ಬೆಂಗಳೂರು, ಜ.11: ರಾಷ್ಟ್ರೋತ್ಥಾನ ಸೇವಾ ವಸತಿಯ ವತಿಯಿಂದ, 24X7 ಕಂಪನಿಯ ಸಹಯೋಗದಲ್ಲಿ ಇಲ್ಲಿನ ಕಾವಲ್‍ಬೈರಸಂದ್ರದಲ್ಲಿ ಬ್ಯೂಟೀಷಿಯನ್ ತರಬೇತಿಯನ್ನು ಪ್ರಾರಂಭಿಸಲಾಯಿತು. 24X7 ಕಂಪನಿಯ ಕವಿತಾ ಮೇಡಂರವರು ತರಬೇತಿಯನ್ನು ಪ್ರಾರಂಭಿಸಿ, ಕಂಪನಿಯ ಸೇವಾಕಾರ್ಯದ ಬಗೆಗೆ ಪರಿಚಯ ಮಾಡಿಕೊಟ್ಟರು. 24X7 ಕಂಪನಿಯು ಅಮೇರಿಕಾ ಮೂಲದ ಐಟಿ ಕಂಪನಿಯಾಗಿದ್ದು, ಮಾರತ್‍ಹಳ್ಳಿಯಲ್ಲಿ ಶಾಖೆಯನ್ನು ಹೊಂದಿದೆ. ತರಬೇತಿ ಪಡೆಯಲು 31 ಜನರು ನೋಂದಾಯಿಸಿಕೊಂಡಿದ್ದಾರೆ.
ನಂತರದಲ್ಲಿ ದೊಡ್ಡಣ್ಣನಗರ ಇ ಬ್ಲಾಕ್ ಹಾಗೂ ಗಜೇಂದ್ರನಗರದ ಸೇವಾ ವಸತಿಗಳಲ್ಲಿ 24X7 ಕಂಪನಿಯ ಸಹಯೋಗದೊಂದಿಗೆ ಹೊಲಿಗೆ ತರಬೇತಿ ಕೇಂದ್ರಗಳನ್ನು ಉದ್ಘಾಟಿಸಲಾಯಿತು.
ಉದ್ಘಾಟನಾ ಸಮಾರಂಭದಲ್ಲಿ 24X7 ಕಂಪನಿಯ ನಿರ್ದೇಶಕರಾದ ಶ್ರೀಜೀತ್, ಕವಿತಾ ಮೇಡಂ ಹಾಗೂ ಕೀರ್ತಿ ಮೇಡಂ ಮತ್ತು ರಾಷ್ಟ್ರೋತ್ಥಾನ ಪರಿಷತ್ತಿನಿಂದ ಶ್ರೀಮತಿ ಆಶಾ ಅಶೋಕ್ ಹಾಗೂ ಶ್ರೀ ಜೋಗೇಶ್ ಜೀ ಉಪಸ್ಥಿತರಿದ್ದರು.
ಶ್ರೀಜೀತ್ ಅವರು ಏನಾದರೂ ಸಾಧನೆ ಮಾಡಬೇಕೆಂದರೆ ಮಾಡುವ ಕೆಲಸವನ್ನು ಮೊದಲು ಗೌರವಿಸಬೇಕು, ನಂತರ ದೇವರನ್ನು ನೆನಪಿಸಿಕೊಂಡು ಕೆಲಸ ಮಾಡಿದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ ಎಂದರು. ಕೆಲಸ ಕೇಳುವುದಲ್ಲ, ಇನ್ನೊಬ್ಬರಿಗೆ ಕೆಲಸ ನೀಡುವಂತೆ ಮಹಿಳೆಯರು ತಯಾರಾಗಬೇಕೆಂದರು.
ಕಾರ್ಯಕ್ರಮದ ಕೊನೆಯಲ್ಲಿ ಹೊಲಿಗೆ ತರಬೇತಿಗೆ ನೋಂದಾಯಿಸಿಕೊಂಡ 22 ಮಂದಿಗೆ ಹೊಲಿಗೆ ಕಿಟ್ಟನ್ನು ನೀಡಲಾಯಿತು.