ಗುವಾಹಟಿ, ಅಸ್ಸಾಂ: ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯಾ ಕಾರ್ಯಕಾರಿಣಿ ಮತ್ತು ಪ್ರತಿನಿಧಿ ಮಂಡಲದ ಎರಡು ದಿನಗಳ ಅರ್ಧವಾರ್ಷಿಕ ಬೈಠಕ್ ಇಂದು ಅಸ್ಸಾಂನ ಗುವಾಹಟಿಯ ಐಐಟಿ ಆವರಣದಲ್ಲಿ ಆರಂಭಗೊಂಡಿದೆ. ಬೈಠಕ್ ನಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಪ್ರಮುಖ ಸಂಚಾಲಿಕಾ ಶಾಂತಾಕುಮಾರಿ ವಿ ಮತ್ತು ಅಖಿಲ ಭಾರತೀಯ ಪ್ರಮುಖ್ ಕಾರ್ಯವಾಹಿಕಾ ಸೀತಾ ಗಾಯತ್ರಿಯವರು ಉಪಸ್ಥಿತರಿದ್ದರು.

ಶ್ರದ್ಧಾಂಜಲಿ‌ ಸಮರ್ಪಣೆ:

ಬೈಠಕ್ ನ ಆರಂಭದಲ್ಲಿ ದುರಂತದಲ್ಲಿ ಮಡಿದ ಯೋಧರು, ಗಣ್ಯರು, ದೇಶವಾಸಿಗಳು ಮತ್ತು ಕಾರ್ಯಕರ್ತ ಸಹೋದರ ಸಹೋದರಿಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಬೈಠಕ್ ನಲ್ಲಿ ಮಂಡಿಸಿದಂತೆ ಸಮಿತಿಯ 4125 ಶಾಖೆಗಳು ದೇಶಾದ್ಯಂತ ನಡೆಯುತಿದ್ದು, 12 ಕ್ಷೇತ್ರ ಮತ್ತು 38 ಪ್ರಾಂತಗಳಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ದೇಶಾದ್ಯಂತ ಒಟ್ಟು 1042 ಜಿಲ್ಲೆಗಳ ಪೈಕಿ 834 ಜಿಲ್ಲೆಗಳಲ್ಲಿ ಸಮಿತಿಕಾರ್ಯ ನಡೆಯುತ್ತಿದೆ. ಸಮಿತಿಯ ಕಾರ್ಯಕರ್ತೆಯರಿಂದ ದೇಶಾದ್ಯಂತ 1799 ಸೇವಾ ಕಾರ್ಯಗಳು ನಡೆಯುತ್ತಿವೆ.

ವಿಶೇಷ:

  • ಲೋಕಮಾತಾ ಅಹಲ್ಯಾಬಾಯಿ ಹೋಳ್ಕರ್ ಅವರ ಜನ್ಮ ತ್ರಿಶತಮಾನೋತ್ಸವದ ಸಂದರ್ಭದಲ್ಲಿ, ರಾಷ್ಟ್ರ ಸೇವಿಕಾ ಸಮಿತಿಯು ಭಾರತದಾದ್ಯಂತ 2405 ಸ್ಥಳಗಳಲ್ಲಿ 3,850 ಕಾರ್ಯಕ್ರಮಗಳ ಮೂಲಕ 4,74,801 ನಾಗರಿಕರನ್ನು ತಲುಪುವ ಮೂಲಕ ಲೋಕಮಾತೆ ಅಹಲ್ಯಾ ಬಾಯಿ ಹೋಳ್ಕರ್ ಅವರ ಕಾರ್ಯವನ್ನು ಸಮಾಜಕ್ಕೆ ಪರಿಚಯಿಸಲು ಪ್ರಯತ್ನಿಸಿತು. ಈ ಕಾರ್ಯಕ್ರಮದಲ್ಲಿ ಗಿಡ ನೆಡುವುದು, ನದಿ ಸ್ವಚ್ಛತೆ, ದೇವಸ್ಥಾನಗಳ ಸ್ವಚ್ಛತಾ ಅಭಿಯಾನ, ಆಸ್ಪತ್ರೆ, ಶಾಲೆ ಸಂಪರ್ಕ ಮತ್ತು ಜಿಲ್ಲಾ ಮಟ್ಟದಲ್ಲಿ ಸಣ್ಣ ಮತ್ತು ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳು ಸೇರಿವೆ.
  • ವಂದೇ ಮಾತರಂ ಗೀತೆಗೆ 150 ವರ್ಷ ತುಂಬಿದ ಸಂದರ್ಭದಲ್ಲಿ 3420 ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.
  • ಸಂತ ಮೀರಾಬಾಯಿ ಅವರ 550ನೇ ಜನ್ಮದಿನಾಚರಣೆ ಹಾಗೂ ಗುರು ತೇಗಬಹದ್ದೂರ್ ಅವರ 350ನೇ ಪುಣ್ಯತಿಥಿ ಅಂಗವಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
  • ಇನ್ನೆರಡು ದಿನಗಳಲ್ಲಿ ಸಮಿತಿಯ ಶಿಕ್ಷಾವರ್ಗ, ಪಂಚ ಪರಿವರ್ತನೆ ಹಾಗೂ ನಾಡಿನ ಸಾಮಾಜಿಕ, ಸಾಂಸ್ಕೃತಿಕ ಸ್ಥಿತಿಗತಿ ಕುರಿತು ಸಮಿತಿ ಚಿಂತನೆ ನಡೆಸಲಿದ್ದು, ಸಮಿತಿಯ ಕಾರ್ಯಚಟುವಟಿಕೆಯನ್ನು ಹೆಚ್ಚಿಸುವ ಯೋಜನೆಯನ್ನೂ ರೂಪಿಸಲಾಗುವುದು.

Leave a Reply

Your email address will not be published.

This site uses Akismet to reduce spam. Learn how your comment data is processed.