ಹಿಂದು ವಿರೋಧಿ ಮಸೂದೆಯ ವಿರುದ್ಧ ಪ್ರತಿಭಟನೆ
ಕೇಂದ್ರದ ಕಾಂಗ್ರೆಸ್ ಸರ್ಕಾರ ಮುಂದಿನ ಸಂಸತ್ತಿನ ಅಧಿವೇಶನದಲ್ಲಿ ತರಲೆತ್ನಿಸುತ್ತಿರುವ, ‘ಮತೀಯ ನಿರ್ದೇಶಿತ ಹಿಂಸಾಚಾರ ತಡೆ’ ಮಸೂದೆಯು ಹಿಂದು ವಿರೋಧಿಯಾಗಿದ್ದು, ನವೆಂಬರ್ 10 ರಿಂದ ದೇಶದಾದ್ಯಂತ ಪ್ರತಿಭಟನಾ ಅಭಿಯಾನವನ್ನು ಆರೆಸ್ಸೆಸ್ – ರಾಷ್ಟ್ರೀಯ ಸ್ವಯಂಸೇವಕ ಸಂಘ , ಸೇರಿದಂತೆ ಹಲವಾರು ಹಿಂದು ಸಂಘಟನೆಗಳು ಹಮ್ಮಿಕೊಂಡಿವೆ.
- ಈ ಕಾನೂನನ್ನು ಮಾಡುತ್ತಿರುವವರು ಯಾರು ?
ಕೇಂದ್ರ ಸರಕಾರ, ಸಿದ್ಧಪಡಿಸಿರುವುದು ರಾಷ್ಟ್ರೀಯ ಸಲಹಾ ಸಮಿತಿ (National Advisory Council). ಅದರ ಅಧ್ಯಕ್ಷರು ಕಾಂಗ್ರೆಸ್ಸಿನ ಅಧ್ಯಕ್ಷರಾದ ಸೋನಿಯಾ ಗಾಂಧಿ.
- ಈ ಕಾನೂನನ್ನು ರಚಿಸಿದ ಸಮಿತಿಯಲ್ಲಿ ಇರುವವರು ಯಾರು?
ಸಯ್ಯದ್ ಶಹಾಬುದ್ದೀನ್, ತೀಸ್ತಾ ಸೆಟಲ್ವಾಡ್, ಫರಾ ನಖ್ವಿ, ಹರ್ಷ ಮಂಡಲ್, ಜಾನ್ ದಯಾಳ್, ಅಸ್ಘರ್ ಆಲಿ ಇಂಜಿನಿಯರ್ ಮುಂತಾದವರು.
- ಈಗ ಏಕೆ ಈ ಕಾನೂನು ?
ಚುನಾವಣಾ ರಾಜಕೀಯ. ಅಲ್ಪಸಂಖ್ಯಾತರಿಗೆ ಬೆಣ್ಣೆ ಹಚ್ಚಿ ’ವೋಟ್ಬ್ಯಾಂಕ್’ ಸೃಷ್ಟಿಸಲು ಈ ಪ್ರಯತ್ನ. ಇದೇ ದೃಷ್ಟಿಯಿಂದ ರಚಿಸಲಾಗಿರುವ ಸಾಚಾರ್ ಆಯೋಗ, ರಂಗನಾಥಮಿಶ್ರಾ ಆಯೋಗ, ಮುಂತಾದವುಗಳ ಮುಂದುವರಿದ ಭಾಗ.
ಈ ಶಾಸನವನ್ನು ಜಾರಿಗೆ ತರಲು ಒಂದು ವಿಶೇಷ ಪ್ರಾಧಿಕಾರ ರಚಿಸಲಾಗುತ್ತದೆ. ಅದರ ೭ ಸದಸ್ಯರ ಪೈಕಿ ನಾಲ್ವರು ಅಲ್ಪಸಂಖ್ಯಾತರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಅಲ್ಪಸಂಖ್ಯಾತರೇ. ಯಾವುದೇ ಒಬ್ಬ ಅಲ್ಪಸಂಖ್ಯಾತ ವ್ಯಕ್ತಿ ಸಲ್ಲಿಸಿದ ದೂರಿನಂತೆ ಹಿಂದುವೊಬ್ಬನು, ಆತ ಪೆಲೀಸ್ ಅಥವಾ ಸರಕಾರಿ ಅಧಿಕಾರಿಯೇ ಆಗಿರಲಿ, ತಕ್ಷಣವೇ ಅಪರಾಧಿ ಎಂದೆನಿಸುತ್ತಾನೆ. ಇದು ಸಹಜ ನ್ಯಾಯಕ್ಕೆ ವಿರೋಧವಾದ ಅಂಶ.
