ಪುಣೆ: ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ಅಖಿಲ ಭಾರತೀಯ ಸಮನ್ವಯ ಬೈಠಕ್ ಈ ವರ್ಷ ಮಹಾರಾಷ್ಟ್ರದ ಪುಣೆಯಲ್ಲಿ ನಡೆಯಲಿದೆ. ಮೂರು ದಿನಗಳ ಈ ಸಮನ್ವಯ ಬೈಠಕ್ 14, 15 ಮತ್ತು 16 ಸೆಪ್ಟೆಂಬರ್ 2023 ರಂದು ನಡೆಯಲಿದೆ. ಅಖಿಲ ಭಾರತೀಯ ಮಟ್ಟದ ಈ ಸಮನ್ವಯ ಬೈಠಕ್ ವರ್ಷಕ್ಕೊಮ್ಮೆ ನಡೆಯುತ್ತದೆ.
ಈ ಬೈಠಕ್ ನಲ್ಲಿ ಸರಸಂಘಚಾಲಕ ಡಾ. ಮೋಹನ್ ಭಾಗವತ್, ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ ಸೇರಿದಂತೆ ಎಲ್ಲಾ ಐವರು ಸಹ ಸರಕಾರ್ಯವಾಹರು ಉಪಸ್ಥಿತರಿರುತ್ತಾರೆ. ಇತರ ಪ್ರಮುಖ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸಂಘಪ್ರೇರಿತ 36 ವಿವಿಧ ಸಂಘಟನೆಗಳ ಪ್ರಮುಖರು ಬೈಠಕ್ ನಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರ ಸೇವಿಕಾ ಸಮಿತಿ, ವನವಾಸಿ ಕಲ್ಯಾಣ ಆಶ್ರಮ, ವಿಶ್ವ ಹಿಂದೂ ಪರಿಷತ್, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಭಾರತೀಯ ಜನತಾ ಪಾರ್ಟಿ, ಭಾರತೀಯ ಕಿಸಾನ್ ಸಂಘ, ವಿದ್ಯಾ ಭಾರತಿ, ಭಾರತೀಯ ಮಜ್ದೂರ್ ಸಂಘ, ಸಂಸ್ಕಾರ ಭಾರತಿ, ಸೇವಾ ಭಾರತಿ, ಸಂಸ್ಕೃತ ಭಾರತಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಸೇರಿದಂತೆ ಇತರ ಪ್ರಮುಖ ಸಂಘಟನೆಗಳು ಈ ಬೈಠಕ್ ನಲ್ಲಿ ಭಾಗವಹಿಸಲಿವೆ. ಈ ಸಂಘಟನೆಗಳು ಮತ್ತು ಅವುಗಳಿಗೆ ಸಂಬಂಧಿಸಿದ ಪದಾಧಿಕಾರಿಗಳು ಸೇವೆ, ಸಮರ್ಪಣೆ ಮತ್ತು ದೇಶಭಕ್ತಿಯೊಂದಿಗೆ ಸಾಮಾಜಿಕ ಜೀವನದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿತ್ತಾರೆ. ಕಳೆದ ವರ್ಷ ಈ ಬೈಠಕ್ ಛತ್ತೀಸ್ಗಢದ ರಾಯ್ಪುರದಲ್ಲಿ ನಡೆದಿತ್ತು.
ಈ ಬೈಠಕ್ ನಲ್ಲಿ ಭಾಗವಹಿಸುವ ಎಲ್ಲಾ ಸಂಘಟನೆಗಳು ಸಾಮಾಜಿಕ ಜೀವನದ ವಿವಿಧ ಅಂಶಗಳ ಬಗೆಗೆ ತಮ್ಮ ಅನುಭವ ಮತ್ತು ಕೆಲಸದ ಬಗ್ಗೆ ವಿವರವಾಗಿ ಚರ್ಚಿಸುತ್ತಾರೆ. ಬೈಠಕ್ ನಲ್ಲಿ ಪ್ರಸ್ತುತ ರಾಷ್ಟ್ರೀಯ ಸನ್ನಿವೇಶದ ಜೊತೆಗೆ ಸಾಮಾಜಿಕ ಸಾಮರಸ್ಯ, ಪರಿಸರ, ಕುಟುಂಬ ಪ್ರಬೋಧನಾ, ಸೇವಾ ಕಾರ್ಯ, ಸಾಮಾಜಿಕ, ಆರ್ಥಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಗುವುದು. ಸಾಮಾಜಿಕ ಪರಿವರ್ತನೆಯ ವಿವಿಧ ಕ್ಷೇತ್ರಗಳಲ್ಲಿ ಮಾಡಬೇಕಾಗಿರುವ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ ಅಖಿಲ ಭಾರತ ಪ್ರಚಾರ ಪ್ರಮುಖ ಸುನೀಲ್ ಅಂಬೇಕರ್ ತಿಳಿಸಿದ್ದಾರೆ.
