ರಾಷ್ಟ್ರೋತ್ಥಾನ ರಕ್ತ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಸರ್ಕಾರವು 2020-2 1ನೇ ಸಾಲಿನ ಅತಿ ಹೆಚ್ಚು ರಕ್ತ ಸಂಗ್ರಹ ಮಾಡಿದ ರಕ್ತ ಕೇಂದ್ರ ಎಂದು ಗುರುತಿಸಿ ಗೌರವಿಸಿದೆ.
ರಾಷ್ಟ್ರೋತ್ಥಾನ ರಕ್ತ ಕೇಂದ್ರವು ಕೋರೋನಾ ಮಹಾ ಮಾರಿಯ ನಡುವೆಯೂ 2020-21 ನೇ ಸಾಲಿನಲ್ಲಿ 44,643 ಯುನಿಟ್ ರಕ್ತ
ಸಂಗ್ರಹಿಸಿ ಜನರಿಗೆ ನೀಡಿದೆ.
ವಿವಿಧ ಸ್ವಯಂಸೇವಾ ಸಂಸ್ಥೆ ಗಳ ಸಹಯೋಗದಲ್ಲಿ 229 ರಕ್ತಧಾನ ಶಿಬಿರವನ್ನು ರಾಷ್ಟ್ರೋತ್ಥಾನ ರಕ್ತ ಕೇಂದ್ರ ನಡೆಸಿದೆ.
ರಾಷ್ಟ್ರೋತ್ಥಾನ ರಕ್ತ ಕೇಂದ್ರದ ವಿಶೇಷತೆಗಳು
1.ಜೀವಮಾನವಿಡೀ ನಿರಂತರ ರಕ್ತ ಪೂರಣದ ಆವಶ್ಯಕತೆ ಇರುವ ತಲಸ್ಸೇಮಿಯ ರೋಗದಿಂದ ಬಳಲುತ್ತಿರುವ 350ಕ್ಕೂ ಅಧಿಕ ಮಕ್ಕಳಿಗೆ 15ರಿಂದ 20 ದಿನಗಳಿಗೊಮ್ಮೆ ನಿರಂತರ ವಾಗಿ ರಕ್ತ ವನ್ನು ಒದಗಿಸಲಾಗುತ್ತಿದೆ.
2.ವಿವಿಧ ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಗೆ ಒಳಪಡುತ್ತಿರುವ ಆರ್ಥಿಕವಾಗಿ ಹಿಂದುಳಿದ 153 ರೋಗಿಗಳಿಗೆ ಕಡಿಮೆ ಶುಲ್ಕ ದಲ್ಲಿ ನಿರಂತರ ವಾಗಿ ರಕ್ತ ನೀಡಲಾಗುತ್ತಿದೆ.
3.ಸರಕಾರಿ ಆಸ್ಪತ್ರೆಗಳಿಂದ ಬರುವ ಬಡ ರೋಗಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ರಕ್ತ ಒದಗಿಸಲಾಗುತ್ತಿದೆ. ಮತ್ತು ಇಲ್ಲಿ ರಕ್ತ ಪಡೆಯುವವರಲ್ಲಿ 45%ಗೂ ಅಧಿಕ ಮಂದಿ ಸರಕಾರಿ ಆಸ್ಪತ್ರೆಗಳಿಂದ ಬರುವವರಾಗಿರುತ್ತಾರೆ, ಎಂದು ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ನಾ. ದಿನೇಶ್ ಹೆಗ್ಡೆ ತಿಳಿಸಿದ್ದಾರೆ.