ಮೇ ೩, ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ನಡೆಸಿದ ಸಮೀಕ್ಷೆಯ ಪ್ರಕಾರ ಬಿಜೆಪಿ ಸೋಲಲಿದೆ ಎಂದು ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ವರದಿಯಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದು ಸತ್ಯಕ್ಕೆ ದೂರವಾಗಿದೆ ಎಂದು ಕರ್ನಾಟಕ, ಆಂಧ್ರ, ತೆಲಂಗಾಣ ರಾಜ್ಯಗಳನ್ನೊಳಗೊಂಡ ಆರೆಸ್ಸೆಸ್ಸಿನ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ಶ್ರೀ ವಿ ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ. ಆರೆಸ್ಸೆಸ್ ಇಂತಹ ಯಾವುದೇ ಸಮೀಕ್ಷೆಯನ್ನು ಮಾಡಿಲ್ಲ ಹಾಗೂ ಈ ತರಹದ ಸಮೀಕ್ಷೆಗಳಲ್ಲಿ ಆರೆಸ್ಸೆಸ್ ಯಾವತ್ತೂ ಪಾತ್ರವಹಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿ ಕನ್ನಡಪ್ರಭದಲ್ಲಿ ಪ್ರಕಟವಾಗಿಯೇ ಇಲ್ಲ. ಚುನಾವಣೆ ಸಮಯದಲ್ಲಿ ಜನರನ್ನು ದಾರಿ ತಪ್ಪಿಸಲು ಕಿಡಿಗೇಡಿಗಳು ನಡೆಸಿರುವ ಕೃತ್ಯ ಇದು ಎಂದು ವಿ ನಾಗರಾಜ್ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ಪತ್ರಿಕೆಯ ಎಸ್ ಕೆ ಶಾಮಸುಂದರ್ ಅವರೂ ಇದು ಸುಳ್ಳು ಸುದ್ದಿ ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಿದ್ದಾರೆ.

May 3, Bengaluru:  On the backdrop of Karnataka State Elections an alleged report published in ‘Kannada Prabha’ newspaper stating that a survey was conducted by RSS and BJP would lose the elections is making rounds in social media. This is far from truth and qualifies to be a fake news clarified Sri V Nagaraj, Sanghachalak of the RSS’ Dakshina Madhya Kshetra which comprises of Karnataka, Andhra, Telangana. He added saying RSS has neither conducted any such surveys in the past nor would participate in them.

The said news report making rounds in social media was not published in Kannada Prabha newspaper at the first place. Such a thing has intentions to mislead people during the time of elections Sri V Nagaraj added.

Also, S K Shama Sundar from the KannadaPrabha newspaper has posted on his Facebook page that the news is fake.

Read this also

S K Shama Sundar, Kannada Prabha, Suvarna News

 

Leave a Reply

Your email address will not be published.

This site uses Akismet to reduce spam. Learn how your comment data is processed.