- ಅಲ್ಪಸಂಖ್ಯಾತರನ್ನು ಓಲೈಸಲು ರಚಿಸಿರುವ ಮಸೂದೆ ಇದು.
ಭ್ರಷ್ಟಾಚಾರದ ಆರೋಪಗಳಿಂದ ತತ್ತರಿಸುತ್ತಿರುವ ಕೇಂದ್ರ ಸರಕಾರ, ಮುಂದಿನ ಚನಾವಣೆಗಳನ್ನು ಕಣ್ಣಮುಂದಿರಿಸಿಕೊಂಡು ಅಲ್ಪಸಂಖ್ಯಾತರ ಮನವೊಲಿಸಲು ಈ ಮಸೂದೆಯನ್ನು ರೂಪಿಸಿದೆ. ದೇಶಾದ್ಯಂತ ಜಾಗೃತವಾಗುತ್ತಿರುವ ಹಿಂದುಶಕ್ತಿಯನ್ನು ತುಳಿಯುವುದೇ ಈ ಮಸೂದೆಯ ಉದ್ದೇಶ. ಹಿಂದು ಸಂಘಟನೆಗಳ ವಿರುದ್ಧ ’ಭಯೋತ್ಪಾದನೆ’ಯ ಸುಳ್ಳು ಆರೋಪ ಮಾಡುತ್ತಿರುವ ಶಕ್ತಿಗಳ ಷಡ್ಯಂತ್ರದ ಒಂದು ಭಾಗವೇ ಈ ಮಸೂದೆ.
- ಮಸೂದೆಯ ಬಗ್ಗೆ
ಒಂಭತ್ತು ಅಧ್ಯಾಯಗಳು ಹಾಗೂ ೧೩೮ ವಿಧಿಗಳಿರುವ ಈ ವಿಧೇಯಕದ ಬಹುಪಾಲು ವಿವರಗಳು ವಿವಾದಾಸ್ಪದವಾಗಿವೆ. ಹಿಂದುಸಮಾಜ – ಹಿಂದು ಸಂಘಟನೆಗಳನ್ನು ಗುರಿಯಾಗಿಸಿಕೊಂಡು ರಚಿಸಲಾಗಿದೆ.
ಮೊದಲ ಅಧ್ಯಾಯದಲ್ಲಿ ನಮ್ಮ ದೇಶದ ನಾಗರಿಕರನ್ನು ’ಗುಂಪ’ ಮತ್ತು ’ಅನ್ಯರು’ ಎಂದು ವಿಭಜಿಸಲಾಗಿದೆ. ’ಗುಂಪ’ ಎಂದರೆ ಮುಸ್ಲಿಂ, ಕ್ರಿಶ್ಚಿಯನ್ನರು. ’ಅನ್ಯರು’ ಎಂದರೆ ಹಿಂದುಗಳು. ಹಿಂದು ಸಮಾಜದಲ್ಲಿ ಒಡಕುಂಟುಮಾಡುವ ದುರುದ್ದೇಶದಿಂದ ಅಲ್ಪಸಂಖ್ಯಾತರೊಂದಿಗೆ ನಮ್ಮ ಸಮಾಜದ (ಈಗಾಗಲೇ ವಿಶೇಷ ಕಾನೂನಿನ ರಕ್ಷಣೆ ಇರುವ) ಅನುಸೂಚಿತ ಜಾತಿ/ವರ್ಗಗಳನ್ನು ‘ಗುಂಪು’ ಎಂದು ಕರೆಯಲಾಗಿದೆ.
- ಒಡೆಯುವ ಹುನ್ನಾರ ಇದು.
