‘ಮೊಸರಲ್ಲೂ ಕಲ್ಲು ಹುಡುಕುವುದು’ ಎಂಬ ಗಾದೆ ಮಾತು ಕೇಳಿದ್ದೀರಲ್ಲವೇ? ಅದಕ್ಕೆ ಇತ್ತೀಚಿನ ಉದಾಹರಣೆಯೆಂಬಂತೆ ಕರ್ನಾಟಕವೂ ಸೇರಿದಂತೆ ದೇಶಾದ್ಯಂತದ ಪ್ರಮುಖ ಮಾಧ್ಯಮಗಳು ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್‌ರ ಹೇಳಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ತಿರುಚಿ ಬರೆದಿವೆ. ಇತ್ತೀಚೆಗೆ ಅಸ್ಸಾಂನ ಸಿಲ್‌ಚಾರ್‌ನಲ್ಲಿ ನಾಗರಿಕರ ಸಂವಾದ ಕಾರ‍್ಯಕ್ರಮದಲ್ಲಿ ಸಭಿಕರೋರ್ವರ ಪ್ರಶ್ನೆಯೊಂದಕ್ಕೆ ಸರಳವಾಗಿ ಉತ್ತರಿಸಿದ್ದ ಭಾಗವತ್‌ರ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಿದ ಮಾಧ್ಯಮಗಳು ‘ಗ್ರಾಮೀಣ ಭಾರತದಲ್ಲಿ ಅತ್ಯಾಚಾರ ನಡೆಯುತ್ತಿಲ್ಲ ಎಂದು ಭಾಗವತ್ ಹೇಳಿದ್ದಾರೆ’ ಎಂದು ತಿರುಚಿ ವರದಿ ಮಾಡಿತ್ತು. ವಾಸ್ತವವಾಗಿ ಭಾಗವತ್ ಹೇಳಿದ್ದೇ ಬೇರೆ. ‘ವಿದೇಶಿ ಜೀವನ ಶೈಲಿಯ ಅಪಾರ ಪ್ರಭಾವ ಬೆಳೆಸಿರುವ ನಗರ ಕೇಂದ್ರಿತ-ಭೋಗಪ್ರಧಾನ ವ್ಯವಸ್ಥೆ ಅತ್ಯಾಚಾರ ಪ್ರಕರಣಗಳನ್ನು ಹೆಚ್ಚುವಂತೆ ಮಾಡುತ್ತಿವೆ. ಭಾರತೀಯ ಮೌಲ್ಯಗಳು ಸ್ತ್ರೀಪರ ಗೌರವಯುತ ದೃಷ್ಟಿ ಹೊಂದಿದೆ. ಭಾರತೀಯ ಮೌಲ್ಯಗಳಿಂದ ದೂರ ಸರಿದಷ್ಟೂ ಹಿಂಸೆ-ಕ್ರೌರ್ಯಗಳು ಹೆಚ್ಚುತ್ತವೆ’ ಎಂದಿದ್ದರು. ಹೇಳಿದ್ದೇ ಒಂದು, ಆದರೆ ಮಾಧ್ಯಮಗಳು ಬರೆದದ್ದೇ ಇನ್ನೊಂದು !

