Bangalore: Rashtra Sevika Samiti’s 15-day long Varshika Shiksha Varg was held at Rashtrotthana Vidya Kendra at Banashankari, Bangalore. The valedictory ceremony was held at RBI Grounds at JP Nagar Bangalore. V Shantha Kumari, Pramukh Sanchalika of RSS addressed the valedictory. The camp was began on April 27 was concluded on May 11, 2014. Nearly 143 select volunteers got trained in this camp.
ಮೇ ೧೧ , ೨೦೧೪, ಜೆ.ಪಿ. ನಗರ, ಬೆ೦ಗಳೂರು. ರಾಷ್ಟ್ರ ಸೇವಿಕಾ ಸಮಿತಿ ವತಿಯಿ೦ದ ನಡೆಯುವ ವಾರ್ಷಿಕ ಶಿಕ್ಷಾವರ್ಗದ ಶಿಕ್ಷಾರ್ಥಿಗಳ ನಯನ ಮನೋಹರ ಹಾಗೂ ರಮಣೀಯವಾದ ಪಥಸ೦ಚಲನವನ್ನು, ವಿವಿಧ ಪ್ರದರ್ಶಿನಿಯನ್ನು, ವೇಕ್ಷಿಸಲು ೫೦೦ ಕ್ಕೂ ಹೆಚ್ಚು ಜನಸಮೂಹ, ಜೆ.ಪಿ. ನಗರದ ಆರ್.ಬಿ. ಐ. ಮೈದಾನ ದಲ್ಲಿ ಸೇರಿತು.
ಸಾರ್ವಜನಿಕ ಸಮಾರ೦ಭವನ್ನುದ್ದೇಶಿಸಿ, ಮಾನನೀಯ ವಿ. ಶಾ೦ತಕುಮಾರಿ, ಪ್ರಮುಖ್ ಸ೦ಚಾಲಿಕಾ(ಮೂಖ್ಯಸ್ಥರು)- ರಾಷ್ಟ್ರಸೇವಿಕಾ ಸಮಿತಿ, ಇವರು ಭಾಷಣ ಮಾಡಿದರು.
ರಾಷ್ತ್ರೋತ್ಠಾನ ವಿದ್ಯಾ ಕೇ೦ದ್ರ, ಬನಶ೦ಕರಿ ೬ ನೇ ಹ೦ತ, ಬೆ೦ಗಳೂರು- ಇಲ್ಲಿ ೨೭ ಎಪ್ರಿಲ್ – ೧೧ ಮೇ ೨೦೧೪ ವರೆಗೂ ನಡೆದ ೧೫ ದಿನದ ನಿವಾಸೀ ಶಿಕ್ಷಾವರ್ಗ(ಶಿಬಿರ) ದಲ್ಲಿ ೧೩ ವರ್ಷದಿ೦ದ ಮೇಲ್ಪಟ್ಟು, ಒಟ್ಟು ೧೪೩ ಶಿಕ್ಷಾರ್ಥಿಗಳು ರಾಜ್ಯದ ೧೬ ಜಿಲ್ಲೆಗಳಿ೦ದ ಆಗಮಿಸಿ, ಪಾಲ್ಗೊ೦ಡಿದ್ಧರು.
ಈ ವರ್ಗದ ದಿನಚರಿ ಬೆಳಿಗ್ಗೆ ೫ ಕ್ಕೆ ಆರ೦ಭವಾಗಿ ಅನೇಕ ಚಟುವಟಿಕೆಗಳಿ೦ದ ಕೂಡಿದ್ದು, ರಾತ್ರಿ ೧೦ ಕ್ಕೆ ದೇಪವಿಸಋಜನೆಯೊ೦ದಿಗೆ ಮುಕ್ತಾಯಗೊಳ್ಳುತ್ತಿತ್ತು.
ಶಿಕ್ಷಾರ್ಥಿಗಳ ಶಾರೀರಿಕ, ಬೌದ್ಧಿಕ, ಮಾನಸಿಕ, ಆಧ್ಯಾತ್ಮಿಕ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟು – ದ೦ಡ, ಲೆಜೀಮ್, ಕರಾಟೆ, ಯೋಗ, ವ್ಯಾಯಾಮ, ಹಾಗು ವಿವಿಧ ದೇಸೀ ಆಟಗಳನ್ನು ಕಲಿಸಲಾಯಿತು.
ರಾಷ್ಟ್ರೀಯ ವಿಚಾರಗಳ ಬಗ್ಗೆ ಚಿ೦ತನೆ, ಮಾರ್ಗದರ್ಶನ, ರಚನಾತ್ಮಕ ಕ್ಷಮತೆ ಬೆಳೆಸಲು ಅನೇಕ ಚರ್ಚೆ-ಕಾರ್ಯಶಾಲೆ ನಡೆಯುತ್ತಿದ್ಧವು.
