Prof Rakesh Sinha

ಜಗತ್ತಿನಲ್ಲಿ ಜಾತ್ಯಾತೀತತೆ ಉಳಿಯಬೇಕಾದರೆ, ಹಿಂದುತ್ವ ಉಳಿಯಬೇಕು.-ಪ್ರೊ.ರಾಕೇಶ್ ಸಿನ್ಹಾ

Prof Rakesh Sinha

ಬೆಂಗಳೂರು – ಭಾರತೀಯ ಸಂಸ್ಕೃತಿ ನಡೆದುಕೊಂಡು ಬಂದಿರುವುದು ನಾಗರಿಕತೆಯನ್ನು ಕೇಂದ್ರಬಿಂದುವಾಗಿಸಿಕೊಂಡೇ ಹೊರತು, ರಾಜಕೀಯ ನಿರ್ಧಾರ ಅಥವಾ ಕಾನೂನನ್ನಲ್ಲ ಎಂದು ದೆಹಲಿ ವಿಶ್ವವಿದ್ಯಾಲಯ ಸಹಪ್ರಾಧ್ಯಾಪಕರಾದ ಶ್ರೀ ರಾಕೇಶ್ ಸಿನ್ಹಾ ಅವರು ಬೆಂಗಳೂರಿನ ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಷನ್ನಿನಲ್ಲಿ ಹೇಳಿದರು. ’ಜೈಪುರ ಸಾಹಿತ್ಯ ಉತ್ಸವ’ದಲ್ಲಿ ನಡೆದ ಸಲ್ಮಾನ್ ರಷ್ದಿ ವಿವಾದವನ್ನು ಹಿನ್ನೆಲೆಯಾಗಿರಿಸಿಕೊಂಡು, ಮತೀಯ ಸೂಕ್ಷ್ಮತೆಗಳು ಹಾಗೂ ಪ್ರಜಾಸತ್ತಾತ್ಮಕ ಸ್ವಾತಂತ್ರ್ಯ ಎಂಬ ವಿಷಯದ ಬಗ್ಗೆ ಇತ್ತೀಚಿಗೆ ಅವರು ಮಾತನಾಡಿದರು.

ಭಾರತದ ಇತಿಹಾಸದಲ್ಲಿ ಇಲ್ಲಿನ ಸಂಸ್ಕೃತಿ, ನಡವಳಿಕೆಗಳನ್ನು ಒಳಗಿನಿಂದಲೇ ಪ್ರಶ್ನೆಸದೇ ಇರುವ ದಿನವೇ ಇಲ್ಲ. ಪ್ರತಿದಿನವೂ ಸ್ವಯಂ ಮೌಲ್ಯಮಾಪನಕೊಳ್ಳಪಡುತ್ತಿರುವ ಏಕೈಕ ಜೀವನ ಪದ್ಧತಿ ನಮ್ಮದಾಗಿದೆ. ಇಲ್ಲಿನ ಆಚರಣೆಗಳನ್ನು ಖಂಡಿಸಿದ ಈಶ್ವರಚಂದ್ರ ವಿದ್ಯಾಸಾಗರ (ವಿಧವಾ-ವಿವಾಹ), ಮಹಾತ್ಮಾಗಾಂಧಿ (ಅಸ್ಪೃಷ್ಯತೆ), ಸ್ವಾಮಿ ದಯಾನಂದಸರಸ್ವತಿ (ಮೂರ್ತಿ ಪೂಜೆ) ಅವರಗಳನ್ನು ಭಾರತೀಯ ಸಮಾಜ ಗೌರವಿಸಿತೇ ವಿನಃ ಅವರನ್ನು ಬಹಿಷ್ಕರಿಸಲಿಲ್ಲ. ಎಂದರು.

ಕ್ರಿಶ್ಚಿಯನ್ ಮತವೂ ಸಹ ಹಲವು ಸುಧಾರಣೆಗಳನ್ನು ಕಂಡಿದೆ. ಆ ಸುಧಾರಣೆಗಳ ಪರಿಣಾಮವೇ ’ಸೆಕ್ಯುಲರಿಸಂ’ ಎಂಬ ಶಬ್ಧ ಚಾಲ್ತಿಗೆ ಬಂದದ್ದು. ಆದರೆ, ಇಡೀ ಪ್ರಪಂಚದಲ್ಲಿ, ಅದರ ಪ್ರಾರಂಭಿಕ ಕಾಲದಿಂದಲೂ ಯಾವುದೇ ಸುಧಾರಣೆ, ಬದಲಾವಣೆಗೊಳಪಡದೆ ಇರುವುದು ಇಸ್ಲಾಂ ಮತ ಮಾತ್ರ. ಇಸ್ಲಾಂನಲ್ಲಿ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಬೆಲೆಯೇ ಇಲ್ಲ. ಬಟ್ಟೆ ತೊಡುವುದರಿಂದ ಮೊದಲುಗೊಂಡು ಮಹಿಳೆಯರ ಪ್ರಯಾಣದದ ದೂರದವರೆಗೆ ಎಲ್ಲವನ್ನೂ ಇಸ್ಲಾಂ, ಮತೀಯವಾಗಿ ನಿರ್ಧರಿಸುತ್ತದೆ. ವಿಚಾರಗಳ ಅನುಷ್ಟಾನಕ್ಕೆ ಅದರ ಬಳಿ ಇರುವ ಅಸ್ತ್ರವೇ ಫತ್ವಾ.