ನಮ್ಮ ದೇಶ ಅಂಗೀಕರಿಸುವ ’ಒಕ್ಕೂಟ ವ್ಯವಸ್ಥೆ’ಯ ಪ್ರಕಾರ ಕಾನೂನು ಮತ್ತು ಸುವ್ಯವಸ್ಥೆಗಳು ಆಯಾ ರಾಜ್ಯಸರ್ಕಾರದ ಅಧಿಕಾರ ವ್ಯಾಪ್ತಿಗೆ ಸೇರಿದ್ದು, ಕೇಂದ್ರ ಸರಕಾರ ಮೂಗು ತೂರಿಸುವಂತಿಲ್ಲ. ಆದರೆ ಈ ಮಸೂದೆ ಪ್ರಕಾರ ’ಅಲ್ಪಸಂಖ್ಯಾತರಿಗೆ ನೋವಾಗಿದೆ’ ಎಂಬ ನೆಪ ಮಾಡಿಕೊಂಡು ಕೇಂದ್ರ ಸರಕಾರ ತಾನೇ ನೇರವಾಗಿ ಕ್ರಮ ಕೈಗೊಳ್ಳಬಹುದು. ರಾಜ್ಯ ಸರಕಾರವನ್ನು ವಜಾ ಮಾಡಲೂಬಹುದ.
ಒಕ್ಕೂಟ ವ್ಯವಸ್ಥೆಗೆ ಭಂಗ ತರುವ ಸಂವಿಧಾನ ವಿರೋಧಿ ಕ್ರಮ ಇದು.
- ಇನ್ನು ಮುಂದೆ ಯಾವುದೇ ಸಂದರ್ಭದಲ್ಲಿ ಹಿಂದುಗಳಿಗೆ ಪ್ರಾಣಹಾನಿ-ಸಂಪತ್ತು ನಷ್ಟವಾದಲ್ಲಿ ಅದು ”ಮತೀಯ ಗಲಭೆ”ಯೇ ಅಲ್ಲ. ಅಲ್ಪಸಂಖ್ಯಾತರಿಗೆ ಹಾನಿ ಆದಲ್ಲಿ ಮಾತ್ರ ಅದನ್ನು ಮತೀಯ ಗಲಭೆ ಎಂದು ಪರಿಗಣಿಸಲಾಗುವುದು.
- ಈ ಮಸೂದೆ ಅಂಗೀಕೃತವಾದರೆ ಮತೀಯ ದಂಗೆಗಳನ್ನು ’ಕೇವಲ ಹಿಂದುಗಳೇ’ ನಡೆಸುವವರು ಎಂಬುದನ್ನು ಸಾಂವಿಧಾನಿಕವಾಗಿ ಒಪ್ಪಿಕೊಂಡಂತೆ!
- ಗೋಧ್ರಾದಲ್ಲಿ ರೈಲಿಗೆ ಬೆಂಕಿಯಿಟ್ಟು ಹಿಂದುಗಳ ಸಜೀವದಹನ ಮಾಡಿದುದು ಅಪರಾಧ ಅಲ್ಲ. ನಂತರ ಗುಜರಾತಿನಲ್ಲಿ ಪ್ರತಿಕ್ರಿಯೆಯಾಗಿ ನಡೆದುದು ಮಾತ್ರ ಹಿಂಸಾಚಾರ.
- ಯಾವುದೇ ಗಲಭೆಯಲ್ಲಿ ಹಿಂದುವೊಬ್ಬ ಸತ್ತರೆ, ಗಾಯಗೊಂಡರೆ, ಸಂಪತ್ತು ಕಳೆದುಕೊಂಡರೆ, ಅಪಮಾನಿತನಾದರೆ – ಅವನು ಪೀಡಿತ ವ್ಯಕ್ತಿ victim ಎಂದು ತಿಳಿಯಲಾಗುವುದಿಲ್ಲ. ಈ ದೇಶದಲ್ಲಿ ಒಬ್ಬ ಅಲ್ಪಸಂಖ್ಯಾತ ಮಾತ್ರ ’ಪೀಡಿತ ವ್ಯಕ್ತಿ’ ಆಗಲು ಸಾಧ್ಯ!