ಎರಡು ದಿನಗಳ ಬಳಿಕ ಇಂದೋರ್‌ನ ಕಾರ್ಯಕ್ರಮವೊಂದರಲ್ಲಿ ‘ಮಹಿಳೆಯರ ಕುರಿತು ಹೇಳಿದ್ದಾರೆ’ ಎನ್ನಲಾದ ವರದಿ ತೀರಾ ಕಪೋಲಕಲ್ಪಿತ. ಎನ್‌ಡಿಟಿವಿ ಹಾಗೂ ಪಿಟಿಐ ವರದಿಗಾರರ ತಪ್ಪುವರದಿಯಿಂದ ಆದ ಅವಾಂತರ ದೇಶದ ಬಹುತೇಕ ಮುದ್ರಣ-ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರತಿಧ್ವನಿಸಿತು. ಮೋಹನ್‌ಜೀ ಭಾಗವತ್ ಹೇಳಿದ ಉಪಮೆ – ವಾಕ್ಯವೊಂದರ ತೀರಾ ತಪ್ಪು ವ್ಯಾಖ್ಯಾನವೊಂದು ಮರುದಿನ ಅನೇಕ ಪತ್ರಿಕೆಗಳ ಮುಖಪುಟ ಸುದ್ದಿಯಾಗಿಯೇ ಹೋಯಿತು ! ಮಾಧ್ಯಮಗಳು ಆರೆಸ್ಸೆಸ್ ಮುಖ್ಯಸ್ಥರ ಹೇಳಿಕೆಯನ್ನು ತಿರುಚಲು ಆರಂಭಿಸಿದ ತಕ್ಷಣವೇ ಆರೆಸ್ಸೆಸ್ ಮುಖಂಡ ರಾಮ್ ಮಾಧವ್ ಸ್ಪಷ್ಟವಾಗಿ ಮಾಧ್ಯಮಗಳ ಬೇಜವಾಬ್ದಾರಿಯನ್ನು ಖಂಡಿಸಿ, ಸ್ಪಷ್ಟೀಕರಣ ನೀಡಿದ್ದರು. ಮಾಧ್ಯಮಗಳಿಗೆ ಆಯಾ ರಾಜ್ಯಗಳ ಆರೆಸ್ಸೆಸ್ ಮಾಧ್ಯಮ ಪ್ರಮುಖರು ಮೋಹನ್ ಭಾಗವತ್‌ರು ಮಾತನಾಡಿದ್ದ ಭಾಷಣದ ಸರಿಯಾದ ಭಾಗವನ್ನು ಹಾಗೂ ಸಂಬಂಧ ಪಟ್ಟ ವಿಡಿಯೋ ತುಣುಕುಗಳನ್ನು ಪತ್ರಿಕಾ ಕಚೇರಿಗಳಿಗೆ ತಲುಪಿಸಿದ್ದರೂ, ಪಿಟಿಐ ಕಳುಹಿಸಿದ್ದ ತಿರುಚಲ್ಪಟ್ಟ ವರದಿಯನ್ನೇ ಅವು ಪ್ರಕಟಿಸಿದೆ. “ಸ್ತ್ರೀಯರ ಕುರಿತು ಅಪಾರ ಗೌರವ-ಕಾಳಜಿ ಹೊಂದಿರುವ ಆರೆಸ್ಸೆಸ್‌ನಂತಹ ದೇಶಭಕ್ತ ಸಂಘಟನೆಯ ಕುರಿತು ಮಾಧ್ಯಮಗಳಲ್ಲಿ ತಿರುಚಲ್ಪಟ್ಟ ವರದಿಯೊಂದು ಪ್ರಕಟವಾಗಿರುವುದು ದೌರ್ಭಾಗ್ಯ. ಆರೆಸ್ಸೆಸ್ ಏನು ಮತ್ತು ಎಂತಹುದು ಎಂಬುದು ನಮಗೆ ಚೆನ್ನಾಗಿ ಗೊತ್ತು. ಮಾಧ್ಯಮ ವರದಿಗಳಿಂದ ವಿಚಲಿತರಾಗೆವು” ಎಂದು ಪ್ರಮುಖ ಮಹಿಳಾ ಸಂಘಟನೆಯೊಂದರ ಮುಖ್ಯಸ್ಥೆ ಹೇಳಿದ್ದಾರೆ. ಅಂತೂ ಸತ್ಯ ಮರೆಮಾಚಿ ಬರೆಯುವ ಚಟಕ್ಕೆ ಏನೆನ್ನಬೇಕೋ ಭಗವಂತನೇ ಬಲ್ಲ!