ಇಂದು ಜಗತ್ತಿನಲ್ಲಿ ಜಾತ್ಯಾತೀತತೆ ಉಳಿಯಬೇಕಾದರೆ ಹಿಂದುತ್ವ ಉಳಿಯಬೇಕು. ಇಸ್ಲಾಂ ಬಹುಸಂಖ್ಯಕರಿರುವ ಜಾತ್ಯಾತೀತ ರಾಷ್ಟ್ರ ಪ್ರಪಂಚದಲ್ಲೇ ಇಲ್ಲ. ಈ ಮೂಲಭೂತವಾದದ ಪರಿಣಾಮವೇ ಸಲ್ಮಾನ್ ರಷ್ದಿ ಬರೆದ ಸಟಾನಿಕ್ ವರ್ಸಸ್ ಪುಸ್ತಕವನ್ನು ನಿಷೇಧಿಸಲಾಯಿತು. ತಸ್ಲೀಮಾ ನಸ್ರೀನ್‌ಳನ್ನು ದೇಶದಿಂದ ಹೊರಗಟ್ಟಲಾಯಿತು.

ಇದೆಲ್ಲಕ್ಕೂ ಪರಿಹಾರವೆಂದರೆ, ಇಸ್ಲಾಂನ ಭಾರತೀಕರಣ, ಇಲ್ಲಿ ಭಾರತೀಕರಣವನ್ನು ಹಿಂದೂಕರಣ ಎಂದು ತಿಳಿಯುವುದು ಬೇಡ. ಭಾರತೀಕರಣ ಎಂದರೆ, ಇಲ್ಲಿನ ಸಮಾಜದ ಪೂರ್ವಜರನ್ನು ಗೌರವಿಸುವುದು ಎಂದರ್ಥ ಎಂದು ರಾಕೇಶ್ ಸಿನ್ಹಾ ನುಡಿದರು.

ಸ್ವಾತಂತ್ರ್ಯ ಎನ್ನುವುದು ಹಿಂದೂ ಹಾಗೂ ಮುಸ್ಲ್ಲಿಮರ ನಡುವಿನ ಅನುಪಾತ. ಹಿಂದೂ ಸಂಘಟಿದವಾದರೆ ಮುಸ್ಲಿಂ ಮತಾಂಧತೆ ಕಡಿಮೆಯಾಗುತ್ತದೆ, ಇಲ್ಲದಿದ್ದರೆ ಮತಾಂಧತೆ, ಅಸಹಿಷ್ಣುತೆ ಹೆಚ್ಚುತ್ತದೆ. ಇಂದು ವಿದ್ಯಾವಂತರಾಗಿರುವ, ಪ್ರಪಂಚದ ಎಲ್ಲ ಉಪಭೋಗಗಳನ್ನು ಅನುಭವಿಸುತ್ತಾ, ತಿರುಗಿ ಅದನ್ನೇ ತೆಗಳಿಕೊಂಡು ಓಡಾಡುತ್ತಿರುವ ಎಲೀಟ್‌ಕ್ಲಾಸ್ ಮುಸ್ಲಿಮರಿಂದ ಆಪತ್ತು ಇದೆಯೇ ಹೊರತು, ಜಿಲ್ಲೆಗಳಲ್ಲಿ, ಕಸಬಾಗಳಲ್ಲಿರುವ ಸಾಮಾನ್ಯ ಮುಸ್ಲಿಮರಿಂದಲ್ಲ ಎಂಬುದು ನಮಗೆ ತಿಳಿದಿರಬೇಕೆಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೋತ್ಥಾನ ರಿಸರ್ಚ್ ಫೌಂಡೇಶನ್‌ನ ನಿರ್ದೇಶಕರಾದ ಡಾ||ಜಿ.ಬಿ.ಹರೀಶ್,  ರಾಷ್ಟ್ರೀಯ ಸ್ವಯಂಸಂಘದ ಹಿರಿಯ ಪ್ರಚಾರಕಾರದ ಶ್ರೀ.ಕಾ.ಶ್ರೀ ನಾಗರಾಜ್, ಶಿಕ್ಷಣ ತಜ್ಞ ಪ್ರೊ.ಪಿ.ವಿ.ಕೃಷ್ಣಭಟ್ ಮುಂತಾದ ಹಿರಿಯರು ಉಪಸ್ಥಿತರಿದ್ದರು. ತಮ್ಮ ಮಾತುಕತೆಯನಂತರ, ಸಭಿಕರ ಹಲವು ಪ್ರಶ್ನೆಗಳಿಗೆ ಶ್ರೀ ರಾಕೇಶ್‌ಸಿನ್ಹಾ ಅವರು ಸಮರ್ಥವಾಗಿ ಉತ್ತರಿಸಿದರು.

Leave a Reply

Your email address will not be published.

This site uses Akismet to reduce spam. Learn how your comment data is processed.