- ಅಲ್ಪಸಂಖ್ಯಾತರಿಗೆ ಕಾನೂನಿನ ಭೀತಿಯಿಲ್ಲದೇ ’ಹಿಂಸೆ’, ’ದಂಗೆ’ ನಡೆಸಲು ಮುಕ್ತ ಅವಕಾಶ. ನಷ್ಟವಾದರೆ ಪರಿಹಾರವೂ ನಿಶ್ಚಿತ. ’ಹಿಂದು’ವಿಗೆ ದೇವರೇ ಗತಿ! ಸರಕಾರ ಅಥವಾ ಕಾನೂನಿನ ರಕ್ಷಣೆ ಇಲ್ಲ.
- ’ಹಿಂದುವೊಬ್ಬನ ಮಾತು, ಬರಹ, ಕೆಲಸದಿಂದ ತನಗೆ ನೋವಾಗಿದೆ’ ಎಂದು ಅಲ್ಪಸಂಖ್ಯಾತನೊಬ್ಬ ದೂರಿದರೆ ಸಾಕು. ಹಿಂದುವಿಗೆ ಶಿಕ್ಷೆ. ಅಷ್ಟು ಮಾತ್ರವಲ್ಲ, ಅವನು ಸದಸ್ಯನಾಗಿರುವ ಸಂಘ-ಸಂಸ್ಥೆಯ ಹಿರಿಯ ಪದಾಧಿಕಾರಿಗಳಿಗೂ ಶಿಕ್ಷೆ.
- ‘ಭಾರತ ಮಾತಾ ಕೀ ಜೈ,’ ‘ವಂದೇಮಾತರಂ’ ಎಂದು ಯಾವ ಹಿಂದುವೂ ಹೇಳುವಂತಿಲ್ಲ. ಏಕೆಂದರೆ ಇದರಿಂದ ಅಲ್ಪಸಂಖ್ಯಾತರಿಗೆ ನೋವಾಗುತ್ತದೆ. ಈ ರೀತಿ ಹೇಳುವ ’ಹಿಂದುವು’ ಸದಸ್ಯನಾಗಿರುವ ಶಾಲಾಸಮಿತಿ, ರೋಟರಿಕ್ಲಬ್, ರಿಕ್ಷಾಚಾಲಕ ಸಂಘ, ಜಾತಿ ಸಂಘಗಳ ಮುಖ್ಯಸ್ಥರ ಮೇಲೂ ಸರಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ.
ಹೇಗೆ ಪ್ರತಿಭಟಿಸಬಹುದು?
- ಆದಷ್ಟು ಹೆಚ್ಚು ಸಮಾಜ ಬಾಂಧವರಿಗೆ ಈ ಮಸೂದೆಯ ಅಪಾಯಕಾರಿ ಅಂಶಗಳ ಬಗ್ಗೆ ತಿಳಿಸಬೇಕು.
- ದಿನಪತ್ರಿಕೆಯ ವಾಚಕರವಾಣಿಗೆ ಪತ್ರ ಬರೆಯಬೇಕು.
- ನಾವು ಸದಸ್ಯರಾಗಿರುವ ಸಂಘ-ಸಂಸ್ಥೆಯಲ್ಲಿ ಈ ವಿಷಯ ಚರ್ಚಿಸಿ, ಶಾಸನವನ್ನು ವಿರೋಧಿಸಿ ನಿರ್ಣಯ ಸ್ವೀಕರಿಸಬೇಕು. ಅದನ್ನು ಕೇಂದ್ರ ಸರಕಾರಕ್ಕೆ ಕಳಿಸಬೇಕು.
- ನಮ್ಮ ಗ್ರಾಮ/ ಮೊಹಲ್ಲಾದ ಬಾಂಧವರನ್ನು ಒಟ್ಟಿಗೆ ಸೇರಿಸಿ ಜನ-ಜಾಗೃತಿ ಸಭೆ ಮಾಡಬೇಕು.
- ಜಾಗರಣ ಪ್ರಕಾಶನ, ಬೆಂಗಳೂರು ಪ್ರಕಟಿಸಿರುವ ’ಹುನ್ನಾರದ ಹಿಂದಿನ ಹೆಜ್ಜೆಗಳು’ – ಕಿರುಪುಸ್ತಕವನ್ನು ನಿಮ್ಮ ಪ್ರದೇಶದ ಸಮಾಜ ಬಾಂಧವರಿಗೆ ನೀಡಿ, ಅವರು ಓದುವಂತೆ ಮಾಡಿ.