ಇಂದು ಪುಣ್ಯಸ್ಮರಣೆ

ಕಲ್ಪನಾ ಚಾವ್ಲಾ ಅವರು ವಿಶ್ವಕಂಡ ಪ್ರಖ್ಯಾತ ವಿಜ್ಞಾನಿ ಹಾಗೂ ಗಗನಯಾತ್ರಿ. ಬಾಹ್ಯಾಕಾಶಕ್ಕೆ ಯಾನ ಬೆಳೆಸಿದ ಭಾರತೀಯ ಮೂಲದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಇಂದು ಅವರ ಪುಣ್ಯಸ್ಮರಣೆ.


ಪರಿಚಯ
ಕಲ್ಪನಾ ಚಾವ್ಲಾ ಅವರು ಮಾರ್ಚ್ 17 , 1962 ರಂದು ಹರಿಯಾಣದ ಕರ್ನಾಲ್ ನಲ್ಲಿ ಜನಿಸಿದರು. ಇವರ ತಂದೆ ಬನಾರಸಿ ಲಾಲ್, ತಾಯಿ ಸಂಜ್ಯೋತಿ. ಅವರು ಕರ್ನಾಲ್ ನ ಟ್ಯಾಗೋರ್ ಬಾಲ ನಿಕೇತನ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಪಂಜಾಬ್ ನಲ್ಲಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದರು. ಅವರು 1982 ರಲ್ಲಿ ಯುನೈಟೆಡ್ ಸ್ಟೇಟ್ ಗೆ ತೆರಳಿದರು. ಬಳಿಕ 1984 ರಲ್ಲಿ ಆರ್ಲಿಂಗ್ಟನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಿಂದ ಏರೋಸ್ಪೇಸ್ ಇಂಜಿನಿಯರಿಂಗ್ನಲ್ಲಿ ಎಂಎಸ್ ಪದವಿ ಪಡೆದರು. ನಂತರ ಏರೋಸ್ಪೇಸ್ ಇಂಜಿನಿಯರಿಂಗ್ ನಲ್ಲಿ ಪಿಎಚ್ ಡಿ ಮುಗಿಸಿದರು.


ವೃತ್ತಿ
ಕಲ್ಪನಾ ಚಾವ್ಲಾ ಅವರು NASA Ames ಸಂಶೋಧನಾ ಕೇಂದ್ರದಲ್ಲಿ ಓವರ್ಸೆಟ್ ಮೆಥಡ್ಸ್, Inc. ನ ಉಪಾಧ್ಯಕ್ಷರಾಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಲ್ಲಿ ಅವರು ಶಾರ್ಟ್ ಟೇಕಾಫ್ ಮತ್ತು ಲ್ಯಾಂಡಿಂಗ್ ಪರಿಕಲ್ಪನೆಗಳ ಕುರಿತಾದ ಕಂಪ್ಯೂಟೇಶನಲ್ ಫ್ಲ್ಯೂಯಿಡ್ ಡೈನಾಮಿಕ್ಸ್ (CFD) ಸಂಶೋಧನೆ ಮಾಡಿದರು.


ಕಲ್ಪನಾ ಚಾವ್ಲಾ ಅವರಿಗೆ ಚಿಕ್ಕಂದಿನಿಂದಲೂ ವಿಮಾನ ಹಾರಾಟದ ಬಗ್ಗೆ ಅಪಾರ ಒಲವು ಇತ್ತು. ಗಗನಯಾತ್ರಿಯಾಗುವ ಹವ್ಯಾಸದಿಂದಾಗಿ, ಅವರು ಸೀ ಪ್ಲೇನ್, ಮಲ್ಟಿ ಇಂಜಿನ್ ಏರ್ಕ್ರಾಫ್ಟ್ ಮತ್ತು ಗ್ಲೈಡರ್ನ ಪ್ರಮಾಣೀಕೃತ ಪೈಲೆಟ್ ಆದರು. ಅವರು ಗ್ಲೈಡರ್ಗಳು ಮತ್ತು ಏರೋಪ್ಲೇನ್ಗಳಿಗೆ ಪ್ರಮಾಣೀಕೃತ ವಿಮಾನ ಬೋಧಕರಾಗಿದ್ದರು.
ಕಲ್ಪನಾ ಚಾವ್ಲಾ ಅವರು ಮಾರ್ಚ್ 1995 ರಲ್ಲಿ NASA ಗಗನಯಾತ್ರಿ ದಳಕ್ಕೆ ಸೇರಿದರು. ನಂತರ 1997 ರಲ್ಲಿ ಮೊದಲ ಗಗನಯಾನಕ್ಕೆ ಆಯ್ಕೆಯಾದರು.


