ಬೆಂಗಳೂರು: ಸಂಸ್ಕಾರ ಭಾರತೀ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ರಕ್ಷಾ ಬಂಧನ ಸಂದರ್ಭದಲ್ಲಿ “ಸ್ನೇಹ ಮಿಲನ” ಕಾರ್ಯಕ್ರಮ “ಭಾರತ ಸಂಸ್ಕೃತಿ ಪ್ರತಿಷ್ಠಾನ – ಸಂಪತ್ತು” ಸಂಸ್ಥೆಯ ಆವರಣದಲ್ಲಿ ದಿನಾಂಕ 24-08-2024 ಶನಿವಾರದಂದು ನಡೆಯಿತು.
ಮುಖ್ಯಅಭ್ಯಾಗತರಾಗಿ ಬೆಂಗಳೂರು ದಕ್ಷಿಣ ಬಾಲಭಾರತಿಯ ಪ್ರಮುಖರು ಹಾಗೂ ಚಿನ್ಮಯ ಟ್ರಸ್ಟಿನ ಅಧ್ಯಕ್ಷ ಶಂಕರಾನಂದ ಶಾಸ್ತ್ರಿ
ಕಾರ್ಯಕ್ರಮವನ್ನು ಉದ್ಘಾಟಿಸಿ, ರಕ್ಷಾ ಬಂಧನದ ಸಂದೇಶವನ್ನು ನೀಡಿದರು. ಸಂಸ್ಕಾರ ಭಾರತಿಯ ಪ್ರಾಂತ ಉಪಾಧ್ಯಕ್ಷ ಡಾ. ಬಾಬು ಹಿರಣ್ಣಯ್ಯ, ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿಯ ಅಧ್ಯಕ್ಷ ಡಾ. ಕರುಣಾ ವಿಜಯೇಂದ್ರ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
.