RSS Swayamsevaks at Flood relief works in North Karnataka-2009

ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕ
#74, ರಂಗ ರಾವ್ ರಸ್ತೆ ಶಂಕರಪುರಂ, ಬೆಂಗಳೂರು 560004

ಸಮಾಜ ಬಾಂಧವರಲ್ಲಿ ಒಂದು ಮನವಿ.

RSS Swayamsevaks at Flood relief works in North Karnataka-2009

ಈಶಾನ್ಯ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ಅಸ್ಸಾಂ ಇದೀಗ ಹಿಂಸೆ- ವೈಷಮ್ಯಗಳಿಗೆ ತುತ್ತಾಗಿ ನಲುಗಿ ಹೋಗಿದೆ. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತದ ಗಡಿಯೊಳಗೆ ನುಸುಳಿ ಅಸ್ಸಾಂನ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ  ಬಾಂಗ್ಲಾ ವಲಸಿಗರು, ಅಸ್ಸಾಂನ  ಕೊಕ್ರಜಾರ್, ಗೊಸ್ಸೈಗಾಂವ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಅಲ್ಲಿನ ಮೂಲ ನಿವಾಸಿಗಳಾಗಿರುವ ಹಿಂದೂ ಕುಟುಂಬಗಳ ಮೇಲೆ ಅಪಾರ ಪ್ರಮಾಣದಲ್ಲಿ ಹಿಂಸಾ ಕೃತ್ಯವನ್ನೆಸಗಿದ್ದಾರೆ. ನೂರಕ್ಕೂ ಹೆಚ್ಚು ನಾಗರಿಕರು ಬಲಿಯಾಗಿ, ಲಕ್ಷಾಂತರ ಮಂದಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಸಾವಿರಾರು ಹಿಂದೂ ಕುಟುಂಬಗಳು ನಿರಾಶ್ರಿತಗೊಂಡಿವೆ. ಸಾಮಾಜಿಕವಾಗಿ, ಆರ್ಥಿಕವಾಗಿ  ಅಷ್ಟೇನೂ  ಸಶಕ್ತವಲ್ಲದ ಈ ಅಮಾಯಕ ಹಿಂದೂ ಕುಟುಂಬಗಳ ಮೇಲೆ ಗೂಂಡಾಗಿರಿ ಪ್ರದರ್ಶಿಸಿರುವ ರಾಷ್ಟ್ರ ವಿರೋಧಿ ಶಕ್ತಿಗಳು, ಅಸ್ಸಾಂನ ಹಿಂದೂಗಳ ಜೀವನವನ್ನು ದುಸ್ತರಗೊಳಿಸಿವೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರು ಅಸ್ಸಾಂ ಸಂತ್ರಸ್ತರ ಕಣ್ಣೀರೊರೆಸಲು ಈಗಾಗಲೇ ಧಾವಿಸಿದ್ದಾರೆ. ಹತ್ತಾರು ಕಡೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸೇವಭಾರತಿ ವತಿಯಿಂದ ನಿರಾಶ್ರಿತರಿಗೆ ಆಹಾರ, ತಾತ್ಕಾಲಿಕ ವಸತಿ, ಔಷಧಿ ಬಟ್ಟೆ , ಇತರ ಪ್ರಾಥಮಿಕ ಅವಶ್ಯಕತೆಗಳನ್ನು ಪೂರೈಸಲಾಗುತ್ತಿದೆ. ಕುಗ್ಗಿ ಹೋದ ಮನಸ್ಸುಗಳಿಗೆ ಮತ್ತೆ ಮನೋಧೈರ್ಯ ತುಂಬುತ್ತಿದ್ದಾರೆ.

ಆದರೆ, ಇನ್ನೂ ನೂರಾರು ಕಡೆಗಳಲ್ಲಿ ಪರಿಹಾರ ಕಾರ್ಯದ ಅವಶ್ಯಕತೆಯಿದೆ. ಲಕ್ಷಕ್ಕೂ ಮಿಕ್ಕ ನೊಂದಜೀವಗಳಿಗೆ ಸಾವಿರಾರು ನೆರವಿನ ಕೈಗಳ ಅಗತ್ಯವಿದೆ. ಬನ್ನಿ, ನಮ್ಮೊಂದಿಗೆ ಕೈ ಜೋಡಿಸಿ. ನಿಮ್ಮ ಕಳಕಳಿಯ ಧನ ಸಹಾಯವನ್ನು ನಮಗೆ ತಲುಪಿಸಿ. ಅಸ್ಸಾಂ ಜನತೆಯ ನೆಮ್ಮದಿಯ ಬದುಕನ್ನು ಮತ್ತೆ ಕಟ್ಟಿ ಕೊಡೋಣ.

ಚೆಕ್ / ಡಿ.ಡಿ.ಗಳನ್ನು “ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ” (RSS Sanchalita Samtrasta Parihara Nidhi)  ಹೆಸರಿಗೆ ನೀಡಿ. ಬ್ಯಾಂಕ್ ಖಾತೆ ನಂ 0789101009327 , ಕೆನರಾ ಬ್ಯಾಂಕ್ ಕೆಂಪೇಗೌಡ ನಗರ ಶಾಖೆ, ಬೆಂಗಳೂರು – ೫೬೦೦೧೮ . ಇದಕ್ಕೆ 80G ಅನ್ವಯ ಆದಾಯ ತೆರಿಗೆ ವಿನಾಯಿತಿ ಇದೆ.

ತಲುಪಿಸಬೇಕಾದ ವಿಳಾಸ
ಕೇಶವಕೃಪಾ, #74, ರಂಗ ರಾವ್ ರಸ್ತೆ ಶಂಕರಪುರಂ, ಬೆಂಗಳೂರು 56004

ದೂರವಾಣಿ : 080-26610081
ನಿಮ್ಮ ಉದಾರ ನೆರವಿನ ನಿರೀಕ್ಷೆಯಲ್ಲಿ,
ಮ ವೆಂಕಟರಾಮು ಮತ್ತು ಡಾ. ಖಗೆಶನ್ ಪಟ್ಟಣಶೆಟ್ಟಿ

getting your ex girlfriend backhow to win your ex boyfriend back How To Get Your Ex Back how to win back your exwhat to do when you want to get your ex boyfriend back

Leave a Reply

Your email address will not be published.

This site uses Akismet to reduce spam. Learn how your comment data is processed.