WATCH FULL VIDEO OF MOHAN BHAGWAT SPEECH:

ಆರೆಸ್ಸೆಸ್ ಸ್ಪಷ್ಟೀಕರಣ

“ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರ ಅಭಿಪ್ರಾಯವನ್ನು ತಪ್ಪಾಗಿ ಬಿಂಬಿಸಲಾಗಿದೆ. ಪಾಶ್ಚಿಮಾತ್ಯ ವ್ಯವಸ್ಥೆಯಲ್ಲಿ ಪುರುಷ ಮತ್ತು ಮಹಿಳೆ ವಿವಾಹವನ್ನು ಬಂದು ಒಪ್ಪಂದ ಎಂದು ಭಾವಿಸುತ್ತಾರೆ. ಆದರೆ ಭಾರತದಲ್ಲಿ ವಿವಾಹವನ್ನು ಪವಿತ್ರ ಎಂದು ಭಾವಿಸುತ್ತಾರೆ. ಇಲ್ಲಿ ಮಹಿಳೆಗೆ ಅಪಾರ ಗೌರವವಿದೆ ಹಾಗೂ ಪುರುಷನಿಗೆ ಕೆಲ ಕೌಟುಂಬಿಕ ಜವಾಬ್ದಾರಿಗಳಿರುತ್ತವೆ ಎಂದು ಅವರು ಹೇಳಿದ್ದರು. ಆದರೆ, ಭಾಗವತ್ ಅವರು ಭಾರತೀಯ ವಿವಾಹವನ್ನೇ ಒಪ್ಪಂದ ಎಂದು ಹೇಳಿದಂತೆ ಬಿಂಬಿಸಲಾಗಿದೆ. ಅವರ ಹೇಳಿಕೆಯನ್ನು ತಿರುಚಿ ತಪ್ಪಾಗಿ ಅರ್ಥೈಸಲಾಗಿದೆ” ಎಂದು ಆರೆಸ್ಸೆಸ್ ಮುಖಂಡ ರಾಮ್‌ಮಾಧವ್ ತಿಳಿಸಿದ್ದಾರೆ. “ಪಾಶ್ಚಿಮಾತ್ಯ ಸಂಸ್ಕೃತಿಯ ವಿಪರೀತ ಪ್ರಭಾವದಿಂದ ನೈತಿಕತೆ ಕುಸಿಯುತ್ತಿದೆ. ಈ ನೆಲದ (ಭಾರತದ) ಸಂಸ್ಕೃತಿ ಮಹಿಳೆಯರನ್ನು ಗೌರವಿಸುತ್ತದೆ. ನಮ್ಮ ಮೂಲಸಂಸ್ಕೃತಿ ಮತ್ತು ಸಂಪ್ರದಾಯಗಳಿಂದ ದೂರ ಸರಿಯುತ್ತ ಹೋದಾಗ ಅತ್ಯಾಚಾರಗಳಂತಹ ಘೋರ ಕೃತ್ಯಗಳು ಹೆಚ್ಚಾಗುತ್ತವೆ.” ಎಂಬ ಮೋಹನ್ ಜೀ ಭಾಗವತ್‌ರ ಮೂಲ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ ಆರೆಸ್ಸೆಸ್ ಮುಖಂಡ ರಾಮ್‌ಮಾಧವ್.

ದೆಹಲಿಯಲ್ಲಿ ಮಾತನಾಡಿದ ಬಿಜಿಪಿಯ ಮುಖ್ಯ ವಕ್ತಾರ ರವಿಶಂಕರ ಪ್ರಸಾದ್ ‘ಮಹಿಳೆಯರ ಸಬಲೀಕರಣ ಮತ್ತು ಮಹಿಳೆಯರಿಗೆ ಗೌರವ ನೀಡುವುದು ಆರೆಸ್ಸೆಸ್ ಮುಖ್ಯ ಸಿದ್ಧಾಂತವಾಗಿದೆ. ರಾಷ್ಟ್ರಸೇವಿಕಾ ಸಮಿತಿ, ವಿದ್ಯಾಭಾರತಿ, ವನವಾಸಿ ಕಲ್ಯಾಣ ಸೇರಿದಂತೆ ಸಂಘ ಪರಿವಾರದ ಎಲ್ಲಾ ಸಂಘಟನೆಗಳೂ ಮಹಿಳಾ ಸಬಲೀಕರಣಕ್ಕೆ ಅತ್ಯಂತ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದೆ. ಭಾಗವತ್‌ಜೀಯವರ ಹೇಳಿಕೆಯನ್ನು ಅನಗತ್ಯವಾಗಿ ಹಾಗೂ ತಪ್ಪಾಗಿ ಟೀಕಿಸಲಾಗುತ್ತಿದೆ’ ಎಂದಿದ್ದಾರೆ.

