Sangha-Shiksha-Varg, the RSS Training Camp

Sangha-Shiksha-Varg, the RSS Training Camp

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತದ ಕಾರ‍್ಯ ಚಟುವಟಿಕೆ ಮತ್ತಷ್ಟು ವಿಸ್ತಾರಗೊಂಡಿದ್ದು ಆರೆಸ್ಸೆಸ್ ಶಾಖೆಗಳ ಸಂಖ್ಯೆ ಹೆಚ್ಚಳವಾಗಿದೆ. ಆರೆಸ್ಸೆಸ್ ಇತ್ತೀಚೆಗೆ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಇದರಂತೆ 2011 ರ ಜನವರಿಯಲ್ಲಿ 1698 ಸ್ಥಾನಗಳಲ್ಲಿ 2597 ರಷ್ಟು ಇದ್ದ ಶಾಖೆಗಳ ಸಂಖ್ಯೆಯು 2012 ರ ಜನವರಿ ವೇಳೆಗೆ 1788 ಸ್ಥಾನಗಳಲ್ಲಿ 2715ಕ್ಕೆ ಏರಿದೆ. ಇದೇ ರೀತಿ ವಾರಕ್ಕೊಮ್ಮೆ ನಡೆಯುವ ಮಿಲನ್‌ಗಳ ಸಂಖ್ಯೆ 2011 ರಲ್ಲಿ 248 ಇದ್ದಿದ್ದು ಇದೀಗ 322 ಕ್ಕೇರಿದೆ. ಶಾಖೆ-ಮಿಲನ್ ನಡೆಯದ ಸ್ಥಾನಗಳಲ್ಲಿ ತಿಂಗಳಿಗೊಮ್ಮೆ ನಡೆಯುವ ಸಂಘ ಮಂಡಳಿಗಳ ಸಂಖ್ಯೆಯು  120 ರಿಂದ  429ಕ್ಕೆ, ಅಂದರೆ ಸುಮಾರು ಮೂರುವರೆ ಪಟ್ಟು ಏರಿಕೆ ಕಂಡಿದೆ. ಕಾರ್ಯಕರ್ತರಿಗಾಗಿ ಆಯೋಜಿಸಲಾದ ವಿವಿಧ ಸಂಘ ಶಿಕ್ಷಾ ವರ್ಗಗಳಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ  1248 ಮಂದಿ ಭಾಗವಹಿಸಿದ್ದಾರೆ. ಪ್ರಾಥಮಿಕ ಶಿಕ್ಷಾ ವರ್ಗಗಳು 29 ಕಡೆ ನಡೆದಿದ್ದು  3709 ಸ್ವಯಂಸೇವಕರು ಭಾಗವಹಿಸಿ ಸಂಘ ಶಿಕ್ಷಣ ಪಡೆದಿದ್ದಾರೆ.

ಆರೆಸ್ಸೆಸ್‌ನ ಸೇವಾ ವಿಭಾಗವು ಕರ್ನಾಟಕ ದಕ್ಷಿಣ ಪ್ರಾಂತದ 2434 ಸ್ಥಾನಗಳಲ್ಲಿ 6898 ವಿವಿಧ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದೆ. ಭಜನೆ, ಯೋಗ, ಬಾಲಗೋಕುಲ, ಸ್ವಸಹಾಯ ತಂಡ, ಜೋಳಿಗೆ ಪುಸ್ತಕಾಲಯ, ಗ್ರಾಮವಿಕಾಸ ಸೇವಾಕಾರ್ಯಗಳಿಗೆ ಸಂಬಂಧಿಸಿದಂತೆ ನಡೆದ ವಿವಿಧ ಪ್ರಶಿಕ್ಷಣ ವರ್ಗಗಳಲ್ಲಿ ಸುಮಾರು 2000 ಮಂದಿ ಪಾಲ್ಗೊಂಡಿದ್ದಾರೆ. ಜಲಸಂರಕ್ಷಣೆಯ ಆಶಯ ಹೊತ್ತ ’ಜಲಭಾರತಿ’ ಯೋಜನೆಯ ವತಿಯಿಂದ 36 ಕಡೆ ಜಲಜಾಗೃತಿ ಕುರಿತ ಕಾರ‍್ಯಾಗಾರಗಳು ನಡೆದಿದ್ದು  1950 ವಿದ್ಯಾರ್ಥಿಗಳು, 305 ಅಧ್ಯಾಪಕರು, 907 ಕೃಷಿಕರು ಭಾಗವಹಿಸಿದ್ದಾರೆ. ’ಮಳೆ ಕೊಯ್ಲು ಎಂದರೇನು?’ ಮತ್ತು ’ಜಲಸಂರಕ್ಷಣೆಗೆ ನೂರಾರು ದಾರಿಗಳು’ ಎಂಬ ಪುಸ್ತಕಗಳನ್ನು ಜಲಭಾರತಿ ಹೊರತಂದಿದೆ. ಬೆಂಗಳೂರಿನ ಸುಮಾರು 200ಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳಲ್ಲಿ  ಆರೆಸ್ಸೆಸ್ ಐಟಿ ಮಿಲನ್ ಕಾರ‍್ಯಕರ್ತರು (ಸಾಫ್ಟ್‌ವೇರ್ ಉದ್ಯೋಗಿಗಳ ನಡುವೆ ಆರೆಸ್ಸೆಸ್ ಶಾಖೆ ನಡೆಸುವ ಕಾರ್ಯಕರ್ತರು) ಆಯೋಜಿಸಿದ್ದ ’ಕನ್ನಡ ಪರಿಚಯ ವರ್ಗ’ ಕಾರ‍್ಯಕ್ರಮದಲ್ಲಿ ಹೊರರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿದ್ದ ಸುಮಾರು 3200ಕನ್ನಡಿಗರಲ್ಲದವರು ಪಾಲ್ಗೊಂಡು, ಕನ್ನಡ ಭಾಷೆಯ ಪರಿಚಯ ಮಾಡಿಕೊಂಡಿದ್ದಾರೆ

Leave a Reply

Your email address will not be published.

This site uses Akismet to reduce spam. Learn how your comment data is processed.