1984 ರಲ್ಲಿ ಬಾಹ್ಯಾಕಾಶ ನೌಕೆಯಲ್ಲಿ ಹಾರಿದ ಗಗನಯಾತ್ರಿ ರಾಕೇಶ್ ಶರ್ಮಾ ಅವರ ನಂತರ ಕಲ್ಪನಾ ಚಾವ್ಲಾ ಮೊದಲ ಭಾರತೀಯ ಮಹಿಳೆ ಮತ್ತು ಬಾಹ್ಯಾಕಾಶದಲ್ಲಿ ಹಾರಿದ ಎರಡನೇ ಭಾರತೀಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತನ್ನ ಮೊದಲ ಕಾರ್ಯಾಚರಣೆಯಲ್ಲಿ, ಚಾವ್ಲಾ 10.4 ಮಿಲಿಯನ್ ಮೈಲುಗಳಷ್ಟು ಪ್ರಯಾಣಿಸಿದರು. ಬಾಹ್ಯಾಕಾಶದಲ್ಲಿ 372 ಗಂಟೆಗಳಿಗೂ ಹೆಚ್ಚು ಕಾಲ ಲಾಗಿಂಗ್ ಮಾಡಿದರು.

ನಂತರ 2000 ರಲ್ಲಿ ಅವರು STS-107 ಸಿಬ್ಬಂದಿ ತನ್ನ ಎರಡನೇ ಹಾರಾಟಕ್ಕೆ ಆಯ್ಕೆಯಾಗಿದ್ದರು. ತಾಂತ್ರಿಕ ಸಮಸ್ಯೆಗಳಿಂದ ಈ ಕಾರ್ಯಾಚರಣೆ ವಿಳಂಬವಾಗಿತ್ತು. 80 ಪ್ರಯೋಗ, ಪರೀಕ್ಷೆಗಳ ನಂತರ ಮತ್ತೊಮ್ಮೆ ಗಗನಯಾತ್ರೆ ಪ್ರಾರಂಭವಾಯಿತು. ಆದರೆ ಗಗನಯಾನ ಮುಗಿಸಿ ಹಿಂದಿರುಗುವಾಗ ಉಂಟಾದ ತಾಂತ್ರಿಕ ದೋಷದಿಂದಾಗಿ ಫೆಬ್ರವರಿ 1, 2003 ರಂದು ಕಲ್ಪನಾ ಅವರೂ ಸೇರಿದಂತೆ ಒಟ್ಟು 7 ಮಂದಿ ಗಗನಯಾತ್ರಿಗಳು ಸಾವನ್ನಪ್ಪಿದರು.

ಅವರ ಗೌರವಾರ್ಥವಾಗಿ ಫೆಬ್ರವರಿ‌ 5, 2003ರಲ್ಲಿ‌ ಅಂದಿನ‌ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಮೆಟಿಯೋರಾಲಾಜಿ ಯ ಸರಣಿ ಉಪಗ್ರಹಗಳಿಗೆ ಕಲ್ಪನಾ ಅವರ ಹೆಸರನ್ನು ಇಡಲಾಯಿತು. ನ್ಯೂಯಾರ್ಕ್ ನಲ್ಲಿರುವ ಲಿಟ್ಲ್ ಇಂಡಿಯಾದ 74ನೇ ಬೀದಿಗೆ ‘ದಿ ಕಲ್ಪನಾ ವೇ’ ಎಂದು ಹೆಸರಿಡಲಾಗಿದೆ. ನಾಸಾ ನಡೆಸಿದ ಮಂಗಳಯಾನದಲ್ಲಿ ಗುರುತಿಸಲಾದ ಏಳು ಬೆಟ್ಟಗಳ ಚೈನ್ ಆಫ್ ಹಿಲ್ಸ್ ನ್ನು ಕೊಲಂಬಿಯಾ ಹಿಲ್ಸ್ ಎಂದು ಕಲ್ಪನಾ ಮತ್ತು ಆರು ಮಂದಿ ಗಗನಯಾತ್ರಿಗಳ ಗೌರವಾರ್ಥವಾಗಿ ಹೆಸರಿಸಲಾಗಿದೆ. ಕಲ್ಪನಾ ಅವರ ಹೆಸರಲ್ಲಿ ಅವರ ಹುಟ್ಟೂರಾದ ಕರ್ನಾಲ್ ನಲ್ಲಿ ಮೆಡಿಕಲ್ ಕಾಲೇಜನ್ನು ನಿರ್ಮಿಸಲಾಗಿದೆ. ಇದಲ್ಲದೆ ಕಲ್ಪನಾ ಅವರಿಗೆ ಗೌರವ ಸಲ್ಲಿಸುವುದರ ಭಾಗವಾಗಿ ವಿಶ್ವದಾದ್ಯಂತ ಹಲವು ವಿಶ್ವವಿದ್ಯಾನಿಲಯಗಳ ವಿವಿಧ ವಿಭಾಗಗಳು ವಿನೂತನ ವೈಜ್ಞಾನಿಕ ಯೋಜನೆಗಳಿಗೆ ಕಲ್ಪನಾ ಅವರ ಹೆಸರನ್ನು ಇಟ್ಟಿವೆ. ಅವರ ಹೆಸರಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ.

Leave a Reply

Your email address will not be published.

This site uses Akismet to reduce spam. Learn how your comment data is processed.