ಭಾರತದ ಗಾನ ಕೋಗಿಲೆ ಎಂದೇ ಗುರುತಿಸಿಕೊಂಡಿದ್ದ ಸರೋಜಿನಿ ನಾಯ್ದು ಅವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಹೆಸರಾಂತ ಕವಿಯಾಗಿ, ರಾಜಕೀಯ ನಾಯಕಿಯಾಗಿ ಪ್ರಸಿದ್ಧಿ ಗಳಿಸಿದವರು. ಪ್ರತಿವರ್ಷ ಅವರ ಜನ್ಮದಿನವಾದ ಫೆಬ್ರವರಿ 13 ರಂದು ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ.


ಪರಿಚಯ
ಸರೋಜಿನಿ ನಾಯ್ಡು ಅವರು ಫೆಬ್ರವರಿ 13, 1879 ರಲ್ಲಿ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿ ಜನಿಸಿದರು. ಇವರ ತಂದೆ ಅಗೋರೆನಾಥ್ ಚಟ್ಟೋಪಾಧ್ಯಾಯರು, ತಾಯಿ ಸುಂದರಿದೇವಿ. ಇವರ ತಂದೆ ವಿಜ್ಞಾನಿ ಮತ್ತು ತತ್ವಜ್ಞಾನಿಗಳಾಗಿದ್ದರು.


ಇವರು ಮದ್ರಾಸ್ ವಿಶ್ವವಿದ್ಯಾಲಯದ ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಅಗ್ರಸ್ಥಾನ ಪಡೆದು ಮುಂದೆ 16ನೇ ವಯಸ್ಸಿನಲ್ಲಿ ಲಂಡನ್ನ ಕಿಂಗ್ಸ್ ಕಾಲೇಜು ಮತ್ತು ಕೇಂಬ್ರಿಜ್ನ ಗಿರ್ಟನ್ ಕಾಲೇಜಿನಲ್ಲಿ ಉನ್ನತ ಶಿಕ್ಷಣವನ್ನು ಮುಂದುವರಿಸಲು ಇಂಗ್ಲೆಂಡಿಗೆ ತೆರಳಿದರು.


ಸರೋಜಿನಿ ನಾಯ್ಡು ಅವರು ಉರ್ದು, ತೆಲುಗು, ಇಂಗ್ಲೀಷ್, ಬೆಂಗಾಳಿ ಮತ್ತು ಪರ್ಷಿಯನ್ ಭಾಷೆಗಳನ್ನು ಮಾತನಾಡುತ್ತಿದ್ದರು. ಮನೆಯಲ್ಲಿ ಇವರು ಗಣತಜ್ಞೆ ಅಥವಾ ವಿಜ್ಞಾನಿ ಆಗಲಿ ಎಂಬ ಬಯಕೆ ಇದ್ದರೆ, ಅವರು ಕವಿಯಾಗಲು ಇಚ್ಛಿಸಿದ್ದರು. ಇವರು ಆಂಗ್ಲಭಾಷೆಯಲ್ಲಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈದರಾಬಾದಿನ ನಿಜಾಮರು ಇವರ ಕವಿತೆಗಳಿಂದ ಸ್ಪೂರ್ತಿಗೊಂಡು ವಿದೇಶದಲ್ಲಿ ಕಲಿಯಲು ವಿದ್ಯಾರ್ಥಿವೇತನವನ್ನು ನೀಡಿದರು.

ರಾಜಕೀಯ ಜೀವನ
ಸರೋಜಿನಿ ನಾಯ್ಡು ಅವರು 1905 ರಲ್ಲಿ ಬಂಗಾಳದ ವಿಭಜನೆಯ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದ ಮೂಲಕ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು.  ಸರೋಜಿನಿ ನಾಯ್ಡು ಅವರು ತಮ್ಮ ಅಸಾಧಾರಣ ಭಾಷಣಗಳ ಮೂಲಕ ರಾಷ್ಟ್ರೀಯ ಚಳವಳಿಯಲ್ಲಿ ಎಲ್ಲರಿಗೂ ವಿಶೇಷವಾಗಿ ಮಹಿಳೆಯರಿಗೆ ಸ್ಫೂರ್ತಿ ಮತ್ತು ಪ್ರೇರಣೆ ನೀಡಿದರು. ಮಹಿಳಾ ಸಬಲೀಕರಣ, ಯುವ ಕಲ್ಯಾಣ, ಕಾರ್ಮಿಕ ಘನತೆ, ಮಹಿಳಾ ಶಿಕ್ಷಣ ಮತ್ತು ರಾಷ್ಟ್ರೀಯತೆ ಕುರಿತು ಉಪನ್ಯಾಸ ನೀಡಿದರು.


