ರಾಷ್ಟ್ರೀಯ ಸ್ವಯಂಸೇವಕ ಸಂಘ – ಕರ್ನಾಟಕ

# ೭೪, ಕೇಶವಕೃಪ, ರಂಗರಾವ್ ರಸ್ತೆ, ಶಂಕರಪುರಂ, ಬೆಂಗಳೂರು – ೫೬೦ ೦೦೪

080-26610081 www.samvada.org, karnatakarss@gmail.com

V Card -1

ಪತ್ರಿಕಾ ಪ್ರಕಟಣೆ

ಆರೆಸ್ಸೆಸ್ ಕರ್ನಾಟಕ ಘಟಕದಿಂದ ಉತ್ತರಾಖಂಡ ಪರಿಹಾರ ನಿಧಿಗೆ 1 ಕೋಟಿ ರೂಪಾಯಿ ದೇಣಿಗೆ

ಉತ್ತರಾಖಂಡದಲ್ಲಿ ಉಂಟಾದ ಪ್ರವಾಹದ ನಂತರ ಕಳೆದ ಜೂನ್ 15 ರಿಂದ ಸತತ 44 ದಿನಗಳಿಂದ ವಿವಿಧ ರೀತಿಯ ಪರಿಹಾರ ಚಟುವಟಿಕೆಗಳಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ’ಉತ್ತರಾಂಚಲ್ ದೈವೀ ಆಪದಾ ಪೀಡಿತ್ ಸಹಾಯತಾ ಸಮಿತಿ’ ಎಂಬ ಹೆಸರಿನಲ್ಲಿ ಆರೆಸ್ಸೆಸ್ ಪರಿಹಾರ ಕಾರ್ಯಾಚರಣೆ ಉತ್ತರಾಖಂಡದಲ್ಲಿ ಅವಿರತವಾಗಿ ನಡೆಯುತ್ತಿದೆ.

ಕರ್ನಾಟಕದ ಆರೆಸ್ಸೆಸ್ ಘಟಕವು ಸಾರ್ವಜನಿಕವಾಗಿ ಮಾಡಿದ ಮನವಿಗೆ ಸಮಯೋಚಿತವಾಗಿ ಸ್ಪಂದಿಸಿದ ಸಾವಿರಾರು ಮಂದಿ ನಾಗರಿಕರು ಆರ್ಥಿಕರೂಪದ ದೇಣಿಗೆಯನ್ನು ’ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ’ಗೆ  ನೀಡಿದ್ದಾರೆ. ಕರ್ನಾಟಕದಲ್ಲಿ ಆರೆಸ್ಸೆಸ್ ವತಿಯಿಂದ ಸಂಗ್ರಹವಾದ ೧ ಕೋಟಿ ರೂಪಾಯಿಗಳನ್ನು ಉತ್ತರಾಖಂಡದ ಸಮಿತಿಗೆ ತಲುಪಿಸಲಾಗಿದೆ. ಅಲ್ಲಿನ ಪ್ರವಾಹ ಪೀಡಿತ ಪ್ರದೇಶದಲ್ಲಿ ಪರಿಹಾರ ಚಟುವಟಿಕೆಗಳಿಗೆ ಆ ಮೊತ್ತವು ಬಳಕೆಯಾಗಲಿದೆ.

ಪ್ರವಾಹದಿಂದ ತೀರಾ ಹಾನಿಗೊಳಗಾದ ಗ್ರಾಮಗಳ ಪುನರ್ನಿರ್ಮಾಣಕ್ಕೆ ಸಮಿತಿ ಮುಂದಾಗಿದೆ.

ಜೂನ್ ೧೮ ಮತ್ತು ೧೯ರಂದು ಉತ್ತರಾಖಂಡಕ್ಕೆ ನೀಡಿದ ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ಭೈಯ್ಯಾಜಿ ಜೋಷಿ, ಆರೆಸ್ಸೆಸ್ ಕೈಗೊಳ್ಳುತ್ತಿರುವ ಪರಿಹಾರ ಕಾರ್ಯಾಚರಣೆಗಳ ಪರಿಶೀಲನೆ ನಡೆಸಿದ್ದಾರೆ. ತೀರಾ ಹಾನಿಗೊಳಗಾಗಿರುವ ಪ್ರದೇಶಗಳಲ್ಲಿ ಪುನರ್ವಸತಿ ಹಾಗೂ ಪುನರ್ನಿರ್ಮಾಣ ಚಟುವಟಿಕೆಗಳಲ್ಲಿ  ಆರೆಸ್ಸೆಸ್ ನೇತೃತ್ವದ ಸಮಿತಿ ಕ್ರಿಯಾಶೀಲವಾಗಿದೆ.

-ನಾ. ತಿಪ್ಪೇಸ್ವಾಮಿ

ಪ್ರಾಂತ ಕಾರ್ಯವಾಹ, ಕರ್ನಾಟಕ ದಕ್ಷಿಣ

ದಿನಾಂಕ : ೨೯-೦೭-೨೦೧೩

ಕೇಶವಕೃಪ, ಬೆಂಗಳೂರು

Leave a Reply

Your email address will not be published.

This site uses Akismet to reduce spam. Learn how your comment data is processed.