
K S Sudarsshan
ಆರೆಸ್ಸೆಸ್ ಕಚೇರಿ ಅಧಿಕೃತ ಪ್ರಕಟಣೆ -2

ಮೈಸೂರು ಅಗಸ್ಟ್ 3: ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂರ್ವ ಸರಸಂಘಚಾಲಕ ಶ್ರೀ ಕೆ ಎಸ್ ಸುದರ್ಶನ್ (83) ಅವರು ಇಂದು ಬೆಳಗ್ಗೆ 5 ಘಂಟೆಗೆ ಮೈಸೂರಿನ ನಜರ್ಬಾದ್ ಪ್ರದೇಶದಲ್ಲಿರುವ ಸೆಂಚುರಿ ಪಾರ್ಕ್ ಬಡಾವಣೆಯ ತಮ್ಮ ಸಹೊದರ ರಮೇಶ್ ಮನೆ ಇಂದ ಬೆಳಗಿನ ವಾಯು ಸಂಚಾರಕ್ಕಾಗಿ ಹೊರಟಿದ್ದರು.ಬಹಳಷ್ಟು ದೂರದ ನಡಿಗೆಯ ನಂತರ ನಾಯಡು ನಗರ ಎಂಬಲ್ಲಿಗೆ ತಲುಪಿದ್ದಾರೆ.ಆ ಪ್ರದೇಶವು ಅವರಿಗೆ ಅಪರಿಚಿತವಾದುದರಿಂದ ಹಿಂದಿರುಗುವ ಮಾರ್ಗವು ಗೊಂದಲವಾಗಿದೆ.
ಸುಮಾರು 8 ಕಿಲೋ ಮೀಟರ್ ನಡಿಗೆಯ ಕಾರಣದಿಂದ ಬಳಲಿಕೆ ಉಂಟಾಗಿದೆ. ಶ್ರೀ ಶ್ರೀನಿವಾಸ್ ಎಂಬುವರ ಮನೆಯಲ್ಲಿ ನೀರು ಕುಡಿದು ವಿಶ್ರಾಂತಿ ಪಡೆದಿದ್ದಾರೆ. ಟೀವಿ ವಾಹಿನಿಗಳಲ್ಲಿ ಸುದ್ದಿ ನೋಡಿದ ಶ್ರೀನಿವಾಸ್ ಅವರ ಮಗ ಅಶೋಕ್ ಅವರು ಪೋಲಿಸ್ ಠಾಣೆಗೆ ತಿಳಿಸಿದರು. ಕೂಡಲೇ ಶ್ರೀನಿವಾಸ್ ಅವರ ಮನೆಗೆ ತೆರಳಿದ ಪೊಲೀಸರು ಸುದರ್ಶನ್ಅವರನ್ನು ಮನೆಗೆ ಕರೆತಂದರು.ಈಗ ಸುದರ್ಶನ್ ಅವರು ಸ್ವಸ್ಥರಾಗಿದ್ದು ಸಹೋದರರ ಮನೆಯಲ್ಲಿ ವಿಶ್ರಾಂತಿಯಲ್ಲಿದ್ದಾರೆ
ಸುದ್ದಿ ಮಾಧ್ಯಮಗಳ ಸಮಯೋಚಿತ ಸುದ್ದಿ ಪ್ರಸಾರ ಹಾಗೂ ಮೈಸೂರಿನ ನಾಗರಿಕರ ಮತ್ತು ಪೋಲಿಸ್ ಸಿಬ್ಬಂದಿಯ ಸಹಕಾರಕ್ಕೆ ಆರೆಸ್ಸೆಸ್ ಅಭಿನಂದನೆ ಸಲ್ಲಿಸಿದೆ.