ನಂತರ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಗೆ ಸೇರಿದರು. ಅವರು 1925ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.  ಮಹಾತ್ಮ ಗಾಂಧಿಯವರ ನಿಕಟ ಸಹವರ್ತಿಯಾಗಿದ್ದು, ಬ್ರಿಟಿಷ್ ಆಡಳಿತದ ವಿರುದ್ಧ ಅಹಿಂಸಾತ್ಮಕ ಪ್ರತಿರೋಧ ಚಳವಳಿಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.


ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ
ಸರೋಜಿನಿ ನಾಯ್ಡು ಅವರು ಸಾಹಿತ್ಯದ ಕಡೆ ಹೆಚ್ಚು ಒಲವು ತೋರಿದವರು. ಇವರು ಬರೆದ ಕವನ ಹಾಗೂ ಪುಸ್ತಕಗಳು ಹೆಚ್ಚು ಜನಪ್ರಿಯಗೊಂಡಿವೆ. ಇವರು ಬರೆದ ದಿ ಗೋಲ್ಡನ್ ಥ್ರೆಶೋಲ್ ಎಂಬ ಪುಸ್ತಕ ಮೊದಲು ಪ್ರಕಟವಾಯಿತು. ಅವರ ಪುಸ್ತಕಗಳು ಮತ್ತು ಕವನಗಳು ದೇಶಭಕ್ತಿ ಮತ್ತು ಸಾಮಾಜಿಕ ಜಾಗೃತಿಯನ್ನು ಆಧರಿಸಿವೆ. ಸರೋಜಿನಿ ನಾಯ್ಡು ಅವರನ್ನು ‘ನೈಟಿಂಗೇಲ್ ಆಫ್ ಇಂಡಿಯಾ’ ಅಥವಾ ‘ಭಾರತ್ ಕೋಕಿಲಾ’ ಎಂದು ಕರೆಯಲಾಗುತ್ತಿತ್ತು..


ರಾಷ್ಟ್ರೀಯ ಮಹಿಳಾ ದಿನ
ಭಾರತದ ರಾಜ್ಯವಾದ ಉತ್ತರ ಪ್ರದೇಶದ ಮೊದಲ ಮಹಿಳಾ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಸರೋಜಿನಿ ನಾಯ್ಡು ಭಾರತೀಯ ಸಮಾಜ ಮತ್ತು ರಾಜಕೀಯಕ್ಕೆ ನೀಡಿದ ಕೊಡುಗೆಯಿಂದಾಗಿ ಭಾರತ ಸರ್ಕಾರವು 1975 ರಲ್ಲಿ ಫೆಬ್ರವರಿ 13 ಅನ್ನು ರಾಷ್ಟ್ರೀಯ ಮಹಿಳಾ ದಿನವೆಂದು ಘೋಷಿಸಿತು.

ಮಹತ್ವ

ರಾಷ್ಟ್ರೀಯ ಮಹಿಳಾ ದಿನಾಚರಣೆಯು ದೇಶವು ಮಹಿಳೆಯರ ಸಾಧನೆಗಳನ್ನು ಸಂಭ್ರಮಿಸಲು ಮತ್ತು ಅವರ ಸಾಮರ್ಥ್ಯಗಳನ್ನು ಗುರುತಿಸಲು ಅವಕಾಶವನ್ನು ಒದಗಿಸುತ್ತದೆ. ಭಾರತದಲ್ಲಿ ಮಹಿಳೆಯರು ಎದುರಿಸುತ್ತಿರುವ ದೌರ್ಜನ್ಯ, ತಾರತಮ್ಯ ಮತ್ತು ಶಿಕ್ಷಣದ ಕೊರತೆ ಮುಂತಾದ ನಿರಂತರ ಸವಾಲುಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಈ ದಿನವು ಸಹಕಾರಿ. ದೇಶಾದ್ಯಂತ ಮಹಿಳೆಯರ


ಸರೋಜಿನಿ ನಾಯ್ಡು ಅವರು ಹೃದಯ ಸ್ತಂಭನದಿಂದ ಮಾರ್ಚ್ 2, 1949 ರಂದು ನಿಧನರಾದರು.

Leave a Reply

Your email address will not be published.

This site uses Akismet to reduce spam. Learn how your comment data is processed.