ ಶೇ.14.23 ಕ್ಕೆ ಏರಿದೆ ಎಂದು ಅಂಕಿ ಅಂಶಗಳ ದಾಖಲೆಗಳನ್ನು ವಿವರಿಸಿದರು.

DSC_0294

ಈಶಾನ್ಯ ರಾಜ್ಯಗಳಾದ ಅಸ್ಸಾಂ, ಪಶ್ಚಿಮ ಬಂಗಾಳ ಮತ್ತು ಬಿಹಾರಗಳ ಗಡಿ ಜಿಲ್ಲೆಗಳಲ್ಲಿ ಮುಸಲ್ಮಾನರು ಹೆಚ್ಚಿದ್ದಾರೆ. ಬಾಂಗ್ಲಾ ದೇಶದಿಂದ ನಿರಂತರ ಒಳನುಸುಳುವಿಕೆಯಿಂದಲೂ ಮುಸಲ್ಮಾನರ ಸಂಖ್ಯೆ ಏರಿಕೆ ಕಂಡಿದೆ. ಅರುಣಾಚಲದಲ್ಲಿ ಕ್ರಿಶ್ಚಿಯನ್ ಸಮುದಾಯ ಜನಸಂಖ್ಯೆ ಹತ್ತು ವರ್ಷಗಳಲ್ಲಿ ಶೇ. 13 ರಷ್ಟು ಏರಿಕೆಯಾಗಿದೆ’ ಎಂದು ವಿವರಿಸಿದರು. ಜಾಗತಿಕವಾಗಿ ಮುಸಲ್ಮಾನ ಮಹಿಳೆಯರು ಮಕ್ಕಳನ್ನು ಹೆರುವ ಸಂಖ್ಯೆ ಹೆಚ್ಚು. ಈ ಸರಾಸರಿ ಮುಸ್ಲಿಂ ಮಹಿಳೆಯರಲ್ಲಿ 3.1, ಕ್ರೈಸ್ತರದ್ದು 2.7,ಹಿಂದುಗಳದ್ದು 2.1 ಆಗಿದೆ. 6 ವರ್ಷದೊಳಗಿನ ಮಕ್ಕಳ ಪ್ರಮಾಣದಲ್ಲೂ ಮುಸಲ್ಮಾನರದೇ ಮೇಲುಗೈ. ಕೇರಳದಲ್ಲಿ ಹಿಂದುಗಳ ಜನಸಂಖ್ಯೆ 54.73% ಆಗಿದೆ.ಅದೇ ರೀತಿ ಕಾಸರಗೋಡು ಜಿಲ್ಲೆಯಲ್ಲಿ   ಹಿಂದು ಜನಸಂಖ್ಯೆ 55.84 ತಲುಪಿದ್ದು ಇನ್ನುಳಿದ ಜಿಲ್ಲೆಗಳಾದ  ಮಲಪ್ಪುರಂ, ಎರ್ನಾಕುಲಂ, ಇಡುಕ್ಕಿ ಮೊದಲಾದ ಜಿಲ್ಲೆಗಳಲ್ಲೂ ಹಿಂದುಗಳು ಅಲ್ಪಸಂಖ್ಯಾತರಾಗುತ್ತಿದ್ದಾರೆ.  ಹಾಗಾಗಿ ಭಾರತೀಯ ಮೂಲದವರ ಮತ-ಪಂಥ ಅನುಯಾಯಿಗಳ ಜನಸಂಖ್ಯೆಯ ಅಸಮಾನತೆಯನ್ನು ಹೋಗಲಾಡಿಸಬೇಕೆಂದಲ್ಲಿ ವ್ಯಾಪಕ ಜನಜಾಗೃತಿ ಅಗತ್ಯ.ಅದೇ ರೀತಿ ಸಮಾನ ನಾಗರಿಕ ಹಕ್ಕು”ಜಾರಿಯಾಗಬೇಕು. ಹಾಗಾಗಿ ಈ ರೀತಿಯ ಕಾನೂನುಗಳನ್ನು ಜಾರಿ ಮಾಡುವ ಸಾಧ್ಯತೆಗಳ ಬಗ್ಗೆ ಎಲ್ಲರೂ ಯೋಚಿಸಬೇಕಾಗಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಚಿಂತಕರ ವೇದಿಕೆ “ಪುನರ್ನವ” ಇದರ ಉದ್ಘಾಟನೆಯನ್ನು ದಿನಾಂಕ 21-01-2016 ನೇ ಭಾನುವಾರದಂದು ಮುಖ್ಯ ಭಾಷಣಕಾರರಾಗಿ ಆಗಮಿಸಿದ ಬೆಂಗಳೂರು ಉಚ್ಛ ನ್ಯಾಯಾಲಯದ ವಕೀಲರಾದ  ಶ್ರೀ ವಿ.ಎಸ್ ಹೆಗಡೆ ಅವರು ನಡೆಸಿದರು. ಈ ಸಂದರ್ಭದಲ್ಲಿ “ಪುನರ್ವವ” ಚಿಂತಕರ ವೇದಿಕೆಯ ಪ್ರಧಾನ ಸಂಚಾಲಕರಾದ ಡಾ.ಸುರೇಶ್ ಹಾಗೂ ಸಂಚಾಲಕರಾದ ಅಡ್ವೋಕೇಟ್ ಸುರೇಶ್, ಪ್ರೊಫ಼ೆಸರ್ ಸುಜಾತ, ಹಾಗೂ ಶ್ರೀ ಕೃಷ್ಣಮೋಹನ್ ಅವರು ಉಪಸ್ಥಿತರಿದ್ದರು. ಜೊತೆಯಲ್ಲಿ ಡಾ. ರಾಧಾಕೃಷ್ಣ ಬೆಳ್ಳೂರು, ಡಾ. ರತ್ನಾಕರ ಮಲ್ಲಮೂಲೆ, ಅಡ್ವೋಕೇಟ್ ಶಶಿಧರ ಹಾಗೂ ಡಾ. ಶರತ್ ಅವರು ಸಂಚಾಲಕ ಮಂಡಳಿಯ ಸದಸ್ಯರಾಗಿರುತ್ತಾರೆ. ಚಿಂತನ ಗೋಷ್ಟಿಯ ಕೊನೆಯಲ್ಲಿ “ಪುನರ್ವವ” ಚಿಂತಕರ ವೇದಿಕೆಯ ಪ್ರಧಾನ ಸಂಚಾಲಕರಾದ ಡಾ.ಸುರೇಶ್ ಅವರು ಮಾತನಾಡುತ್ತಾ ಸಾಮಾಜಿಕ ಹಾಗೂ ರಾಷ್ಟೀಯ ವಿಚಾರಗಳ ಕುರಿತಾಗಿ ಸಂವಾದ, ವಿಚಾರಗೋಷ್ಠಿಗಳ ಮೂಲಕ ಜನ ಜಾಗೃತಿ ಮಾಡುವ ಉದ್ದೇಶದಿಂದ ರಾಷ್ಟ್ರೀಯ ಚಿಂತಕರ ವೇದಿಕೆ “ಪುನರ್ನವ” ಆರಂಭವಾಗಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.