ಘಟನಾವಳಿ
ಬೆಳಗ್ಗೆ 5.೦೦ಕ್ಕೆ – ವಾಯು ವಿಹಾರಕ್ಕೆ ತೆರಳಿದ ಸುದರ್ಶನ್
5.15ಕ್ಕೆ ಹಿಂದಿನ ಎರಡು ದಿನಗಳ ವಾಯು ಸಂಚಾರದ ಉದ್ಯಾನವನಕ್ಕೆ ತೆರಳಿದ ಆಪ್ತ ಸಹಾಯಕ ಬ್ರಿಜ್ ಕಾಂತ್ . ಆದರೆ ಸುದರ್ಶನ್ ಜಿ ಅಲ್ಲಿ ಕಾಣಿಸಲಿಲ್ಲ
5.45 ಕ್ಕೆ – ಅಕ್ಕ ಪಕ್ಕದ ರಸ್ತೆಗಳಲ್ಲಿ ಹುಡುಕಾಟ
6.45ಕ್ಕೆ ಸಹೋದರ ರಮೇಶ್ ಜೊತೆ ಕಾರಿನಲ್ಲಿ ತೆರಳಿ ಬ್ರಿಜ್ ಕಾಂತ್ ಹುಡುಕಾಟ
7.00ಕ್ಕೆ ಸ್ಥಳೀಯ ಪೊಲೀಸರಿಗೆ ಹಾಗೂ ಸಂಘದ ಪ್ರಮುಖರಿಗೆ ಮಾಹಿತಿ
ಸ್ವಯಂಸೇವಕರ- ಪೋಲೀಸರ ತಂಡಗಳಿಂದ ಹುಡುಕಾಟ
8.45ಕ್ಕೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ
10.00ಕ್ಕೆ8 ಕಿಲೋ ಮೀಟರ್ ನಷ್ಟು ನಡೆದು ನಾಯ್ಡು ನಗರ ಪ್ರದೇಶದ ಶ್ರೀನಿವಾಸ್ ರವರ ಮನೆಗೆ ಬಂದು ಸ್ವತಃ ಪರಿಚಯಿಸಿಕೊಂಡ ಸುದರ್ಶನ್ ಜಿ
10.15 ಕ್ಕೆ ಪಾನೀಯ ವಿಶ್ರಾಂತಿ
11.00 ಕ್ಕೆ ಕರೆಂಟ್ ಬಂದಿದ್ದರಿಂದ ಟಿವಿಗೆ ಚಾಲನೆ
ಸುದ್ದಿ ವಾಹಿನಿಯಲ್ಲಿ ಸುದರ್ಶನ್ ಜಿಯವರನ್ನು ಗುರುತಿಸಿದ ಶ್ರೀನಿವಾಸರ ಮಗ ಅಶೋಕ್
ಸುದರ್ಶನ್ ಜಿ ಯವರಿಂದಲೂ ಟಿವಿ ವೀಕ್ಷಣೆ
11.30ಕ್ಕೆ ಅಶೋಕ್ ರವರಿಂದ ಹತ್ತಿರದ ನಜರಬದ್ ಪೋಲಿಸ್ ಸ್ಟೇಷನ್ ಗೆ ಮಾಹಿತಿ
12.15 ಕ್ಕೆ ಪೋಲಿಸ್ ಕಮೀಷನರ್ ಕೆ ಎಲ್ ಸುಧೀರ್ ಖುದ್ದು ಅಶೋಕ್ ಜೊತೆಗೆ ಮನೆಗೆ ತೆರಳಿ ಸುದರ್ಶನ್ ಜಿಯವರನ್ನು ಭೇಟಿ ಮಾಡಿದರು, ಸುದರ್ಶನ್ ಜಿಯವರನ್ನು ಕ್ಷೇಮವಾಗಿ ಸಹೋದರ ರಮೇಶ್ ರ ಮನೆಗೆ ಕರೆ ತಂದರು.
12.30 ತಜ್ಞ ವೈದ್ಯರಿಂದ ತಪಾಸಣೆ, ಅರೋಗ್ಯ ಸ್ಥಿರವಾಗಿರುವ ವರದಿ
12.45 ಕ್ಷೇತ್ರ ಪ್ರಚಾರಕರೊಡನೆ ದೂರವಾಣಿಯಲ್ಲಿ ಮಾತುಕತೆ, ಪ್ರಾಂತ ಸಂಘಚಲಕ -ಪ್ರಾಂತ ಪ್ರಚಾರಕರ ಭೇಟಿ.
3.00ಕ್ಕೆ ಸರಸಂಘಚಾಲಕ ಮೋಹನ್ ಭಾಗವತ್ ರಿಂದ ದೂರವಾಣಿ ಸಂಭಾಷಣೆ, ಅರೋಗ್ಯ ಕುರಿತು ಮಾತುಕತೆ
—