‘ಟೈಮ್ಸ್ ನೌ’ ಆಂಗ್ಲ ವಾರ್ತಾವಾಹಿನಿ ಮಾತ್ರ ಮೋಹನ್ ಭಾಗವತ್‌ರ ಹೇಳಿಕೆಯಲ್ಲಿ ಯಾವುದೇ ವಿವಾದಾಸ್ಪದ ಅಂಶಗಳಿಲ್ಲ, ಉಳಿದ ಮಾಧ್ಯಮಗಳು ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿವೆ ಎಂದೇ ಸಮಯೋಚಿತ ವರದಿ ಮಾಡಿತ್ತು. ಇದೇ ವೇಳೆ, ಮೋಹನ್ ಭಾಗವತ್‌ರ ವರದಿಯನ್ನು ತಾನು ತಪ್ಪಾಗಿ ಉಲ್ಲೇಖಿಸಿದ್ದಕ್ಕೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿರುವ ಸಿಎನ್‌ಎನ್-ಐಬಿನ್ ಆಂಗ್ಲವಾಹಿನಿಯ ಪ್ರಧಾನ ಸಂಪಾದಕಿ ಸಾಗರಿಕಾ ಘೋಷ್, “ಭಾಗವತ್‌ರು ಮಹಿಳೆಯರ ಬಗ್ಗೆ ಅವಮಾನಕಾರಿ ಮಾತನಾಡಿದ್ದರು ಎಂದು ತಪ್ಪಾಗಿ ತಿಳಿದುಕೊಂಡಿದ್ದೆ” ಎಂದಿದ್ದಾರೆ!  ಉಳಿದ ಮಾಧ್ಯಮಗಳು ಇನ್ನೂ ತಮ್ಮ ಪಾರದರ್ಶಕತೆ ತೋರಿಸಬೇಕಷ್ಟೆ!

Tweets by noted writer Chetan Bhagat and CNN-IBN’s Sagarika Ghose on RSS

ಆರೆಸ್ಸೆಸ್ ಸರಸಂಘಚಾಲಕ್ ಮೋಹನ್ ಭಾಗವತ್ ರ ಹೇಳಿಕೆಯ ಕೇವಲ ಒಂದು ಭಾಗವನ್ನು ಮಾತ್ರ ಎಡಿಟ್ ಮಾಡಿ, ಸಂದೇಹ ಬರುವ ರೀತಿಯ ವೀಡಿಯೊ ತುಣುಕನ್ನು ಉಳಿದ ಮಾಧ್ಯಮಗಳಿಗೆ ಹಂಚಿದ್ದ ಎ ಎನ್ ಐ , ಇದೀಗ ತನ್ನ  ಬೇಜವಾಬ್ದಾರಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡಿದೆ. ತನ್ನ ವರದಿಗಾರನ ಮೇಲೆ ಕ್ರಮ ಕೈಗೊಂಡಿದೆ. ಆದರೆ ಇಷ್ಟೆಲ್ಲಾ ಎಡವಟ್ಟು ಮಾಡಿದ ಮೇಲೆ !!

Smitha Prakash ANI on Bhagwat Video Coverage

Leave a Reply

Your email address will not be published.

This site uses Akismet to reduce spam. Learn how your comment data is processed.