The Rashtriya Swayamsevak Sangh’s annual Akhil Bharatiya Samanvay Baithak (All Bharat Coordination Meeting) is going to be held in Pune, Maharashtra, this year. This three-day coordination meeting will be held on September 14-16, 2023.
Respected Sarsanghchalak Dr. Mohan ji Bhagwat, Sarkaryavah Dattatreya Hosabale ji along with all the five Sah-Sarkaryavahs and other key officials of the RSS will be present in this meeting.
Key officials of about 36 RSS-inspired organizations will also participate in the meeting. Among these, major organizations such as Rashtra Sevika Samiti, Vanvasi Kalyan Ashram, Vishwa Hindu Parishad, Akhil Bharatiya Vidyarthi Parishad, Bharatiya Janata Party, Bharatiya Kisan Sangh, Vidya Bharati, Bharatiya Mazdoor Sangh, Sanskar Bharati, Seva Bharati, Sanskrit Bharati, Akhil Bharatiya Sahitya Parishad will participate in this annual Samanvay Baithak (coordination meeting). All these organizations and their officials remain active in various fields of social life with an abiding sense of service, dedication and patriotism. Last year, this Samanvay Baithak was held in Raipur, Chhattisgarh.
The participants will discuss in detail their experiences and activities in various aspects of social life. Apart from the current national scenario, there will be extensive discussions and exchange of views on important issues related to social harmony, environment, family values, service work, economy and national security. Discussions will also be held on various activities that will aid social transformation.
Sunil Ambekar
Akhil Bharatiya Prachar Pramukh
Rashtriya Swayamsevak Sangh
अखिल भारतीय समन्वय बैठक 14-16 सितम्बर, 2023 पुणे राष्ट्रीय स्वयंसेवक संघ की प्रतिवर्ष आयोजित होने वाली अखिल भारतीय समन्वय बैठक इस वर्ष महाराष्ट्र के पुणे में आयोजित होने जा रही है। तीन दिवसीय यह समन्वय बैठक 14-15-16 सितंबर 2023 को होगी। यह अखिल भारतीय स्तर की व्यापक समन्वय बैठक वर्ष में एक बार आयोजित होती है।
इस बैठक में पूजनीय सरसंघचालक डॉ. मोहन जी भागवत, माननीय सरकार्यवाह श्री दत्तात्रेय होसबाले सहित संघ के सभी पांचों सह सरकार्यवाह और अन्य प्रमुख पदाधिकारी उपस्थित रहेंगे। बैठक में 36 संघ प्रेरित विविध संगठनों के प्रमुख पदाधिकारी सहभागी होंगे। जिसमें प्रमुख संगठन राष्ट्र सेविका समिति, वनवासी कल्याण आश्रम, विश्व हिंदू परिषद, अखिल भारतीय विद्यार्थी परिषद, भारतीय जनता पार्टी, भारतीय किसान संघ, विद्या भारती, भारतीय मजदूर संघ, संस्कार भारती, सेवा भारती, संस्कृत भारती, अखिल भारतीय साहित्य परिषद इस बैठक में सहभागिता करेंगे। ये संगठन और इनसे जुड़े पदाधिकारी समाज जीवन के विविध क्षेत्रों में सेवा, समर्पण और राष्ट्र भाव से सक्रिय रहते हैं। पिछले वर्ष ये बैठक छत्तीसगढ़ के रायपुर में आयोजित हुई थी।
इस बैठक में सहभाग करने वाले सभी संगठन, सामाजिक जीवन के विविध पक्षों के अपने अनुभव और कार्यों के सन्दर्भ में विस्तृत चर्चा करेंगे। बैठक में वर्तमान राष्ट्रीय परिदृश्य के साथ ही सामाजिक समरसता, पर्यावरण, कुटुंब प्रबोधन, सेवा कार्य, सामाजिक, आर्थिक और राष्ट्रीय सुरक्षा से जुड़े विभिन्न विषयों पर व्यापक विचार-विमर्श किया जाएगा। सामाजिक परिवर्तन के विभिन्न क्षेत्रों में करणीय कार्यों पर भी चर्चा होगी। – सुनील आंबेकर अखिल भारतीय प्रचार प्रमुख, राष्ट्रीय स्वयंसेवक संघ