ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ

#74, ರಂಗರಾವ್‌ರಸ್ತೆ, ಶಂಕರಪರಂ, ಬೆಂಗಳೂರು- 560004

ಪತ್ರಿಕಾ  ಪ್ರಕಟಣೆ

ಉತ್ತರಾಖಂಡದ ಮಹಾಪ್ರವಾಹದ ನಂತರದ ಪರಿಹಾರ ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆ ಹಾಗೂ ಇತರ ಸಾಮಾಜಿಕ ಸಂಘಟನೆಗಳ ಜೊತೆಗೂಡಿ, ಆರೆಸ್ಸೆಸ್ ಸ್ವಯಂಸೇವಕರು ಗಣನೀಯ ಪ್ರಮಾಣದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತೀಯ ಸೇನೆಯ ಜವಾನರು ಪ್ರಾಣದ ಹಂಗು ತೊರೆದು, ಕೆಲವರು ಪ್ರ್ರಾಣ ಕೊಟ್ಟು ಯಾತ್ರಿಕರನ್ನು ಸುರಕ್ಷಿತವಾಗಿ ಕರೆತರಲು ಹಗಲಿರುಳು ಶ್ರಮಿಸುತ್ತಿದಾರೆ. ಈ ಪ್ರಾಕೃತಿಕ ದುರಂತದಲ್ಲಿ ಸತ್ತವರ ಅಥವಾ ಕಾಣೆಯಾದವರ ನಿಖರ ಸಂಖ್ಯೆಯನ್ನು ಅಧಿಕೃತವಾಗಿ ಪ್ರಕಟಿಸಲು ಸರ್ಕಾರಕ್ಕೂ ಸಾಧ್ಯವಾಗಿಲ್ಲ. ಪ್ರವಾಹದ ತೀವ್ರತೆಯೇ ಅಂಥದ್ದು!

ನಿಮ್ಮೂರಿನ ಅಥವಾ ಕುಟುಂಬದ ಯಾವುದೇ ವ್ಯಕ್ತಿ ಉತ್ತರಾಖಂಡದ ಪ್ರವಾಹದ ವೇಳೆ ‘ನಾಪತ್ತೆಯಾಗಿದ್ದಾರೆ’ ಅಥವಾ ‘ನಾಪತ್ತೆಯಾಗಿರಬಹುದು’ ಅಥವಾ ಇದುವರೆಗೂ ಅವರ ಬಗ್ಗೆ ’ಸುಳಿವು ಸಿಕ್ಕಿಲ್ಲ/ವಾಪಾಸ್ಸಾಗಿಲ್ಲ’ ಎಂಬುದಾಗಿ ತಮ್ಮ ಗಮನಕ್ಕೆ ಬಂದಿದ್ದಲ್ಲಿ ಅಂತಹ ಕುಟುಂಬದ ಸಹಾಯಕ್ಕೆ ಉತ್ತರಾಖಂಡದ ಆರೆಸ್ಸೆಸ್ ಕಾರ್ಯಕರ್ತರು ನೆರವಾಗಲಿದ್ದಾರೆ. ‘ನಾಪತ್ತೆಯಾಗಿದ್ದಾರೆ’ ಎಂದು ಶಂಕಿಸಲಾಗಿರುವ ವ್ಯಕ್ತಿಯ ಭಾವಚಿತ್ರ, ಸೂಕ್ತ ವಿವರಗಳನ್ನು ಕಳುಹಿಸಿದಲ್ಲಿ ಉತ್ತರಾಖಂಡದ ಆರೆಸ್ಸೆಸ್ ಕಾರ್ಯಕರ್ತರ ಮೂಲಕ ಅವರನ್ನು ಪತ್ತೆಹಚ್ಚುವ ಪ್ರಯತ್ನ ಮಾಡಲಾಗುವುದು.

ವಿವರಗಳನ್ನು ಕಳುಹಿಸಿಕೊಡಬೇಕಾದ ವಿಳಾಸ: ರಾಜೇಶ್ ಪದ್ಮಾರ್, #74, ಕೇಶವಕೃಪ (ಆರೆಸ್ಸೆಸ್ ಕಛೇರಿ), ರಂಗರಾವ್‌ರಸ್ತೆ, ಶಂಕರಪರಂ, ಬೆಂಗಳೂರು-560004. ದೂರವಾಣಿ: 9880621824, ಇ-ಮೇಲ್: rajeshpadmar@gmail.com, karnatakarss@gmail.com

********

ನಾ. ತಿಪ್ಪೇಸ್ವಾಮಿ

ಪ್ರಾಂತ ಕಾರ್ಯವಾಹ (ಕರ್ನಾಟಕ ದಕ್ಷಿಣ)

ದಿನಾಂಕ : ಜುಲೈ 1, 2013

ಸ್ಥಳ : ಕೇಶವಕೃಪ, ಬೆಂಗಳೂರು

 

Leave a Reply

Your email address will not be published.

This site uses Akismet to reduce spam. Learn how your comment data is processed.