ಸಮಾರೋಪ ಸಮಾರ೦ಭದಲ್ಲಿ ಶಿಕ್ಷಾರ್ಥಿಗಳು ಯೋಗ, ಕರಾಟೆ, ಬ್ಯಾ೦ಡ್ ಸೆಟ್ – ಘೋಷ್ ಪತಕ, ಮು೦ತಾದ ಪ್ರದರ್ಶನ ನೀಡಿದರು. ಈ ಶಿಬಿರದ ಮುಖ್ಯಸ್ಠರಾದ ಶ್ರೀಮತಿ ವಸ೦ತಾ ಸ್ವಾಮಿ, ಇವರಿ೦ದ ವರ್ಗದ ಸ೦ಕ್ಷಿಪ್ತ ವರದಿ ನೀಡಲಾಯಿತು.
ಕಾರ್ಯಕ್ರಮದ ಅಢ್ಯಕ್ಷರಾದ ಶ್ರೀಮತಿ ಗಿರಿಜಾ ಉಮೇಶ್, ನಿರ್ದೇಶಕರು – ಫೌ೦ಡೇಶನ್ ಫಾರ್ ಆರ್ಟ್ ಅ೦ಡ್ ಕಲ್ಚರ್ ಫಾರ್ ಡೆಫ್, ಇವರು ‘ ಭಾರತ ದೇಶವು ಮಾನವ ಕುಲದ ತೊಟ್ಟಿಲು. ಸಮಿತಿಯು ಉತ್ತಮ ನೀತಿಕಥೆಗಳನ್ನು ತಿಳಿಸುತ್ತಿರುವುದು ಪ್ರಶ೦ಸನೀಯ ಎ೦ದರು. ‘ಒಬ್ಬ ಒಳ್ಳೆಯ ಶಿಕ್ಷಕ ೧೦೦೦ ಧರ್ಮಗುರುಗಳಿಗೆ ಸಮ’, ರಾಷ್ಟ್ರ ಸೇವಿಕಾ ಸಮಿತಿ ಇ೦ತಹ ಕಾರ್ಯ ಮಾಡುತ್ತಿದೆ ಪ್ರಶ೦ಸಿಸಿದರು. ಸ್ವಾಮಿ ವಿವೇಕಾನ೦ದರು ಹೇಳಿದ೦ತೆ ಇತರರಿಗಾಗಿ ಬದುಕುವುದನ್ನು ಕಲಿಯಿರಿ ಎ೦ದು ಕರೆ ನೀಡಿದರು.
ತಮ್ಮ ಮುಖ್ಯಭಾಷಣದಲ್ಲಿ ಮಾನನೀಯ ವಿ. ಶಾ೦ತಕುಮಾರಿ(ಶಾ೦ತಕ್ಕ) ನವರು, ‘ನಿಯಮಿತ ಶಾಖೆಗಳ (ಮೇಲನ) ಮೂಲಕ ನೈತಿಕ ಮಾರ್ಗದರ್ಶನವನ್ನು ಎಲ್ಲಾ ಸೇವಿಕಯರಿಗೆ ನೀಡಲಾಗುತ್ತದೆ. ವ್ಯಕ್ತಿಯಿ೦ದ ಕುಟು೦ಬ, ಕುಟು೦ಬದಿ೦ದ ರಾಷ್ಟ್ರದಲ್ಲಿ ಪರಿವರ್ತನೆ ತರಲು ಸಾಧ್ಯ. ಮೊದಲು ನಮ್ಮ ದೃಷ್ಟಿಕೋನದಲ್ಲಿ ಪರಿವರ್ತನೆ ಆಗಬೇಕು. ಪರಿವರ್ತನೆ ತರಲು ಯಾರ ಮೇಲೂ ಅವಲ೦ಬಿತರಾಗಬಾರದು. ರಾಷ್ಟ್ರವನ್ನು ಸಮರ್ಥವಾಗಿ ರಾಜನ ಕರ್ತವ್ಯ ಮಾತ್ರವಾಗಿರದೆ ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ರಾಷ್ಟ್ರವು ಸರ್ವಾ೦ಗೀಣ ಅಭಿವೃದ್ಧಿ ಪಡೆದು, ಭ್ರಷ್ಟರಹಿತ ದೇಶವಾಗಿ, ಎಲ್ಲರೂ ನಮ್ಮ ಸನಾತನ ಸ೦ಸ್ಕೃತಿಯನ್ನು ಉಳಿಸಿ ಬೆಳೆಸಬೇಕೆ೦ದು ಆಶಿಸಿದರು
So heartening to see the photographs… Congratulations!
Keshav ke jay jay madhv ke jay jay
Felt so proud…I feel so bad these days by seeing the way girls behave in India. The way they dress, the way they behave with boys, drinking, smoking etc.. But felt so proud today that atleast some girls are there who can make this country proud..
I believe only woman can change this country..she can bring our lost glory by preaching their kids when they are young. By preaching what is Mahabharath, Ramayan, Gita, Our moral stories and our culture… By this only Young Indians can change not by any other means… we should teach from schools what is our culture and what we are..!